ಸ್ಯಾಮ್‌ಸಂಗ್ ಹೊಸ ಫೋನ್ ರೂ 9,599 ಕ್ಕೆ

By Shwetha
|

ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಸ್ಯಾಮ್‌ಸಂಗ್ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲು ಸಿದ್ಧವಾಗಿದೆ. ಮಾಧ್ಯಮಗಳ ವರದಿಯಂತೆ, ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಕೋರ್ ಪ್ರೈಮ್ ಅನ್ನು ಭಾರತದಲ್ಲಿ ರೂ 9,599 ಕ್ಕೆ ಲಾಂಚ್ ಮಾಡುವ ತೀರ್ಮಾನದಲ್ಲಿದೆ.

ಮುಂಬೈ ಆಧಾರಿತ ಮಹೇಶ್ ಟೆಲಿಕಾಮ್ ಹ್ಯಾಂಡ್‌ಸೆಟ್‌ನ ವಿಶೇಷತೆಗಳನ್ನು ಬಿತ್ತರಿಸಿದೆ. ಇನ್ನು ರೀಟೈಲರು ಕೂಡ ಫೋನ್ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಅಡಿ ಇಡಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಪ್ರೈಮ್ ರೂ 9,599 ಕ್ಕೆ

ರೀಟೈಲರ್‌ಗಳ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಪ್ರೈಮ್ ಮಧ್ಯಮ ಶ್ರೇಣಿಯ ಫೋನ್ ಆಗಿದ್ದು, ಗೂಗಲ್‌ನ ಆಂಡ್ರಾಯ್ಡ್ ಓಎಸ್ ಇದರಲ್ಲಿ ಚಾಲನೆಯಾಗಲಿದೆ. ಡಿವೈಸ್ 4.5 ಇಂಚಿನ WVGA ಸ್ಕ್ರೀನ್ ಜೊತೆಗೆ ಬಂದಿದ್ದು 1.2GHZ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಫೋನ್‌ನಲ್ಲಿ ನಮಗೆ ನಿರೀಕ್ಷಿಸಬಹುದಾಗಿದೆ. ಫೋನ್ 1 ಜಿಬಿ RAM ಅನ್ನು ಪಡೆದುಕೊಂಡಿದ್ದು, 8ಜಿಬಿ ಆಂತರಿಕ ಸಾಮರ್ಥ್ಯ ಇದರಲ್ಲಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 64 ಜಿಬಿಗೆ ವಿಸ್ತರಿಸಬಹುದಾಗಿದೆ.

ಫೋನ್ 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು, 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ. ಫೋನ್‌ನಲ್ಲಿ 2,000mAh ಬ್ಯಾಟರಿಯನ್ನು ಕೂಡ ನಾವು ಗಮನಿಸಬಹುದು.

ಇನ್ನು ಫೋನ್‌ನ ಸಂಪರ್ಕ ಅಂಶಗಳತ್ತ ಗಮನಹರಿಸಿದಾಗ ಇದು ವೈಫೈ, ಡ್ಯುಯಲ್ ಸಿಮ್, 3ಜಿ/2ಜಿ, ಬ್ಲ್ಯೂಟೂತ್, ಮತ್ತು ಜಿಪಿಎಸ್ ಅನ್ನು ಪಡೆದುಕೊಂಡಿದೆ. ಹ್ಯಾಂಡ್‌ಸೆಟ್‌ನಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಮೊಬೈಲ್ ಓಎಸ್ ಚಾಲನೆಯಾಗುತ್ತಿದೆ.

Best Mobiles in India

English summary
Looks like smartphone maker Samsung is getting ready to launch a new mid-end Android smartphone in India. According to media reports, Samsung is fully prepared to unveil the Galaxy Core Prime in the country at a price of Rs. 9,599.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X