ರಿಲಾಯನ್ಸ್‌ ಜಿಯೋ ಸಂಸ್ಥೆಯಿಂದ ಜಿಯೋ ಪೇಜಸ್ ವೆಬ್ ಬ್ರೌಸರ್ ಬಿಡುಗಡೆ!

|

ಭಾರತದ ಟೆಲಿಕಾಂ ವಲಯದ ದೈತ್ಯ ಎನಿಸಿಕೊಂಡಿರುವ ರಿಲಾಯನ್ಸ್‌ ಜಿಯೋ ತನ್ನದೇ ಆದ ಜಿಯೋ ಪೇಜಸ್‌ ಅನ್ನು ಪರಿಚಯಿಸಿದೆ. ಇದು ಎನ್‌ಕ್ರಿಪ್ಟ್ ಮಾಡಲಾದ ಕಂಟ್ಯಾಕ್ಟ್ಸ್‌ ಗಳನ್ನ ಬೆಂಬಲಿಸಲಿದೆ. ಅಲ್ಲದೆ ಭಾರತದ ಎಂಟು ಸ್ಥಳಿಯ ಭಾಷೆಗಳನ್ನ ಬೆಂಬಲಿಸಲಿದ್ದು, ಕ್ರೋಮಿಯಂ ಬ್ಲಿಂಕ್ ಆಧಾರಿತ ವೆಬ್ ಬ್ರೌಸರ್ ಇದಾಗಿದೆ. ಈ ಮೂಲಕ ಒಂದೇ ಪೇಜ್‌ನಲ್ಲಿ ಎಲ್ಲಾ ಮಾದರಿಯ ಸುದ್ದಿಗಳನ್ನ ಪಡೆದುಕೊಳ್ಳುವುದಕ್ಕೆ ಉತ್ತಮ ಅವಕಾಶವನ್ನ ಕಲ್ಫಿಸಿದೆ. ಸದ್ಯ ಜಿಯೋ ಫೇಜಸ್‌ ಈಗ ಗೂಗಲ್ ಪ್ಲೇನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಇನ್ನು ರಿಲಯನ್ಸ್ ಜಿಯೋ ವೆಬ್ ಸುರಕ್ಷತೆ ಮತ್ತು ಡೇಟಾ ಗೌಪ್ಯತೆಯನ್ನು ಹೊಂದಿದೆ.

ಜಿಯೋ ಪೇಜಸ್‌

ಹೌದು, ರಿಲಾಯನ್ಸ್‌ ಜಿಯೋ ತನ್ನ ಜಿಯೋ ಪೇಜಸ್‌ ಅನ್ನು ಪರಿಚಯಿಸಿದೆ. ಈ ವೆಬ್‌ ಬ್ರೌಸರ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಿವಿಧ ಭಾರತೀಯ ಭಾಷೆಗಳಲ್ಲಿ ಸ್ಥಳೀಕರಿಸಲ್ಪಟ್ಟ ಸುದ್ದಿ ವಿಷಯ, ಸ್ಮಾರ್ಟ್ ಡೌನ್‌ಲೋಡ್ ಮ್ಯಾನೇಜರ್, ಅಜ್ಞಾತ ಬ್ರೌಸಿಂಗ್ ಮತ್ತು ಥೀಮ್‌ಗಳಂತಹ ಇತರ ಫೀಚರ್ಸ್‌ಗಳನ್ನು ಸಹ ಉಲ್ಲೇಖಿಸುತ್ತದೆ. ಇನ್ನು ಈ ಪೇಜಸ್‌ ಮೂಲಕ ಟೆಕ್ನಾಲಜಿ ಸಂಬಂಧಿತ ವಿಚಾರಗಳು, ದೈನಂದಿನ ವಿಚಾರಗಳು, ಸ್ಥಳೀಯ ಮತ್ತು ರಾಷ್ಟ್ರೀಯ ಸುದ್ದಿಗಳನ್ನ ವೀಕ್ಷಿಸಲು ಸಾಧ್ಯವಾಗಲಿದೆ. ಇನ್ನುಳಿದಂತೆ ಜಿಯೋ ಫೇಜಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಪೇಜಸ್‌

ರಿಲಾಯನ್ಸ್‌ ಜಿಯೋ ಪೇಜಸ್‌ ಪಿನ್-ಲಾಕ್ Incognito ಮೋಡ್‌ ಅನ್ನು ಹೊಂದಿದ್ದು, ಇದನ್ನು ಆಡ್‌ಬ್ಲಾಕ್ ಪ್ಲಸ್‌ನಲ್ಲಿ ನಿರ್ಮಿಸಲಾಗಿದೆ. ಇನ್ನು ಈ ಜಿಯೋ ಪೇಜಸ್ ಎಂಟು ಭಾರತೀಯ ಭಾಷೆಗಳನ್ನು ಬೆಂಬಲಿಸಲಿದೆ. ಇದರಲ್ಲಿ ಹಿಂದಿ, ಮರಾಠಿ, ತಮಿಳು, ಗುಜರಾತಿ, ತೆಲುಗು, ಮಲಯಾಳಂ, ಕನ್ನಡ ಮತ್ತು ಬಂಗಾಳಿ ಭಾಷೆಗಳು ಸೇರಿವೆ. ಬಳಕೆದಾರರು ತಮ್ಮ ಅಪ್ಲಿಕೇಶನ್ ಭಾಷೆಯನ್ನು ಆಯ್ಕೆ ಮಾಡಬಹುದಾಗಿದ್ದು, ವಿವಿಧ ರಾಜ್ಯಗಳಿಂದ ತಮ್ಮ ಪ್ರಾದೇಶಿಕ ಆದ್ಯತೆಗಳನ್ನು ಸಹ ಹೊಂದಿಸಬಹುದು. ಅಲ್ಲದೆ ಜಿಯೋ ಬ್ರೌಸರ್ ಕೆಲವು ಅತ್ಯುತ್ತಮ ವೆಬ್‌ಸೈಟ್‌ಗಳಿಗಾಗಿ ತ್ವರಿತ ಲಿಂಕ್‌ಗಳನ್ನು ಸಂಯೋಜಿಸಿದೆ.

ಬ್ರೌಸರ್

ಇನ್ನು ಈ ಬ್ರೌಸರ್ ಕ್ರೋಮಿಯಂ ಬ್ಲಿಂಕ್ ಅನ್ನು ಆಧರಿಸಿದೆ. "ವೇಗವಾದ ಎಂಜಿನ್ ಸ್ಥಳಾಂತರ, ಉತ್ತಮ-ವರ್ಗದ ವೆಬ್‌ಪುಟ ರೆಂಡರಿಂಗ್, ವೇಗದ ಪುಟ ಲೋಡ್‌ಗಳು, ದಕ್ಷ ಮಾಧ್ಯಮ ಸ್ಟ್ರೀಮಿಂಗ್, ಎಮೋಜಿ ಡೊಮೇನ್ ಬೆಂಬಲ ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂಪರ್ಕದ ಮೂಲಕ ವರ್ಧಿತ ಬ್ರೌಸಿಂಗ್ ಅನುಭವವನ್ನು ಒದಗಿಸುತ್ತದೆ." ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್, ಒಪೇರಾ ಸಾಫ್ಟ್‌ವೇರ್, ಅಡೋಬ್ ಸಿಸ್ಟಮ್ಸ್, ಇಂಟೆಲ್, ಐಬಿಎಂ, ಸ್ಯಾಮ್‌ಸಂಗ್ ಮತ್ತು ಇತರರ ಕೊಡುಗೆಗಳೊಂದಿಗೆ ಆಧಾರವಾಗಿರುವ ಬ್ಲಿಂಕ್ ರೆಂಡರಿಂಗ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದರೂ, ಜಿಯೋ ಪೇಜ್‌ಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಜಿಯೋ ಹೇಳಿದೆ.

ಜಿಯೋ ಬ್ರೌಸರ್

ಇದಲ್ಲದೆ ಬಳಕೆದಾರರು ಡೀಫಾಲ್ಟ್ ಸರ್ಚ್ ಎಂಜಿನ್ ಅನ್ನು ಆಯ್ಕೆ ಮಾಡಲು ಇದರಲ್ಲಿ ಸಾಧ್ಯವಾಗಲಿದ್ದು, ಗೂಗಲ್‌ನ ಹೊರತಾಗಿ ಇತರ ಆಯ್ಕೆಗಳಲ್ಲಿ ಬಿಂಗ್, ಯಾಹೂ ಮತ್ತು ಡಕ್ ಡಕ್ ಗೋ ಸೇರಿವೆ, ಮತ್ತು ಜಿಯೋ ಪೇಜಸ್ ಇತರ ಕಸ್ಟಮ್ ಥೀಮ್‌ಗಳ ಹೊರತಾಗಿ ಬಾಕ್ಸ್‌ನ ಹೊರಗೆ ಡಾರ್ಕ್ ಮೋಡ್ ಥೀಮ್‌ನೊಂದಿಗೆ ಬರುತ್ತದೆ. ಇದು ಬ್ರೌಸರ್ ಫೀಡ್ ಅನ್ನು ಸಹ ಒಳಗೊಂಡಿದ್ದು, ಇದು ಬಳಕೆದಾರರ ಭಾಷಾ ಸೆಟ್ಟಿಂಗ್‌ಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾಗಿದೆ, ಜೊತೆಗೆ ಅವರ ಪ್ರದೇಶ ಮತ್ತು ವಿಷಯ ಸೆಟ್ಟಿಂಗ್‌ಗಳಿಂದ ಕೂಡಿದೆ. ಜೊತೆಗೆ ಜಿಯೋ ಬ್ರೌಸರ್ ಬಳಕೆದಾರರು ತಮ್ಮ ನೆಚ್ಚಿನ ಲೇಖನಗಳು ಅಥವಾ ವೀಡಿಯೊಗಳನ್ನು ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುಲಭವಾಗಿ ಹಂಚಿಕೊಳ್ಳಲು ಅನುಮತಿಸುತ್ತದೆ.

ಜಿಯೋ ಪೇಜಸ್

ಇನ್ನು ಜಿಯೋ ಪೇಜಸ್ "ಬಳಕೆದಾರರಿಗೆ ಮುಖ್ಯವಾದ ಅಥವಾ ಆಸಕ್ತಿಯಿರುವ" ಪುಟಗಳಲ್ಲಿ ಅಧಿಸೂಚನೆಗಳನ್ನು ಕಳುಹಿಸುತ್ತದೆ. ಸ್ಟಾಕ್ ಮಾರುಕಟ್ಟೆಯ ಪ್ರವೃತ್ತಿಗಳು, ಸರಕುಗಳ ಬೆಲೆಗಳು ಮತ್ತು ಕ್ರಿಕೆಟ್ ಸ್ಕೋರ್‌ಗಳಿಗಾಗಿ ಕಾರ್ಡ್‌ಗಳೊಂದಿಗೆ ಹೆಚ್ಚು ವಿವರವಾದ ಮಾಹಿತಿಯನ್ನು ಪಡೆಯಲು ಅದನ್ನು ಕ್ಲಿಕ್ ಮಾಡಬಹುದು. ಬ್ರೌಸರ್‌ನಲ್ಲಿನ ಡೌನ್‌ಲೋಡ್ ಮ್ಯಾನೇಜರ್ ಫೈಲ್ ಪ್ರಕಾರಕ್ಕೆ ಅನುಗುಣವಾಗಿ ಡೌನ್‌ಲೋಡ್‌ಗಳನ್ನು ವರ್ಗೀಕರಿಸುತ್ತದೆ, ಆದ್ದರಿಂದ ನೀವು ಡೌನ್‌ಲೋಡ್ ಮಾಡಿದ ಚಿತ್ರಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು ಮತ್ತು ಸೇವ್‌ ಮಾಡಿದ ಪುಟಗಳನ್ನು ಸುಲಭವಾಗಿ ಕಾಣಬಹುದು. ಅಲ್ಲದೆ ಬ್ರೌಸರ್ ಆಡ್‌ಬ್ಲಾಕ್ ಪ್ಲಸ್ ಇಂಟರ್‌ಬಿಲ್ಟ್‌ ಆಗಿದ್ದು, ಇದು ಆಡ್‌ಬ್ಲಾಕಿಂಗ್ ಅನ್ನು ಸಕ್ರಿಯಗೊಳಿಸುತ್ತದೆ, ಸ್ವೀಕಾರಾರ್ಹ ಜಾಹೀರಾತುಗಳ ಪಟ್ಟಿಯನ್ನು ಬೆಂಬಲಿಸುತ್ತದೆ ಮತ್ತು ಡೊಮೇನ್‌ಗಳನ್ನು ವೈಟ್ ಲಿಸ್ಟ್‌ ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ.

Best Mobiles in India

Read more about:
English summary
It comes with support for eight Indian languages, and customisation based on your location.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X