ಡಿಸ್ಕೌಂಟ್‌ನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸಲು ಒಳ್ಳೆಯ ಚಾನ್ಸ್!

|

ಗ್ರಾಹಕರು ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಶಾಪ್‌ಗಳಲ್ಲಿ ಮತ್ತು ಇ-ಕಾಮರ್ಸ್ ತಾಣಗಳಲ್ಲಿ ಬೆಸ್ಟ್ ಡಿಸ್ಕೌಂಟ್ ಹುಡುಕುತ್ತಾರೆ. ಅದಕ್ಕ ಪೂರಕ ಎಂಬಂತೆ ಇ-ಕಾಮರ್ಸ್‌ ತಾಣಗಳು ಸಹ ವಿಶೇಷ ಸೇಲ್ ಮೇಳಗಳನ್ನು ಆಯೋಜಿಸುತ್ತಿರುತ್ತಾರೆ. ಇದೀಗ ಫ್ಲಿಪ್‌ಕಾರ್ಟ್‌ ತಾಣವು ಸ್ಯಾಮ್‌ಸಂಗ್ ಕಾರ್ನಿವಲ್ ಸೇಲ್‌ ಮೇಳವನ್ನು ಆಯೋಜಿಸಿದ್ದು, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಡಿಸ್ಕೌಂಟ್‌ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ತಾಣವು ಸ್ಯಾಮ್‌ಸಂಗ್ ಕಾರ್ನಿವಲ್ ಸೇಲ್‌ ಮೇಳದವನ್ನು ಆಯೋಜಿಸಿದ್ದು, ಈ ಮೇಳದಲ್ಲಿ ಸ್ಯಾಮ್‌ಸಂಗ್ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್ ನೀಡುತ್ತಿದೆ. ಅಂದಹಾಗೇ ಈ ಮೇಳವು ಇದೇ ಡಿಸೆಂಬರ್ 12 ರಿಂದ ಆರಂಭವಾಗಿದ್ದು, ಇದೇ ಡಿ.14ರ ವರೆಗೂ ನಡೆಯಲಿದೆ. ಇನ್ನು ಮೇಳದಲ್ಲಿ ಇತ್ತೀಚಿನ ಗ್ಯಾಲ್ಯಾಕ್ಸಿ ಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ಲಭ್ಯವಾಗಲಿದೆ. ಇಎಮ್‌ಐ, ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯವಾಗಲಿವೆ. ಹಾಗಾದರೇ ಸ್ಯಾಮ್‌ಸಂಗ್ ಕಾರ್ನಿವಲ್ ಮೇಳದಲ್ಲಿ ಆಫರ್‌ ಪಡೆದ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50

ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡ 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. Exynos 9610 SoC ಪ್ರೊಸೆಸರ್‌ ಈ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದ್ದು, ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. 25MP+5MP+8MP ತ್ರಿವಳಿ ಕ್ಯಾಮೆರಾ ಹಾಗೂ 4,000mAh ಬ್ಯಾಟರಿ ಸಹ ಹೈಲೈಟ್ಸ್‌ಗಳಾಗಿವೆ. 4GB RAM ಮತ್ತು 64GB ವೇರಿಯಂಟ್ ಆಫರ್‌ನಲ್ಲಿ 14,999ರೂ.ಗಳಿಗೆ ಸಿಗಲಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A70

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A70

ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್ 2400 x 1080 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ 6GB ಸಾಮರ್ಥ್ಯದ RAM ಶಕ್ತಿಯನ್ನು ಪಡೆದಿದೆ. ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಜೊತೆಗೆ 4500mAh ಬ್ಯಾಟರಿ ಲೈಫ್ ಸಹ ಪಡೆದುಕೊಂಡಿದೆ. ಸೇಲ್‌ ಮೇಳದಲ್ಲಿ ಬೆಲೆಯು 23,990ರೂ. ಆಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A30s

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A30s

ಗ್ಯಾಲ್ಯಾಕ್ಸಿ A30s ಸ್ಮಾರ್ಟ್‌ಫೋನ್ 6.4 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, Exynos 7904 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು 25MP+5MP+8MP ಸೆನ್ಸಾರ್‌ನಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಜೊತೆಗೆ 4,000mAh ಬ್ಯಾಟರಿ ಸಹ ಪಡೆದಿದೆ. ಸದ್ಯ ಗ್ಯಾಲ್ಯಾಕ್ಸಿ A30s ಫೋನ್ 4GB RAM ಮತ್ತು 64GB ವೇರಿಯಂಟ್ ಡಿಸ್ಕೌಂಟ್‌ನಲ್ಲಿ 15,999ರೂ.ಗಳಿಗೆ ದೊರೆಯುತ್ತದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A20

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A20

ಈಗಾಗಲೇ ಬಜೆಟ್‌ ಬೆಲೆಯಲ್ಲಿ ಗುರುತಿಸಿಕೊಂಡಿರುವ ''ಗ್ಯಾಲ್ಯಾಕ್ಸಿ A20'' ಸ್ಮಾರ್ಟ್‌ಫೋನ್ ಈ ಸೇಲ್ ಮೇಳದಲ್ಲಿ 10,490ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಫೋನ್ 6.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, Exynos 7884 ಪ್ರೊಸೆಸರ್ ಪಡೆದಿದೆ. 13+5ಎಂಪಿ ಸೆನ್ಸಾರ್‌ನ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದ್ದು, 4,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ S10+

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ S10+

ಗ್ಯಾಲ್ಯಾಕ್ಸಿ S10+ ಸ್ಮಾರ್ಟ್‌ಫೋನ್ ಕಂಪನಿಯ ಫ್ಲ್ಯಾಗ್‌ಶಿಫ್ ಫೋನ್ ಆಗಿದ್ದು, ಸೇಲ್ ಮೇಳದಲ್ಲಿ ಡಿಸ್ಕೌಂಟ್ ಪಡೆದಿದೆ. 12GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆಯು 79,999ರೂ.ಗಳು ಆಗಿದೆ. ಇನ್ನು ಈ ಫೋನ್ 6.8 ಇಂಚಿನ ಡಿಸ್‌ಪ್ಲೇ, ನಾಲ್ಕು ರಿಯರ್ ಕ್ಯಾಮೆರಾ, ಸ್ಯಾಮ್‌ಸಂಗ್ Exynos 9825 ಪ್ರೊಸೆಸರ್, 4,300mAh ಬ್ಯಾಟರಿ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ.

ಇತರೆ ಸ್ಯಾಮ್‌ಸಂಗ್ ಫೋನ್‌ಗಳು

ಇತರೆ ಸ್ಯಾಮ್‌ಸಂಗ್ ಫೋನ್‌ಗಳು

ಇನ್ನುಳಿದಂತೆ ಸ್ಯಾಮ್‌ಸಂಗ್ ಕಾರ್ನಿವಲ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಕಂಪನಿಯ ಗ್ಯಾಲ್ಯಾಕ್ಸಿ A ಸರಣಿಯ ಫೋನ್‌ಗಳಿಗೆ ವಿಶೇಷ ರಿಯಾಯಿತಿ ಇದೆ. A70s, A30, A50s, A70s, A20s, ಸೇರಿದಂತೆ ಗ್ಯಾಲ್ಯಾಕ್ಸಿ s10, ಗ್ಯಾಲ್ಯಾಕ್ಸಿ S9 ಮತ್ತು ಗ್ಯಾಲ್ಯಾಕ್ಸಿ S10e ಸ್ಮಾರ್ಟ್‌ಫೋನ್‌ಗಳಿಗೂ ಡಿಸ್ಕೌಂಟ್ ಲಭ್ಯ ಇದೆ.

Most Read Articles
Best Mobiles in India

English summary
Samsung Carnival sale is live on Flipkart until Saturday, December 14. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X