ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸರಣಿಯ ಬೆಲೆ ಬಹಿರಂಗ!

|

ಸ್ಯಾಮ್‌ಸಂಗ್‌ ಕಂಪೆನಿ ಕೆಲ ದಿನಗಳ ಹಿಂದೆ ತನ್ನ ಗ್ಯಾಲಕ್ಸಿ ಅನ್‌ಪ್ಯಾಕ್ಡ್‌ 2022 ಈವೆಂಟ್‌ ನಲ್ಲಿ ತನ್ನ ಹೊಸ ಗ್ಯಾಲಕ್ಸಿ 5 ವಾಚ್‌ ಸಿರೀಸ್‌ ಅನ್ನು ಲಾಂಚ್‌ ಮಾಡಿತ್ತು. ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿತ್ತು. ಆದರೆ ಭಾರತದಲ್ಲಿ ಈ ವಾಚ್‌ ಸಿರೀಸ್‌ನ ಬೆಲೆಯ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಗ್ಯಾಲಕ್ಸಿ ವಾಚ್‌ 5 ಸಿರೀಸ್‌ನ ಬೆಲೆ ಎಷ್ಟು ಅನ್ನೊದನ್ನ ರಿವೀಲ್‌ ಮಾಡಿದೆ. ಅದರಂತೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಸಿರೀಸ್‌ನ ಆರಂಭಿಕ ಬೆಲೆ 27,999ರೂ. ಆಗಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ತನ್ನ ಗ್ಯಾಲಕ್ಸಿ 5 ವಾಚ್‌ ಸರಣಿಯ ಬೆಲೆ ಎಷ್ಟಿದೆ ಅನ್ನೊದನ್ನ ಬಹಿರಂಗಪಡಿಸಿದೆ. ಬಿಡುಗಡೆಯಾದ ಎರಡು ದಿನಗಳ ಅಂತರದಲ್ಲಿ ಭಾರತದ ಮಾರುಕಟ್ಟೆಯ ಬೆಲೆ ವಿವರವನ್ನು ಅಧಿಕೃತಗೊಳಿಸಿದೆ. ಅಲ್ಲದೆ ಈ ಸ್ಮಾಟ್‌ವಾಚ್‌ ಇದೇ ಆಗಸ್ಟ್‌ 26 ರಿಂದ ಸೇಲ್‌ ಆಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸರಣಿಯ ಬೆಲೆ ವಿವರಗಳು ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸರಣಿಯ ಬೆಲೆ ಎಷ್ಟಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸರಣಿಯ ಬೆಲೆ ಎಷ್ಟಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸರಣಿಯ 40 ಎಂಎಂ ಕೇಸ್ ಗಾತ್ರದ ಬ್ಲೂಟೂತ್ ರೂಪಾಂತರದ ಆಯ್ಕೆಯು ಭಾರತದಲ್ಲಿ 27,999ರೂ, ಬೆಲೆ ಪಡೆದಿದೆ. ಆದರೆ ಎಲ್‌ಟಿಇ ರೂಪಾಂತರದ ಬೆಲೆ 32,999ರೂ. ಆಗಿದೆ. ಇನ್ನು ಈ ಸ್ಮಾರ್ಟ್ ವಾಚ್ ಗ್ರ್ಯಾಫೈಟ್, ಸಿಲ್ವರ್ ಮತ್ತು ಪಿಂಕ್ ಗೋಲ್ಡ್ ಸೇರಿದಂತೆ ಬಣ್ಣಗಳಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 44mm ಕೇಸ್ ಗಾತ್ರದ ಬ್ಲೂಟೂತ್ ರೂಪಾಂತರದ ಆಯ್ಕೆಯ ಬೆಲೆ 30,999ರೂ. ಆಗಿದೆ. ಆದರೆ ಇದರ ಎಲ್ ಟಿಇ ರೂಪಾಂತರದ ಬೆಲೆ 35,999ರೂ. ಆಗಿದೆ. ಈ ಸ್ಮಾರ್ಟ್‌ವಾಚ್ ಗ್ರ್ಯಾಫೈಟ್, ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

ಗ್ಯಾಲಕ್ಸಿ

ಇನ್ನು ಗ್ಯಾಲಕ್ಸಿ ವಾಚ್‌ 5ಪ್ರೊ 45mm ಕೇಸ್ ಗಾತ್ರದ ಆಯ್ಕೆಯು 44,999ರೂ. ಬೆಲೆಯನ್ನು ಹೊಂದಿದೆ. ಇದರ LTE ರೂಪಾಂತರದ ಬೆಲೆ 49,999ರೂ. ಆಗಿದೆ. ಈ ಸ್ಮಾರ್ಟ್ ವಾಚ್ ಬ್ಲ್ಯಾಕ್ ಟೈಟಾನಿಯಂ ಮತ್ತು ಗ್ರೇ ಟೈಟಾನಿಯಂ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ ವಾಚ್‌ಗಳು ಭಾರತದಲ್ಲಿ ಇದೇ ಆಗಸ್ಟ್ 16 ರಂದು ಪ್ರೀ-ಬುಕಿಂಗ್‌ಗೆ ಲಭ್ಯವಿರುತ್ತವೆ. ಹಾಗೆಯೇ ಆಗಸ್ಟ್ 26 ರಿಂದ ಖರೀದಿಗೆ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸ್ಮಾರ್ಟ್‌ವಾಚ್‌ನ 44mm ರೂಪಾಂತರವು 1.4-ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದರ 40mm ರೂಪಾಂತರದ ಆಯ್ಕೆಯು 1.2 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಡ್ಯುಯಲ್-ಕೋರ್ ಎಕ್ಸಿನೋಸ್‌ W920 SoC ಪ್ರೊಸೆಸರ್‌ ಹೊಂದಿದೆ. ಇದಕ್ಕೆ ಪೂರಕವಾಗಿ WearOS 3.5-ಆಧಾರಿತ One UI ವಾಚ್ 4.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 1.5GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದಿದೆ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ ಹೊಸ ಸ್ಯಾಮ್‌ಸಂಗ್‌ ಬಯೋ ಆಕ್ಟಿವ್‌ ಸೆನ್ಸಾರ್‌ ಅನ್ನು ಹೊಂದಿದೆ. ಈ ಸೇನ್ಸಾರ್‌ ಆಪ್ಟಿಕಲ್ ಹಾರ್ಟ್‌ಬೀಟ್‌ ಸೆನ್ಸಾರ್‌, ಎಲೆಕ್ಟ್ರಿಕಲ್ ಹಾರ್ಟ್ ಸಿಗ್ನಲ್ ಮತ್ತು ಬಯೋ ಎಲೆಕ್ಟ್ರಿಕಲ್ ಇಂಪೆಡಾನ್ಸ ಅನಾಲಿಸಿಸ್ ಅನ್ನು ಸಂಯೋಜಿಸಲಿದೆ. ಇದಲ್ಲದೆ ಗ್ಯಾಲಕ್ಸಿ ವಾಚ್ 5 ಗೆ ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್ ಶೀಘ್ರದಲ್ಲೇ ಬರಲಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ. ಗ್ಯಾಲಕ್ಸಿ ವಾಚ್‌ 5 44mm ರೂಪಾಂತರವು 410mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆದರೆ 40mm ರೂಪಾಂತರವು 284mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ ಸ್ಮಾರ್ಟ್‌ವಾಚ್‌ 1.4 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ WearOS 3.5-ಆಧಾರಿತ One UI ವಾಚ್ 4.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಿ-ಬಕಲ್ ಸ್ಪೋರ್ಟ್ ಬ್ಯಾಂಡ್‌ನೊಂದಿಗೆ ಟೈಟಾನಿಯಂ ಕೇಸ್ ಅನ್ನು ಒಳಗೊಂಡಿದೆ. ಹಾಗೆಯೇ 1.5GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದಿದೆ.

ಸ್ಮಾರ್ಟ್‌ವಾಚ್‌

ಗ್ಯಾಲಕ್ಸಿ ವಾಚ್‌ 5 ಪ್ರೊ ಸ್ಮಾರ್ಟ್‌ವಾಚ್‌ ಟ್ರ್ಯಾಕ್ ಬ್ಯಾಕ್ ಫೀಚರ್ಸ್‌ ಅನ್ನು ನೀಡಲಿದೆ. ಇದು ಪಾದಯಾತ್ರಿಕರು, ಮೌಂಟೆನ್‌ ಬೈಕರ್‌ಗಳು ಬಳಸುವುದಕ್ಕೆ ಸೂಕ್ತವಾಗಲಿದೆ. ಏಕೆಂದರೆ ಈ ವಾಚ್‌ನಲ್ಲಿ ಹೈಕಿಂಗ್ ಮತ್ತು ಸೈಕ್ಲಿಂಗ್ ಮಾರ್ಗಗಳನ್ನು ಡೌನ್‌ಲೋಡ್ ಮಾಡಬಹುದು. ಇನ್ನು ಈ ಸ್ಮಾರ್ಟ್‌ವಾಚ್‌ ಕೂಡ ಸ್ಯಾಮ್‌ಸಂಗ್‌ನ ಬಯೋಆಕ್ಟಿವ್ ಸೆನ್ಸಾರ್‌ , ಅಕ್ಸಿಲೆರೊಮೀಟರ್, ಬಾರೋಮೀಟರ್, ಗೈರೊಸ್ಕೋಪ್, ದಿಕ್ಸೂಚಿ ಮತ್ತು ಲೈಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ.

Best Mobiles in India

English summary
While Samsung revealed the price of the two foldable devices that it had announced during the event.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X