ನಿಮ್ಮ ಫೋನಿನಲ್ಲಿ ಆಂಟಿವೈರಸ್ ಆಪ್ ಇದ್ದರೆ ಈ ಶಾಕಿಂಗ್ ರಿಪೋರ್ಟ್ ನೋಡಿ!

  |

  ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ನೀವು ಆಂಟಿವೈರಸ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದರೆ, ನೀವು ಇನ್‌ಸ್ಟಾಲ್ ಮಾಡಿಕೊಂಡಿರುವ ಅಪ್ಲಿಕೇಶನ್ ಪ್ರಸಿದ್ಧ ಭದ್ರತಾ ಕಂಪನಿಯಿಂದ ಅಭಿವೃದ್ದಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.ಏಕೆಂದರೆ, ಇದೀಗ ನೀವು ಹೊಂದಿರುವ ಉಚಿತ ಆಂಟಿವೈರಸ್ ನಕಲಿ ಅಪ್ಲಿಕೇಶನ್ ಆಗಿರಬಹುದು ಅಥವಾ ಮಾಲ್ವೇರ್ ಆಗಿರಬಹುದು.

  ನಿಮ್ಮ ಫೋನಿನಲ್ಲಿ ಆಂಟಿವೈರಸ್ ಆಪ್ ಇದ್ದರೆ ಈ ಶಾಕಿಂಗ್ ರಿಪೋರ್ಟ್ ನೋಡಿ!

  ಹೌದು, ಇತ್ತೀಚಿನ ವರದಿಯೊಂದು ಒಂದು ಶಾಕಿಂಗ್ ರಿಪೋರ್ಟ್ ನೀಡಿದ್ದು, ಆಂಡ್ರಾಯ್ಡ್ ಬಳಕೆದಾರರು ಹೊಂದಿರುವ ಬಹುತೇಕ ಆಪ್‌ಗಳು ನಕಲಿ ಅಥವಾ ಮಾಲ್ವೇರ್ ಹೊಂದಿರುವ ಆಪ್‌ಗಳಾಗಿವೆ ಎಂದು ತಿಳಿಸಿದೆ. ಹೆಚ್ಚು ಬಳಕೆಯ ಆಂಡ್ರಾಯ್ಡ್ ಫೋನ್‌ಗಳಲ್ಲಿ ಬಳಸುತ್ತಿರುವ ಮೂರು ಆಂಟಿವೈರಸ್ ಆಪ್‌ಗಳಲ್ಲಿ ಎರಡು ಆಪ್‌ಗಳು ನಕಲಿ ಆಪ್‌ಗಳಾಗಿವೆ ಎಂದು ತಿಳಿಸಿದೆ.

  ಆಂಟಿವೈರಸ್ ಅಪ್ಲಿಕೇಶನ್ಗಳು ಸ್ಮಾರ್ಟ್ಫೋನ್‌ಗಳ ಮೊದಲ ಭದ್ರತಾ ಮಾರ್ಗವಾಗಿವೆ. ಆದರೆ, ಬಹುತೇಕ ಆಂಡ್ರಾಯ್ಡ್ ಆಂಟಿವೈರಸ್ ಆಪ್‌ಗಳು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳಾಗಿವೆ ಎಂದು ಆಸ್ಟ್ರಿಲಿಯಾದ ಸೆಕ್ಯುರಿಟಿ ಕಂಪೆನಿ ರಿಪೋರ್ಟ್ ನೀಡಿದೆ. ಹಾಗಾದರೆ, ಏನಿದು ಶಾಕಿಂಗ್ ರಿಪೋರ್ಟ್?, ವರದಿಯಲ್ಲಿರುವ ಅಂಶಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮೂರನೇ ಎರಡರಷ್ಟು ಆಪ್‌ಗಳು ನಕಲಿ

  ಆಸ್ಟ್ರಿಯನ್ ಆಂಟಿವೈರಸ್ ಟೆಸ್ಟಿಂಗ್ ಕಂಪನಿಯಾದ 'AV- ಕಂಪೆರೆಟಿವ್ಸ್' ಒಂದು ಅಧ್ಯಯನದ ಮೂಲಕ ಶಾಕಿಂಗ್ ರಿಪೋರ್ಟ ಒಂದನ್ನು ಪ್ರಕಟಿಸಿದೆ. 'AV- ಕಂಪೆರೆಟಿವ್ಸ್ ವಿಶ್ಲೇಷಣೆಯ ಪ್ರಕಾರ, ಪ್ಲೇ ಸ್ಟೋರ್‌ನಲ್ಲಿರುವ ಮೂರನೇ ಎರಡರಷ್ಟು ಆಂಟಿವೈರಸ್ ಆಪ್‌ಗಳು ಮಾಲ್ವೇರ್ ಅಥವಾ ನಕಲಿಯಾಗಿವೆ. ಅಂದರೆ ಬಹುತೇಕ ಆಪ್‌ಗಳು ಕೆಲಸ ಮಾಡದೇ ಸೋಗುಹಾಕುತ್ತಿವೆ.

  ಸ್ಥಾಪನೆ ಪರೀಕ್ಷೆಯಲ್ಲಿ ನಿಜ ಬಣ್ಣ ಬಯಲು

  AV- ಕಂಪೆರೆಟಿವ್ಸ್ ಕಂಪೆನಿ ಆಂಟಿವೈರಸ್ ಆಪ್‌ಗಳ ಬಗ್ಗೆ ಪರೀಕ್ಷೆ ನಡೆಸಿದ್ದು, ಈ ಪರೀಕ್ಷೆಯಲ್ಲಿ ಕಂಪನಿಯು ಪ್ರತಿ ಅಪ್ಲಿಕೇಶನ್ ಅನ್ನು ಪ್ರತ್ಯೇಕ ಸಾಧನದಲ್ಲಿ ಸ್ಥಾಪಿಸಿ ಈ ರಿಪೋರ್ಟ್ ತಯಾರಿಸಿದೆ. ಸುಮಾರು 250 ಆಂಟಿವೈರಸ್ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಿರುವ ಕಂಪೆನಿ, ಒಟ್ಟು 250 ಆಪ್‌ಗಳಲ್ಲಿ ಕೇವಲ 80 ಆಪ್‌ಗಳು ಮಾತ್ರ ಸೂಕ್ತ ರಕ್ಷಣೆ ನೀಡಿವೆ ಎಂದು ತಿಳಿಸಿದೆ.

  ಕೆಲಸವನ್ನೇ ಆಡುತ್ತಿಲ್ಲ ಆಪ್‌ಗಳು

  AV- ಕಂಪೆರೆಟಿವ್ಸ್ ಕಂಪೆನಿ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದ ಪ್ರಮುಖ ಅಂಶವೆಂದರೆ, ಹೆಚ್ಚಿನ ಆಂಡ್ರಾಯ್ಡ್ ಆಂಟಿವೈರಸ್ ಅಪ್ಲಿಕೇಶನ್‌ಗಳು ಭಧ್ರತೆ ವಿಭಾಗದಲ್ಲಿ ಬಹುತೇಕ ವಿಫಲವಾಗಿವೆ. ಈ ಪರೀಕ್ಷೆಗಳಲ್ಲಿ ಕನಿಷ್ಠ 30% ರಷ್ಟು ಸಹ ಕೆಲಸ ನಿರ್ವಹಿಸದ ಶೇ.90 ರಷ್ಟು ಆಪ್‌ಗಳು ಇವೆ. ಇನ್ನು ಹಲವು ಆಪ್‌ಗಳಂತೂ ಮಾಲ್ವೇರ್ ಹೊಂದಿರುವ ಆಪ್‌ಗಳಾಗಿವೆ.

  ತೋರಿಕೆಗಷ್ಟೇ ಇವೆ ಹಲವು ಆಪ್‌ಗಳು

  ಹೆಚ್ಚು ಡೌನ್‌ಲೋಡ್ ಆಗಿರುವ ಬಹುತೇಕ ಆಂಟಿವೈರಸ್ ಆಪ್‌ಗಳು ಕೇವಲ ತೋರಿಕಗಷ್ಟೇ ಇವೆ. ನೀವು ಡೌನ್‌ಲೋಡ್ ಮಾಡಿರುವ ಆಂಟಿವೈರಸ್ ಕೆಲಸ ಮಾಡುತ್ತಿದೆ ಎಂದು ತಿಳಿದಿದ್ದರೆ ಅದು ಮೂರ್ಖತನ.ಏಕೆಂದರೆ, ಬಹುತೇಕ ಆಂಟಿವೈರಸ್ ಆಪ್‌ಗಳು ಮಾಲ್ವೇರ್ ಅನ್ನು ಕಂಡುಹಿಡಿಯುವ ರೀತಿ ನಾಟಕವಾಡುತ್ತವೆ. ಆದರೆ, ವಾಸ್ತವವಾಗಿ ಆ ಕೆಲಸವನ್ನೇ ಮಾಡುವುದಿಲ್ಲ.

  ಜಾಹಿರಾತು ನೀಡುವ ಆಪ್‌ಗಳೇ ಹೆಚ್ಚು!

  AV- ಕಂಪೆರೆಟಿವ್ಸ್ ಕಂಪೆನಿ ನಡೆಸಿರುವ ಈ ವರದಿಯಲ್ಲಿ ನಕಲಿ ಆಂಟಿವೈರಸ್ ಆಪ್‌ಗಳು ಕೇವಲ ಜಾಹಿರಾತುವಿಗಾಗಿ ಕೆಲಸ ಮಾಡುತ್ತಿವೆ ಎಂದು ತಿಳಿದುಬಂದಿದೆ. ವೈರಸ್ ಬೆದರಿಕೆಗಳನ್ನು ಪತ್ತೆಹಚ್ಚುವ ಬದಲು ಕೇವಲ ಜಾಹೀರಾತುಗಳನ್ನು ತೋರಿಸಲು ಹಲವು ಆಪ್‌ಗಳಿವೆ. ಆದಾಯದ ಗುರಿ ಹೊಂದಿರುವ ಇವುಗಳು ಭದ್ರತೆ ಮೇಲೆ ಗಮನಹರಿಸುವುದಿಲ್ಲ ಎಂದು ತಿಳಿದುಬಂದಿದೆ.

  ಯಾವ ಆಪ್‌ಗಳು ಪರೀಕ್ಷೆಯಲ್ಲಿ ಪಾಸ್!

  ಪಾವತಿಸಬೇಕಾದ ಭದ್ರತಾ ಕಂಪನಿಗಳ ಆಪ್‌ಗಳು ನಿಜವಾದ ಕೆಲಸ ಮಾಡುತ್ತಿವೆ. ಕ್ಯಾಸ್ಪರಸ್ಕಿ, ಎವಿಜಿ, ಮ್ಯಾಕ್ಅಫೀ, ಕ್ವಿಕ್ಹೀಲ್, ಮತ್ತು ಸಿಮ್ಯಾಂಟೆಕ್‌ನಂತಹ ಪ್ರಮುಖ ಕಂಪನಿಗಳ ಆಪ್‌ಗಳು ಮಾತ್ರ ಎವಿ-ಕಂಪೆರೆಟಿವ್ ಕಂಪೆನಿ ನಡೆಸಿದ ಪರೀಕ್ಷೆಯಲ್ಲಿ ಪಾಸ್ ಆಗಿವೆ. ಆದರೆ, ಉಚಿತವಾಗಿ ಲಭ್ಯವಿರುವ ಯಾವುದೇ ಅಪ್ಲಿಕೇಶನ್ ಕೆಲಸ ಮಾಡದಿರುವುದು ಕಂಡುಬಂದಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This means smartphone security products from companies like Kaspersky, AVG, McAfee, QuickHeal, and Symantec are still safe to use, although you may have to pay for them. To know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more