ಡ್ಯುಯಲ್ ವೈಯರ್ಲೆಸ್ ಚಾರ್ಜರ್- ಪೇಟೆಂಟ್ ಪಡೆಯಲು ಅರ್ಜಿ ಹಾಕಿದ ಸ್ಯಾಮ್ಸಂಗ್

By: Tejaswini P G

2017 ರ ಐಫೋನ್ ಲಾಂಚ್ ಸಂದರ್ಭದಲ್ಲಿ ಆಪಲ್ ಜಗತ್ತಿಗೆ ತಮ್ಮ ಏರ್ ಪವರ್ ವೈಯರ್ಲೆಸ್ ಚಾರ್ಜರ್ ಅನ್ನು ಪರಿಚಯಿಸಿತ್ತು. ವೈಯರ್ಲೆಸ್ ಚಾರ್ಜಿಂಗ್ ಗೆ ಸಪೋರ್ಟ್ ಮಾಡುವ ಹಲವು ಆಪಲ್ ಸಾಧನಗಳನ್ನು ಏಕಕಾಲಕ್ಕೆ ಚಾರ್ಜ್ ಮಾಡುವ ಸಾಮರ್ಥ್ಯ ಈ ಚಾರ್ಜರ್ಗಿದೆ.

ಡ್ಯುಯಲ್ ವೈಯರ್ಲೆಸ್ ಚಾರ್ಜರ್- ಪೇಟೆಂಟ್ ಪಡೆಯಲು ಅರ್ಜಿ ಹಾಕಿದ ಸ್ಯಾಮ್ಸಂಗ್

ಈಗ ಆಪಲ್ ನ ಮುಖ್ಯ ಪ್ರತಿಸ್ಪರ್ಧಿಯಾದ ಸ್ಯಾಮ್ಸಂಗ್ ಕೂಡ ಇದೇ ಮಾದರಿಯ ಚಾರ್ಜರ್ ಅನ್ನು ಬಿಡುಗಡೆ ಮಾಡುವ ಪ್ರಯತ್ನದಲ್ಲಿದೆ. ಸ್ಯಾಮ್ಸಂಗ್ ಇತ್ತೀಚೆಗಷ್ಟೇ ಡ್ಯುಯಲ್ ವೈಯರ್ಲೆಸ್ ಚಾರ್ಜರ್ ನ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಿದೆ. ಮೇಲೆ ಕೊಟ್ಟಿರುವ ಚಿತ್ರದಲ್ಲಿ ಡ್ಯುಯಲ್ ವೈಯರ್ಲೆಸ್ ಚಾರ್ಜರ್ ನ ಇಣುಕು ನೋಟವಿದೆ.

HP Sprocket !! ಹೆಚ್‌ಪಿ ಸ್ಪ್ರಾಕೆಟ್ ಬಗ್ಗೆ ತಿಳಿಯಿರಿ!!

ಈ ಚಿತ್ರದ ಅನುಸಾರ ಬಳಕೆದಾರರು ಚಾರ್ಜಿಂಗ್ ಬೆಡ್ ಮೇಲೆ ಒಂದಕ್ಕಿಂತ ಅಧಿಕ ಸಾಧನಗಳನ್ನು ಚಾರ್ಜ್ ಮಾಡಬಹುದು. ಆದರೆ ಏರ್ ಪವರ್ ಗೆ ಹೋಲಿಸಿದರೆ ಸ್ಯಾಮ್ಸಂಗ್ ನ ಚಾರ್ಜರ್ನಲ್ಲಿ ಏಕಕಾಲಕ್ಕೆ ಕೇವಲ 2 ಸಾಧನಗಳನ್ನು ಚಾರ್ಜ್ ಮಾಡಬಹುದು.

ಐಫೋನ್ X ಮೇಲೆ 70% ರಿಯಾಯಿತಿ ಬೇಕಾ..? ಇಲ್ಲಿ ಲಭ್ಯ.!

ಈ ಪೇಟೆಂಟ್ ನ ಅನುಸಾರ ಸ್ಯಾಮ್ಸಂಗ್ ನ ವೈಯರ್ಲೆಸ್ ಚಾರ್ಜರ್ ರೆಸೊನೆನ್ಸ್ ಮತ್ತು ಮ್ಯಾಗ್ನೆಟಿಕ್ ಇಂಡಕ್ಷನ್ ಬಳಸಿ ಸಾಧನಗಳನ್ನು ಚಾರ್ಜ್ ಮಾಡುತ್ತದೆ. Qi ಸ್ಟ್ಯಾಂಡರ್ಡ್ ಗೆ ಅನುಗುಣವಾಗಿರುವ ಯಾವುದೇ ಸಾಧನವನ್ನಾದರೂ ಈ ಚಾರ್ಜರ್ ಮೂಲಕ ಚಾರ್ಜ್ ಮಾಡಬಹುದು. ಸಾಧನವನ್ನು ಚಾರ್ಜಿಂಗ್ ಬೆಡ್ ಮೇಲೆ ಇರಿಸಿದ ಕೂಡಲೆ ಚಾರ್ಜರ್ ಆ ಸಾಧನವನ್ನು ಗುರುತಿಸಿ, ಅದರ ಬ್ಯಾಟರಿಯನ್ನು ಚಾರ್ಜ್ ಮಾಡಲು ಅಗತ್ಯವಾದ ಮ್ಯಾಗ್ನೆಟಿಕ್ ಚಾರ್ಜಿಂಗ್ ಅನ್ನು ಆಯ್ಕೆ ಮಾಡುತ್ತದೆ.

ಸ್ಯಾಮ್ಸಂಗ್ ತನ್ನ ನೂತನ ವೈಯರ್ಲೆಸ್ ಚಾರ್ಜರ್ ಅನ್ನು ಯಾವಾಗ ಲಾಂಚ್ ಮಾಡಲಿದೆ ಎನ್ನುವುದನ್ನು ಈಗಲೇ ಹೇಳುವುದು ಕಷ್ಟ. ಫೆಬ್ರವರಿ 2018 ರಲ್ಲಿ ಬರಲಿರುವ ಗ್ಯಾಲಕ್ಸಿ S9 ಡ್ಯುಯೋ ಜೊತೆಗೆ ಈ ಹೊಸ ಚಾರ್ಜರ್ ಕೂಡ ಬಿಡುಗಡೆಯಾಗಬಹುದೇನೋ ಎನ್ನುವ ಆಶಯ ನಮ್ಮದು. ಆದರೆ ಎಷ್ಟೋ ಬಾರಿ ಪೇಟೆಂಟ್ ಗಾಗಿ ಅರ್ಜಿ ಹಾಕಿದರೂ , ಆ ಉತ್ಪನ್ನಗಳು ನಿಜವಾಗಿ ಅಸ್ತಿತ್ವಕ್ಕೆ ಬರುವುದೇ ಇಲ್ಲ. ಏನೇ ಆದರೂ, ಸ್ಯಾಮ್ಸಂಗ್ ವೈಯರ್ಲೆಸ್ ಚಾರ್ಜರ್ ಅನ್ನು ಬಿಡುಗಡೆ ಮಾಡಿದರೆ ಸಂತೋಷವೇ ಸರಿ.

ಆಪಲ್ ನ ಏರ್ ಪವರ್ ಕೂಡ 2018 ರಲ್ಲಿ ಬಿಡುಗಡೆಯಾಗಲಿದೆ. ಈತನಕ ಆಪಲ್ ಕೂಡ ಏರ್ ಪವರ್ ಯಾವಾಗ ಬಿಡುಗಡೆಯಾಗಲಿದೆ ಎಂದು ಖಚಿತ ಮಾಹಿತಿ ನೀಡಿಲ್ಲ. ಈ ಎರಡೂ ಚಾರ್ಜರ್ಗಳ ಪ್ರಗತಿಯನ್ನು ನೋಡಿದರೆ ಸ್ಯಾಮ್ಸಂಗ್ ನ ವೈಯರ್ಲೆಸ್ ಚಾರ್ಜಿಂಗ್ ಬೆಡ್ ಆಪಲ್ ನ ಏರ್ ಪವರ್ ಗೆ ಕಠಿಣ ಸ್ಪರ್ಧೆಯನ್ನು ನೀಡುವುದರಲ್ಲಿ ಸಂಶಯವಿಲ್ಲ.Read more about:
English summary
The wireless charging bed from Samsung seems to charge two devices simultaneously.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot