Subscribe to Gizbot

ಭಾರತಕ್ಕೆ ಲಗ್ಗೆಇಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಸ್ಮಾರ್ಟ್‌ಫೋನ್

Written By:

ಮಾರ್ಚ್‌ನಲ್ಲಿ ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರಸ್‌ನಲ್ಲಿ ತನ್ನ ಮುಂದಿನ ಫ್ಲ್ಯಾಗ್‌ಶಿಪ್ ಫೋನ್ ಆದ ಎಸ್6 ಅನ್ನು ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿದೆ.

ಹ್ಯಾಂಡ್‌ಸೆಟ್‌ನ ಎರಡೂ ಬದಿಗಳಲ್ಲಿ ನೀವು ಕರ್ವ್ ಎಡ್ಜ್ ಅನ್ನು ಕಾಣಬಹುದಾಗಿದ್ದು ಇದು ಪ್ರತ್ಯೇಕ ಪರದೆಯೊಂದಿಗೆ ಅಡಿಇಡುತ್ತಿದೆ. ಎಸ್‌ಎಮ್‌ಎಸ್, ಇಮೇಲ್ ಪಠ್ಯ, ಅಲಾರಾಮ್, ಟೈಮ್ ಮೊದಲಾದ ಫೀಚರ್‌ಗಳನ್ನು ಈ ಪರದೆ ತೋರಿಸಲಿದೆ.

ಭಾರತಕ್ಕೆ ಲಗ್ಗೆಇಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಸ್ಮಾರ್ಟ್‌ಫೋನ್

ಫೋನ್ 4ಜಿಬಿ RAM ನೊಂದಿಗೆ ಬರುತ್ತಿದ್ದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಓಕ್ಟಾ ಕೋರ್ 64 ಬಿಟ್ ಪ್ರೊಸೆಸರ್ ಅನ್ನು ಡಿವೈಸ್ ಒಳಗೊಂಡಿದೆ. 5.5 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇ ಮತ್ತು 20 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್ ಹೊಂದಿದ್ದು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ನಾನ್ ರಿಮೂವೇಬಲ್ ಬ್ಯಾಟರಿಯನ್ನು ಒಳಗೊಂಡಿದ್ದು ಮೆಟಲ್ ಮತ್ತು ಗ್ಲಾಸ್ ಫ್ರೇಮ್‌ಗಳನ್ನು ಮುಂಭಾಗ ಹಾಗೂ ಹಿಂಭಾಗದಲ್ಲಿ ಹೊಂದಿದೆ. ಕಪ್ಪು ಹಿನ್ನಲೆಯಲ್ಲಿ ಕರ್ವ್ ವಿನ್ಯಾಸವನ್ನು ಹೊಂದಿರುವ ಈ ಡಿವೈಸ್ ಏನೆಲ್ಲಾ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
This article tells about Samsung Galaxy S6 to make India debut in April.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot