ಬರಲಿದೆ ಆರಂಭಿಕ ಬೆಲೆಯ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಸ್ಮಾರ್ಟ್ ಫೋನ್..!

Written By: Lekhaka

ಮಾರುಕಟ್ಟೆಯಲ್ಲಿ ಈಗಾಗಲೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ J ಸರಣಿ ಸ್ಮಾರ್ಟ್ ಫೋನ್ ಗಳು ಹೆಚ್ಚು ಮಾರಾಟವಾಗುತ್ತಿದ್ದು, ಚೀನಾ ಫೋನ್ ಗಳಿಗೆ ಸಾಕಷ್ಟು ಸ್ಪರ್ಧೇಯನ್ನು ನೀಡುತ್ತಿವೆ. ಈ ಹಿನ್ನಲೆಯಲ್ಲಿ ಇದೇ ಸರಣಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದೆ ಗ್ಯಾಲೆಕ್ಸಿ J2 ಪ್ರೋ (2018) ಸ್ಮಾರ್ಟ್ ಫೋನ್.

ಬರಲಿದೆ ಆರಂಭಿಕ ಬೆಲೆಯ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಸ್ಮಾರ್ಟ್ ಫೋನ್..!

ಈಗಾಗಲೇ ಈ ಸ್ಮಾರ್ಟ ಫೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದ್ದು, ಸದ್ಯ ಈ ಫೋನಿನ ಮ್ಯಾನುಯಲ್ ಬಿಡುಗಡೆಯಾಗಿದೆ ಎನ್ನಲಾಗಿದೆ. ಈ ಮ್ಯಾನ್ಯುಯಲ್ ಈ ಹೊಸ ಫೋನ್ ನಲ್ಲಿರುವ ವಿಶೇಷತೆಗಳು ಮತ್ತು ವಿನ್ಯಾಸ ಹಾಗೂ ವಿವರಣೆಯನ್ನು ತಿಳಿಸಿಕೊಡಲಿದೆ ಎನ್ನಲಾಗಿದೆ.

ಬರಲಿದೆ ಆರಂಭಿಕ ಬೆಲೆಯ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಸ್ಮಾರ್ಟ್ ಫೋನ್..!

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಪ್ರೋ (2018) ಸ್ಮಾರ್ಟ್ ಫೋನ್ ಪ್ಲಾಸ್ಟಿಕ್ ಬಾಡಿಯನ್ನು ಹೊಂದಿದ್ದು, ತೆಗೆಯಬಹುದಾದ ಹೊರ ಕವಚ ಮತ್ತು ಬ್ಯಾಟರಿಯನ್ನು ಒಳಗೊಂಡಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ನೂತನ ಆಂಡ್ರಾಯ್ಡ್ 7.1 ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನುವ ವಿಚಾರವೂ ತಿಳಿದು ಬಂದಿದೆ.

ಇದಲ್ಲದೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಪ್ರೋ (2018) ಸ್ಮಾರ್ಟ್ ಫೋನ್ ಮುಂಭಾಗದಲ್ಲಿ ಸೆಲ್ಫಿಗಾಗಿಯೇ ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ ಎನ್ನುವ ವಿಚಾರವೂ ತಿಳಿದು ಬಂದಿದೆ. ಈ ಸ್ಮಾರ್ಟ್ ಫೋನ್ ಆರಂಭಿಕ ಬೆಲೆಯಲ್ಲಿ ದೊರೆಯಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದ್ದು, ಬೆಲೆ ಅತ್ಯಂತ ಕಡಿಮೆ ಇರಲಿದೆ.

ವಾಟ್ಸ್ ಆಪ್ ಬಿಸ್ನೆಸ್ ಆಪ್: ಅಧಿಕೃತವ ವ್ಯವಹಾರದಾರರಿಗೆ ಮಾತ್ರವೇ..!

ಇದಲ್ಲದೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಪ್ರೋ (2018) ಸ್ಮಾರ್ಟ್ ಫೋನ್ ಕ್ವಾಡ್ ಕೋರ್ ಸ್ಯಾಪ್ ಡ್ರಾಗನ್ 430 ಪ್ರೋಸೆಸರ್ ಅನ್ನು ಒಳಗೊಂಡಿರಲಿದ್ದು, 1.5 GB RAM ಅನ್ನು ಕಾಣುವ ಸಾಧ್ಯತೆಗಳಿದೆ. ಅಲ್ಲದೇ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಸಾಧ್ಯತೆ ಈ ಫೋನಿನಲ್ಲಿ ಇರಲಿದ್ದು, ವರ್ಷದ ಆರಂಭದಲ್ಲಿಯೇ ಲಾಂಚ್ ಆಗುವ ಸಾಧ್ಯತೆ ದಟ್ಟವಾಗಿದೆ.

Read more about:
English summary
The manual of the alleged Samsung Galaxy J2 Pro (2018) has been leaked online tipping that the launch could be nearing.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot