ಏರ್‌ಟೆಲ್‌ನ 79ರೂ. ಪ್ಲ್ಯಾನಿಗೆ, ಜಿಯೋದ ಈ ಅಗ್ಗದ ಪ್ಲ್ಯಾನ್‌ನಿಂದ ಟಾಂಗ್!

|

ಭಾರ್ತಿ ಏರ್‌ಟೆಲ್‌ ಟೆಲಿಕಾಂ ಆಕರ್ಷಕ ಯೋಜನೆಗಳ ಮೂಲಕ ತನ್ನದೇ ಗ್ರಾಹಕ ವರ್ಗವನ್ನು ಹೊಂದಿದೆ. ಏರ್‌ಟೆಲ್‌ ಅಲ್ಪಾವಧಿಯ ಪ್ರೀಪೇಯ್ಡ್‌ ಯೋಜನೆಗಳ ಜೊತೆಗೆ ಅಧಿಕ ವ್ಯಾಲಿಡಿಟಿಯ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಮುಖ್ಯವಾಗಿ ಬಹುತೇಕ ಯೋಜನೆಗಳು ಮುಂಚೂಣಿಯಲ್ಲಿರುವ ಜಿಯೋ ಟೆಲಿಕಾಂಗೆ ಪೈಪೋಟಿ ನೀಡುವಂತಿವೆ. ಆ ಪೈಕಿ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ ಆಗಿರುವ 79ರೂ. ಯೋಜನೆಗೆ ಜಿಯೋ ಟೆಲಿಕಾಂನ 75ರೂ. ಪ್ಲ್ಯಾನ್ ನೇರ ಸ್ಪರ್ಧೆ ನೀಡುತ್ತಿದೆ.

ಏರ್‌ಟೆಲ್‌

ಹೌದು, ಭಾರ್ತಿ ಏರ್‌ಟೆಲ್‌ ಭಿನ್ನ ಶ್ರೇಣಿಯ ಯೋಜನೆಗಳನ್ನು ಹೊಂದಿದೆ. ಅವುಗಳಲ್ಲಿ ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಹೆಚ್ಚು ಗಮನ ಸೆಳೆದಿವೆ. ಕಂಪನಿಯು ತನ್ನ 49ರೂ.ಗಳ ಅಗ್ಗದ ಯೋಜನೆಯನ್ನು ನಿಲ್ಲಿಸಿದ್ದು, ಸದ್ಯ 79ರೂ. ಯೋಜನೆಯೇ ಕಡಿಮೆ ದರದ ಪ್ಲ್ಯಾನ್‌ ಆಗಿದೆ. ಏರ್‌ಟೆಲ್‌ನ ಈ ಯೋಜನೆಗೆ ಜಿಯೋದ 75ರೂ. ಯೋಜನೆ ಟಂಗ್ ನೀಡುವಂತಿದ್ದು, ಆಕರ್ಷಕ ಪ್ರಯೋಜನಗಳನ್ನು ಒಳಗೊಂಡಿದೆ. ಹಾಗಾದರೇ ಈ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ 79ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 79ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 79ರೂ. ಪ್ಯಾಕ್ ರೀಚಾರ್ಜ್ ಯೋಜನೆಯು 64ರೂ. ಮೌಲ್ಯದ ಟಾಕ್‌ಟೈಮ್ ಮತ್ತು 200MB ಡೇಟಾದೊಂದಿಗೆ ಬರುತ್ತದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ವಾಯಿಸ್ ಕರೆ ಪ್ರಯೋಜನ ಮುಗಿತ ಬಳಿಕ ಪ್ರತಿ ನಿಮಿಷದ ವಾಯಿಸ್ ಕರೆ 60 ಪೈಸೆ ಶುಲ್ಕವನ್ನು ಆಕರ್ಷಿಸುತ್ತದೆ. ಇದಲ್ಲದೆ, 200MB ಡೇಟಾದ ನಂತರದ ಬಳಕೆ, ಪ್ರತಿ MB ಡೇಟಾವು 50 ಪೈಸೆ ಶುಲ್ಕವನ್ನು ಆಕರ್ಷಿಸುತ್ತದೆ.

ಜಿಯೋ ಫೋನ್ 75ರೂ. ಪ್ಲ್ಯಾನ್

ಜಿಯೋ ಫೋನ್ 75ರೂ. ಪ್ಲ್ಯಾನ್

ರಿಲಯನ್ಸ್ ಜಿಯೋ ಬಳಕೆದಾರರಿಗೆ 75ರೂ. ಪ್ಲಾನ್ ಪರಿಚಯಿಸಿದೆ. ಈ ಯೋಜನೆ ಭಾರತದ ಎಲ್ಲಾ ಜಿಯೋ ಫೋನ್ ಬಳಕೆದಾರರಿಗೆ ಲಭ್ಯವಿದೆ. ಈ ಯೋಜನೆಯೊಂದಿಗೆ, ಬಳಕೆದಾರರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ ಮತ್ತು ನಿಜವಾದ ಅನಿಯಮಿತ ಧ್ವನಿ ಕರೆಗಳನ್ನು ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು 3 ಜಿಬಿ ಒಟ್ಟು ಡೇಟಾ (ಒಟ್ಟು 0.1 ಜಿಬಿ ದೈನಂದಿನ ಡೇಟಾ + 200 ಎಂಬಿ ಡೇಟಾ) ಜೊತೆಗೆ ಒಟ್ಟು 50 ಎಸ್‌ಎಂಎಸ್‌ಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ಏರ್‌ಟೆಲ್‌ 49ರೂ. ಪ್ಯಾಕ್ - ಇನ್ನು ಅಲಭ್ಯ

ಏರ್‌ಟೆಲ್‌ 49ರೂ. ಪ್ಯಾಕ್ - ಇನ್ನು ಅಲಭ್ಯ

ಭಾರ್ತಿ ಏರ್‌ಟೆಲ್‌ ಟೆಲಿಕಾಂನ 49ರೂ. ರೀಚಾರ್ಜ್ ಪ್ಯಾಕ್ ಅನ್ನು ಕಂಪನಿಯು ನಿಲ್ಲಿಸಿದೆ. ಏರ್‌ಟೆಲ್‌ 79ರೂ. ಪ್ಲ್ಯಾನ್ ಈಗ ಅಗ್ಗದ ಆರಂಭಿಕ ಪ್ಲ್ಯಾನ್‌ ಆಗಿದೆ. ಇನ್ನು ಏರ್‌ಟೆಲ್‌ ಟೆಲಿಕಾಂನ 49ರೂ. ಯೋಜನೆಯು ಒಟ್ಟು 38 ದಿನಗಳ ಟಾಕ್‌ಟೈಮ್ ಅವಧಿಯನ್ನು ಪಡೆದಿದೆ. ಹಾಗೆಯೇ 100 ದಿನಗಳ ಡೇಟಾ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಯೋಝನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಒಳಗೊಂಡಿತ್ತು.

Most Read Articles
Best Mobiles in India

English summary
Reliance Jio Rs 75 Plan Trumps Its Competitors Offering.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X