ಭಾರತಕ್ಕೆ ಎಂಟ್ರಿ ನೀಡಿದ ಸ್ಯಾಮ್‌ಸಂಗ್‌ ದಿ ಫ್ರೇಮ್‌ 2022 ಸ್ಮಾರ್ಟ್‌ಟಿವಿ! ಬೆಲೆ ಎಷ್ಟು?

|

ಜನಪ್ರಿಯ ಸ್ಮಾರ್ಟ್‌ಟಿವಿ ಬ್ರ್ಯಾಂಡ್‌ಗಳಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ವಿವಿಧ ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಸ್ಯಾಮ್‌ಸಂಗ್‌ ಕಂಪೆನಿ ಗ್ರಾಹಕರು ನೆಚ್ಚಿ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಈ ವರ್ಷದ ಆರಂಭದಲ್ಲಿ ದಿ ಸೆರೋ, ದಿ ಸೆರಿಫ್, ಮೈಕ್ರೋ ಎಲ್‌ಇಡಿ ಟಿವಿ ಮತ್ತು ನಿಯೋ ಕ್ಯೂಎಲ್‌ಇಡಿ ಟಿವಿ ಸರಣಿಗಳನ್ನು ಭಾರತದಲ್ಲಿ ಪರಿಚಯಿಸಿದೆ. ಇದೀಗ ತನ್ನ ಲೈಪ್‌ಸ್ಟೈಲ್‌ ಟಿವಿ ದಿ ಫ್ರೇಮ್ 2022 ಆವೃತ್ತಿಯನ್ನು ಪರಿಚಯಿಸಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಸ್ಯಾಮ್‌ಸಂಗ್ ದಿ ಫ್ರೇಮ್ ಅನ್ನು ಲಾಂಚ್‌ ಮಾಡಿದೆ. ಇನ್ನು ದಿ ಫ್ರೇಮ್ ಸ್ಮಾರ್ಟ್ ಟಿವಿ 75-ಇಂಚಿನ ಗಾತ್ರದವರೆಗಿನ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಬಿಲ್ಟ್-ಇನ್ ಆರ್ಟ್ ಸ್ಟೋರ್‌ನೊಂದಿಗೆ ಬರಲಿದೆ. ಇದರಿಂದ ಬಳಕೆದಾರರು ಸ್ಮಾರ್ಟ್‌ಟಿವಿಯಲ್ಲಿ ಆರ್ಟ್ಸ್‌ ಸ್ಟೋರೇಜ್‌ ಮಾಡಲು ಅನುವು ಮಾಡಿಕೊಡಲಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ದಿ ಫ್ರೇಮ್‌ ವಿಶೇಷತೆ ಏನು? ಇದರ ರಚನೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ದಿ ಫ್ರೇಮ್ ಸ್ಮಾರ್ಟ್ ಟಿವಿ QLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 3,840 x 2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 100Hz ಸ್ಕ್ರೀನ್ ರಿಫ್ರೆಶ್ ರೇಟ್‌ ಮತ್ತು ಮ್ಯಾಟ್ ಡಿಸ್‌ಪ್ಲೇ ಆಂಟಿ-ರಿಫ್ಲೆಕ್ಷನ್‌ ಕೋಟಿಂಗ್‌ ಅನ್ನು ಹೊಂದಿದೆ. ಇದಲ್ಲದೆ HDR10+ ಅಡಾಪ್ಟಿವ್ ಮತ್ತು HDR10+ ಗೇಮಿಂಗ್ ಪ್ರಮಾಣೀಕರಣವನ್ನು ಪಡೆದಿದೆ. ಜೊತೆಗೆ ಸುಪ್ರೀಂ UHD ಡಿಮ್ಮಿಂಗ್ ಮತ್ತು ಮೋಷನ್ ಎಕ್ಸ್‌ಲರೇಟರ್‌ ಟರ್ಬೋ+ ಟೆಕ್ನಾಲಜಿಗಳ ಇಮೇಜ್‌ ಗುಣಮಟ್ಟ ಸೂಚ್ಯಂಕವನ್ನು ಹೊಂದಿದೆ.

ಸ್ಯಾಮ್‌ಸಂಗ್‌

ಇನ್ನು ಸ್ಯಾಮ್‌ಸಂಗ್‌ ದಿ ಫ್ರೇಮ್‌ ಡಾಲ್ಬಿ ಅಟ್ಮಾಸ್, ಅಡಾಪ್ಟಿವ್ ಸೌಂಡ್+ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ಆಡಿಯೋ ಬೆಂಬಲವನ್ನು ಹೊಂದಿದೆ. ಇದು MS12 5.1ch ಬೆಂಬಲದೊಂದಿಗೆ 40W 2.0.2 ಚಾನೆಲ್ ಸ್ಪೀಕರ್ ಅನ್ನು ಒಳಗೊಂಡಿದೆ. ಇನ್ನು ಈ ಟಿವಿ ಇಂಟರ್‌ಬಿಲ್ಟ್‌ ಗೂಗಲ್ ಅಸಿಸ್ಟೆಂಟ್‌ ಹೊಂದಿದ್ದು, ಬಿಕ್ಸ್‌ಬಿ ಮತ್ತು ಅಲೆಕ್ಸಾಗೆ ಬೆಂಬಲವನ್ನು ಸಹ ನೀಡಲಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ ದಿ ಫ್ರೇಮ್‌ ಮೋಷನ್ ಸೆನ್ಸಾರ್‌ ಅನ್ನು ಹೊಂದಿದ್ದು, ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಸ್ವಿಚ್ ಆಫ್ ಆಗುತ್ತದೆ.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ದಿ ಫ್ರೇಮ್ ಸಿಂಗಲ್‌ ಐ ಕಂಫರ್ಟ್‌ ಮೋಡ್ ಅನ್ನು ಸಹ ಹೊಂದಿದೆ. ಇದು ಇಂಟರ್‌ಬಿಲ್ಟ್‌ ಲೈಟ್‌ ಸೆನ್ಸಾರ್‌ ಮತ್ತು ಸೂರ್ಯಾಸ್ತ/ಸೂರ್ಯೋದಯ ಮಾಹಿತಿಯ ಆಧಾರದ ಮೇಲೆ ಆಟೋಮ್ಯಾಟಿಕ್‌ ಆಗಿ ಟಿವಿ ಸ್ಕ್ರೀನ್‌ನ ಮೇಲೆ ಬ್ರೈಟ್‌ನೆಸ್‌ ಹೆಚ್ಚು ಕಡಿಮೆ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೆ ಇದು ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಫೀಚರ್ಸ್‌ ಹೊಂದಿದ್ದು, ಬಳಕೆದಾರರ ಟಿವಿಯ ಎಲ್ಲಾ ಮೂಲೆಗಳಿಂದ ಸೌಂಡ್‌ ಅನ್ನು ಟ್ರ್ಯಾಕ್ ಮಾಡಲಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ದಿ ಫ್ರೇಮ್‌ ಟಿವಿಯ ಮತ್ತೊಂದು ವಿಶೇಷತೆ ಎಂದರೆ ಟಿವಿಯನ್ನು ಕಲಾಕೃತಿಯನ್ನಾಗಿ ಪರಿವರ್ತಿಸುವ ಆರ್ಟ್ ಮೋಡ್ ಒಳಗೊಂಡಿರುವುದು. ಜಾಗತಿಕವಾಗಿ 1,600ಕಲಾಕೃತಿಗಳ ಲೈಬ್ರರಿಯಿಂದ ಭಾರತೀಯ ಜಾನಪದ ಕಲೆಗಳಿಂದ ಟಿವಿಯಲ್ಲಿ ಏನನ್ನು ಪ್ರದರ್ಶಿಸಲಾಗುತ್ತದೆ ಎಂಬುದನ್ನು ಆಯ್ಕೆ ಮಾಡಬಹುದು. ಅಲ್ಲದೆ ತಮ್ಮ ಮನೆಯವರ ಭಾವಚಿತ್ರಗಳು ಮತ್ತು ವೈಯಕ್ತಿಕ ಫೋಟೋಗಳನ್ನು ಮೈ ಸ್ಟೋರೇಜ್‌ಗೆ ಅಪ್‌ಲೋಡ್ ಮಾಡುವ ಮೂಲಕ ಫ್ರೇಮ್ ಟಿವಿಯಲ್ಲಿ ಪ್ಲೇ ಮಾಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ ದಿ ಫ್ರೇಮ್‌ ಟಿವಿ ಹೊಸ ಆವೃತ್ತಿಯು 43-ಇಂಚಿನ ರೂಪಾಂತರದಲ್ಲಿ ಲಭ್ಯವಿದೆ. ಭಾರತದಲ್ಲಿ ಇದರ ಬೆಲೆ 61,990ರೂ. ಆಗಿದೆ. ಇದರ 50 ಇಂಚಿನ ರೂಪಾಂತರವು 73,990ರೂ. ಬೆಲೆ ಹೊಂದಿದೆ. ಅಲ್ಲದೆ ಇದರ 55 ಇಂಚಿನ ರೂಪಾಂತರವು 91,990ರೂ ಬೆಲೆಯಲ್ಲಿ ದೊರೆಯಲಿದೆ. ಇವುಗಳನ್ನು ಸ್ಯಾಮ್‌ಸಂಗ್‌.ಕಾಮ್‌, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಪ್ರಮುಖ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.

ಆಫರ್‌ ಏನಿದೆ?

ಆಫರ್‌ ಏನಿದೆ?

ಇನ್ನು ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ದಿ ಫ್ರೇಮ್‌ ಟಿವಿಯನ್ನು ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ 20% ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಇದಲ್ಲದೆ ದಿ ಫ್ರೇಮ್‌ ಟಿವಿ ಖರೀದಿಸುವ ಗ್ರಾಹಕರು ಹೊಸ ದಿ ಫ್ರೇಮ್‌ ಟಿವಿ ಮಾದರಿಯೊಂದಿಗೆ 7,690ರೂ.ವರೆಗಿನ ಉಚಿತ ಬೆಜೆಲ್ ಅನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ 75 ಇಂಚಿನ ಮಾದರಿಯನ್ನು ಖರೀದಿಸಿದರೆ 21,490ರೂ. ಮೌಲ್ಯದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್‌ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Samsung has introduced The Frame 2022 smart TVs in India: Price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X