ಪ್ರಿ ಇನ್‌ಸ್ಟಾಲ್ಡ್‌ ಅಪ್‌ಗಳಿಂದ ಲಕ್ಷಾಂತರ ಆಂಡ್ರಾಯ್ಡ್‌ ಫೋನ್‌ಗಳಿಗೆ ತೊಂದರೆ? ಏಕೆ?

|

ನೀವು ಹೊಸದಾಗಿ ಸ್ಮಾರ್ಟ್‌ಫೋನ್‌ ಖರೀದಿಸಿದಾಗ ಕೆಲವು ಅಪ್ಲಿಕೇಶನ್‌ಗಳು ಮೊದಲೇ ಇನ್‌ಸ್ಟಾಲ್‌ ಆಗಿರುವುದನ್ನು ಗಮನಿಸಬಹುದು. ಈ ರೀತಿ ಪ್ರಿ ಇನ್‌ಸ್ಟಾಲ್ಡ್‌ ಆಗಿರುವ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಉಪಯುಕ್ತವಾಗಿರುತ್ತವೆ. ಆದರೆ ಇದೀಗ ಪ್ರಿ ಇನ್‌ಸ್ಟಾಲ್ಡ್‌ ಅಪ್ಲಿಕೇಶನ್‌ಗಳಲ್ಲಿಯೂ ಕೂಡ ಭದ್ರತಾ ದೋಷ ಕಂಡುಬಂದಿದೆ. ಇದರಿಂದ ಲಕ್ಷಾಂತರ ಆಂಡ್ರಾಯ್ಡ್‌ ಡಿವೈಸ್‌ಗಳು ತೊಂದರೆಗೆ ಒಳಗಾಗಿವೆ ಎನ್ನಲಾಗಿದೆ. ಮೊದಲೇ ಸ್ಥಾಪಿತವಾದ ಅಪ್ಲಿಕೇಶನ್‌ಗಳಿಂದ ಸಾಕಷ್ಟು ಹಾನಿ ಉಂಟಾಗಿದೆ ಎಂದು ಮೈಕ್ರೋಸಾಫ್ಟ್‌ ಗುರುತಿಸಿದೆ.

ಡೌನ್‌ಲೋಡ್

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಮೊದಲೇ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳಿಂದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ತೊಂದರೆಯಾಗಿದೆ ಎಂದು ಮೈಕ್ರೋಸಾಫ್ಟ್‌ ಹೇಳಿದೆ. ಲಕ್ಷಾಂತರ ಆಂಡ್ರಾಯ್ಡ್‌ ಫೋನ್‌ಗಳು ಈ ರೀತಿಯ ತೊಂದರೆಯನ್ನು ಅನುಭವಿಸಿದೆ ಎಂದು ಹೇಳಲಾಗಿದೆ. ಸದ್ಯ ಈ ಅಪ್ಲಿಕೇಶನ್‌ಗಳಲ್ಲಿ ಕಂಡುಬಂದಿರುವ ದೋಷಗಳನ್ನು ಸರಿಪಡಿಸಲಾಗಿದೆ ಆದರೆ ಬಳಕೆದಾರರು ತಮ್ಮ ವೈಯಕ್ತಿಕ ಡೇಟಾ ಮತ್ತು ಡಿವೈಸ್‌ ಅನ್ನು ಸೆಕ್ಯುರ್‌ ಮಾಡಬೇಕಾದರೆ ಈ ಅಪ್ಲಿಕೇಶನ್‌ಗಳನ್ನು ಅಪ್ಡೇಟ್‌ ಮಾಡುವ ಅವಶ್ಯಕತೆಯಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಫೋನ್‌ನಲ್ಲಿ

ಸ್ಮಾರ್ಟ್‌ಫೋನ್‌ನಲ್ಲಿ ಮೊದಲೇ ಇನ್‌ಸ್ಟಾಲ್ಡ್‌ ಮಾಡಲಾಗಿರುವ ಅಪ್ಲಿಕೇಶನ್‌ಗಳನ್ನು ಇದೀಗ ನೀವು ಅಪ್ಡೇಟ್‌ ಮಾಡುವ ಅವಶ್ಯಕತೆಯಿದೆ. ಇಲ್ಲದಿದ್ದರೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಕೂಡ ತೊಂದರೆಗೆ ಒಳಗಾಗುವ ಸಾದ್ಯತೆಯಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾ ಹಾಗೂ ಗೌಪ್ಯತೆ ವಿವರಗಳು ಹ್ಯಾಕರ್‌ಗಳ ಪಾಲಾಗುವ ಸಾದ್ಯತೆಯಿದೆ ಎನ್ನಲಾಗಿದೆ. ಪ್ರಿ ಇನ್‌ಸ್ಟಾಲ್ಡ್‌ ಅಪ್ಲಿಕೇಶನ್‌ಗಳು ಎಂದು ಮೈ ಮರೆತರೆ ಆಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. ಹಾಗಾದ್ರೆ ಪ್ರಿ ಇನ್‌ಸ್ಟಾಲ್ಡ್‌ ಅಪ್ಲಿಕೇಶನ್‌ಗಳಿಂದ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಆಗಿರುವ ತೊಂದರೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪರಿಣಾಮ ಏನು?

ಪರಿಣಾಮ ಏನು?

ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಪ್ರಿ ಇನ್‌ಸ್ಟಾಲ್ಡ್‌ ಆಗಿರುವ ಅಪ್ಲಿಕೇಶನ್‌ಗಳು ದೋಷವನ್ನು ಹೊಂದಿವೆ ಎನ್ನಲಾಗಿದೆ. ಇದರಿಂದ ಬಳಕೆದಾರರ ಡೇಟಾ ಹಾಗೂ ಗೌಪ್ಯತೆಯ ವಿವರವನ್ನು ಹ್ಯಾಕರ್‌ಗಳು ಪ್ರವೇಶಿಸುವ ಸಾದ್ಯತೆ ಇದೆ. ಅಲ್ಲದೆ ಡಿವೈಸ್‌ನಲ್ಲಿರುವ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಸಿಸ್ಟಮ್ ಸವಲತ್ತುಗಳನ್ನು ಬಳಸಿಕೊಳ್ಳಲು ವೆಕ್ಟರ್ ಆಗಿ ಕೂಡ ಬಳಸಬಹುದಾಗಿದೆ. ಮೈಕ್ರೋಸಾಫ್ಟ್ 365 ಡಿಫೆಂಡರ್ ರಿಸರ್ಚ್ ಟೀಮ್, ಪ್ರಕಾರ ಈ ದಿನಗಳಲ್ಲಿ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಬರುವ ಪ್ರಿ-ಇನ್‌ಸ್ಟಾಲ್ಡ್‌ ಅಪ್ಲಿಕೇಶನ್‌ಗಳು ದೋಷವನ್ನು ಹೊಂದಿವೆ ಎನ್ನಲಾಗಿದೆ.

ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್ ಬ್ಲಾಗ್ ಪೋಸ್ಟ್ ಪ್ರಕಾರ, ಕಂಪನಿಯು MCE ಸಿಸ್ಟಮ್ಸ್ ಒಡೆತನದ ಮೊಬೈಲ್ ಫ್ರೇಮ್‌ವರ್ಕ್‌ನಲ್ಲಿ ಹೆಚ್ಚಿನ-ತೀವ್ರತೆಯ ಸಮಸ್ಯೆಗಳನ್ನು ಕಂಡುಹಿಡಿದಿದೆ. ಮೊದಲೇ ಇನ್‌ಸ್ಟಾಲ್ಡ್‌ ಮಾಡಿರುವ ಅಪ್ಲಿಕೇಶನ್‌ಗಳು ಅನೇಕ ಪ್ರಮುಖ ಮೊಬೈಲ್ ಸೇವಾ ಪೂರೈಕೆದಾರರಿಂದ ಬಳಸಲ್ಪಟ್ಟಿದೆ. ಇದು ಲಕ್ಷಾಂತರ ಬಳಕೆದಾರರನ್ನು ಸ್ಥಳೀಯ ಮತ್ತು ದೂರದಲ್ಲಿರುವ ಹ್ಯಾಕರ್‌ಗಳಿಗೆ ಪ್ರವೇಶವನ್ನು ನೀಡುವ ಸಾಧ್ಯತೆಯಿದೆ. ಈ ರೀತಿಯ ದುರ್ಬಲತೆಯ ಪ್ರಮಾಣ 10 ರಲ್ಲಿ 7.0 ರಿಂದ 8.9 ರವರೆಗಿನ ಭದ್ರತಾ ರೇಟಿಂಗ್‌ಗಳನ್ನು ಹೊಂದಿವೆ. ಸದ್ಯ ದೋಷವನ್ನು ಹೊಂದಿರುವ ಅಪ್ಲಿಕೇಶನ್‌ಗಳಿಗೆ ಅಪ್ಡೇಟ್‌ ನೀಡುವ ಮೂಲಕ ಮತ್ತು ದೋಷ ಪ್ಯಾಚ್‌ಗಳನ್ನು ಬಿಡುಗಡೆ ಮಾಡುವ ಮೂಲಕ MCE ಸಮಸ್ಯೆಯನ್ನು ಪರಿಹರಿಸಿದೆ.

ಬಳಕೆದಾರರು ಏನು ಮಾಡಬೇಕು?

ಬಳಕೆದಾರರು ಏನು ಮಾಡಬೇಕು?

ಬಳಕೆದಾರರು ತಮ್ಮ ಎಲ್ಲಾ ಅಪ್ಲಿಕೇಶನ್‌ಗಳನ್ನು ಅಪ್ಡೇಟ್‌ ಮಾಡಿಕೊಳ್ಳುವುದು ಸೂಕ್ತ. ಇತ್ತೀಚಿನ ಆವೃತ್ತಿಯ ಅಪ್ಲಿಕೇಶನ್‌ಗಳನ್ನು ಬಳಸಬೇಕು. ಸೆಲ್-ಡೇಟಾದಲ್ಲಿ ಅಪ್ಲಿಕೇಶನ್ ನವೀಕರಣಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸದ ಅಪ್ಲಿಕೇಶನ್‌ಗಳನ್ನು ವೈಫೈ ಮೂಲಕವಾದರೂ ಅಪ್ಡೇಟ್‌ ಮಾಡುವುದು ಅವಶ್ಯಕವಾಗಿದೆ. ಇಲ್ಲದೆ ಹೋದಲ್ಲಿ ನಿಮ್ಮ ಡಿವೈಸ್‌ಗಳಲ್ಲಿ ಹ್ಯಾಕರ್‌ಗಳು ಪ್ರವೇಶವನ್ನು ಪಡೆದುಕೊಳ್ಳುವುದು ಸುಲಭವಾಗಲಿದೆ.

ಅಪ್ಡೇಟ್‌

ಒಂದು ವೇಳೆ ನೀವು ಅಪ್ಲಿಕೇಶನ್‌ಗಳನ್ನು ಅಪ್ಡೇಟ್‌ ಮಾಡುತ್ತಾ ಬಂದಿದ್ದರೂ ಹ್ಯಾಕ್‌ ಆಗಿರುವ ಅನುಮಾನ ಬಂದರೆ ಅದನ್ನು ಬಗೆ ಹರಿಸಿಕೊಳ್ಳುವುದಕ್ಕೆ ಕೆಲವು ಕ್ರಮಗಳನ್ನು ಅನುಸರಿಸಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಫೋನ್‌ನಲ್ಲಿ ಕಾಣುವ ಕೆಲವು ಬದಲಾವಣೆಗಳನ್ನು ಗಮನಿಸಬೇಕಾಗುತ್ತದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ ಅಗತ್ಯಕ್ಕಿಂತ ವೇಗವಾಗೊ ಬ್ಯಾಟರಿ ಖಾಲಿಯಾಗುತ್ತಿದ್ದರೆ, ನೀವು ಇನ್‌ಸ್ಟಾಲ್‌ ಮಾಡದಿದ್ದರೂ ಕೆಲವು ಅಪ್ಲಿಕೇಶನ್‌ಗಳು ಇನ್‌ಸ್ಟಾಲ್‌ ಆಗಿದ್ದರೆ ಹ್ಯಾಕ್‌ ಆಗಿರುವ ಸಾದ್ಯತೆ ಇರುತ್ತದೆ. ಹಾಗಾದ್ರೆ ನಿಮ್ಮ ಫೋನ್‌ ಹ್ಯಾಕ್‌ ಆಗಿದೆಯಾ ಅಂತಾ ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಬ್ಯಾಟರಿ ವೇಗವಾಗಿ ಖಾಲಿಯಾಗಲಿದೆ?

ಬ್ಯಾಟರಿ ವೇಗವಾಗಿ ಖಾಲಿಯಾಗಲಿದೆ?

ನಿಮ್ಮ ಸ್ಮಾರ್ಟ್‌ಫೋನಿನ ಬ್ಯಾಟರಿ ಸಾಮಾನ್ಯ ಬಳಕೆಯಲ್ಲಿಯೂ ಕೂಡ ವೇಗವಾಗಿ ಖಾಲಿಯಾಗುತ್ತಿದ್ದರೆ ಹ್ಯಾಕ್‌ ಆಗಿರುವ ಸಾಧ್ಯತೆ ಇರುತ್ತದೆ. ಏಕೆಂದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈಗಾಗಲೇ ಯಾವುದೋ ಮಾಲ್‌ವೇರ್‌ ಪ್ರವೇಶಿಸಿರುವ ಸಾದ್ಯತೆ ಇರುತ್ತದೆ. ಅಲ್ಲದೆ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿನ ಡೇಟಾವನ್ನು ಕದಿಯುತ್ತಿರುವ ಸಾದ್ಯತೆ ಇರಲಿದೆ. ಅಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ ಹೆಚ್ಚು ಬಿಸಿಯಾಗುತ್ತಿದ್ದರೂ ಕೂಡ ಹ್ಯಾಕಿಂಗ್‌ ಸಾಧ್ಯತೆ ಇರಲಿದೆ. ಇಂತಹ ಸನ್ನಿವೇಶದಲ್ಲಿ ನೀವು ಬ್ಯಾಕ್‌ಗ್ರೌಂಡ್‌ನಲ್ಲಿ ಯಾವೆಲ್ಲಾ ಅಪ್ಲಿಕೇಶನ್‌ಗಳು ರನ್‌ ಆಗುತ್ತಿವೆ ಅನ್ನೊದನ್ನ ಗಮನಿಸಬೇಕು.

ಅಪ್ಲಿಕೇಶನ್‌ಗಳ ಮೇಲೆ ಇರಲಿ ಗಮನ

ಅಪ್ಲಿಕೇಶನ್‌ಗಳ ಮೇಲೆ ಇರಲಿ ಗಮನ

ಸ್ಮಾರ್ಟ್‌ಫೋನ್‌ ಬಳಕೆದಾರರು ಸಾಮಾನ್ಯವಾಗಿ ತಮ್ಮ ಡಿವೈಸ್‌ನಲ್ಲಿ ಯಾವೆಲ್ಲಾ ಅಪ್ಲಿಕೇಶನ್‌ಗಳು ಡೌನ್‌ಲೋಡ್‌ ಆಗಿವೆ ಅನ್ನೊದರ ಬಗ್ಗೆ ಯೋಚಿಸುವುದಿಲ್ಲ. ಇದು ಬದಲಾಗಬೇಕು, ಏಕೆಂದರೆ ನಿಮಗೆ ತಿಳಿಯದೆ ಕೆಲವು ಅಪ್ಲಿಕೇಶನ್‌ಗಳು ಡೌನ್‌ಲೋಡ್‌ ಆಗಿರುತ್ತವೆ. ಹೀಗೆ ಡೌನ್‌ಲೋಡ್‌ ಆಗಿರುವ ಅಪ್ಲಿಕೇಶನ್‌ಗಳು ದುರುದ್ದೇಶಪೂರಿತ ಅಪ್ಲಿಕೇಶನ್‌ ಆಗಿರುವ ಸಾದ್ಯತೆ ಉಂಟೂ. ಇಂತಹ ಸಮಯದಲ್ಲಿ ಈ ಮಾದರಿಯ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡುವುದು ಸೂಕ್ತ.

ಸ್ಮಾರ್ಟ್‌ಫೋನ್‌ ವೇಗ ಕಡಿಮೆ ಆಗುವುದು

ಸ್ಮಾರ್ಟ್‌ಫೋನ್‌ ವೇಗ ಕಡಿಮೆ ಆಗುವುದು

ಇದಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಣೆಯ ವೇಗದಲ್ಲಿ ನಿಧಾನವಾಗಿದ್ದರೆ ಯೋಚಿಸುವುದು ಸೂಕ್ತ. ಏಕೆಂದರೆ ನಿಮ್ಮ ಫೋನ್‌ ನಿಧಾನವಾಗಿ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ಸಂಪನ್ಮೂಲಗಳನ್ನು ಮತ್ತು ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಹ್ಯಾಕರ್‌ಗಳ ಪ್ರವೇಶಿಸಿರುವ ಅವಕಾಶವಿರುತ್ತದೆ.

ಫೋನ್ ಆಪರೇಟಿಂಗ್ ಅಸ್ತವ್ಯಸ್ತ

ಫೋನ್ ಆಪರೇಟಿಂಗ್ ಅಸ್ತವ್ಯಸ್ತ

ನಿಮ್ಮ ಸ್ಮಾರ್ಟ್‌ಫೋನ್ ಬಳಸುವಾಗ ಸಡನ್‌ ಆಗಿ ಹ್ಯಾಕ್‌ ಆಗುವುದು. ನೀವು ಅಪ್ಲಿಕೇಶನ್‌ ತೆರೆಯುವ ಮುನ್ನವೇ ಇನ್ಯಾವುದೋ ಅಪ್ಲಿಕೇಶನ್‌ ತೆರೆಯುವದು ನಡೆಯುತ್ತಿದ್ದರೆ ನಿಮ್ಮ ಡಿವೈಸ್‌ನಲ್ಲಿ ದೋಷವಿದೆಯೆಂದು ಅರ್ಥ. ಅಲ್ಲದೆ ನೀವು ತೆರೆಯುವ ಸೈಟ್‌ಗಳು ಸಾಮಾನ್ಯವಾಗಿ ಕಾಣುವುದಕ್ಕಿಂತ ಭಿನ್ನವಾಗಿ ಕಾಣುತ್ತವೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ಡಿವೈಸ್‌ಗಳನ್ನು ಅಪ್‌ಗ್ರೇಡ್‌ ಮಾಡುವುದು ಒಳ್ಳೆಯ ನಿರ್ಧಾರವಾಗಲಿದೆ.

Best Mobiles in India

English summary
Security Flaw in Pre-installed Apps on Millions of Android Devices

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X