ಮೊಬೈಲ್‌ನಲ್ಲಿ ವಿಶ್ವಕಪ್ ನೋಡಿದ್ರೆ ನೆಟ್‌ ಖಾಲಿ ಆಗೋ ಮಾತೆ ಇಲ್ಲ..!

By Gizbot Bureau
|

ಸದ್ಯ ವಿಶ್ವದಾದ್ಯಂತ ಕ್ರಿಕೆಟ್‌ ಕ್ರೇಜ್ ಜೋರಾಗಿದೆ. ಈಗಾಗಲೇ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಶುರುವಾಗಿದ್ದು, ರೋಚಕ ಪಂದ್ಯಗಳಿಗೆ ವಿಶ್ವಕಪ್ ಸಾಕ್ಷಿಯಾಗ್ತಿದೆ. ಈಗ ಇರುವ ಕ್ರಿಕೆಟ್ ಕ್ರೇಜ್‌ನ್ನು ಮತ್ತಷ್ಟು ಹೆಚ್ಚಿಸಲು ರಿಲಾಯನ್ಸ್ ಜಿಯೋ ಮುಂದಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಕೊಡುಗೆಗಳನ್ನು ನೀಡ್ತಿದೆ.

ಮೊಬೈಲ್‌ನಲ್ಲಿ ವಿಶ್ವಕಪ್ ನೋಡಿದ್ರೆ ನೆಟ್‌ ಖಾಲಿ ಆಗೋ ಮಾತೆ ಇಲ್ಲ..!

ಉಚಿತ ಸೇವೆಯ ಜೊತೆ ಜೊತೆಗೆ ಆಕರ್ಷಕ ಆಫರ್‌ಗಳನ್ನು ನೀಡುತ್ತಿರುವ ಜಿಯೋ ಭಾರತೀಯ ಗ್ರಾಹಕರನ್ನು ಸೆಳೆಯುತ್ತಿದೆ.. ಇಂತಹದ್ದೇ ಮತ್ತೊಂದು ಆಫರ್‌ನ್ನು ಜಿಯೋ ಪರಿಚಯಿಸಿದ್ದು, 251 ರೂ.ಗೆ ಅನ್‌ಲಿಮಿಟೆಡ್‌ ಕ್ರಿಕೆಟ್‌ ಸೀಸನ್ ಡೇಟಾ ಪ್ಯಾಕ್‌ ನೀಡ್ತಿದೆ. 251 ರೂ. ಪ್ಯಾಕ್‌ ಹೇಗಿದೆ..? ವಿಶೇಷತೆ ಏನು..? ವ್ಯಾಲಿಡಿಟಿ ಎಷ್ಟು..? ಎಂಬುದನ್ನು ಮುಂದೆ ಓದಿ.

ನೆಟ್‌ ಖಾಲಿ ಆಗೋದೆ ಇಲ್ಲ..!

ನೆಟ್‌ ಖಾಲಿ ಆಗೋದೆ ಇಲ್ಲ..!

251 ರೂ.ಗೆ ಅನ್‌ಲಿಮಿಟೆಡ್‌ ಕ್ರಿಕೆಟ್‌ ಸೀಸನ್ ಡೇಟಾ ಪ್ಯಾಕ್‌ ಹಾಕಿಸಿಕೊಂಡ್ರೆ ನಿಮ್ಮ ಮೊಬೈಲ್‌ನಲ್ಲಿ ನೆಟ್‌ ಖಾಲಿ ಆಗೋ ಮಾತೆ ಇಲ್ಲ. ಹೌದು, ಈಗಾಗಲೇ ಜಿಯೋ ಬಳಕೆದಾರರು ವಿಶ್ವಕಪ್‌ನ ಪ್ರತಿಯೊಂದು ಪಂದ್ಯವನ್ನು ಉಚಿತ ಮತ್ತು ನೇರಪ್ರಸಾರದಲ್ಲಿ ವೀಕ್ಷಿಸುತ್ತಿದ್ದಾರೆ. ವಿಶ್ವಕಪ್‌ ಸಮಯದಲ್ಲಿ ಗ್ರಾಹಕರಿಗೆ ಯಾವುದೇ ಅಡಚಣೆಯಾಗದಂತೆ ಜಿಯೋ ಈ ಪ್ಯಾಕ್ ವಿನ್ಯಾಸಗೊಳಿಸಿದ್ದು, ಹೆಚ್ಚಿನ ಡೇಟಾ ಬಳಸುವ ವೀಕ್ಷಕರಿಗೆ 251 ರೂ. ಡೇಟಾ ಪ್ಯಾಕ್‌ ಹೇಳಿಮಾಡಿಸಿದಂತಿದೆ. 251 ರೂ. ಡೇಟಾ ಪ್ಯಾಕ್‌ನಿಂದ ಹಾಟ್‌ಸ್ಟಾರ್‌ ಮತ್ತು ಜಿಯೋ ಟಿವಿಯಲ್ಲಿ ಲೈವ್‌ ಕ್ರಿಕೆಟ್ ವೀಕ್ಷಣೆಯಲ್ಲಿ ಇನ್ಮುಂದೆ ಡೇಟಾ ಖಾಲಿ ಎಂಬ ಪದ ಕೇಳಲ್ಲ.

251 ರೂ.ಗೆ 365 ರೂ. ಸೌಲಭ್ಯ..!

251 ರೂ.ಗೆ 365 ರೂ. ಸೌಲಭ್ಯ..!

ಹೌದು, ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿರುವಂತೆ 251 ರೂ.ನ ಅನ್‌ಲಿಮಿಟೆಡ್‌ ಕ್ರಿಕೆಟ್‌ ಸೀಸನ್ ಡೇಟಾ ಪ್ಯಾಕ್‌ ಜಿಯೋ ಗ್ರಾಹಕರಿಗೆ 365 ರೂ. ಪ್ಯಾಕ್‌ನ ಸೌಲಭ್ಯಗಳನ್ನು ನೀಡಲಾಗ್ತಿದೆ ಎಂದಿದೆ. ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸಲು ಯಾವುದೇ ರೀತಿಯ ಸಬ್‌ಸ್ಕ್ರೀಪ್ಷನ್ ಬೇಕಿಲ್ಲ ಎಂದು ಜಿಯೋ ಹೇಳಿದ್ದು, ಈ ಮೂಲಕ ಭಾರತದ ಬೇರೆ ಯಾವ ಟೆಲಿಕಾಂ ಆಪರೇಟರ್ ನೀಡದ ಆಫರ್‌ನ್ನು ಜಿಯೋ ಗ್ರಾಹಕರಿಗೆ ನೀಡುತ್ತಿದೆ.

ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್

ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್

ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್ ಎಲ್ಲಾ ಜಿಯೋ ಗ್ರಾಹಕರಿಗೆ 251 ರೂ.ಗೆ ಲಭ್ಯವಿದೆ. ಈ ಪ್ಯಾಕ್ 51 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಬರೋಬ್ಬರಿ 102 ಜಿಬಿ ಹೈಸ್ಪೀಡ್ ಡೇಟಾ ಒಳಗೊಂಡಿದೆ. ಎಲ್ಲಾ ವಿಶ್ವಕಪ್ ಪಂದ್ಯಗಳ ವೀಕ್ಷಣೆಗೆ ಈ ಪ್ಯಾಕ್ ಅನುಕೂಲಕಾರಿಯಾಗಿದೆ, ಬರೀ ಕ್ರಿಕೆಟ್ ವೀಕ್ಷಣೆಯಷ್ಟೇ ಅಲ್ಲದೇ ಬೇರೆ ಇಂಟರ್‌ನೆಟ್ ಕಂಟೆಂಟ್ ಕೂಡ ಈ ಪ್ಯಾಕ್‌ನಿಂದ ಬಳಸಿಕೊಳ್ಳಬಹುದು. ಅದಲ್ಲದೇ ದೈನಂದಿನ ಡೇಟಾ ಲಿಮಿಟ್ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಜಿಯೋ ತನ್ನ ಗ್ರಾಹಕರಿಗೆ ಈ ಪ್ಯಾಕ್ ಮುಖೇನ ಹೇಳಿದೆ.

ವಿಶ್ವಕಪ್ ಉಚಿತ ವೀಕ್ಷಣೆ ಹೇಗಂತಿರಾ..?

ವಿಶ್ವಕಪ್ ಉಚಿತ ವೀಕ್ಷಣೆ ಹೇಗಂತಿರಾ..?

1. ಜಿಯೋ ಬಳಕೆದಾರರು ಹಾಟ್‌ಸ್ಟಾರ್ ಮತ್ತು ಜಿಯೋ ಟೀವ ಮೂಲಕ ವಿಶ್ವಕಪ್‌ ಉಚಿತವಾಗಿ ನೋಡಬಹುದು.

2. ಜಿಯೋ ಬಳಕೆದಾರರು ಹಾಟ್‌ಸ್ಟಾರ್‌ಗೆ ಭೇಟಿ ನೀಡಿದ ತಕ್ಷಣ ಎಲ್ಲಾ ವಿಶ್ವಕಪ್‌ ಪಂದ್ಯಗಳನ್ನು ವೀಕ್ಷಿಸಲು ಆಟೋಮ್ಯಾಟಿಕ್ ಅಕ್ಸೆಸ್ ನೀಡುತ್ತದೆ.

3. ಇನ್ನು, ಜಿಯೋಟಿವಿಯಲ್ಲೂ ಕೂಡ ಲೈವ್ ಮ್ಯಾಚ್‌ಗಳನ್ನು ನೋಡಬಹುದಾಗಿದ್ದು, ಹಾಟ್‌ಸ್ಟಾರ್‌ನೊಂದಿಗೆ ರಿಡೈರೆಕ್ಟ್‌ ಆಗಿ ಲೈವ್‌ ಬರುತ್ತದೆ.

Best Mobiles in India

English summary
Reliance Jio Unlimited Cricket Season Data Pack Now Available For Rs 251

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X