ಮಧ್ಯಮ ಬೆಲೆಯಲ್ಲಿ ಸ್ಯಾಮ್ ಸಂಗ್ ನಿಂದ ಡ್ಯುಯಲ್ ಕ್ಯಾಮೆರಾ ಫೋನ್ ಲಾಂಚ್

Written By: Lekhaka

ಸ್ಯಾಮ್ ಸಂಗ್ ಥೈಲಾಂಡಿನಲ್ಲಿ ಮತ್ತೊಂದು ಡ್ಯುಯಲ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಇದೇ ಗ್ಯಾಲೆಕ್ಸಿ J7 ಪ್ಲಸ್. ಸ್ಯಾಮ್ ಸಂಗ್ ನಲ್ಲಿ ಗ್ಯಾಲೆಕ್ಸಿ ನೋಟ್ 8 ಬಿಟ್ಟರೇ ಡ್ಯುಯಲ್ ಕ್ಯಾಮೆರಾ ಹೊಂದಿರುವ ಎರಡನೇ ಹಾಂಡ್ ಸೆಟ್ ಇದಾಗಿದೆ.

ಮಧ್ಯಮ ಬೆಲೆಯಲ್ಲಿ ಸ್ಯಾಮ್ ಸಂಗ್ ನಿಂದ ಡ್ಯುಯಲ್ ಕ್ಯಾಮೆರಾ ಫೋನ್ ಲಾಂಚ್

ಇದೊಂದು ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಆಗಿದ್ದು, ರೂ. 25,000ದ ಅಸುಪಾಸಿನಲ್ಲಿ ದೊರೆಯಲಿದೆ. ಈಗಾಗಲೇ ಥೈಲಾಂಡಿನಲ್ಲಿ ಪ್ರೀ ಬುಕಿಂಗ್ ಸಹ ಶುರುವಾಗಿದೆ. ಇದನ್ನು ಪ್ರೀ ಬುಕ್ ಮಾಡಿದರೆ ಸ್ಯಾಮ್ ಸಂಗ್ ಬ್ಲೂಟೂಟ್ ಹೆಡ್ ಸೆಟ್ ಉಚಿತವಾಗಿ ದೊರೆಯುತ್ತಿದೆ. ಆದರೆ ಇನ್ನು ಭಾರತದಲ್ಲಿ ಲಾಂಚ್ ಆಗಿಲ್ಲ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಸ್ಮಾರ್ಟ್ ಫೋನ್ 5.5 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದ್ದು, ಸುಪರ್ ಅಮೊಲೈಡ್ ಡಿಸ್ ಪ್ಲೇ ಇದಾಗಿದೆ. ಮಿಡಿಯಾ ಟೆಕ್ ಪ್ರೋಸೆಸರ್ ಕಾಣಬಹುದಾಗಿದ್ದು, 4GB RAM, 32GB ಇಂಟರ್ ನಲ್ ಮೆಮೊರಿ ಯನ್ನು ನೀಡಲಾಗಿದೆ. ಅಲ್ಲದೇ ಕಾರ್ಡ್ ಹಾಕಿಕೊಂಡು 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಐಫೋನ್ 8 ಬಿಡುಗಡೆಯಂದೆ ಸ್ಯಾಮ್‌ಸಂಗ್‌ನಿಂದ ಮತ್ತೊಂದು ಟಾಪ್ ಎಂಡ್ ಫೋನ್ ಲಾಂಚ್..!!

ಈ ಫೋನಿನ ಹಿಂಭಾಗದಲ್ಲಿ 13+5MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ LED ಫ್ಲಾಷ್ ಸಹ ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದೆ. ಅದಲ್ಲೂ LED ಫ್ಲಾಷ ಇದೆ.

ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ನಲ್ಲಿ 3000mAh ಬ್ಯಾಟರಿಯನ್ನು ಕಾಣಬಹುದು. ಅಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದಲ್ಲಿ ನೀಡಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿದೆ.

Read more about:
English summary
The Samsung Galaxy J7 Plus's rear dual camera setup is comprised of a 13MP and a 5MP sensor.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot