ಏಪ್ರಿಲ್ ತಿಂಗಳ ಸಿಹಿಸುದ್ದಿ ನೀಡಿದ 'ಜಿಯೋ'!

|

ಅತ್ಯಾಧುನಿಕ 4G ಫೀಚರ್ ಫೋನ್ ಖರೀದಿಸಬೇಕು ಎಂದುಕೊಂಡಿರುವವರಿಗೆ ಜಿಯೋ ಮತ್ತೊಂದು ಸಿಹಿಸುದ್ದಿ ನೀಡಿದೆ. ಜಿಯೋ ಬಿಡುಗಡೆ ಮಾಡಿದ್ದ ಜಿಯೋಫೋನ್ 4G ಫೀಚರ್ ಫೋನಿನ ಉತ್ತರಾಧಿಕಾರಿ ಫೋನ್ 'ಜಿಯೋಫೋನ್ 2' ಇದೇ ಏಪ್ರಿಲ್ 4ನೇ ತಾರಿಖಿನಿಂದ ಮಾರಾಟಕ್ಕೆ ಬರುತ್ತಿದೆ. ಏಪ್ರಿಲ್ 4 ಮಧ್ಯಾಹ್ನ 12 ಗಂಟೆಯ ನಂತರ ಫೋನ್ ಅನ್ನು ಖರೀದಿಸಬಹುದಾಗಿದೆ.

ಜಿಯೋವಿನ ನೂತನ ಜಿಯೋಫೋನ್ 2 ಫೀಚರ್ ಫೋನ್ ಉಚಿತ ಧ್ವನಿ ಮತ್ತು ಡೇಟಾ ಕೊಡುಗೆಗಳೊಂದಿಗೆ ಜತೆಗೂಡಿಸಲ್ಪಟ್ಟಿದ್ದು, 49, 99 ಮತ್ತು 153 ರೂಪಾಯಿಗಳ ಮೂರು ವಿಭಿನ್ನ ಯೋಜನೆಗಳನ್ನು ಆಯ್ಕೆಗಳಲ್ಲಿ ಫೋನ್ ಪಗ್ರಾಹಕರ ಕೈಸೇರಲಿದೆ. ಫೇಸ್‌ಬುಕ್, ವಾಟ್ಸ್‌ಆಪ್ ಎಲ್ಲವನ್ನೂ ಬೆಂಬಲಿಸುವ ಈ ಫೀಚರ್ ಫೋನ್ ಕೇವಲ 2999 ರೂಗಳಲ್ಲಿ ಲಭ್ಯವಿರುತ್ತದೆ.

ಏಪ್ರಿಲ್ ತಿಂಗಳ ಸಿಹಿಸುದ್ದಿ ನೀಡಿದ 'ಜಿಯೋ'!

'ಜಿಯೋಫೋನ್ 2' ಜೊತೆಗಿನ ಎಲ್ಲಾ ಯೋಜನೆಗಳು 28 ದಿನಗಳ ವ್ಯಾಲಿಡಿಟಿಯಲ್ಲಿ ಸಿಗಲಿದ್ದು, 49 ರೂ.ಗೆ 1GBಯ ಡೇಟಾ ಸಿಕ್ಕರೆ, 99 ರೂ. ರೀಚಾರ್ಜ್ಗೆ 14GB ಹಾಗೂ 53 ರೂ.ರೀಚಾರ್ಜ್ ಪ್ಲಾನ್ 42GB ಡೇಟಾ ಹೊಂದಿದೆ. ಹಾಗಾದರೆ, ಜಿಯೋವಿನ ಈಗಿನ 4G ಫೀಚರ್ ಫೋನ್ 'ಜಿಯೋಫೋನ್ 2' ಫೀಚರ್ಸ್ ಯಾವುವು?,ಖರೀದಿಗೆ ಯೋಗ್ಯವೆ? ಎಂಬುದನ್ನು ಮುಂದೆ ತಿಳಿಯಿರಿ.

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಹೊಸ ಜಿಯೋ ಫೋನ್ 2 ವಿನ್ಯಾಸ ಮತ್ತು ಡಿಸ್‌ಪ್ಲೇನಲ್ಲಿ ಜಿಯೋ ಫೋನ್‌ಗಿಂತಲೂ ವಿಭಿನ್ನವಾಗಿದೆ. QWERTY ಕೀಪ್ಯಾಡ್‌ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಜಿಯೋ ಫೋನ್ 2 ಹೊಂದಿದೆ. ಆದರೆ, ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಎರಡು 2.4 ಇಂಚ್ ಡಿಸ್‌ಪ್ಲೇ ಹೊಂದಿವೆ. ನೋಡಲು ಅತ್ಯಾಕರ್ಶಕವಾಗಿ ಕಾಣುವ ಈ ಫೋನಿನ ವಿನ್ಯಾಸ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡುಹೊಡೆಯುವಂತಿದೆ.

ಜಿಯೋ ಫೋನ್ 2 ಕ್ಯಾಮೆರಾ

ಜಿಯೋ ಫೋನ್ 2 ಕ್ಯಾಮೆರಾ

ಜಿಯೋ ಫೋನ್ 2 ಜಿಯೋ ಫೋನ್‌ನಂತೆಯೇ ಕ್ಯಾಮೆರಾ ಫೀಚರ್‌ ಹೊಂದಿದ್ದು, 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಹೊಂದಿದೆ. ಎರಡು ಫೋನ್‌ಗಳು ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿದ್ದು, ಫೀಚರ್‌ ಫೋನ್‌ನಲ್ಲಿ ಉತ್ತಮ ಫೀಚರ್ ಹೊಂದಿದೆ. ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ಈ ಕ್ಯಾಮೆರಾಗಳು ಸಹಾಯಕವಾಗಬಹುದು.

ಸಂಪರ್ಕ ಮತ್ತು ಒಎಸ್

ಸಂಪರ್ಕ ಮತ್ತು ಒಎಸ್

ಸಂಪರ್ಕದ ವಿಚಾರಕ್ಕೆ ಬಂದರೆ ಜಿಯೋ ಫೋನ್ 2 ವಿಭಿನ್ನವಾಗಿದ್ದು, ಡ್ಯುಯಲ್ ಸಿಮ್‌ಗೆ ಬೆಂಬಲ ಮತ್ತು ವೋವೈ-ಫೈ ಫೀಚರ್ ಹೊಂದಿದೆ. ಇವೆರಡು ಫೀಚರ್‌ಗಳು ಜಿಯೋ ಫೋನ್‌ನಲ್ಲಿ ಇದ್ದಿಲ್ಲ. ಮತ್ತು ಜಿಯೋ ಫೋನ್‌ನ ಉಳಿದ ಫೀಚರ್‌ಗಳಾದ 4G ವೋಲ್ಟೇ ಬೆಂಬಲ, ಎಫ್‌ಎಂ ರೇಡಿಯೋ, ವೈ-ಫೈ, ಜಿಪಿಎಸ್ ಮತ್ತು ಎನ್‌ಎಫ್‌ಸಿ ಫೀಚರ್‌ಗಳನ್ನು ಹೊಂದಿದೆ.

ಮೆಮೊರಿ ಮತ್ತು ಬ್ಯಾಟರಿ

ಮೆಮೊರಿ ಮತ್ತು ಬ್ಯಾಟರಿ

ಜಿಯೋ ಫೋನ್ 2 ಮೆಮೊರಿ ವಿಚಾರದಲ್ಲೂ ವಿಭಿನ್ನವಾಗಿಲ್ಲ. ಜಿಯೋ ಫೋನ್‌ನಂತೆಯೇ 512MB RAM ಮತ್ತು 4GB ಆಂತರಿಕ ಸ್ಟೊರೇಜ್ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ. ಸಾಫ್ಟ್‌ವೇರ್‌ನಲ್ಲಿ ನೋಡುವುದಾದರೆ ಎರಡು ಫೋನ್‌ಗಳು KaiOS ಹೊಂದಿವೆ. 2000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಫೀಚರ್‌ ಫೋನ್‌ನಲ್ಲಿ ಬೆಸ್ಟ್‌ ಎನಿಸಬಹುದು.

ಜಿಯೋ ಫೋನ್ 2 ಆಪ್‌ಗಳು

ಜಿಯೋ ಫೋನ್ 2 ಆಪ್‌ಗಳು

ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಎರಡು ಮೊಬೈಲ್‌ಗಳು ಜಿಯೋ ಆಪ್‌ಗಳಾದ ಮೈ ಜಿಯೋ, ಜಿಯೋ ಮ್ಯೂಸಿಕ್, ಜಿಯೋ ಟಿವಿಯಂತಹ ಆಪ್‌ಗಳನ್ನು ಒಳಗೊಳ್ಳಲಿವೆ. ಆದರೆ ಜಿಯೋ ಫೋನ್‌ 2 ರಲ್ಲಿ ಈ ಆಪ್‌ಗಳನ್ನು ಹೊರತುಪಡಿಸಿ ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ನಂತಹ ಆಪ್‌ಗಳು ಇರಲಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

ಜಿಯೋ ಫೋನ್ 2 ಬೆಲೆ

ಜಿಯೋ ಫೋನ್ 2 ಬೆಲೆ

2016ರಲ್ಲಿ ಜಿಯೋ ಫೋನ್ ಕೇವಲ 1500 ರೂ. ಗಳಿಗೆ ಲಭ್ಯವಿತ್ತು. ಅದು ಸಹ 3 ವರ್ಷದ ನಂತರ ಮರುಪಾವತಿಯಾಗುತ್ತಿತ್ತು. ಆದರೆ, ಜಿಯೋ ಫೋನ್ 2ನ್ನು ಜಿಯೋ ಫೋನ್‌ಗೆ ಹೋಲಿಕೆ ಮಾಡಿ ನೋಡಿದರೆ ಬೇಲೆ ಸ್ವಲ್ಪ ಹೆಚ್ಚಾಯಿತು ಎನ್ನಬಹುದು. ಜಿಯೋ ಫೋನ್ 2 ಮೊಬೈಲ್‌ನ ಆರಂಭಿಕ ಬೆಲೆ 2,999 ರೂ. ಇದೆ. ರಿಲಾಯನ್ಸ್‌ ಜಿಯೋ ನಂತರದ ದಿನಗಳಲ್ಲಿ ಈ ಫೋನ್‌ಗೂ ಮರುಪಾವತಿಯ ಆಫರ್ ನೀಡಿದರೆ ಅಚ್ಚರಿಪಡಬೇಕಾಗಿಲ್ಲ.

Best Mobiles in India

English summary
Reliance Jio Phone 2 scheduled to go on next sale on April 4. Reliance JioPhone 2. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X