Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

By Ashwath

ಇಲ್ಲಿಯವರೆಗೆ ಟೆಕ್‌ ಕಂಪೆನಿಗಳ ಮಧ್ಯೆ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌,ಫ್ಯಾಬ್ಲೆಟ್‌ಗಳ ವಿಚಾರದಲ್ಲಿ ಸ್ಪರ್ಧೆ‌ ಇರುತಿತ್ತು. ಈಗ ಸ್ಮಾರ್ಟ್‌ವಾಚ್‌ಗಳ ಮಧ್ಯೆ ಸ್ಪರ್ಧೆ ಆರಂಭವಾಗಿದೆ. ಆಪಲ್‌ ಕಂಪೆನಿ ಐವಾಚ್‌ ತಯಾರಿಸಲು ತೊಡಗಿದ್ದೆ ಟೆಕ್‌ ಕಂಪೆನಿಗಳು ಸ್ಮಾರ್ಟ್‌ವಾಚ್ ತಯಾರಿಕೆಯನ್ನು ಆರಂಭಿಸಿದೆ. ನೋಕಿಯಾ ಸ್ಮಾರ್ಟ್‌ವಾಚ್‌ ತಯಾರಿಸಲು ಮುಂದಾಗಿದೆ. ಸೋನಿ ಈಗಾಗಲೇ ಎರಡನೇ ಸ್ಮಾರ್ಟ್‌ವಾಚ್‌ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗ ಈ ಸ್ಮಾರ್ಟ್‌ವಾಚ್‌ ಸ್ಪರ್ಧೆಗೆ ಮತ್ತೆ ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಎಂಟ್ರಿ ನೀಡಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್‌ ಬಿಡುಗಡೆಗೆ ಮುಂದಾಗಿದ್ದು ಮುಂದಿನ ತಿಂಗಳುಜರ್ಮನಿಯ ಬರ್ಲಿ‌ನ್‌ನಲ್ಲಿ ಹೊಸ ಸ್ಮಾರ್ಟ್‌ವಾಚ್‌ನ್ನು ಬಿಡುಗಡೆ ಗೊಳಿಸಲಿದೆ ಎನ್ನುಮ ಮಾಹಿತಿ ಈಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಈ ಸ್ಮಾರ್ಟ್‌ವಾಚ್‌ 1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌,2 ಎಂಪಿ ಕ್ಯಾಮೆರಾ,ಎನ್‌ಎಫ್‌ಸಿ,ಬ್ಲೂಟೂತ್‌ ವಿಶೇಷತೆಯೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಜೆಲ್ಲಿಒ ಬೀನ್‌ ಆಪರೇಟಿಂಗ್ ಸಿಸ್ಟಂ ಬಗ್ಗೆ ಗೊಂದಲಿವಿದ್ದು, ಜೆಲ್ಲಿಬೀನ್‌ 4.2, ಅಥವಾ ಹೊಸ 4.3 ಓಎಸ್‌ನಲ್ಲಿ ಬರುಲಿದೆಯೇ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಸ್ಮಾರ್ಟ್‌ವಾಚ್‌ಗೆ ಗೆಲಾಕ್ಸಿ ಗೇರ್‌ ಎಂದು ಹೆಸರಿಡಲಾಗಿದ್ದು, ಫೋನ್‌ ಕಾಲ್‌, ಇಂಟರ್‌ನೆಟ್‌ ಬ್ರೌಸಿಂಗ್‌ ಮಾಡಬಹುದಾಗಿದೆ. ಒಟ್ಟಿನಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ಬಳಿಕ ಇದರ ಸಂಪೂರ್ಣ‌ ವಿಶೇಷತೆ ಲಭ್ಯವಾಗಬೇಕಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌
ವಿಶೇಷತೆ:
1.67 ಮಿಲಿ ಮೀಟರ್‌ AMOLED ಸ್ಕ್ರೀನ್‌(320 x 320 ಪಿಕ್ಸೆಲ್‌)
1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
2 ಎಂಪಿ ಕ್ಯಾಮೆರಾ
ಎನ್‌ಎಫ್‌ಸಿ,ಬ್ಲೂಟೂತ್‌

ಸ್ಯಾಮ್‌ಸಂಗ್‌ ಈ ಹಿಂದೆಯೇ ಸ್ಮಾರ್ಟ್‌ವಾಚ್‌ನ್ನು ಬಿಡುಗಡೆ ಮಾಡಿತ್ತು. 1999ರಲ್ಲಿ ಪ್ರಥಮ ಸ್ಮಾರ್ಟ್‌ವಾಚನ್ನು ಬಿಡುಗಡೆ ಮಾಡಿತ್ತು. ಆನಂತರ 2003ರಲ್ಲಿ ಎರಡನೇ ಸ್ಮಾರ್ಟ್‌ ವಾಚ್‌ನ್ನು ಬಿಡುಗಡೆ ಮಾಡಿತ್ತು. ಮೂರನೇ ಸ್ಮಾರ್ಟ್‌ ವಾಚನ್ನು 2009ರಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಸ್ಮಾರ್ಟ್‌ವಾಚ್‌ಗೆ ಜನರಿಂದ ಅಷ್ಟೇನು ಉತ್ತಮ ಪ್ರತಿಕ್ರೀಯೆ ದೊರೆಯದ ಕಾರಣ ಮಾರುಕಟ್ಟೆಯಲ್ಲಿ ಫ್ಲಾಪ್‌ ಆಯಿತು.ಹೀಗಾಗಿ ಈಗ ಇಲ್ಲಿ ಈ ಸ್ಮಾರ್ಟ್‌ವಾಚ್‌ಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಕೆಲವು ಫೋಟೋಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ನೋಡಿಕೊಂಡು ಹೋಗಿ.

ಇದನ್ನೂ ಓದಿ: ಒಂದೇ ಸೆಕೆಂಡ್‌ನಲ್ಲಿ ಸಿನಿಮಾ ಡೌನ್‌ಲೋಡ್

 ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌

  ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌

 ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌

 ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌

 ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಹೊಸ ಸ್ಮಾರ್ಟ್‌ ವಾಚ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+