ಮನೆಯಲ್ಲಿ ವೈಫೈ ನಿಧಾನವಾಗಿದೆಯೇ? ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು 8 ಟ್ರಿಕ್ಸ್ ಗಳು

By Gizbot Bureau
|

ಹೆಚ್ಚಿನ ಸ್ಪೀಡ್ ಇರುವ ಅಂತರ್ಜಾಲ ಕನೆಕ್ಷನ್ ಗಾಗಿ ಅತೀ ಹೆಚ್ಚು ಪಾವತಿ ಮಾಡಿದರೂ ಕೂಡ ನಿಮಗೆ ತೃಪ್ತಿಯಾಗುವ ರೀತಿಯಲ್ಲಿ ಇಂಟರ್ನೆಟ್ ವರ್ಕ್ ಆಗುತ್ತಿಲ್ಲವೇ? ಇಂತಹ ಸಮಾಧಾನಕರ ವೇಗ ಇಲ್ಲದೇ ಇರುವುದಕ್ಕೆ ಕಾರಣ ಹಲವಾರು ಇರಬಹುದು ಮತ್ತು ಅದಕ್ಕೆ ನಿಮ್ಮ ಸರ್ವೀಸ್ ಪ್ರೊವೈಡರ್ ಏನೂ ಮಾಡದೇ ಇರುವ ಸಾಧ್ಯತೆಯೂ ಇರುತ್ತದೆ. ಹಾರ್ಡ್ ವೇರ್ ನಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ವೈಫೈ ನೆಟ್ ವರ್ಕ್ ನ ಸ್ಪೀಡ್ ನ್ನು ಹೆಚ್ಚಿಸುವ ಕೆಲಸವನ್ನು ಕೆಲವೇ ಕೆಲವು ಮಂದಿ ಮಾಡುತ್ತಾರೆ.

ಮನೆಯಲ್ಲಿ ವೈಫೈ ನಿಧಾನವಾಗಿದೆಯೇ? ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು 8 ಟ್ರಿಕ್ಸ್ ಗಳು

ನಾವಿಲ್ಲಿ ಕೆಲವು ಟ್ರಿಕ್ಸ್ ಗಳನ್ನು ನಿಮಗಾಗಿ ತಿಳಿಸುತ್ತಿದ್ದೇವೆ ಮತ್ತು ಆ ಮೂಲಕ ನೀವು ನಿಮ್ಮ ವೈಫೈ ವೇಗವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

ವೈಫೈ ರೂಟರ್ ನ್ನು ಕಡೆಗಣಿಸಬೇಡಿ. ನೂತನ ಫರ್ಮ್ ವೇರ್ ಗೆ ನಿಮ್ಮ ವೈಫೈ ರೂಟರ್ ನ್ನು ಅಪ್ ಡೇಟ್ ಮಾಡಿಕೊಳ್ಳಿ.

2,4GHz ನ ಡುಯಲ್ ಬ್ಯಾಂಡ್ ರೂಟರ್ ನ ಬದಲಾಗಿ 5GHz ಫ್ರೀಕ್ವೆನ್ಸಿ ಇರುವ ರೂಟರ್ ನ್ನು ಆಯ್ಕೆ ಮಾಡಿಕೊಳ್ಳಿ. ಇದು ನಿಮಗೆ ಉತ್ತಮ ಸ್ಪೀಡ್ ನ್ನು ನೀಡುತ್ತದೆ.

ಹೆಚ್ಚಿನ ಕವರೇಜ್ ಮತ್ತು ಸ್ಪೀಡ್ ಗಾಗಿ ಮೆಶ್ ವೈಫೈ ನೆಟ್ ವರ್ಕ್ ಗೆ ಅಪ್ ಗ್ರೇಡ್ ಆಗಿ

ಗೋಡೆಗಳ ಸಮೀಪದಲ್ಲಿ ವೈಫೈ ರೂಟರ್ ನ್ನು ಇಡಬೇಡಿ. ಮನೆಯ ಯಾವ ಜಾಗದಲ್ಲಿ ರೂಟರ್ ನ್ನು ಇಡುತ್ತೀರಿ ಎಂಬುದರ ಮೇಲೆ ಇಂಟರ್ನೆಟ್ ಸ್ಪೀಡ್ ಆಧರಿಸಿರುತ್ತದೆ. ಗೋಡೆಗಳಿಂದ ಸ್ವಲ್ಪ ದೂರದಲ್ಲಿ ಮನೆಯ ಮಧ್ಯಭಾಗದಲ್ಲಿ ವೈಫೈ ರೂಟರ್ ನ್ನು ಫಿಕ್ಸ್ ಮಾಡಿಕೊಳ್ಳಿ. ಸಾಧ್ಯವಾದರೆ ರೂಟರ್ ನ್ನು ಎಲ್ಲೂ ನೇತುಹಾಕುವಂತೆ ಇಡಬೇಡಿ ಬದಲಾಗಿ ತೆರೆದ ಸ್ಥಳದಲ್ಲಿ ಇಟ್ಟುಕೊಳ್ಳಿ.ಇದು ಖಂಡಿತ ವೇಗದ ಮೇಲೆ ಪರಿಣಾಮ ಬೀರುತ್ತದೆ.

ನೆಟ್ ವರ್ಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ಕೆಲವು ಕ್ವಾಲಿಟಿ ಆಫ್ ಸರ್ವೀಸ್ ನ್ನು ಟ್ವೀಕ್ ಮಾಡುವ ಮೂಲಕ ನಿರ್ಧಿಷ್ಟ ಆಪ್ ಗಳಲ್ಲಿ ಬ್ಯಾಂಡ್ ವಿಡ್ತ್ ಕಂಟ್ರೋಲ್ ಮಾಡಿಕೊಳ್ಳುವುದರಿಂದಾಗಿ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಿಕೊಳ್ಳಬಹುದು.

ಹೊಸ ವೈಫೈ ರೂಟರ್ ಗೆ ಅಪ್ ಗ್ರೇಡ್ ಆಗುವುದನ್ನು ಮರೆಯಬೇಡಿ ಮತ್ತು ಆ ಮೂಲಕ ಹೊಸ ರೀತಿಯ ಇಂಟರ್ನೆಟ ಪ್ಲಾನ್ ಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂಬುದು ನೆನಪಿರಲಿ.

ಸ್ಪೀಡ್ ಹೆಚ್ಚಿಸಲು ಹೆಚ್ಚುವರಿ ವೈಫೈ ಆಂಟೆನಾಗಳನ್ನು ಬಳಕೆ ಮಾಡಬಹುದು ಮತ್ತು ದೊಡ್ಡ ಮನೆ ಮತ್ತು ಜಾಗವನ್ನು ಕವರ್ ಮಾಡುವುದಕ್ಕೆ ಇದು ನೆರವಾಗುತ್ತದೆ.

ಕಡಿಮೆ ಬೆಲೆಯ ರಿಪೀಟರ್ ಗಳನ್ನು ಮತ್ತು ಎಕ್ಸ್ ಟೆಂಡರ್ಸ್ ಗಳನ್ನು ಬಳಸಿ ವೈಫೈ ಸ್ಪೀಡ್ ಮತ್ತು ಕವರೇಜ್ ನ್ನು ದೊಡ್ಡ ಪ್ರದೇಶಗಳಲ್ಲಿ ಹೆಚ್ಚಿಸಿಕೊಳ್ಳಬಹುದು.

Best Mobiles in India

English summary
Slow Wi-Fi at home? 8 tricks you must know to boost internet speeds

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X