Subscribe to Gizbot

ಗತಿಸಿದ ತಾತನೊಂದಿಗೆ ಸೆಲ್ಫಿ ತೆಗೆಸಿಕೊಂಡ ಪೋರನ ಹುಚ್ಚಾಟ

Written By:

ಸಾಮಾಜಿಕ ಮಾಧ್ಯಮದಲ್ಲಿ ತಾವು ಮಿಂಚಬೇಕೆಂದು ಜನರು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನವಿದೆ. ತನ್ನ ಮೃತ ತಾತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿರುವ ಈ ಬಾಲಕ ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಪೋಸ್ಟ್ ಮಾಡಿದ್ದಾನೆ. ಜಾನ್ ಒಸಾಮಾ ಹೆಸರಿನ ಬಾಲಕ ತನ್ನ ನಾಲಗೆಯನ್ನು ಹೊರಚಾಚಿ "ತಾತ ನಿಮಗೆ ವಿದಾಯ ತುಂಬಾ ಬೇಸರವಾಗುತ್ತಿದೆ" ಎಂಬ ಕ್ಯಾಪ್ಶನ್ ನೀಡಿ ಫೋಟೋವನ್ನು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.

ಓದಿರಿ: ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

ಗತಿಸಿದ ತಾತನೊಂದಿಗೆ ಸೆಲ್ಫಿ ತೆಗೆಸಿಕೊಂಡ ಪೋರನ ಹುಚ್ಚಾಟ

ಮಗುವಿನ ತುಂಟಾಟ ಎಂದು ಆತನ ಫೇಸ್‌ಬುಕ್ ಪುಟದಲ್ಲಿದ್ದ ಈ ಫೋಟೋವನ್ನು ತೆಗೆದಿದ್ದರೂ, ಪೋಸ್ಟ್‌ನ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಗುಲ್ಲನ್ನೆಬ್ಬಿಸುತ್ತಿದೆ. ಇನ್ನು ಪೋಲೀಸರು ಈ ಬಗ್ಗೆಯನ್ನು ತನಿಖೆ ನಡೆಸುತ್ತಿದ್ದು ಈ ಕೃತ್ಯವೆಸಗಲು ಕಾರಣವೇನು ಎಂಬುದನ್ನು ಪತ್ತೆಹಚ್ಚುತ್ತಿದ್ದಾರೆ.

ಗತಿಸಿದ ತಾತನೊಂದಿಗೆ ಸೆಲ್ಫಿ ತೆಗೆಸಿಕೊಂಡ ಪೋರನ ಹುಚ್ಚಾಟ

ಇನ್ನು ಇಂತಹುದೇ ಘಟನೆ ಶ್ರೀಲಂಕಾದಲ್ಲಿ ಕೂಡ ನಡೆದಿದ್ದು ಮೃತ ವ್ಯಕ್ತಿಯೊಂದಿಗೆ ಈತ ತೆಗೆಸಿಕೊಂಡ ಸೆಲ್ಫಿಯಿಂದಾಗಿ ಶ್ರೀಲಂಕಾ ಹಾಸ್ಯದ ಕೇಂದ್ರಬಿಂದುವಾಗಿತ್ತು. ಸಾಮಾಜಿಕ ತಾಣವನ್ನು ಈ ವ್ಯಕ್ತಿಗಳು ತಮ್ಮ ಮನರಂಜನೆಯ ತಾಣವನ್ನಾಗಿ ಮಾಡಿಕೊಂಡಿರುವುದರಿಂದ ಈ ಕುಚೇಷ್ಟೆಗಳು ಹೆಚ್ಚು ಹೆಚ್ಚಾಗಿ ಕಂಡುಬರುತ್ತಿವೆ.

English summary
Attention seekers can do weirdest possible things to get noticed. And, the latest fad seems to be getting clicked with a corpse. The bizarre idea this time struck a Saudi teen, who clicked a selfie with the body of his late grandfather. The picture has since gone viral on the social media.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot