ಸ್ಯಾಮ್‌ಸಂಗ್‌ ಸಂಸ್ಥೆಯಿಂದ ಒಡಿಸ್ಸಿ G9 ಮತ್ತು G7 ಗೇಮಿಂಗ್ ಮಾನಿಟರ್‌ ಬಿಡುಗಡೆ!

|

ದಕ್ಷಿಣ ಕೋರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌, ಮಾನಿಟರ್‌ ವಲಯದಲ್ಲೂ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಒಡಿಸ್ಸಿ G9 ಮತ್ತು G7 ಗೇಮಿಂಗ್ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಗೇಮಿಂಗ್ ಮಾನಿಟರ್‌ಗಳು ಸ್ಲಿಮ್ ಬೆಜೆಲ್ಸ್‌ ಮತ್ತು 240Hz ರಿಫ್ರೆಶ್ ರೇಟ್‌ ಹೊಂದಿರುವ ವಿಎ ಪ್ಯಾನಲ್ ಅನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಗೇಮಿಂಗ್ ಅನುಭವವನ್ನು ಹೆಚ್ಚಿಸಲು ಒಡಿಸ್ಸಿ G9 ಮತ್ತು ಒಡಿಸ್ಸಿ G7 1ms (GtG) ಪ್ರತಿಕ್ರಿಯೆ ಸಮಯವನ್ನು ಹೊಂದಿವೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಒಡಿಸ್ಸಿ G9 ಮತ್ತು G7 ಗೇಮಿಂಗ್ ಮಾನಿಟರ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಒಡಿಸ್ಸಿ G9 ಗೇಮಿಂಗ್‌ ಮಾನಿಟರ್‌ 49 ಇಂಚಿನೊಂದಿಗೆ ಬರುತ್ತದೆ ಮತ್ತು ಒಡಿಸ್ಸಿ G 7 32 ಇಂಚು ಮತ್ತು 27 ಇಂಚಿನ ಎರಡು ಆಯ್ಕೆಗಳಲ್ಲಿ ಲಭ್ಯವಿದೆ. ಈ ಎರಡು ಮಾನಿಟರ್‌ಗಳು ಇದೇ ಡಿಸೆಂಬರ್ 31 ರಿಂದ ಮಾರಾಟ ಪ್ರಾರಂಭವಾಗಲಿದ್ದು, ಭಾರತದ ಗ್ರಾಹಕರು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಮೂಲಕ ಮಾನಿಟರ್‌ಗಳನ್ನು ಖರೀದಿಸಬಹುದಾಗಿದೆ. ಇನ್ನುಳಿದಂತೆ ಈ ಮಾನಿಟರ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒಡಿಸ್ಸಿ G9 ಗೇಮಿಂಗ್‌ ಮಾನಿಟರ್‌

ಇನ್ನು ಒಡಿಸ್ಸಿ G9 ಗೇಮಿಂಗ್‌ ಮಾನಿಟರ್‌ ಡ್ಯುಯಲ್ ಕ್ವಾಡ್ ಹೈ-ಡೆಫಿನಿಷನ್ 5,120x1,440 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯದ 49 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 32:9 ರಚನೆಯ ಅನುಪಾತವನ್ನು ಹೊಂದಿದೆ. ತನ್ನ 1000R ವಕ್ರತೆಯೊಂದಿಗೆ, ಸ್ಯಾಮ್ಸಂಗ್ ಒಡಿಸ್ಸಿ G9 "ಹೆಚ್ಚು ಆಳವಾದ ಮತ್ತು ತಲ್ಲೀನಗೊಳಿಸುವ ಅನುಭವವನ್ನು" ನೀಡುತ್ತದೆ ಎಂದು ಹೇಳುತ್ತದೆ. ಇದರ ಬಾಗಿದ ವಿಎ ಪ್ಯಾನೆಲ್ 240Hz ರಿಫ್ರೆಶ್ ರೇಟ್‌, 1 ಎಂಎಸ್ ರೆಸ್ಪಾನ್ಸ್‌ ಟೈಂ ಮತ್ತು 1000 CD/ ಮೀ 2 ಗರಿಷ್ಠ ಹೊಳಪನ್ನು ಸಹ ಹೊಂದಿದೆ.

ಕ್ವಾಂಟಮ್

ಇದಲ್ಲದೆ ಎದ್ದುಕಾಣುವ ವೀಕ್ಷಣೆಯ ಅನುಭವವನ್ನು ನೀಡಲು ಮಾನಿಟರ್ ಕ್ವಾಂಟಮ್ ಡಾಟ್ ತಂತ್ರಜ್ಞಾನವನ್ನು ಎಚ್‌ಡಿಆರ್ 10 + ಗೆ ಬೆಂಬಲದೊಂದಿಗೆ ಪ್ಯಾಕ್ ಮಾಡುತ್ತದೆ. ಇದು 178 ಡಿಗ್ರಿ ಕೋನಗಳನ್ನು ನೀಡುತ್ತದೆ ಮತ್ತು ಎನ್ವಿಡಿಯಾ ಜಿ-ಸಿಂಕ್ ಬೆಂಬಲದೊಂದಿಗೆ ಬರುತ್ತದೆ. ಒಡಿಸ್ಸಿ G9 ಗೇಮಿಂಗ್ ಮಾನಿಟರ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಡಿಸ್‌ಪ್ಲೇ ಪೋರ್ಟ್‌ಗಳು, ಒಂದು ಎಚ್‌ಡಿಎಂಐ ಪೋರ್ಟ್, ಎರಡು ಯುಎಸ್‌ಬಿ ಪೋರ್ಟ್‌ಗಳು ಮತ್ತು ಹೆಡ್‌ಫೋನ್ ಜ್ಯಾಕ್ ಸೇರಿವೆ.

 ಒಡಿಸ್ಸಿ G7 ಗೇಮಿಂಗ್‌ ಮಾನಿಟರ್‌

ಇನ್ನು ಒಡಿಸ್ಸಿ G7 ಗೇಮಿಂಗ್‌ ಮಾನಿಟರ್‌ ಕ್ವಾಡ್-ಹೈ ಡೆಫಿನಿಷನ್ 2,560 × 1,440 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯದ 32 ಇಂಚು ಮತ್ತು 27 ಇಂಚಿನ ಡಿಸ್‌ಪ್ಲೇ ಆಯ್ಕೆಗಳನ್ನು ಹೊಂದಿದೆ. ಇದು ವಿಎ ಪ್ಯಾನೆಲ್‌ನೊಂದಿಗೆ ಬರುತ್ತದೆ. ಇನ್ನು ಈ ಮಾನಿಟರ್‌ ಡಿಸ್‌ಪ್ಲೇ 16:9 ರಚನೆಯ ಅನುಪಾತ, 240 Hz ರಿಫ್ರೆಶ್ ರೇಟ್‌ ಮತ್ತು ಎಚ್‌ಡಿಆರ್ 6 + ಅನ್ನು 600 ಸಿಡಿ / ಮೀ 2 ಗರಿಷ್ಠ ಹೊಳಪಿನಿಂದ ಪೂರಕವಾಗಿದೆ. ಹೆಚ್ಚುವರಿಯಾಗಿ, ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಒಡಿಸ್ಸಿ G7 ರ ಕ್ಯೂಎಲ್ಇಡಿ ಪರದೆಯು ಗೇಮಿಂಗ್ ಅನುಭವವನ್ನು ಹೆಚ್ಚಿಸಲು "ಅಕ್ಯೂರೇಟ್‌ ಕಲರ್ ರಿಪ್ರೊಡಕ್ಷನ್ಸ್'' ಅನ್ನು ಒದಗಿಸುತ್ತದೆ ಎಂದು ಸ್ಯಾಮ್ಸಂಗ್ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟ ಆಯ್ಕೆಯಲ್ಲಿ ಎರಡು ಎಚ್‌ಡಿಎಂಐ, ಯುಎಸ್‌ಬಿ ಮತ್ತು ಡಿಸ್‌ಪ್ಲೇ ಪೋರ್ಟ್‌ಗಳು ಮತ್ತು ಹೆಡ್‌ಫೋನ್ ಜ್ಯಾಕ್ ಇವೆ.

ಗೇಮಿಂಗ್‌ ಮಾನಿಟರ್‌

ಸದ್ಯ ಈ ಎರಡು ಗೇಮಿಂಗ್‌ ಮಾನಿಟರ್‌ಗಳು ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಡಿಸೆಂಬರ್‌ 31 ರಿಂದ ಮಾರಾಟವಾಲಿವೆ. ಇನ್ನು ಈ ಮಾನಿಟರ್‌ಗಳ ನಿಖರವಾದ ಬೆಲೆಯನ್ನು ಸ್ಯಾಮ್‌ಸಂಗ್‌ ಇನ್ನು ಬಹಿರಂಗ ಪಡಿಸಿಲ್ಲ. ಆದರೆ ಲಭ್ಯ ಮಾಹಿತಿಯ ಪ್ರಕಾರ ಒಡಿಸ್ಸಿ G9 ಮತ್ತು ಒಡಿಸ್ಸಿ G7 ಮಾನಿಟರ್‌ಗಳ ಬೆಲೆ 49,000 ರಿಂದ 1,99,000 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Samsung has finally launched the Odyssey G9 and G7 gaming monitors in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X