ಗೂಗಲ್‌ ಹೋಮ್‌ನ ಈ ಫೀಚರ್ಸ್‌ಗಳನ್ನ ನೀವು ಬಳಸಿದ್ದೀರಾ?

|

ಇದು ಡಿಜಟಲ್‌ ಯುಗ ಯಾವುದೇ ಮಾಹಿತಿ ಬೇಕಾದ್ರೂ ಕ್ಷಣಾರ್ಧದಲ್ಲಿ ಹುಡಕಿ ಕೊಡಬಲ್ಲ ಆಪ್‌ಗಳಿವೆ, ಯಾವುದೇ ಕೆಲಸವನ್ನ ಹೇಳಿದ್ರೂ ಮಾಡಿ ಮುಗಿಸಬಲ್ಲ ಹಲವಾರು ಸ್ಮಾರ್ಟ್‌ ಪ್ರಾಡಕ್ಟ್‌ಗಳಿವೆ. ಇವುಗಳಲ್ಲಿ ಗೂಗಲ್‌ ಹೋಮ್‌ ಸ್ಮಾರ್ಟ್‌ ಪ್ರಾಡಕ್ಟ್‌ ಕೂಡ ಒಂದಾಗಿದ್ದು, ಬಳಕೆದಾರರ ಆಜ್ಞೆಗಳನ್ನ ಪಾಲಿಸಬಲ್ಲ ಪ್ರಾಡಕ್ಟ್‌ ಆಗಿದೆ. ಸದ್ಯ ಗೂಗಲ್‌ನ ಹೋಮ್‌ ಸ್ಪೀಕರ್‌ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡ್ತಿದ್ದು. ಬಳಕೆದಾರರು ತಮ್ಮ ಆಜ್ಞೆಗಳನ್ನ ಪಾಲಿಸಲು ಈ ಸ್ಪೀಕರ್‌ ಅನ್ನ ಹೆಚ್ಚಾಗಿ ಉಪಯೋಗಿಸುತ್ತಾರೆ. ಆದರೆ ಬಳಕೆದಾರರ ಊಹೆಗೂ ಮೀರಿದ ಹಲವಾರು ಫೀಚರ್ಸ್‌ಗಳು ಈ ಸ್ಮಾರ್ಟ್‌ ಪ್ರಾಡಕ್ಟ್‌ ನಲ್ಲಿದೆ.

ಹೌದು

ಹೌದು, ಗೂಗಲ್‌ ಹೋಮ್‌ ಸ್ಮಾರ್ಟ್‌ ಪ್ರಾಡಕ್ಟ್‌ನಲ್ಲಿ ಬಳಕೆದಾರರು ಊಹಿಸದ ಕೆಲ ಫೀಚರ್ಸ್‌ಗಳಿದ್ದು ಇದು ಬಹಳ ಅತ್ಯುಪಯುಕ್ತವಾಗಿದೆ. ಹವಾಮಾನ ವರದಿಯಿಂದ ಹಿಡಿದು ಬಳಕೆದಾರರ ಹ್ಯಾಡ್ಸ್‌ಪ್ರಿಯಾಗಿ ಕೆಲಸ ಮಾಡಲು ಇದು ಸಹಾಯಕವಾಗಿದೆ. ಮನರಂಜನಾ ಸುದ್ದಿಯಿಂದ ಹಿಡಿದು ಪ್ರಸ್ತುತತೆಯ ಸುದ್ದಿಯ ತನಕ ಮಾಹಿತಿ ನೀಡಬಲ್ಲ ಗೂಗಲ್‌ಸ್ಮಾರ್ಟ್ ಹೋಮ್‌ ಪ್ರಾಡಕ್ಟ್‌ನಿಂದ ಇನ್ನು ಯಾವೆಲ್ಲಾ ರೀತಿಯ ಕಾರ್ಯಗಳನ್ನ ಮಾಡಿಸಬಹುದು ಅನ್ನೊದರ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಟೆಲ್‌ ಎ ಜೋಕ್‌

ಟೆಲ್‌ ಎ ಜೋಕ್‌

ಗೂಗಲ್‌ಹೋಮ್‌ ಸ್ಮಾರ್ಟ್‌ ಸ್ಪೀಕರ್‌ ಕೇವಲ ಸ್ಪೀಕರ್‌ ಸಿಸ್ಟಂ ಮಾತ್ರವಲ್ಲ. ಬದಲಿಗೆ ಬಳಕೆದಾರರ ಅವಶ್ಯಕತೆಯನ್ನ ಈಡೇರಿಸಬಲ್ಲ ಸ್ಮಾರ್ಟ್‌ ಪ್ರಾಡಕ್ಟ್‌. ಇದರಲ್ಲಿ ಇರುವ ಫೀಚರ್ಸ್‌ ಗಳು ಉತ್ತಮವಾಗಿದ್ದು, ಈ ಪ್ರಾಡಕ್ಟ್‌ನಲ್ಲಿ ಟೆಲ್‌ ಎ ಜೋಕ್‌ ಅನ್ನೊ ಫೀಚರ್ಸ್ ಇದೆ. ಇದರ ಮೂಲಕ " ಗೂಗಲ್, ನನಗೆ ಯಾವುದಾದರೂ ಜೋಕ್‌ ಹೇಳಿ" ಎಂದು ಹೇಳಿದರೆ ವಿವಿಧ ವಿಷಯಗಳ ಜೋಕ್‌ಗಳನ್ನ ಹೇಳುತ್ತದೆ. ಅಷ್ಟೇ ಅಲ್ಲ ಜೋಕ್‌ಗಳ ಮೂಲತತ್ವವನ್ನು ಸಹ ಬಳಕೆದಾರರಿಗೆ ತಿಳಿಸಕೊಡುವ ಫೀಚರ್ಸ್ ಅನ್ನ ಒಳಗೊಂಡಿದೆ. ಜೋಕ್‌ಗಳನ್ನ ಕೇಳುತ್ತಾ ಆ ಕ್ಷಣವನ್ನ ಆನಂದಮಯವಾಗಿಸಿಕೊಳ್ಳಲು ಈ ವೈಶಿಷ್ಟ್ಯವೂ ತುಂಬಾ ಉಪಯುಕ್ತವಾಗಿದೆ.

ಸಿಂಗ್‌

ಸಿಂಗ್‌

ಇನ್ನು ಈ ಪ್ರಾಡಕ್ಟ್‌ನಲ್ಲಿ ನೀವು ಸಿಂಗ್‌ ದ ಸಾಂಗ್‌ ಅಂತಾ ಹೇಳಿದ್ರೆ ಸಾಕು ನಿಮಗಿಷ್ಟವಾದ ಹಾಡುಗಳನ್ನ ಇದು ಪ್ಲೇ ಮಾಡಲಿದೆ. ಅಷ್ಟೇ ಅಲ್ಲ ನೀವು ಕೇಳಿದ ಹಾಡನ್ನು ಇದು ಹಾಡಲಿದೆ. ಸಂಗೀತದ ಮಾಧುರ್ಯವನ್ನ ನಿಮಗೆ ಪರಿಚಯಿಸಲಿದ್ದು, ಹಾಡಿನ ಸಂಗೀತದೊಂದಿಗೆ ಸಮಯ ಕಳೆಯಬೇಕು ಅನಿಸದಾಗ ಈ ಫೀಚರ್ಸ್‌ ಅನುಕೂಲವನ್ನ ಪಡೆದುಕೊಳ್ಳಬಹುದು.

ರನ್‌ ಗೇಮ್ಸ್‌

ರನ್‌ ಗೇಮ್ಸ್‌

ಈ ಸ್ಮಾರ್ಟ್ ಸ್ಪೀಕರ್‌ನಲ್ಲಿ ಕೆಲವು ಮಾದರಿಯ ಆಟಗಳನ್ನು ಆಡಲು ಅವಕಾಶವಿದೆ. ಅಂದರೆ ಈ ಸ್ಪೀಕರ್‌ನಲ್ಲಿನ ಅಕಿನೇಟರ್, ಅಂತಾಕ್ಷರಿ, ಸನಿಮಾಗೆ ಸಂಬಂದಿಸಿದ ರಸಪ್ರಶ್ನೆ, ಮಾದರಿಯ ಆಟಗಳನ್ನ ಇದರಲ್ಲಿ ಆಡಬಹುದಾಗಿದೆ. ಅಂದರೆ ನೀವು ಈ ಸ್ಪೀಕರ್‌ಗೆ ಆಜ್ಞೆ ಮಾಡಿದ್ರೆ ಸಾಕು ಆಟಗಾರರಿಗೆ ನೀವು ಆಯ್ಕೆ ಮಾಡಿದ ಆಟಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನ ಕೇಳುವುದಲ್ಲದೆ ಉತ್ತರ ಸರಿಯೋ ತಪ್ಪೋ ಅನ್ನೊದನ್ನ ತಿಳಿಸುತ್ತದೆ. ಆದರೆ ಈ ಆಟ ಆಡಬೇಕಾದರೆ ವೈ-ಫೈ ಅವಶ್ಯಕವಾಗಿರುತ್ತದೆ.

ಹೆಲ್ಪ್‌ಯೂ

ಹೆಲ್ಪ್‌ಯೂ

ಹೆಸರೇ ಹೇಳುವಂತೆ ಈ ಫೀಚರ್ಸ್‌ ಸಹಾಯವನ್ನ ಮಾಡುವುದಕ್ಕಾಗಿಯೇ ಇರುವ ಫೀಚರ್ಸ್‌ ಇದಾಗಿದೆ. ನಿಮಗೆ ಸಂಬಂಧಿಸಿದ ಪ್ರಶ್ನೆಗಳನ್ನ ಇದರಲ್ಲಿ ಕೇಳಿದ್ರೆ ಸೂಕ್ತ ಉತ್ತರಗಳನ್ನ ನೀಡುತ್ತದೆ. ಅಷ್ಟೇ ಯಾಕೆ ನೀವು ಯಾಕೆ ಒಂಟಿಯಾಗಿದ್ದೀರ, ನಿಮಗೆ ಕಾಡುತ್ತಿರುವ ನೋವುಗಳೇನು, ಹೀಗೆ ನಾನಾ ರೀತಿಯ ಪ್ರಶ್ನೆಗಳಿಗೆ ಉತ್ತರ ನಿಡುತ್ತಾ ಡೈರಿ ಮಾದರಿಯಲ್ಲಿ ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತದೆ. ಇನ್ನ ಈ ಫೀಚರ್ಸ್‌ ಸ್ವಯಂ-ಅರಿವಿನ ಸಾಮರ್ಥ್ಯ ಹೊಂದಿದ್ದು, ನಿಮ್ಮ ಗಂಭೀರವಾದ ವಿಚಾರಗಳನ್ನ ಸಹ ಗಣನೆಗೆ ತೆಗೆದುಕೊಳ್ಳುತ್ತದೆ.

ಶೆಡ್ಯೂಲ್ಡ್‌ ಆಕ್ಷನ್‌

ಶೆಡ್ಯೂಲ್ಡ್‌ ಆಕ್ಷನ್‌

ಇನ್ನು ಈ ಫೀಚರ್ಸ್‌ ಕೂಡ ಬಳಕೆದಾರರಿಗೆ ಅನುಕೂಲಕರವಾಗಿದ್ದು, ಅಲಾರಂ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ನೀವು ಯಾವ ಸಮಯವನ್ನ ಶೆಡ್ಯೂಲ್ಡ್‌ ಮಾಡಿರುತ್ತೀರೋ ಆ ಸಮಯಕ್ಕೆ ನಿಮ್ಮನ್ನ ಎಚ್ಚರಿಸುವ ಕಾರ್ಯ ಮಾಡುತ್ತದೆ. ಅಲ್ಲದೆ ನೀವು ಯಾಕೆ ಈ ಸಮಯವನ್ನ ಶೆಡ್ಯೂಲ್ಡ್‌ ಮಾಡಿದ್ದೀರಾ ಅನ್ನೊದನ್ನ ಸಹ ನೆನಪಿಸುತ್ತದೆ. ಉದಾಹರಣೆಗೆ ನೀವು ಬೆಳಿಗ್ಗೆ 6-30ಕ್ಕೆ ಸ್ನಾನ ಮಾಡಲು ನೆನಪಿಸು ಎಂದು ಹೇಳಿದ್ದರೆ ನಿಮ್ಮನ್ನ ಅದೇ ಸಮಯಕ್ಕೆ ಎಚ್ಚರಿಸುತ್ತದೆ. ಅಲ್ಲದೆ ನೀವು ಸಂಪರ್ಕ ನೀಡಿರುವ ಗೂಗಲ್‌ ಸ್ಮಾರ್ಟ್‌ ಡಿವೈಸ್‌ಗಳಿಗೆ ಸಂದೇಶ ರವಾನಿಸುತ್ತದೆ.

ಬ್ರೌಸರ್‌ ಹಿಸ್ಟರಿಯನ್ನ ಡಿಲಿಟ್‌ ಮಾಡುವುದು

ಬ್ರೌಸರ್‌ ಹಿಸ್ಟರಿಯನ್ನ ಡಿಲಿಟ್‌ ಮಾಡುವುದು

ಇನ್ನು ಈ ಸ್ಮಾರ್ಟ್‌ ಸ್ಪೀಕರ್‌ ಇತರೆ ವೈಶಿಷ್ಟ್ಯವೆಂದರೆ ನೀವು ಗೂಗಲ್‌ ಬ್ರೌಸರ್‌ನಲ್ಲಿ ಯಾವೆಲ್ಲಾ ವಿಚರಗಳನ್ನ ಸರ್ಚ್‌ ಮಾಡಿರುತ್ತೀರಾ ಅದನ್ನ ಡಿಲಿಟ್‌ ಮಾಡಲು ಸೂಚಿಸಿದ್ರೆ ಸಾಕು ಅದನ್ನ ಡಿಲಿಟ್‌ ಮಾಡಲಿದೆ. ಈ ಮೂಲಕ ಬಳಕೆದಾರರು ಹ್ಯಾಡ್ಸ ಪ್ರಿಯಾಗಿ ತನ್ನ ಕೆಲಸವನ್ನ ಕೇವಲ ಆಜ್ಞೆಗಳ ಮೂಲಕವೇ ಮಾಡಬಹುದಾಗಿದೆ. ಅಷ್ಟರ ಮಟ್ಟಿಗೆ ಈ ಫಿಚರ್ಸ್‌ಗಳು ಕೆಲಸ ಮಾಡಲಿದೆ.

Most Read Articles
Best Mobiles in India

English summary
The Google Home and its versions, such as the Google Home Mini, are one of the latest in a long line of Smart Home devices. The Google Home uses the Google Assistant to make almost everything hands-free for the user, with many standard commands like, "Okay Google, whats's the weather like?" and "Okay Google, what is the latest in Entertainment News?"

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more