Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಆಗಸ್ಟ್ 24ಕ್ಕೆ ನಿಮ್ಮ ಕೈಸೇರಲಿದೆ!!

Posted By: Prathap T

ಸ್ಮಾರ್ಟ್ಫೋನ್ ಬಳಕೆದಾರರಲ್ಲಿ ತೀವ್ರ ಕುತೂಹಲ ಹುಟ್ಟು ಹಾಕಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಇನ್ನೇನು ಕೆಲದಿನಗಳಲ್ಲೇ ಎಲ್ಲರ ಕೈ ಸೇರಲಿದೆ!. ಇದೇ ಆಗಸ್ಟ್ 24ರಂದು ಮಾರುಕಟ್ಟೆಗೆ ಬಿಡಲು ಸ್ಯಾಮ್ಸಂಗ್ ಸಜ್ಜುಗೊಂಡಿದೆ. ಇದಕ್ಕಾಗಿಯೇ ಆಗಸ್ಟ್ 23ರಂದು ಭಾರಿ ಸಮಾರಂಭದಲ್ಲಿ ಬಿಡುಗಡೆಗೊಳಿಸಲ ಮಾಧ್ಯಮದವರಿಗೆ ಅಧಿಕೃತ ಆಹ್ವಾನವನ್ನು ನೀಡಿ ದೃಢಪಡಿಸಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಆಗಸ್ಟ್ 24ಕ್ಕೆ ನಿಮ್ಮ ಕೈಸೇರಲಿದೆ!!

ಆದರೆ, ಸ್ಯಾಮ್ಸಂಗ್ ಕಂಪನಿ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಬಿಡುಗಡೆ ಮಾಡುವುದಾಗಿ ಉಲ್ಲೇಖಿಸಿಲ್ಲ.

ಇದು ಸ್ಯಾಮ್ಸಂಗ್ ಎಸ್ ಪೆನ್ ಅನ್ನು ಹೋಲುವ ನೀಲಿ ಸಿಲೂಯೆಟ್ ನೋಟ್ ಎಂದು ನಮೂದಿಸಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7ರ ಉತ್ತರಾಧಿಕಾರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪರೋಕ್ಷವಾಗಿ ಹೇಳಿಕೊಂಡಿದೆ. ಇದು ಕೆಲವು ಆಸಕ್ತಿದಾಯಕ ಕುತೂಹಲವನ್ನು ಹುಟ್ಟು ಹಾಕಿದೆ. ರೆಡ್ಡಿಟ್ ಪೋಸ್ಟ್ ಮಾಹಿತಿ ಪ್ರಕಾರ ಗ್ಯಾಲಕ್ಸಿ ನೋಟ್ 8 ಯುಎಸ್ ನಲ್ಲಿ ಆಗಸ್ಟ್ 24 ರಂದು ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಈ ಮಾಹಿತಿಯು ಅಸಲಿಯೇ ಎಂದು ತಿರುವಿ ಹಾಕಿ ನೋಡಿದರೆ, ಕೆಲವು ಕುತೂಹಲ ಹುಟ್ಟಿಸುವ ಸಲುವಾಗಿ ಬಿಡುಗಡೆಗೊಳಿಸುವ ಮಾಹಿತಿ ಸೋರಿಕೆಯಾಗದಂತೆ ಸ್ಯಾಮ್ಸಂಗ್ ಗ್ರಾಹಕರನ್ನು ಹುರಿದುಂಬಿಸಿದೆ. ಹೀಗಾಗಿಯೇ ಅಧಿಕೃತ ಪ್ರಕರಣೆಯನ್ನು ಕಾಯ್ದಿಸಿಕೊಳ್ಳುತ್ತಾ ಬಂದಿದೆ ಎನ್ನಲಾಗುತ್ತಿದೆ. ಯುಎಸ್ ನಿವಾಸಿಗಳು ಬಿಡುಗಡೆಯಾದ ನಂತರ ದಿನವೇ ಈ ಸ್ಮಾರ್ಟ್ಫೋನ್ ಖರೀದಿಸಲು ಮುಗಿ ಬೀಳಲಿದ್ದಾರೆ ಎಂದು ಅಂದಾಜಿಸಲಾಗಿದೆ.

ತೀರಾ ಇತ್ತೀಚಿನ ಮಾಹಿತಿ ಪ್ರಕಾರ ರೆಡ್ಡಿಟ್ ಮಾಡರೇಟರ್ ತಮ್ಮ ನೌಕರರಿಗೆ ಖರೀದಿಸಲು ಈ ಸಾಧನವು ಉತ್ತಮವಾದ ಆಯ್ಕೆ ಎಂದು ಹೇಳಿಕೊಂಡಿದೆ. ಅಂದಮಾತ್ರಕ್ಕೆ ಈ ವದಂತಿಯು ನಿಜ ಎಂಬ ಅರ್ಥವನ್ನು ಕಲ್ಪಿಸಬೇಕಾದ ಅಗತ್ಯವಿಲ್ಲ. ಸ್ಯಾಮ್ಸಂಗ್ ಕಂಪನಿ ಅಧಿಕೃತ ಪಡಿಸಿದಾಗ ಮಾತ್ರ ಎಲ್ಲಾ ಸತ್ಯಾಂಶವು ಬಹಿರಂಗಗೊಳ್ಳಲಿದೆ.

ಈ ಎಲ್ಲಾ ವದಂತಿಗಳು ಕೇವಲ ಯುಎಸ್ ರಾಷ್ಟ್ರದಲ್ಲಿ ಮಾತ್ರ ಎಂಬುದು ಗಮನಾರ್ಹ. ಹಾಗಾಗಿ ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಕೇವಲ ಒಂದು ತಿಂಗಳ ಅವಧಿಯಲ್ಲಿ ಗ್ರಾಹಕರ ಕೈ ಸೇರುವುದು ಬಹುತೇಕ ಖಚಿತವಾಗಿದೆ.

ಚಾಲ್ತಿಯಲ್ಲಿರುವ ಮಾಹಿತಿ ಪ್ರಕಾರ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಸ್ಮಾರ್ಟರ್ಫೋನ್ 6.3-ಇಂಚಿನ ಸೂಪರ್ ಅಮೋಲ್ಡೋ ಡಿಸ್ಪ್ಲೆಯಿಂದ ಅಲಂಕರಿಸಲಾಗಿದೆ ಎಂದು0020ಊಹಿಸಲಾಗಿದೆ. ಗ್ಯಾಲಕ್ಸಿ ಎಸ್ 8 +18.5:9 ರ ಆಕಾರದ ಅನುಪಾತವನ್ನು ಹೊಂದಿರುವಂತೆ ಇನ್ಫಿನಿಟಿ ಡಿಸ್ಪ್ಲೆ ಕಾಣಬಹುದಾಗಿದೆ.

ಹೊಸ ಜಿಯೋ ಸಿಮ್​ ಖರೀದಿಸಿದರೆ ಭಾರಿ ಆಫರ್...ಮತ್ತೆ ಕ್ಯಾಶ್‌ಬ್ಯಾಕ್!!

ಮುಂಬರುವ ಪ್ರಮುಖ ಫೋಬಲೆಟ್ ಅನ್ನು ಸ್ನಾಪ್ಡ್ರಾಗನ್ 835 ಎಸ್ಒಸಿ ಅಥವಾ ಆಂತರಿಕ ಎನಿನೋಸ್ 8895 ಎಸ್ಒಸಿ ಪ್ರದೇಶದೊಂದಿಗೆ ಅವಲಂಬಿಸಿರುತ್ತದೆ ಎಂದು ಹೇಳಲಾಗುತ್ತದೆ. ಈ ಪ್ರೊಸೆಸರ್ 6ಜಿಬಿ ರಾಮ್ ಮತ್ತು 3300ಎಂಎಎಚ್ ಬ್ಯಾಟರಿ ಜೊತೆಯಲ್ಲಿದೆ ಎಂದು ಹೇಳಲಾಗಿದೆ.

ಗ್ಯಾಲಕ್ಸಿ ನೋಟ್ 8 ನವೀಕರಿಸಿದ ಎಸ್ ಪೆನ್ ಸ್ಟೈಲಸ್ನೊಂದಿಗೆ ಆಗಮಿಸುವ ಸಾಧ್ಯತೆಯಿದೆ. ಗ್ಯಾಲಕ್ಸಿ ನೋಟ್ 7 ಸುಧಾರಿತ ಎಸ್ ಪೆನ್ನೊಂದಿಗೆ ಬಂದಿದ್ದು ಅದು ಹಲವಾರು ಸಾಮರ್ಥ್ಯಗಳನ್ನು ಮಾಡಬಲ್ಲದು ಎಂಬುದು ನೆನಪಿನಲ್ಲಿಡಬೇಕಾದ ಅಂಶವಾಗಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಮೊದಲ ಸ್ಯಾಮ್ಸಂಗ್ ಹ್ಯಾಂಡ್ಸೆಟ್ ಇದಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಸ್ಯಾಮ್ಸಂಗ್ ಪ್ರಮುಖ ಫೋಬ್ಲೆಟ್ ಗ್ಯಾಲಕ್ಸಿ ಎಸ್ 8 ಮತ್ತು ಎಸ್ 8+ ಮತ್ತು ಸೆಲ್ಫೊ ಕ್ಯಾಮೆರಾದೊಂದಿಗೆ ಮುಂಭಾಗದಲ್ಲಿ ಐರಿಸ್ ಸ್ಕ್ಯಾನರ್ ಹಾಗೂ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸಂವೇದಕವನ್ನು ಒಳಗೊಂಡಿರಬಹುದು. ಆದಾಗ್ಯೂ ಫಿಂಗರ್ಪ್ರಿಂಟ್ ಸಂವೇದಕದ ಸ್ಥಾನದಲ್ಲಿ ಪ್ರಮುಖ ವ್ಯತ್ಯಾಸ ಕಂಡುಬಂದಿದೆ. ಡ್ಯುಯಲ್ ಕ್ಯಾಮರಾ ಸೆಟಪ್ ಪಕ್ಕದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ ಎಂದು ಹೇಳಲಾಗುತ್ತದೆ.

English summary
The Samsung Galaxy Note 8 is speculated to sport a 6.3-inch Super AMOLED Infinity display.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot