ಗೂಗಲ್‌ ಬ್ರೌಸರ್‌ಗೆ ಸೆಡ್ಡು ಹೊಡೆಯುವ ಫೀಚರ್ಸ್‌ ಪರಿಚಯಿಸಿದ ಜಿಯೋ ಪೇಜಸ್‌!

|

ಮೇಡ್‌ ಇನ್‌ ಇಂಡಿಯಾ ಬ್ರೌಸರ್‌ ಆಗಿರುವ ಜಿಯೋ ಪೇಜಸ್‌ ವೆಬ್‌ ಬ್ರೌಸರ್‌ ಹೊಸ ಆಪ್ಡೇಟ್‌ ಅನ್ನು ಮಾಡಿದೆ. ಗೂಗಲ್‌ ಕ್ರೋಮ್‌ಗೆ ಪ್ರತಿಸ್ಫರ್ಧಿಯಾಗಿರುವ ಜಿಯೋ ಪೇಜಸ್‌ ತನ್ನ ಜಿಯೋ ಪೇಜಸ್ 2.0.1 ವೆಬ್ ಬ್ರೌಸರ್ ಆಪ್ಡೇಟ್‌ನಲ್ಲಿ ನ್ಯಾವಿಗೇಷನ್ ಮತ್ತು ಎಕ್ಸಿಟ್ ಬಟನ್, ಶಾರ್ಟ್‌ ವೀಡಿಯೊಗೆ ಬೆಂಬಲ, ಮತ್ತು ಎಂಜಿನಿಯರಿಂಗ್ ಟೂಲ್‌ಗಳನ್ನು ಪರಿಚಯಿಸಿದೆ. ಈ ಫೀಚರ್ಸ್‌ಗಳನ್ನ ಬಳಸಲು ಸೆಟ್ಟಿಗ್ಸ್‌, ಇನ್ಸಟಂಟ್‌ ಸೆಟ್ಟಿಂಗ್ಸ್‌ ಅನ್ನು ಟ್ಯಾಪ್‌ ಮಾಡಬೇಕಾಗುತ್ತದೆ. ಇನ್ನು ಆಂಡ್ರಾಯ್ಡ್ ಫೋನ್‌ಗಳಿಗೆ ಈ ಹೊಸ ಅಪ್‌ಡೇಟ್ ಈಗಾಗಲೇ ಲಭ್ಯವಿದೆ.

ಜಿಯೋ ಪೇಜಸ್

ಹೌದು,ರಿಲಾಯನ್ಸ್‌ ಜಿಯೋ ಜಿಯೋ ಪೇಜಸ್ ತನ್ನ ಹೊಸ ಆಪ್ಡೇಟ್‌ ಅನ್ನು ಪರಿಚಯಿಸಿದೆ. ಬೇರೆ ಬ್ರೌಸರ್‌ಗಳಿಗೆ ಹೋಲಿಸಿದಾಗ ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಜಿಯೋ ಪೇಜಸ್‌ ಇದೀಗ ತನ್ನ ಅಪ್ಡೇಟ್‌ನಲ್ಲಿ ಇನ್ನಷ್ಟು ಹೊಸ ಸೇವೆಗಳನ್ನು ನೀಡಲು ಮುಂದಾಗಿದೆ. ಇದರಲ್ಲಿ ಡಕ್ ಡಕ್ ಗೋ ಸರ್ಚ್ ಎಂಜಿನ್‌, ಶಾರ್ಟ್‌ ವೀಡಿಯೋಸ್‌ ಫೀಚರ್ಸ್‌ ಮುಖ್ಯವಾಗಿವೆ. ಇನ್ನುಳಿದಂತೆ ಈ ಹೊಸ ಅಪ್ಡೇಟ್‌ನಲ್ಲಿ ಲಭ್ಯವಿರುವ ಹೊಸ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ಇತ್ತೀಚೆಗೆ ತನ್ನದೇ ಆದ ಜಿಯೋ ಪೇಜಸ್ ಅಪ್ಲಿಕೇಶನ್‌ ಅನ್ನು ಪ್ರಾರಂಬಿಸಿತ್ತು. ಈ ಮೂಲಕ ತನ್ನದೇ ಆದ ಮೊಬೈಲ್ ಬ್ರೌಸರ್ ಅನ್ನು ಪರಿಚಯಿಸಿತ್ತು. ಇದು Google Chrome, Safari, Firefox ಮತ್ತು ಇತರ ವೆಬ್‌ಬ್ರೌಸರ್‌ಗಳಿಗೆ ಪ್ರತಿಸ್ಫರ್ಧಿಯಾಗಿದ್ದು, ಗೌಪ್ಯತೆಯ ವಿಷಯದಲ್ಲಿ ಜಿಯೋ ಪೇಜಸ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು ಶಕ್ತಿಯುತ ಕ್ರೋಮಿಯಂ ಬ್ಲಿಂಕ್ ಎಂಜಿನ್‌ನಲ್ಲಿ ನಿರ್ಮಿಸಲ್ಪಟ್ಟಿದ್ದು, ಇದು ವೇಗವಾದ ಎಂಜಿನ್ , ಅತ್ಯುತ್ತಮ ಇನ್-ಕ್ಲಾಸ್ ವೆಬ್‌ಪುಟ ರೆಂಡರಿಂಗ್, ವೇಗದ ಪೇಜ್‌ ಲೋಡ್‌ಗಳು, ದಕ್ಷ ಮೀಡಿಯಾ ಸ್ಟ್ರೀಮಿಂಗ್, ಎಮೋಜಿ ಡೊಮೇನ್ ಬೆಂಬಲ ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂಪರ್ಕದ ಮೂಲಕ ವರ್ಧಿತ ಬ್ರೌಸಿಂಗ್ ಅನುಭವವನ್ನು ಬಳಕೆದಾರರಿಗೆ ಒದಗಿಸುತ್ತದೆ. ಸದ್ಯ ಇದೀಗ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವ ಫೀಚರ್ಸ್‌ಗಳನ್ನ ಹೊಸ ಆಪ್ಡೇಟ್‌ನಲ್ಲಿ ಪರಿಚಯಿಸಿದೆ.

ಡಕ್ ಡಕ್ ಗೋ ಸರ್ಚ್ ಎಂಜಿನ್

ಡಕ್ ಡಕ್ ಗೋ ಸರ್ಚ್ ಎಂಜಿನ್

ಜಿಯೋ ಪೇಜಸ್‌ನ ಹೊಸ ಅಪ್ಡೇಟ್‌ನಲ್ಲಿ ಲಭ್ಯವಿರುವ ಹೊಸ ಫೀಚರ್ಸ್‌ಗಳಲ್ಲಿ ಡಕ್ ಡಕ್ ಗೋ ಸರ್ಚ್ ಎಂಜಿನ್ ಅನ್ನು ಕೂಡ ಒಂದಾಗಿದೆ. ಇದರರ್ಥ ಈಗ ನೀವು ಪೂರ್ವನಿಯೋಜಿತವಾಗಿ ಡಕ್ ಡಕ್ ಗೋ ಸರ್ಚ್ ಎಂಜಿನ್ ಆಯ್ಕೆ ಮಾಡಬಹುದು. ಇದು ಬಳಕೆದಾರರ ಮಾಹಿತಿಯನ್ನು ಲಾಗ್ ಮಾಡದ ಕಾರಣ ಮತ್ತು ಹೆಚ್ಚು ಅಗತ್ಯವಿದ್ದಾಗ ಮಾತ್ರ ಕುಕೀಗಳನ್ನು ಬಳಸುವುದರಿಂದ ಇದು ಹೆಚ್ಚು ಸುರಕ್ಷಿತವಾಗಿರಲಿದೆ. ಜಿಯೋ ಪೇಜಸ್‌ನಲ್ಲಿ ಕೆಳಗಿನ ಬಲ ಹ್ಯಾಂಬರ್ಗರ್ ಐಕಾನ್> ಸೆಟ್ಟಿಂಗ್ಸ್‌> ಇನ್ಸಟಂಟ್‌ ಸೆಟ್ಟಿಂಗ್ಸ್‌> ಸರ್ಚ್‌ ಎಂಜಿನ್ ಅನ್ನು ನ್ಯಾವಿಗೇಟ್ ಮಾಡುವ ಮೂಲಕ ನೀವು ಈ ಸರ್ಚ್ ಎಂಜಿನ್ ಅನ್ನು ಆಯ್ಕೆ ಮಾಡಬಹುದು.

ಶಾರ್ಟ್‌ ವೀಡಿಯೋಸ್‌

ಶಾರ್ಟ್‌ ವೀಡಿಯೋಸ್‌

ಶಾರ್ಟ್‌ ವಿಡಿಯೋ ಹೆಸರೇ ಸೂಚಿಸುವಂತೆ ಜಿಯೋ ಪೇಜಸ್ ಬಳಕೆದಾರರು ಈಗ 30 ಸೆಕೆಂಡುಗಳ ಅವಧಿಯನ್ನು ಹೊಂದಿರುವ ಕಿರು ವೀಡಿಯೊಗಳನ್ನು ವೀಕ್ಷಿಸಬಹುದು. ಇದು ಮೀಸಲಾದ ವಿಭಾಗದಲ್ಲಿ ಲಭ್ಯವಿರುತ್ತದೆ. ಮನರಂಜನೆ, ತಂತ್ರಜ್ಞಾನ, ಜೀವನಶೈಲಿ, ಪ್ರಯಾಣ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳಿಂದ ಈ ವೀಡಿಯೋಗಳನ್ನ ವೀಕ್ಷಿಸಬಹುದಾಗಿದೆ. ಇನ್ನು ಈ ವೀಡಿಯೊಗೆ ಹೋಗಲು, ಜಿಯೋ ಪೇಜಸ್‌ನ ಕೆಳಭಾಗದಲ್ಲಿರುವ ಎಕ್ಸಪ್ಲೋರ್‌ ಸೆಕ್ಷನ್‌> ಸ್ಕ್ರಾಲ್ ಟು ಶಾರ್ಟ್ ವೀಡಿಯೋಸ್ ರೀಲ್ > ವ್ಯೂ ಮೋರ್‌ ಅನ್ನು ಬಳಸಬೇಕು.

ಎಕ್ಸಿಟ್‌ ಬಟನ್ಸ್‌

ಎಕ್ಸಿಟ್‌ ಬಟನ್ಸ್‌

ಇನ್ನು ಜಿಯೋ ಪೇಜಸ್‌ನಲ್ಲಿ ಈ ಭಾರಿ ಹೊಸದಾಗಿ ಎಕ್ಸಿಟ್‌ ಬಟನ್ಸ್ ಅನ್ನು ಪರಿಚಯಿಸಲಾಗಿದೆ. ಇನ್ನು, ಎಕ್ಸಿಟ್‌ ಬಟನ್‌ ಮೂಲಕ ನೀವು ಅಪ್ಲಿಕೇಶನ್‌ನಿಂದ ತ್ವರಿತವಾಗಿ ನಿರ್ಗಮಿಸಲು ಸಾಧ್ಯವಾಗುತ್ತದೆ. ನ್ಯಾವಿಗೇಷನ್ ಬಟನ್ಸ್‌ ಜಿಯೋ ಪೇಜ್‌ಗಳ ಒಳಗೆ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಲು ನಿಮಗೆ ಸಹಾಯ ಮಾಡುತ್ತದೆ. ತಲುಪಿಸುವ ಭರವಸೆ ನೀಡಿದೆ. ಸಂಸ್ಥೆಯು ಇದನ್ನು ಮೇಡ್-ಇನ್ ಇಂಡಿಯಾ ಬ್ರೌಸರ್‌ನಂತೆ ಮಾರಾಟ ಮಾಡುತ್ತಿದೆ.

ಜಿಯೋ ಪೇಜಸ್‌ನ ವಿಶೇಷತೆ

ಜಿಯೋ ಪೇಜಸ್‌ನ ವಿಶೇಷತೆ

ಜಿಯೋ ಪೇಜಸ್ ಬ್ರೌಸರ್ ತಮಿಳು, ಮರಾಠಿ, ಕನ್ನಡ, ತೆಲುಗು, ಹಿಂದಿ, ಗುಜರಾತಿ, ಬಂಗಾಳಿ ಮತ್ತು ಮಲಯಾಳಂನಂತಹ ಎಂಟು ಭಾಷೆಗಳಲ್ಲಿ ಬ್ರೌಸ್ ಮಾಡಲು ನಿಮಗೆ ಅನುಮತಿಸುತ್ತದೆ. ಇದು ನಿಮ್ಮ ಆದ್ಯತೆಯ ಭಾಷೆಗಳಲ್ಲಿ ಸುದ್ದಿಗಳನ್ನು ಒದಗಿಸುತ್ತದೆ ಮತ್ತು ಎಲ್ಲಾ ಸ್ಥಳೀಯ, ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸುದ್ದಿಗಳನ್ನು ಒಳಗೊಂಡಿದೆ. JioPages ನಲ್ಲಿ ಧ್ವನಿ ಹುಡುಕಾಟದ ಮೂಲಕ ಸೈಟ್‌ಗಳನ್ನು ಬಳಸಲು ನಿಮಗೆ ಅನುಮತಿ ಇದೆ. ಜಾಹೀರಾತುಗಳು ಮತ್ತು ಪಾಪ್-ಅಪ್‌ಗಳನ್ನು ನಿರ್ಬಂಧಿಸಲು ಇದು ನಿಮ್ಮನ್ನು ಶಕ್ತಗೊಳಿಸುತ್ತದೆ ಮತ್ತು ಇದು ಲ್ಯಾಂಡ್‌ಸ್ಕೇಪ್ ವೀಕ್ಷಣೆಯಲ್ಲಿಯೂ ಲಭ್ಯವಿದೆ.

Best Mobiles in India

English summary
Reliance Jio has announced an update for the JioPages web browser. The JioPages 2.0.1 web browser now comes with new tools such as navigation and exit buttons, support for a short video, and engineering tools.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X