ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ ಕುರಿತ ಮಾಹಿತಿ

By Lekhaka
|

2017ರ ಅಂತ್ಯ ಸಮೀಸುತ್ತಿರುವಂತೆಯೇ ಮುಂದಿನ ವರ್ಷದಲ್ಲಿ ಲಾಂಚ್ ಆಗಲಿರುವ ಸ್ಮಾರ್ಟ್ ಫೋನ್ ಗಳ ಕುರಿತಂತೆ ಮಾಹಿತಿಗಳು ಸುಳಿದಾಡುತ್ತಿದ್ದು, ಹೊಸ ಹೊಸ ಫೋನ್ ಗಳ ರೂಮರ್ಸ್ ಹೆಚ್ಚಾಗುತ್ತಿದೆ. ಈಗಾಗಲೇ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡಯಾಗಲಿದೆ ಎನ್ನಲಾಗಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ಕುರಿತಂತೆ ಇನ್ನಷ್ಟು ಸುದ್ದಿಗಳು ಲಭ್ಯವಾಗಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಸ್ಮಾರ್ಟ್ ಫೋನ್ ಕುರಿತ ಮಾಹಿತಿ

ಸ್ಯಾಮ್ ಸಂಗ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಟಾಪ್ ಎಂಡ್ ಫೋನ್ ಗಳಾಗಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಹುಟ್ಟಿ ಹಾಕಲಿವೆ ಅಲ್ಲದೇ ಡಿಸ್ ಪ್ಲೇ ವಿನ್ಯಾಸವನ್ನು ಬದಲಾಯಿಸಲಿದೆ. ಈಗ ಟ್ರೆಂಡ್ ಆಗಿರುವ 18:9 ಅನುಪಾತವನ್ನು ಮೀರಿ 21:9 ಅನುಪಾತದ ಡಿಸ್ ಪ್ಲೇ ಯನ್ನು ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಲಿದೆ ಎನ್ನುವ ಮಾಹಿತಿ ಇದೆ.

ಆದರೆ ಸದ್ಯ ಲೀಕ್ ಆಗಿರುವ ವಿಷಯದ ಪ್ರಕಾರ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ನಲ್ಲಿ 18:9 ಅನುಪಾತದ ಡಿಸ್ ಪ್ಲೇಯನ್ನು ಮಾತ್ರವೇ ಅಳವಡಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಮಾತ್ರವೇ 21:9 ಅನುಪಾತದ ಡಿಸ್ ಪ್ಲೇಯನ್ನು ಕಾಣಬಹುದು ಸದ್ಯಕ್ಕೆ ಇಲ್ಲ ಎನ್ನಲಾಗಿದೆ.

ಪ್ಯಾನ್, ಸಿಮ್, ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್‌ ಮಾಡಲು ಡೆಡ್‌ಲೈನ್!!ಪ್ಯಾನ್, ಸಿಮ್, ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್‌ ಮಾಡಲು ಡೆಡ್‌ಲೈನ್!!

ಸ್ಯಾಮ್ ಸಂಗ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ಗಳನ್ನು ಮತ್ತಷ್ಟು ಉದ್ದ ಮಾಡಲು ಇಚ್ಚಿಸಿಲ್ಲ ಎನ್ನಲಾಗಿದೆ. ಈಗಾಗಲೇ ಈ ಫೋನ್ ಗಳು ಸಾಕಾಷ್ಟು ಉದ್ದವಾಗಿದ್ದು, ಇನ್ನಷ್ಟು ಉದ್ಧ ಮಾಡಿದರೆ ಬಳಕೆದಾರಿಗೆ ತೊಂದರೆಯಾಗಲಿದೆ ಎನ್ನುವ ಕಾರಣಕ್ಕೆ 21:9 ಅನುಪಾತದ ಡಿಸ್ ಪ್ಲೇಗೆ ಬ್ರೇಕ್ ಹಾಕಿದೆ.

ಆದರೆ ಇದೇ ಮೂಲಗಳ ಪ್ರಕಾರ ಮುಂದಿನ ನೋಟ್ ಸರಣಿಯ ಸ್ಮಾರ್ಟ್ ಫೋನಿನಲ್ಲಿ 21:9 ಅನುಪಾತದ ಡಿಸ್ ಪ್ಲೇ ಅಳವಡಿಸಲು ಸ್ಯಾಮ್ ಸಂಗ್ ಚಿಂತನೆ ನಡೆಸಿದೆ ಎನ್ನುವ ವಿಷಯವನ್ನು ಬಹಿರಂಗ ಗೊಳಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಫೋನ್ ಲಾಂಚ್ ಆಗುವ ವರೆಗೂ ಕಾಯಲೇ ಬೇಕು.

Best Mobiles in India

Read more about:
English summary
Samsung Galaxy S9 and Galaxy S9+ might not arrive with a taller display with 21:9 aspect ratio as rumored before.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X