ಸ್ಯಾಮ್‌ಸಂಗ್‌ ಫೈನಾನ್ಸ್ ಪ್ಲಸ್‌ ಪ್ರೋಗ್ರಾಂ ಲಾಂಚ್‌! ಪ್ರಯೋಜನಗಳೇನು?

|

ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಅದರಂತೆ ತನ್ನ ಜನಪ್ರಿಯ ಡಿಜಿಟಲ್‌ ಲೆಂಡಿಂಗ್‌ ಪ್ರೋಗ್ರಾಂ ಸ್ಯಾಮ್‌ಸಂಗ್‌ ಫೈನಾನ್ಸ್‌ ಪ್ಲಸ್‌ ಅನ್ನು ಪರಿಚಯಿಸಿದೆ. ಸ್ಯಾಮ್‌ಸಂಗ್ ಫೈನಾನ್ಸ್ + ಡಿಜಿಟಲ್‌ ಲೆಂಡಿಂಗ್‌ ಪ್ಲಾಟ್‌ಫಾರ್ಮ್‌ ಆಗಿದೆ. ಇದರ ಮೂಲಕ ಗ್ರಾಹಕರು ತಮ್ಮ ನೆಚ್ಚಿನ ಸ್ಯಾಮ್‌ಸಂಗ್‌ ಪ್ರಾಡಕ್ಟ್‌ಗಳನ್ನು ಅಪ್‌ಗ್ರೇಡ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಇಂಡಿಯಾ ತನ್ನ ಜನಪ್ರಿಯ ಡಿಜಿಟಲ್ ಲೆಂಡಿಂಗ್ ಪ್ರೋಗ್ರಾಂ ಸ್ಯಾಮ್‌ಸಂಗ್‌ ಫೈನಾನ್ಸ್‌ ಪ್ಲಸ್‌ ಬಿಡುಗಡೆ ಮಾಡಿದೆ. ಇನ್ನು ಸ್ಯಾಮ್‌ಸಂಗ್ ಫೈನಾನ್ಸ್ + ಪ್ರೋಗ್ರಾಂ ಅನ್ನು ಭಾರತದಲ್ಲಿ 2022ರ ಅಂತ್ಯದ ವೇಳೆಗೆ 5,000 ಕ್ಕೂ ಹೆಚ್ಚು ರಿಟೇಲ್‌ ಸೇಲ್‌ ಸ್ಟೋರ್‌ಗಳಲ್ಲಿ ಪರಿಚಯಿಸುವುದಕ್ಕೆ ಸ್ಯಾಮ್‌ಸಂಗ್‌ ಮುಂದಾಗಿದೆ. ಇದರಿಂದ ಹಬ್ಬದ ಸಮಯದಲ್ಲಿ ಸ್ಯಾಮ್‌ಸಂಗ್‌ ಗ್ರಾಹಕರಿಗೆ ಉಪಯೋಗವಾಗಲಿದೆ ಎನ್ನಲಾಗಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಫೈನಾನ್ಸ್‌ ಪ್ಲಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಫೈನಾನ್ಸ್+ ಡಿಜಿಟಲ್‌ ಲೆಂಡಿಂಗ್‌ ಪ್ರೋಗ್ರಾಂ ಆಗಿದ್ದು, ಗ್ರಾಹಕರು ಸುಲಭವಾಗಿ ಸ್ಯಾಮ್‌ಸಂಗ್‌ ಪ್ರಾಡಕ್ಟ್‌ಗಳನ್ನು ಖರೀದಿಸಬಹುದಾಗಿದೆ. ಹೆಸರೇ ಸೂಚಿಸುವಂತೆ ರಿಟೇಲ್‌ ಸ್ಟೋರ್‌ಗಳಲ್ಲಿ ಸ್ಯಾಮ್‌ಸಂಗ್‌ ಪ್ರಾಡಕ್ಟ್‌ಗಳನ್ನು ಖರೀದಿಸುವಾಗ 20 ನಿಮಿಷಗಳಲ್ಲಿ ಸಾಲವನ್ನು ಸ್ಯಾಮ್‌ಸಂಗ್‌ ನೀಡಲಿದೆ. ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌ ಮೂಲಕ ಸಾಲ ಪಡೆದುಕೊಂಡು ಸ್ಯಾಮ್‌ಸಂಗ್‌ ಪ್ರಾಕಡ್ಟ್‌ಗಳನ್ನು ಖರೀದಿಸಬಹುದಾಗಿದೆ. ಸದ್ಯ ಸ್ಯಾಮ್‌ಸಂಗ್ ಫೈನಾನ್ಸ್ + ದೇಶದಾದ್ಯಂತ 1,200 ನಗರಗಳಲ್ಲಿ ಸುಮಾರು 3,000 ಗ್ರಾಹಕ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌ ಫೈನಾನ್ಸ್+ ಹೇಗೆ ಕಾರ್ಯನಿರ್ವಹಿಸಲಿದೆ?

ಸ್ಯಾಮ್‌ಸಂಗ್‌ ಫೈನಾನ್ಸ್+ ಹೇಗೆ ಕಾರ್ಯನಿರ್ವಹಿಸಲಿದೆ?

ಸ್ಯಾಮ್‌ಸಂಗ್‌ ಫೈನಾನ್ಸ್‌ ಪ್ಲಸ್ ಮೂಲಕ ಸ್ಯಾಮ್‌ಸಂಗ್‌ ಪ್ರಾಡಕ್ಟ್‌ಗಳನ್ನು ಖರೀದಿಸಲು ಬಯಸುವವರು ಅಗತ್ಯವಿರುವ ದಾಖಲೆಗಳೊಂದಿಗೆ ಹತ್ತಿರದ ಆಯ್ದ ಸ್ಯಾಮ್‌ಸಂಗ್‌ ರಿಟೇಲ್‌ ಸ್ಟೋರ್‌ಗೆ ಬೇಟಿ ನೀಡಬೇಕಾಗುತ್ತದೆ. ನಂತರ ಸ್ಯಾಮ್‌ಸಂಗ್‌ ಫೈನಾನ್ಸ್‌ ಪ್ಲಸ್‌ ಡೆಸ್ಕ್‌ಗಾಗಿ, KYC ಪರಿಶೀಲನೆಗಾಗಿ ಇ-ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಕೆವೈಸಿ ಪರಿಶೀಲನೆ ಮುಗಿದ ನಂತರ ಸ್ಯಾಮ್‌ಸಂಗ್‌ ಫೈನಾನ್ಸ್‌ ಪ್ಲಸ್‌ ಅಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ.

ಸಾಲವನ್ನು

ಸ್ಯಾಮ್‌ಸಂಗ್‌ ಫೈನಾನ್ಸ್‌ ಪ್ಲಸ್‌ ಮೂಲಕ 20 ನಿಮಿಷಗಳಲ್ಲಿ ನೀವು ಸಾಲವನ್ನು ಪಡೆಯಬಹುದಾಗಿದೆ. ಇದು ಸುಲಭ EMI ಪಾವತಿ ಪ್ಲಾನ್‌ಗಳ ಮೂಲಕ ಸಾಲವನ್ನು ನೀಡಲಿದೆ. ಸಾಲವನ್ನು ಪಡೆದುಕೊಂಡ ನಂತರ ಗ್ರಾಹಕರು ಸ್ಯಾಮ್‌ಸಂಗ್‌ ಕಂಪೆನಿಯ ಯಾವುದೇ ಪ್ರಾಡಕ್ಟ್‌ಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ. ಇನ್ನು ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌ಗಾಗಿ ಭಾರತದಲ್ಲಿ ಸ್ಯಾಮ್‌ಸಂಗ್‌ ಕಂಪೆನಿ DMI ಫೈನಾನ್ಸ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.

ಭಾರತದಲ್ಲಿ

ಸ್ಯಾಮ್‌ಸಂಗ್ ಫೈನಾನ್ಸ್ + ಪ್ರೋಗ್ರಾಂ ಪ್ಲಾಟ್‌ಫಾರ್ಮ್‌ ಅನ್ನು ಭಾರತದಲ್ಲಿ ಸ್ಯಾಮ್‌ಸಂಗ್ ಆರ್ & ಡಿ ಇನ್‌ಸ್ಟಿಟ್ಯೂಟ್ ಬೆಂಗಳೂರು (ಎಸ್‌ಆರ್‌ಐ-ಬಿ) ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಎಂಜಿನಿಯರ್‌ಗಳು ಸ್ಯಾಮ್‌ಸಂಗ್ ಇಂಡಿಯಾ ತಂಡದೊಂದಿಗೆ ಗ್ರಾಹಕರ ಅವಶ್ಯಕತೆಗಳನ್ನು ನಿರ್ಣಯಿಸಲು ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಪ್ಲಾಟ್‌ಫಾರ್ಮ್‌ನ ಫೀಚರ್ಸ್‌ಗಳನ್ನು ವಿನ್ಯಾಸಗೊಳಿಸಲು ನಿಕಟವಾಗಿ ಕೆಲಸ ಮಾಡಿದ್ದಾರೆ ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿಕೊಂಡಿದೆ.

ಹಬ್ಬದ

ಸ್ಯಾಮ್‌ಸಂಗ್ ಕಂಪೆನಿಯ ಈ ಡಿಜಿಟಲ್‌ ಲೆಂಡಿಂಗ್‌ ಪ್ರೋಗ್ರಾಂ ಹಬ್ಬದ ಸಂಭ್ರಮದಲ್ಲಿ ಏನಾದರೂ ಪ್ರಾಡಕ್ಟ್‌ಗಳನ್ನು ಖರೀದಿಸಬೇಕೆಂದು ಕೊಂಡವರಿಗೆ ಸೂಕ್ತ ಆಯ್ಕೆಯಾಗಿದೆ. ಇದರಿಂದ ಸ್ಯಾಮ್‌ಸಂಗ್‌ ಪ್ರಾಡಕ್ಟ್‌ಗಳನ್ನು ದೀಪಾವಳಿ ಸಮಯದಲ್ಲಿ ನಿಮ್ಮ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗಲಿದೆ. ಆದರೆ ಇದಕ್ಕಾಗಿ ಅಗತ್ಯ ದಾಖಲೆಗಳನ್ನು ನಿವು ಹೊಂದಿರುವುದು ಅವಶ್ಯಕವಾಗಿದೆ. ಅಲ್ಲದೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕೂಡ ಉತ್ತಮವಾಗಿರಬೇಕಾಗುತ್ತದೆ. ಸದ್ಯ ಸ್ಯಾಮ್‌ಸಂಗ್ ಫೈನಾನ್ಸ್ + ದೇಶದಾದ್ಯಂತ 1,200 ನಗರಗಳಲ್ಲಿ ಸುಮಾರು 3,000 ಗ್ರಾಹಕ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿದೆ.

Best Mobiles in India

Read more about:
English summary
Samsung Finace+ digital lending programme launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X