Subscribe to Gizbot

ಸ್ಯಾಮ್ ಸಂಗ್ ನಿಂದ ನೂತನ ಬಜೆಟ್ ಟ್ಯಾಬ್ಲೆಟ್ ಬಿಡುಗಡೆಗೆ ಸಿದ್ಧತೆ

Written By: Lekhaka

ಸ್ಯಾಮ್ ಸಂಗ್ ಲಾಂಚ್ ಮಾಡಲಿರುವ ಆಂಡ್ರಾಯ್ಡ್ ಕಾರ್ಯಚರಣೆಯ ಬಜೆಟ್ ಟ್ಯಾಬ್ ಕೆಲವೇ ದಿನಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಈ ಟ್ಯಾಬ್ಲೆಟ್ ಗೆ ಗ್ಯಾಲೆಕ್ಸಿ ಟ್ಯಾಬ್ A2 S ಎಂದು ಹೆಸರಿಡಲಾಗಿದೆ.

ಸ್ಯಾಮ್ ಸಂಗ್ ನಿಂದ ನೂತನ ಬಜೆಟ್ ಟ್ಯಾಬ್ಲೆಟ್ ಬಿಡುಗಡೆಗೆ ಸಿದ್ಧತೆ

ಈಗಾಗಲೇ ಈ ಟ್ಯಾಬ್ ಅನ್ನು ಗ್ಯಾಲೆಕ್ಸಿ ಟ್ಯಾಬ್ A 8.0 ಎಂದು ಕರೆಯಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಟ್ಯಾಬ್ ಲಾಂಚ್ ಆಗಲಿದ್ದು, ಕ್ವಾಲ್ಕಮ್ ಸ್ಯಾಪ್ ಡ್ರಾಗಮ್ 435 ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಇದು 1.4GHz ವೇಗವನ್ನು ಹೊಂದಿದೆ.

ಅಲ್ಲದೇ ಈ ಟ್ಯಾಬ್ ನಲ್ಲಿ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, 8 ಇಂಚಿನ HD ಡಿಸ್ ಪ್ಲೇಯನ್ನು ಹೊಂದಿದೆ. ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಶೀಘ್ರವೇ ಫೇಸ್‌ಬುಕ್‌ ಮೇಸೆಂಜರ್ ಆಪ್‌ನಲ್ಲೇ ಡೇಟಿಂಗ್ ಮಾಡಿ..!!

ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸುವ ಈ ಟ್ಯಾಬ್ ನಲ್ಲಿ ಬ್ಯಾಟರಿ ದೊಡ್ಡದಾಗಿಯೇ ಇರಲಿದೆ. ಅಲ್ಲದೇ ಈ ಟ್ಯಾಬಿನ ಬೆಲೆಯ ಬಗ್ಗೆಯೂ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.

ಈಗಾಘಲೇ IFA 2017ನಲ್ಲಿ ಈ ಟ್ಯಾಬ್ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ ಅಂತ್ಯದ ವೇಳಗೆ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Read more about:
English summary
The upcoming Samsung tablet will be powered by a Quad-core Qualcomm Snapdragon 435 chipset.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot