ಬ್ಯಾಟರಿ ದೋಷಕ್ಕೆ ತುತ್ತಾಗಿದ್ದ 'ಗ್ಯಾಲಕ್ಸಿ ನೋಟ್ 7' ಅರ್ಧಬೆಲೆಗೆ!! ಏಕೆ ಗೊತ್ತಾ?

Written By:

ಬ್ಯಾಟರಿ ದೋಷದಿಂದಾಗಿ ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಟೀಕೆಗೆ ಗುರಿಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ ಹೊಸ ಮರು ಆವೃತ್ತಿ ಇದೀಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.!! ಬ್ಯಾಟರಿ ದೋಷದಿಂದ ವಾಪಸ್‌ ಪಡೆದಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಅನ್ನು ಸ್ಯಾಮ್ಸಂಗ್ ಮತ್ತೆ ಮಾರುಕಟ್ಟೆಗೆ ತಂದಿದೆ.!!

ಜುಲೈ ತಿಂಗಳ ಮೊದಲವಾರದಲ್ಲಿ ಹೊಸ ಆವೃತ್ತಿಯ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ ಎನ್ನುವ ವರದಿ ಹೊರಬಿದ್ದಿದ್ದು, ಸ್ಮಾರ್ಟ್‌ಫೋನ್‌ಗೆ ಫೆಡರಲ್‌ ಕಮ್ಯುನಿಕೇಷನ್ಸ್ ಕಮಿಷನ್‌ನಿಂದ ಪ್ರಮಾಣಪತ್ರವೂ ಸಿಕ್ಕಿದೆ! ಹಾಗಾದರೆ, ಹೊಸ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ ನೋಟ್ 7 ಹೇಗೆ ವಿಭಿನ್ನವಾಗಿದೆ? ಏನೇನು ಅಪ್‌ಡೇಟ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಸರಿನಲ್ಲಿ ಸ್ವಲ್ಪ ಬದಲಾವಣೆ!!

ಹೆಸರಿನಲ್ಲಿ ಸ್ವಲ್ಪ ಬದಲಾವಣೆ!!

ಬ್ಯಾಟರಿ ದೋಷಕ್ಕೆ ತುತ್ತಾದ ಗ್ಯಾಲಕ್ಸಿ ನೋಟ್ 7 ಎಂಬುದರ ಬದಲಾಗಿ 'ಗ್ಯಾಲಕ್ಸಿ ನೋಟ್ 7 ಆರ್' ಎನ್ನುವ ಹೊಸ ಹೆಸರನ್ನು ಹೊತ್ತು ಸ್ಮಾರ್ಟ್‌ಫೋನ್ ಬರುತ್ತಿದೆ. ಹೆಸರು ಬದಲಾವಣೆ ಮೂಲಕ ಮತ್ತೆ ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ಸ್ಯಾಮ್‌ಸಂಗ್ ಕಾಯುತ್ತಿದ್ದು, ಪ್ರಾಡೆಕ್ಟ್ ಒಂದೇ ಆಗಿದ್ದರೂ ಹೆಸರನ್ನು ಬದಲಾಯಿಸಲಾಗಿದೆ.!!

ಅರ್ಧದಷ್ಟು ಬೆಲೆಗೆ ಮಾರಾಟ!!

ಅರ್ಧದಷ್ಟು ಬೆಲೆಗೆ ಮಾರಾಟ!!

ಶಾಕಿಂಗ್ ವಿಷಯ ಎಂದರೆ ಗ್ಯಾಲಕ್ಸಿ ನೋಟ್‌ 7 ಹೊಸ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವುದು ಸರಿ. ಆದರೆ, ನೂತನವಾಗಿ ಬಿಡುಗಡೆಯಾಗುತ್ತಿರುವ ಗ್ಯಾಲಕ್ಸಿ ನೋಟ್ 7 ಆರ್ ಮೂಲ ಬೆಲೆಗಿಂತ ಅರ್ಧ ಬೆಲೆಗೆ ಬಿಡುಗಡೆಯಾಗುತ್ತಿದೆ. ಅಂದರೆ 30,000 ರೂ. ಒಳಗೆ ಫೋನ್ ಮಾರಾಟಕ್ಕಿರುತ್ತದೆ.!!

ಬ್ಯಾಟರಿ ದೋಷ ಇಲ್ಲ.!!

ಬ್ಯಾಟರಿ ದೋಷ ಇಲ್ಲ.!!

ಕಳೆದ ವರ್ಷ ಬಿಡುಗಡೆಯಾಗಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟದ ತೊಂದರೆ ಅನುಭವಿಸಿತ್ತು., ಆದರೆ, ಗ್ಯಾಲಾಕ್ಸಿ ನೋಟ್ 7ನಲ್ಲಿದ್ದ ಬ್ಯಾಟರಿ ದೋಷವನ್ನು ಸರಿಪಡಿಸಿಕೊಂಡು 'ನೋಟ್ 7ಆರ್' ತಯಾರಿಸಲಾಗಿದೆ ಎನ್ನಲಾಗಿದೆ.

ಬೆಲೆ ಕಡಿಮೆ ಏಕೆ?

ಬೆಲೆ ಕಡಿಮೆ ಏಕೆ?

ಬ್ಯಾಟರಿ ದೋಷದಿಂದ 25 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದಿದ್ದ ಸ್ಯಾಮ್‌ಸಂಗ್ ಇದೀಗ ಮತ್ತೆ ತನ್ನ ಸ್ಮಾರ್ಟ್‌ಫೋನ್ ಬ್ರಾಂಡ್ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಹಾಗಾಗಿ, 30 ಸಾವಿರದ ಒಳಗೆಯೇ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರುತ್ತಿದೆ.!!

ಓದಿರಿ:ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್ ಬಳಸಬಾರದು!!..ಏಕೆ?..ಕಾರಣ ಇಲ್ಲಿದೆ!!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Samsung to reportedly start selling refurbished Galaxy Note 7 from July 7. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot