ಈ ವರ್ಷದ ಅದ್ಧೂರಿ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9

By: Shwetha PS

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಅನ್ನು ಕೆಲವು ದಿನಗಳ ಹಿಂದೆಯಷ್ಟೇ ಘೋಷಿಸಲಾಗಿದ್ದು ಇದು ಸೆಪ್ಟೆಂಬರ್ 15 ರಿಂದ ಜಾಗತಿಕ ಮಾರುಕಟ್ಟೆಗೆ ಅಡಿಇಡಲಿದೆ. ಈ ಫೋನ್‌ನ ಮಾರಾಟ ಇನ್ನು ಆರಂಭವಾಗಬೇಕಾಗಿದೆಯಷ್ಟೇ ಅದಕ್ಕೂ ಮುಂಚೆಯೇ ಗ್ಯಾಲಕ್ಸಿ ಎಸ್9 ಲಾಂಚ್ ಆಗಲಿದೆ ಎಂಬ ಸುದ್ದಿ ಕೂಡ ಸುಳಿದಾಡುತ್ತಿದೆ.

ಈ ವರ್ಷದ ಅದ್ಧೂರಿ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9

ಅಂತೂ 2018 ರ ಮಧ್ಯಭಾಗದಲ್ಲಿ ಈ ಫೋನ್ ಅನ್ನು ನಾವು ನಿರೀಕ್ಷಿಸಬಹುದಾಗಿದ್ದು ಕೊರಿಯನ್ ಹೆರಾಲ್ಡ್ ಎಂಬ ಪತ್ರಿಕೆ ಡಿವೈಸ್‌ನ ಕುರಿತು ಫೋಟೋವನ್ನು ಹಂಚಿಕೊಂಡಿದೆ.

ಗ್ಯಾಲಕ್ಸಿ ಎಸ್9 ಜನವರಿಯಲ್ಲಿ ಲಾಂಚ್ ಆಗಲಿದೆ ಎಂಬ ಮಾಹಿತಿಯನ್ನು ಕೂಡ ಈ ಪತ್ರಿಕೆ ನೀಡಿದೆ. ಸ್ಯಾಮ್‌ಸಂಗ್ ಓಲೆಡ್ ಡಿಸ್‌ಪ್ಲೇ ಪ್ಯಾನಲ್‌ಗಳ ಶಿಪ್ಪಿಂಗ್ ಅನ್ನು ನವೆಂಬರ್‌ನಲ್ಲಿ ಆರಂಭಿಸಲಿದೆ. ಇದರ ಜೊತೆಗೆ ಡಿವೈಸ್‌ನ ಇನ್ನಿತರ ಉಪಕರಣಗಳೂ ತಯಾರಿಕಾ ಸಂಸ್ಥೆಯನ್ನು ತಲುಪಲಿವೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!

ಎಲ್ಲೆಲ್ಲಿ ಎಷ್ಟೆಷ್ಟು ಟ್ರಾಫಿಕ್ ಇದೆ ಎಂದು ಗೂಗಲ್ ಹೇಳೋದು ಹೇಗೆ?!.ಖಂಡಿತ ಗೊತ್ತಿರೊಲ್ಲಾ!!

ಇನ್ನು ವದಂತಿಗಳ ಪ್ರಕಾರ ಗ್ಯಾಲಕ್ಸಿ ಎಸ್9 ಪ್ರಾಜೆಕ್ಟ್ ಸ್ಟಾರ್ ಎಂಬುದಾಗಿ ಹೆಸರಿಸಲಾಗಿದೆ. ಇದು ಕ್ಯುಎಚ್‌ಡಿ + ಸೂಪರ್ ಅಮೋಲೆಡ್ ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಗ್ಯಾಲಕ್ಸಿ ಎಸ್8 ನ ಅದೇ ರೀತಿಯ ಪರದೆ ಗಾತ್ರವನ್ನು ಹೊಂದಿದೆ. ಗ್ಯಾಲಕ್ಸಿ ಎಸ್9 4 ಜಿಬಿ RAM ಅನ್ನು ಪಡೆದುಕೊಂಡಿದ್ದು, ಗ್ಯಾಲಕ್ಸಿ ಎಸ್8, ಗ್ಯಾಲಕ್ಸಿ ಎಸ್7 ಮತ್ತು ಎಸ್7 ಎಡ್ಜ್‌ನಲ್ಲಿ ಇದನ್ನೇ ನಾವು ಕಂಡುಕೊಂಡಿದ್ದೇವೆ.

ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ ಎಂಬುದಾಗಿ ಕೂಡ ಸುದ್ದಿ ಇದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಸಾಕ್ ಇದರಲ್ಲಿದೆ. ಮಾಡ್ಯುಲರ್ ವಿನ್ಯಾಸವನ್ನು ಡಿವೈಸ್ ಒಳಗೊಂಡಿದೆ.

Read more about:
English summary
Samsung Galaxy S9, the upcoming flagship smartphone is believed to be unveiled early in January 2018.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot