ಅಂಬಾನಿಯಿಂದ 'ಜಿಯೋ ರಿಟೇಲ್' ಘೋಷಣೆ!..ಬೆಚ್ಚಿಬಿದ್ದವು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್!

|

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವ ಮುಖೇಶ್ ಅಂಬಾನಿ ಅವರು ಇದೀಗ ಇ-ಕಾಮರ್ಸ್ ಮಾರುಕಟ್ಟೆಯಲ್ಲೂ ಅಧಿಪತ್ಯ ಸಾಧಿಸಲು ಮುಂದಾಗಿದ್ದಾರೆ. ದೇಶದಲ್ಲಿ ಟೆಲಿಕಾಂ ಕ್ಷೇತ್ರವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ರಿಲಯನ್ಸ್ ಇಂಡಸ್ಟ್ರಿಸ್ ಸಮೂಹ ಇದೀಗ ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, 'ಜಿಯೋ ರಿಟೇಲ್' ಹೆಸರಿನಲ್ಲಿ ಹೊಸ ಇ-ಕಾಮರ್ಸ್ ತಾಣ ಆರಂಭವಾಗುವುದು ಖಚಿತವಾಗಿದೆ.

ವಿಶಿಷ್ಟವಾದ ಹೊಸ ವಾಣಿಜ್ಯ ವೇದಿಕೆ ಪ್ರಾರಂಭಿಸಲಿದೆ ಎಂದು ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ತಿಳಿಸಿದ್ದು, ಗುಜರಾತ್‌ನಲ್ಲಿ ಮೊದಲು ತಮ್ಮ ನೂತನ ಇ ಕಾಮರ್ಸ್ ಕಾರ್ಯಚರಣೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್‌ಗೆ ಪ್ರತಿಸ್ಪರ್ಧಿಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೊಸ ಆನ್‌ಲೈನ್ ( 'ಜಿಯೋ ರಿಟೇಲ್') ಶಾಪಿಂಗ್ ತಾಣ ಆರಂಭಿಸುವುದಕ್ಕೆ ಜಿಯೋ ಭರ್ಜರಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಅಂಬಾನಿಯಿಂದ 'ಜಿಯೋ ರಿಟೇಲ್' ಘೋಷಣೆ!..ಬೆಚ್ಚಿಬಿದ್ದವು ಅಮೆಜಾನ್, ಫ್ಲಿಪ್‌ಕಾರ್ಟ್!

ಜಿಯೋ ಮೂಲಕ ಅಧಿಪತ್ಯ ಸಾಧಿಸಿರುವ ಅಂಬಾನಿ, ಇ ಕಾಮರ್ಸ್ ನಲ್ಲೂ ಯಶಸ್ಸನ್ನು ವಿಸ್ತರಿಸುವ ನಂಬಿಕೆಯನ್ನು ಹೊಂದಿದ್ದಾರೆ. ಭಾರತದಲ್ಲಿ ಯಶಸ್ವಿ ಉದ್ಯಮಿಯಾಗಿರುವ ಅಂಬಾನಿಯ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಜಾಕ್ ಮಾ ಕೂಡ ಅಂಬಾನಿ ಜೊತೆ ಸೇರುತ್ತಿದ್ದಾರೆ ಎನ್ನುತ್ತಿವೆ ವರದಿಗಳು. ಹಾಗಾದರೆ, ಏನಿದು ವರದಿ? ಜಾಕ್ ಮಾ ಅಂಬಾನಿಯ ಹೊಸ ಇ ಕಾಮರ್ಸ್‌ಗೆ ಹೂಡಿಕೆ ಮಾಡುತ್ತಿರುವ ಹಣವೆಷ್ಟು? ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳಿಗೆ ಭಯ ಉಂಟಾಗಿರುವುದು ಎಕೆ ಎಂಬುದನ್ನು ಮುಂದೆ ತಿಳಿಯಿರಿ.

ಅಂಬಾನಿಯ ರಂಗ ಪ್ರವೇಶ!

ಅಂಬಾನಿಯ ರಂಗ ಪ್ರವೇಶ!

ಈಗಾಗಲೇ ರಿಲಯನ್ಸ್ ಟ್ರೆಂಡ್ಸ್, ರಿಲಯನ್ಸ್ ಮಾರ್ಟ್, ರಿಲಯನ್ಸ್ ಡಿಜಿಟಲ್‌ ಮೊದಲಾದ ಮುಖೇಶ್ ಅಂಬಾನಿಯ ಇ-ಕಾಮರ್ಸ್ ತಾಣಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇ ಕಾಮರ್ಸ್ ತಾಣಗಳೆಲ್ಲಾ ಸಣ್ಣ ಪ್ರಮಾಣದ ಮಾರುಕಟ್ಟೆಗಳನ್ನು ಆಕ್ರಮಿಸಿಕೊಂಡಿರುವುದರಿಂದ, ದೇಶದ ದೊಡ್ಡ ಮಾರುಕಟ್ಟೆ ಪಡೆಯಲು ಅಂಬಾನಿ 'ಜಿಯೋ ರಿಟೇಲ್' ಇ ಕಾಮರ್ಸ್ ಸ್ಥಾಪಿಸಲು ಮುಂದಾಗಿದ್ದಾರೆ. ಇದು ಇನ್ನೇನು ಕೆಲವೇ ತಿಂಗಳುಗಳಲ್ಲಿ ಜಿಯೋ ರೀಟೇಲ್ಹೆಸರಿನಲ್ಲಿ ಹೊಸಇ ಕಾಮರ್ಸ್ ವ್ಯಾಪಾರ ಆರಂಭಗೊಳ್ಳಲಿದೆ.

ಅಂಬಾನಿ ಹಿಂದೆ ಬಿದ್ದಿದೆ ಆಲಿಬಾಬ!

ಅಂಬಾನಿ ಹಿಂದೆ ಬಿದ್ದಿದೆ ಆಲಿಬಾಬ!

ಭಾರತದ ಇ- ಕಾಮರ್ಸ್ ಮಾರುಕಟ್ಟೆಗೆ 'ರಿಲಯನ್ಸ್ ರೀಟೇಲ್' ಎಂಬ ಹೆಸರಿನಲ್ಲಿ ಮುಖೇಶ್ ಅಂಬಾನಿ ಎಂಟ್ರಿ ನೀಡಲು ಮುಂದಾಗಿರುವ ಸುದ್ದಿ ಈಗಾಗಲೇ ಹೊರಬಿದ್ದಿದೆ. ಈಗಾಗಲೇ ಭಾರೀ ಹೆಸರುಗಳಿಸಿರುವ ಅಂಬಾನಿಯ 'ಜಿಯೋ ರಿಟೇಲ್' ಯೋಜನೆ ಯಶಸ್ವಿಯಾಗುವ ಸೂಚನೆಯನ್ನು ಪಡೆದಿರುವ ಚೀನೀ ಇ-ಕಾಮರ್ಸ್ ದೈತ್ಯ ಅಲಿಬಾಬಾವು 'ಜಿಯೋ ರಿಟೇಲ್' ನಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿದೆ. ರಿಲಯನ್ಸ್ ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಲು ಕೆಲವು ಪಾಲನ್ನು ಕೇಳಿದೆ ಎಂದು ಹೇಳಲಾಗಿದೆ.

ಜಿಯೋ ರಿಟೇಲ್'ಗೆ ಜಾಕ್ ಮಾ ಹೂಡಿಕೆ!

ಜಿಯೋ ರಿಟೇಲ್'ಗೆ ಜಾಕ್ ಮಾ ಹೂಡಿಕೆ!

ಅಂಬಾನಿ ನೇತೃತ್ವದ ರಿಲಯನ್ಸ್ ರೀಟೇಲ್ ವ್ಯಾಪಾರದಲ್ಲಿ ಜಾಕ್ ಮಾ 5 ಶತಕೋಟಿ ಡಾಲರ್ ಅನ್ನು ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 'ಜಿಯೋ ರಿಟೇಲ್' ನಲ್ಲಿ ದೊಡ್ಡ ಪ್ರಮಾಣದ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾಕ್ ಮಾ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಲಿಬಾಬಾ ಕಂಪೆನಿಯು 'ಜಿಯೋ ರಿಟೇಲ್' ವ್ಯಾಪಾರದಲ್ಲಿ 50% ನಷ್ಟು ಪಾಲನ್ನು ಪಡೆದುಕೊಳ್ಳಲು ಸಿದ್ಧವಾಗಿದೆ ಎಂಬ ಮಾಹಿತಿಯನ್ನು ಜಾಕ್ ಮಾ ಹೊರಹಾಕಿರುವ ಬಗ್ಗೆ ಸುದ್ದಿ ಹೊರಬಿದ್ದಿದೆ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಭಯ!

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಭಯ!

ಭಾರತದ ಇ- ಕಾಮರ್ಸ್ ಮಾರುಕಟ್ಟೆಗೆ 'ಜಿಯೋ ರಿಟೇಲ್' ಕಾಲಿಡುತ್ತಿರುವುದರಿಂದಲೇ ಭಯಪಟ್ಟಿರುವ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಜಾಲತಾಣಗಳಿಗೆ ಈ ಸುದ್ದಿ ಮತ್ತೆ ಭಯವನ್ನು ಹುಟ್ಟಿಹಾಕಿದೆ. ಚೀನಾದ ಬಹುದೊಡ್ಡ ಸಂಸ್ಥೆಯೊಂದು 'ಜಿಯೋ ರಿಟೇಲ್'ಗೆ ಬಾರೀ ಬಂಡವಾಳ ಹೂಡಿಕೆ ಮಾಡುವುದರಿಂದ 'ಜಿಯೋ ರಿಟೇಲ್' ಸಾಮರ್ಥ್ಯ ದುಪ್ಪಟ್ಟಾಗಲಿದೆ. ಇ ಕಾಮರ್ಸ್ ಜಗತ್ತಿನಲ್ಲಿ ಅಲಿಬಾಬಾ ಹೊಂದಿರುವ ಅನುಭವ ಕೂಡ 'ಜಿಯೋ ರಿಟೇಲ್'ಗೆ ಸಹಾಯವಾಗಲಿದೆ ಎಂಬುದನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳು ತಿಳಿದಿವೆ.

ಶುರುವಾಗಲಿದೆ ಬಿಗ್‌ಫೈಟ್!

ಶುರುವಾಗಲಿದೆ ಬಿಗ್‌ಫೈಟ್!

ಅಂಬಾನಿ ನೇತೃತ್ವದ 'ಜಿಯೋ ರಿಟೇಲ್' ವ್ಯಾಪಾರದಲ್ಲಿ ಜಾಕ್ ಮಾ ಹೂಡಿಕೆ ಮಾಡುವುದು ಖಚಿತವಾದರೆ, ಭಾರತದ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಮತ್ತೊಂದು ಮೆಗಾ ಬಿಗ್‌ಫೈಟ್ ಶುರುವಾಗಲಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳನ್ನು ಮೀರಿ ಭಾರತದ ಇ ಕಾಮರ್ಸ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು 'ಜಿಯೋ ರಿಟೇಲ್' ಮುಂದಾಗಲಿದೆ. ಇದಕ್ಕಾಗಿ ಭಾರೀ ಆಫರ್ಸ್ ಅನ್ನು ಜಿಯೋ ರಿಟೇಲ್' ಸೇರಿದಂತೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳು ಪ್ರಕಟಿಸಲಿವೆ ಎಂದರೆ ಆಶ್ಚರ್ಯ ಪಡುವಂತದ್ದು ಏನಿಲ್ಲ.

ಆಫರ್ ಅನ್ನು ಒಪ್ಪಿಕೊಳ್ತಾರ ಅಂಬಾನಿ?

ಆಫರ್ ಅನ್ನು ಒಪ್ಪಿಕೊಳ್ತಾರ ಅಂಬಾನಿ?

'ಜಿಯೋ ರಿಟೇಲ್' ವ್ಯಾಪಾರದಲ್ಲಿ ಜಾಕ್ ಮಾ ಹೂಡಿಕೆ ಮಾಡುವುದನ್ನು ಏಷ್ಯಾದ ಶ್ರೀಮಂತ ಮುಖೇಶ್ ಅಂಬಾನಿ ಒಪ್ಪಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ತಳವೂರಿರುವ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳನ್ನು ಎದುರಿಸಲು ಅಲಿಬಾಬಾ ಸಹಯೋಗ ಅಂಬಾನಿಗೆ ಬೇಕಾಗುತ್ತದೆ ಎಂದು ಹೇಳಲಾಗಿದೆ. ಅಲಬಾಬಾ ಸಹಯೋಗದಿಂದಾಗಿ 'ಜಿಯೋ ರಿಟೇಲ್' ವ್ಯಾಪಾರಕ್ಕೆ ವಿಶ್ವದಾದ್ಯಂತ ಷೇರುದಾರರು ಕಂಪೆನಿ ಮೇಲೆ ವಿಶ್ವಾಸವನ್ನು ಹೊಂದಲಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಇ-ಕಾಮರ್ಸ್ ಪಾಲಿಸಿಯನ್ನು ನೋಡಬೇಕಿದೆ.

ಇ-ಕಾಮರ್ಸ್ ಪಾಲಿಸಿಯನ್ನು ನೋಡಬೇಕಿದೆ.

ಕೇಂದ್ರ ಸರಕಾರನೂತನ ಇ-ಕಾಮರ್ಸ್ ಪಾಲಿಸಿ ತಂದಿದೆ. ಆನ್‌ಲೈನ್‌ ಮಾರುಕಟ್ಟೆಯ ಮೇಲೆ ‘ಸರಕಾರದ ನಿಯಂತ್ರಣ' ಸಾಧಿಸಲು ಕಾನೂನುಗಳನ್ನು ರೂಪಿಸಲಾಗುತ್ತಿದೆ. 'ಇಂಡಿಯಾ ಫಸ್ಟ್‌' ನೀತಿಗೆ ಒತ್ತು ನೀಡುವ ಸಲುವಾಗಿ ದೇಶಿಯ ಉತ್ಪಾದನೆಯನ್ನು ಉತ್ತೇಜಿಸುವಂತಹ ನಿಯಮಗಳನ್ನು ತರಲು ಸರ್ಕಾರ ನಿರ್ಧರಿಸಿದೆ. ದೇಶದಾದ್ಯಂತ ಇರುವ ಇ ಕಾಮರ್ಸ್ ಮಾರುಕಟ್ಟೆಗಾಗಿ ಸರ್ಕಾರದ ವೇದಿಕೆಯನ್ನು 'ಜಿಯೋ ರಿಟೇಲ್' ಸಿದ್ಧಪಡಿಸಿಕೊಂಡಿದೆ ಎಂದು ಹೇಳಲಾಗಿದೆ.

ಅಲಿಬಾಬಾವನ್ನು ಒಪ್ಪಲ್ಲವೇ ಅಂಬಾನಿ?

ಅಲಿಬಾಬಾವನ್ನು ಒಪ್ಪಲ್ಲವೇ ಅಂಬಾನಿ?

ಭಾರತೀಯ ಮೂಲದ ಆನ್‌ಲೈನ್‌ ಕಂಪನಿಗಳಿಗೆ ಶೇ.100ರಷ್ಟು ದೇಶೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಬೇಕು ಎಂದು ಇ-ಕಾಮರ್ಸ್ ಪಾಲಿಸಿ ಯಲ್ಲಿ ಹೇಳಲಾಗಿದೆ. ಈ ರಿಯಾಯಿತಿ ವಿದೇಶಿ ಮೂಲದ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್‌ ಮತ್ತು ವಿದೇಶಿ ಹೂಡಿಕೆಯ ಪ್ರಾಬಲ್ಯ ಹೊಂದಿರುವ ಫ್ಲಿಪ್‌ಕಾರ್ಟ್‌ಗೆ ಸಿಗಲಾರದು. ಇದು ಬರಲಿರುವ ಜಿಯೋ ರಿಟೇಲ್ ಮಾತ್ರವೇ ಅತ್ಯುತ್ತಮ ಅವಕಾಶವನ್ನು ಒದಗಿಸಿದಂತಾಗುತ್ತದೆ. ಇದರಿಂದ ಅಲಿಬಾಬಾ ಆಫರ್ ಅನ್ನು ಅಂಬಾನಿ ಒಪ್ಪುವುದಿಲ್ಲ ಎಂದುಕೂಡ ಹೇಳಲಾಗುತ್ತಿದೆ.

ಪೈಪೋಟಿಗೆ ಕಡಿವಾಣ!

ಪೈಪೋಟಿಗೆ ಕಡಿವಾಣ!

ಬಿಗ್‌ ಬಿಲಿಯನ್ ಆಫರ್‌ಗಳು ಮತ್ತು ಇ ಕಾಮರ್ಸ್ ಕಂಪೆನಿಗಳು ಘೋಷಿಸುವ ಭಾರಿ ದರ ಕಡಿತಗಳಿಗೆ ನಿರ್ದಿಷ್ಟ ಗರಿಷ್ಠ ಅವಧಿಯನ್ನು ನಿಗದಿಪಡಿಸಬೇಕು ಎಂದು ಇ-ಕಾಮರ್ಸ್ ಪಾಲಿಸಿ ಯಲ್ಲಿ ಹೇಳಲಾಗಿದೆ, ಮಾರುಕಟ್ಟೆಯಲ್ಲಿ ದರಗಳ ಮೇಲೆ ಪ್ರಭಾವ ಬೀರುವುದನ್ನು ನಿಷೇಧಿಸಲಾಗಿದೆ. ಇದು ದೇಶದ ಶೇಕಡಾ 55-60ರಷ್ಟು ಆನ್‌ಲೈನ್‌ ಮಾರುಕಟ್ಟೆಯನ್ನು ಆಳುತ್ತಿರುವ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳನ್ನು ಕಂಟ್ರೋಲ್ ಮಾಡಲು ಇರುವ ನೀತಿ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ. ಇದರಿಂದ ಜಾಕ್‌ ಮಾ ಮತ್ತು ಅಂಬಾನಿ ಸಹಯೋಗ ಸಾಧ್ಯವಾಗದು ಎನ್ನಲಾಗುತ್ತಿದೆ.

Best Mobiles in India

English summary
Reliance Industries Ltd. will roll out its online shopping platform to 1.2 million retailers and store-owners in Gujarat, sketching out an ambitious plan to take on Amazon.com Inc. and Walmart Inc.’s Flipkart on its home turf.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X