ಸ್ಯಾಮ್‌ಸಂಗ್‌ನಿಂದ ವಿಶ್ವದ ಮೊದಲ 17-ಇಂಚಿನ ಸ್ಲೈಡಬಲ್‌ ಡಿಸ್‌ಪ್ಲೇ ಅನಾವರಣ!

|

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಭಿನ್ನ ಶ್ರೇಣಿಯ ಡಿವೈಸ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಹಲವು ವೈವಿಧ್ಯಮಯ ಗ್ಯಾಜೆಟ್ಸ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಅದರಂತೆ ಇದೀಗ ವಿಶ್ವದ ಮೊದಲ 17-ಇಂಚಿನ ಸ್ಲೈಡಬಲ್ ಡಿಸ್‌ಪ್ಲೇಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದನ್ನು ಇಂಟೆಲ್‌ ಪಿಸಿಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇನ್ನು ಈ ಡಿಸ್‌ಪ್ಲೇ ನಿಮ್ಮ ಕೈಯಲ್ಲಿ ಹೇಗೆ ಬೇಕಾದರೂ ಸ್ಲೈಡ್‌ ಆಗಲಿದ್ದು, ತೆರೆದುಕೊಳ್ಳುವುದಿಲ್ಲ ಎನ್ನಲಾಗಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಕಂಪೆನಿ ಹೊಸ ಸ್ಲೈಡಬಲ್‌ ಡಿಸ್‌ಪ್ಲೇಯನ್ನು ಪರಿಚಯಿಸಲು ಪ್ಲಾನ್‌ ಮಾಡಿದೆ. ಈ ಡಿಸ್‌ಪ್ಲೇಯನ್ನು ಸ್ಲೈಡ್‌ ಮಾಡಬಹುದಾಗಿದೆ. ಇನ್ನು ಈ ಡಿಸ್‌ಪ್ಲೇಯನ್ನು ಇಂಟೆಲ್‌ನ ಇನ್ನೋವೇಶನ್ ಡೇ ಈವೆಂಟ್‌ನಲ್ಲಿ ಪ್ರದರ್ಶಿಸಲಾಗಿದೆ. ಇನ್ನು ಸ್ಯಾಮ್‌ಸಂಗ್ ಸಂಸ್ಥೆಯ ಡಿಸ್‌ಪ್ಲೇಯನ್ನು ಕಂಪೆನಿಯ ಸಿಇಒ JS ಚೋಯ್ ಪ್ರದರ್ಶಿಸಿದ್ದಾರೆ. 13 ಇಂಚಿನ ಟ್ಯಾಬ್ಲೆಟ್‌ನಿಂದ 17 ಇಂಚಿನ ಡಿಸ್‌ಪ್ಲೇಗೆ ಮಾನಿಟರ್ ಸ್ಲೈಡ್ ಮಾಡುವ ಪ್ರೊಟೊಟೈಪ್ ಪಿಸಿಯನ್ನು ಪ್ರದರ್ಶಿಸಿದ್ದಾರೆ. ಹಾಗಾದ್ರೆ ಸ್ಯಾಮ್‌ಸಂಗ್‌ ಕಂಪೆನಿಯ ಹೊಸ ಡಿಸ್‌ಪ್ಲೇ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿಯ ಹೊಸ ಡಿಸ್‌ಪ್ಲೇ ವಿಶ್ವದ ಮೊದಲ 17-ಇಂಚಿನ ಸ್ಲೈಡಬಲ್‌ ಡಿಸ್‌ಪ್ಲೇ ಆಗಿದೆ. ಇದು ಬಿಗ್‌ ಸ್ಕ್ರೀನ್‌ ಮತ್ತು ಪೋರ್ಟಬಿಲಿಟಿಗಾಗಿ ವಿವಿಧ ಅಗತ್ಯಗಳನ್ನು ಪೂರೈಸುತ್ತದೆ ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿದೆ. ಇನ್ನು ಈ ಡಿಸ್‌ಪ್ಲೇ 13 ಇಂಚಿನ ಟ್ಯಾಬ್ಲೆಟ್ ಅನ್ನು 17 ಇಂಚಿನ ಮಾನಿಟರ್ ಆಗಿ ಹೊಂದಿಕೊಳ್ಳುವ ಡಿಸ್‌ಪ್ಲೇ ಮತ್ತು ಸ್ಲೈಡಿಂಗ್ ಕಾರ್ಯವಿಧಾನದೊಂದಿಗೆ ಪರಿವರ್ತಿಸುತ್ತದೆ.

ಡಿಸ್‌ಪ್ಲೇ

ಅಂದರೆ ಈ ಡಿಸ್‌ಪ್ಲೇ 13-ಇಂಚಿನ ಸ್ಕ್ರೀನ್‌ ಅನ್ನು ಅವಶ್ಯಕತೆಗೆ ತಕ್ಕಂತೆ 17 ಇಂಚಿನ ಡಿಸ್‌ಪ್ಲೇ ಆಗಿ ಪರಿವರ್ತಿಸಲು ಅನುಮತಿಸಲಿದೆ. ಇದು ಸ್ಕ್ರೀನ್‌ನ ಗುಪ್ತ ಭಾಗವನ್ನು ಅನ್ರೋಲ್ ಮಾಡುತ್ತದೆ. ಆದರಿಂದ ಸ್ಕ್ರೀನ್‌ ಹೆಚ್ಚು ಸ್ಲೈಡ್‌ ಆಗುವುದಕ್ಕೆ ಸಾಧ್ಯವಿದೆ ಎನ್ನಲಾಗಿದೆ. ಇಂತಹದೊಂದು ಕಲ್ಪನೆ ಇದೀಗ ಟೆಕ್‌ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಏಕೆಂದರೆ ಫೋಲ್ಡೆಬಲ್‌ ಫೋನ್‌ಗಳ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ಸ್ಯಾಮ್‌ಸಂಗ್‌, ಮುಂದಿನ ದಿನಗಳಲ್ಲಿ ಸ್ಲೈಡಿಂಗ್‌ ಡಿಸ್‌ಪ್ಲೇ ಮೂಲಕ ಹೊಸ ಅಲೆ ಸೃಷ್ಟಿಸುವ ಸಾಧ್ಯತೆಯಿದೆ.

ಇಂಟೆಲ್‌ನ

ಇಂಟೆಲ್‌ನ ಇನ್ನೋವೇಶನ್‌ ಡೇ ಈವೆಂಟ್‌ನಲ್ಲಿ ಈ ಡಿಸ್‌ಪ್ಲೇ ಅನಾವರಣಗೊಂಡಿರುವುದರಿಂದ ಇದು ಇಂಟೆಲ್‌ನ ಹೊಸ ಪಿಸಿಗಳಲ್ಲಿ ಬರುವ ಸಾಧ್ಯತೆಯಿದೆ. ಇನ್ನು ಇದೇ ಸಮಯದಲ್ಲಿ ಇಂಟೆಲ್‌ ಕಂಪೆನಿ ಕೂಡ ತನ್ನ ಹೊಸ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಸೇವೆಗಳ ಒಂದು ಶ್ರೇಣಿಯನ್ನು ಪ್ರದರ್ಶಿಸಿದೆ. ಈ ಹೊಸ ತಲೆಮಾರಿನ ಸಾಫ್ಟ್‌ವೇರ್‌ ಡೆವಲಪರ್‌ಗಳ ವಿಶಾಲ ಪರಿಸರ ವ್ಯವಸ್ಥೆಗೆ ಸವಾಲುಗಳನ್ನು ಜಯಿಸಲು ಸಹಾಯ ಮಾಡುವ ಗುರಿಹೊಂದಿದೆ ಎಂದು ಕಂಪೆನಿ ಹೇಳಿದೆ.

ಇಂಟೆಲ್‌

ಇನ್ನು ಇಂಟೆಲ್‌ ಕಂಪೆನಿ ಯುನಿಸನ್ ಅನ್ನು ಕೂಡ ಅನಾವರಣಗೊಳಿಸಿದೆ. ಇದು ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ನಡುವೆ ಕಂಟ್ಯಾಕ್ಟ್‌ಲೆಸ್‌ ಕನೆಕ್ಟಿವಿಟಿ ಒದಗಿಸುವ ಸಾಫ್ಟ್‌ವೇರ್‌ ಸಲ್ಯೂಶನ್‌ ಆಗಿದೆ. ಇದರಿಂದ ನಿಮ್ಮ ಟೆಕ್ಸ್ಟ್‌ ಮೆಸೇಜ್, ಫೈಲ್ ವರ್ಗಾವಣೆ, ಫೋನ್ ಕರೆಗಳು ಮತ್ತು ಫೋನ್ ಅಧಿಸೂಚನೆಗಳನ್ನು ವರ್ಗಾವಣೆ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಲ್ಲದೆ ಇಂಟೆಲ್‌ ಕಂಪನಿಯು ಇಂಟೆಲ್ ಡಿಸ್ಕ್ರೀಟ್ ಮತ್ತು ಇಂಟಿಗ್ರೇಟೆಡ್ ಗ್ರಾಫಿಕ್ಸ್‌ನಲ್ಲಿ ಕಾರ್ಯನಿರ್ವಹಿಸುವ Xe ಸೂಪರ್ ಸ್ಯಾಂಪ್ಲಿಂಗ್ ಅನ್ನು ಸಹ ಘೋಷಿಸಿದೆ.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದೆ. ಇದರ ಮೂಲಕ ಗ್ರಾಹಕರಿಗೆ ಆಕರ್ಷಕ ಕ್ಯಾಶ್‌ಬ್ಯಾಕ್‌ ಆಫರ್‌ ನೀಡುವ ಭರವಸೆ ನೀಡಿದೆ. ಆದರೆ ಈ ಕ್ಯಾಶ್‌ಬ್ಯಾಕ್ ಅಸ್ತಿತ್ವದಲ್ಲಿರುವ ಆಫರ್‌ಗಳ ಮೇಲೆ ಅನ್ವಯವಾಗಲಿದೆ. ಜೊತೆಗೆ ಗ್ರಾಹಕರು ಪ್ರತಿ ಬಾರಿ ಸ್ಯಾಮ್‌ಸಂಗ್‌ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಪಡೆಯುವುದಕ್ಕೆ ಈ ಕಾರ್ಡ್‌ ಬಳಸಿದರೆ ವಿಶೇಷ ರಿವಾರ್ಡ್‌ಗಳನ್ನು ಕೂಡ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಆಕ್ಸಿಸ್

ಇದಕ್ಕಾಗಿ ಆಕ್ಸಿಸ್ ಬ್ಯಾಂಕ್ ಮತ್ತು ವಿಸಾ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಹೇಳಿದೆ. ಇನ್ನು ಸ್ಯಾಮ್‌ಸಂಗ್‌ ಆಕ್ಸಿಸ್‌ ಕ್ರೆಡಿಟ್ ಕಾರ್ಡ್ ಅನ್ನು ಸ್ಯಾಮ್‌ಸಂಗ್ ಪ್ರಾಡಕ್ಟ್‌ಗಳನ್ನು ಖರೀದಿಸುವಾಗ ಬಳಸಬಹುದಾಗಿದೆ. ಹೀಗೆ ಕ್ರೆಡಿಟ್‌ ಕಾರ್ಡ್‌ ಮೂಲಕ ಸ್ಯಾಮ್‌ಸಂಗ್‌ ಸೇವೆಗಳನ್ನು ಪಡೆದುಕೊಂಡರೆ ವಿಶೇಷ ರಿವಾರ್ಡ್‌ಗಳನ್ನು ನೀಡಲು ವಿನ್ಯಾಸಗಳಿಸಲಾಗಿದೆ.

Best Mobiles in India

English summary
Samsung has announced world's first 17-inch slidable display for PCs

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X