ಆರ್‌ಬಿಐನಿಂದ ಭಾರತದಲ್ಲಿ ಡಿಜಿಟಲ್‌ ರೂಪಾಯಿ ಬಿಡುಗಡೆ! ಏನಿದರ ವಿಶೇಷ!

|

ಭಾರತದಲ್ಲಿ ಆರ್‌ಬಿಐ ಹೊಸ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸಿದೆ. ಇನ್ನು ಈ ಡಿಜಿಟಲ್‌ ಕರೆನ್ಸಿಯನ್ನು ಡಿಜಿಟಲ್‌ ರೂಪಾಯಿ ಎಂದು ಹೆಸರಿಸಲಾಗಿದೆ. ಸದ್ಯ ಪ್ರಾಯೋಗಿಕ ಹಂತವಾಗಿ ಡಿಜಿಟಲ್‌ ರೂಪಾಯಿಯನ್ನು ಜಾರಿಗೊಳಿಸಲಾಗಿದೆ. ರಿಸರ್ವ್ ಬ್ಯಾಂಕ್‌ನ ಈ ಪ್ರಾಯೋಗಿಕ ಉಪಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್, ICICI ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, IDFC ಫಸ್ಟ್ ಬ್ಯಾಂಕ್, ಮತ್ತು HSBC ಬ್ಯಾಂಕ್‌ಗಳು ಕೈ ಜೋಡಿಸಿವೆ.

ಆರ್‌ಬಿಐ

ಹೌದು, ಆರ್‌ಬಿಐ ಭಾರತದಲ್ಲಿ ಡಿಜಿಟಲ್‌ ಕರೆನ್ಸಿಯನ್ನು ಪ್ರಾರಂಭಿಸಿದೆ. ಇನ್ನು ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸಿರುವುದರಿಂದ ಭವಿಷ್ಯದಲ್ಲಿ ನಗದು ಮೇಲಿನ ಅವಲಂಬನೆ ಕಡಿಮೆಯಾಗಿದೆ ಎನ್ನಲಾಗಿದೆ. ಡಿಜಿಟಲ್‌ ರೂಪಾಯಿಯನ್ನು ಸಗಟು ವಹಿವಾಟುಗಳಿಗೆ ಬಳಸುವುದಕ್ಕೆ ಸಾಧ್ಯವಾಗಲಿದೆ. ಆದರೆ ಡಿಜಿಟಲ್ ಕರೆನ್ಸಿ ನಿಜವಾದ ಕರೆನ್ಸಿಯ ಅಗತ್ಯವನ್ನು ಬದಲಿಸುವುದಿಲ್ಲ. ಬದಲಿಗೆ ವ್ಯಾಲೆಟ್ ನಿಂದ ವ್ಯಾಲೆಟ್ ಗೆ ಮಾತ್ರ ವಹಿವಾಟು ನಡೆಸಲು ಸಾಧ್ಯವಾಗಲಿದೆ. ಹಾಗಾದ್ರೆ ಭಾರತದಲ್ಲಿ ಪರಿಚಯಿಸಿರುವ ಹೊಸ ಡಿಜಿಟಲ್‌ ಕರೆನ್ಸಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಟಲ್‌ ಕರೆನ್ಸಿ ವಿಶೇಷತೆ ಏನು?

ಡಿಜಿಟಲ್‌ ಕರೆನ್ಸಿ ವಿಶೇಷತೆ ಏನು?

ಭಾರತೀಯ ರಿಸರ್ವ್‌ ಬ್ಯಾಂಕ್‌ ಪರಿಚಯಿಸಿರುವ ಹೊಸ ಡಿಜಿಟಲ್‌ ಕರೆನ್ಸಿ ವ್ಯಾಲೆಟ್‌ ನಿಂದ ವ್ಯಾಲೆಟ್‌ಗೆ ವಹಿವಾಟು ನಡೆಸಲು ಅನುಮತಿಸಲಿದೆ. ಇದು ನಗದು ವಹಿವಾಟಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ. ಆದರೆ ನಿಜವಾದ ನೊಟುಗಳಿಗೆ ಬದಲಿಯಾಗಿ ಡಿಜಿಟಲ್‌ ಕರೆನ್ಸಿಯನ್ನು ಬಳಸು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಆಂದರೆ ಡಿಜಿಟಲ್‌ ಖಾತೆಗಳಲ್ಲಿ ನಡೆಯುವ ವಹಿವಾಟುಗಳಿಗೆ ಮಾತ್ರ ಈ ಡಿಜಿಟಲ್‌ ರೂಪಾಯಿ ಬಳಸಲು ಸಾಧ್ಯವಾಗಲಿದೆ.

ಪ್ರಸ್ತುತ

ಪ್ರಸ್ತುತ ಇ-ವ್ಯಾಲೆಟ್‌ಗಳಲ್ಲಿ ವಹಿವಾಟು ಮಿತಿಯನ್ನು ಹೇರಲಾಗಿದೆ. ಆದರೆ ಡಿಜಿಟಲ್‌ ಕರೆನ್ಸಿ ಬಳಸುವಾಗ ವ್ಯಾಲೆಟ್‌ಗಳಲ್ಲಿ ಡಿಜಿಟಲ್ ಕರೆನ್ಸಿಗಿಂತ ಹೆಚ್ಚಿನ ಹಣವನ್ನು ನೀವು ಅಲ್ಲಿಗೆ ಸೇರಿಸಲು ಸಾಧ್ಯವಿದೆ. ಇದಲ್ಲದೆ ನೆಟ್ ಬ್ಯಾಂಕಿಂಗ್‌ನಲ್ಲಿ ನಗದು-ನಗದು ವಹಿವಾಟುಗಳು ಮತ್ತು ಪಾವತಿ ಶುಲ್ಕವಿದೆ. ಆದರೆ ಡಿಜಿಟಲ್ ಕರೆನ್ಸಿ ವಹಿವಾಟಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ಡಿಜಿಟಲ್‌

ಇನ್ನು ಈ ಡಿಜಿಟಲ್‌ ಕರೆನ್ಸಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಆಧರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅನ್ನು ಕೇಂದ್ರೀಯ ಬ್ಯಾಂಕ್ ನೀಡಿದ ಕಾನೂನು ಟೆಂಡರ್‌ನ ಡಿಜಿಟಲ್ ರೂಪ ಎಂದು ಹೇಳಿದೆ. ಅಂದರೆ ಫಿಯೆಟ್ ಕರೆನ್ಸಿಯ ಡಿಜಿಟಲ್ ರೂಪವಾಗಿದೆ, ಆದರಿಂದ ಇದನ್ನು ಫಿಯೆಟ್ ಕರೆನ್ಸಿಗೆ ಒಂದಕ್ಕೆ ಒಂದಕ್ಕೆ ವಿನಿಮಯ ಮಾಡಿಕೊಳ್ಳಬಹುದು. ಇನ್ನು ಡಿಜಿಟಲ್ ಪಾವತಿಯ ರೂಪಗಳೊಂದಿಗೆ ನಾವು ನೋಡುವ ಎಲ್ಲಾ ಅನುಕೂಲಗಳನ್ನು ಈ ಡಿಜಿಲಟ್‌ ರೂಪಾಯಿ ಹೊಂದಿರುತ್ತದೆ.

ರಿಸರ್ವ್‌

ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ಡಿಜಿಟಲ್‌ ಕರೆನ್ಸಿಯು ಪ್ರಸ್ತುತ ಚಲಾವಣೆಯಲ್ಲಿರುವ 'ಫಿಯಟ್‌' (ಭೌತಿಕ) ಕರೆನ್ಸಿಯಂತೆಯೇ ವಿಶಿಷ್ಟ ಅಂಕಿಗಳನ್ನು ಹೊಂದಿರುತ್ತದೆ. ಇದು 'ಫಿಯಟ್‌' ಕರೆನ್ಸಿಗಿಂತ ಭಿನ್ನವಾಗಿರುವುದಿಲ್ಲ. ಮೌಲ್ಯದಲ್ಲಿ ಕೂಡ ಫಿಯಟ್‌ ಕರೆನ್ಸಿ ಮತ್ತು ಡಿಜಿಟಲ್‌ ರೂಪಾಯಿ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದು ಪ್ರಸ್ತುತ ಕರೆನ್ಸಿಯ ಡಿಜಿಟಲ್‌ ರೂಪವಾಗಿರುತ್ತದೆ ಅಷ್ಟೇ. ಫಿಯೆಟ್‌ ಕರೆನ್ಸಿಯನ್ನು ಸರಕಾರವು ಹೇಗೆ ಅಧಿಕೃತವಾಗಿ ಟಂಕಿಸುತ್ತದೆಯೋ, ಹಾಗೆಯೇ ಡಿಜಿಟಲ್‌ ರೂಪಾಯಿ ಕೂಡ ಸರಕಾರದಿಂದ ಖಾತರಿಪಡಿಸಿದ ಡಿಜಿಟಲ್‌ ವ್ಯಾಲೆಟ್‌ ಎಂದು ಹೇಳಬಹುದು.

ಫೋನ್‌ನಲ್ಲೇ 'ಇ-ರುಪೀ' (e-Rupee) ಬಳಕೆ ಮಾಡಬಹುದಾ?

ಫೋನ್‌ನಲ್ಲೇ 'ಇ-ರುಪೀ' (e-Rupee) ಬಳಕೆ ಮಾಡಬಹುದಾ?

ಜನರು ಫೋನ್‌ನಲ್ಲಿಯೇ ಡಿಜಿಟಲ್‌ ಕರೆನ್ಸಿ ಹೊಂದಬಹುದು. ಈ ಕರೆನ್ಸಿಯು ಆರ್‌ಬಿಐನಲ್ಲಿಯೇ ಇರುತ್ತದೆ. ಇದನ್ನು ಆರ್‌ಬಿಐನಿಂದ ನೇರವಾಗಿ ಯಾವುದೇ ಅಂಗಡಿಗೆ ಅಥವಾ ವ್ಯಕ್ತಿಗೆ ನಿಮ್ಮ ಫೋನ್‌ ಮೂಲಕವೇ ವರ್ಗಾಯಿಸಲಾಗುತ್ತದೆ. ಇದಕ್ಕೆ ಸರಕಾರದ ಸಂಪೂರ್ಣ ಖಾತರಿಯೂ ಇರಲಿದೆ. ಡಿಜಿಟಲ್‌ ಆಗಿರುವುದರಿಂದ ಇ-ರೂಪಾಯಿಯ ಬಳಕೆಯು ಸರಳ, ವೇಗ ಮತ್ತು ಅಗ್ಗವಾಗುವ ಸಾಧ್ಯತೆಯಿದೆ.

Best Mobiles in India

Read more about:
English summary
Reserve Bank of India has begun issuing digital currency

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X