ಆಪಲ್‌, ಸ್ಯಾಮ್ಸಂಗ್‌ಗೆ ಸೆಡ್ಡು!!..ವಿಶ್ವ ದಿಗ್ಗಜನಾಗಲಿದೆ ಭಾರತದ ಈ ಮೊಬೈಲ್ ಕಂಪೆನಿ!!

Written By:

ಭಾರತದ ಯಾವುದೇ ಮೊಬೈಲ್ ಕಂಪೆನಿ ವಿಶ್ವದ ಹಾಗೂ ಚೀನಾದ ಮೊಬೈಲ್ ಕಂಪೆನಿಗಳ ನಡುವ ಪೈಪೋಟಿ ನೀಡಲು ಸಾಧ್ಯವೇ?. ಹೌದು, ಸಾಧ್ಯ ಎನ್ನುತ್ತಿದ್ದಾರೆ ಇಂಟೆಲ್‌ನ ಮಾಜಿ ಉದ್ಯೋಗಿ ಹಾಗೂ ಕ್ರಿಕೆಟ್ ದೇವರು ಸಚಿನ್ ಕೂಡ ಬಂಡವಾಳ ಹೂಡಿರುವ ಸ್ಮಾರ್ಟಾರ್ನ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆಯ ಮಹೇಶ್‌ ಲಿಂಗಾರೆಡ್ಡಿ.!!

ಜಾಗತಿಕ ಮಟ್ಟದ ಆಪಲ್‌, ಸ್ಯಾಮ್ಸಂಗ್‌ನಂತದಹ ದೇಶಿಯ ಮೊಬೈಲ್ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಾಧ್ಯವಿದೆ. ಸ್ಮಾರ್ಟಾರ್ನ್ ಕೂಡ, ಆಪಲ್‌ನಂತೆಯೇ ಕಾರ್ಯನಿರ್ವಹಿಸುತ್ತಿದ್ದು, ಡಿಜಿಟಲ್‌ ಸಾಧನಗಳ ತಯಾರಿಕಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ವಿನ್ಯಾಸದ ಪರಿಕಲ್ಪನೆ ಒದಗಿಸುತ್ತಿದೆ ಎಂದು ಹೇಳಿದ್ದಾರೆ.!!

ಭವಿಷ್ಯದಲ್ಲಿ ಸ್ಮಾರ್ಟಾರ್ನ್ ಮೊಬೈಲ್ ಕಂಪೆನಿ ಕೂಡ ವಿಶ್ವದ ಮೊಬೈಲ್ ದಿಗ್ಗಜ ಕಂಪೆನಿಗಳ ಸಾಲಿನಲ್ಲಿ ನಿಲ್ಲಲಿದೆ ಎಂದು ಅವರು ಹೇಳಿದ್ದು, ಅದಕ್ಕಾಗಿ ಹಲವು ಕಾರಣಗಳನ್ನು ಸಹ ನೀಡುತ್ತಾರೆ.!! ಹಾಗಾದರೆ, ಸ್ಮಾರ್ಟಾರ್ನ್ ಕಂಪೆನಿ ವಿಶ್ವಶ್ರೇಷ್ಟ ಮೊಬೈಲ್ ಕಂಪೆನಿಗಳನ್ನು ಮೀರಿಸಲಿದೆಯೇ? ಚೀನಾ ಕಂಪೆನಿಗಳನ್ನು ಮಣಿಸಲಿದೆಯೇ? ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವ ದಿಗ್ಗಜನಾಗಲಿದೆಯೇ ಸ್ಮಾರ್ಟಾರ್ನ್ ಕಂಪೆನಿ?

ವಿಶ್ವ ದಿಗ್ಗಜನಾಗಲಿದೆಯೇ ಸ್ಮಾರ್ಟಾರ್ನ್ ಕಂಪೆನಿ?

ಈಗಾಗಲೇ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಭಾರತದ ದೈತ್ಯ ಸಂಸ್ಥೆಗಳು ವಿಶ್ವಮಾನ್ಯತೆ ಪಡೆದಿವೆ. ಇನ್ಫೋಸಿಸ್, ವಿಪ್ರೊ ಇವೆಲ್ಲ ಸೇವಾ ವಲಯದಲ್ಲಿ ಮಹತ್ವದ ಸಾಧನೆ ಮಾಡಿದ್ದರೂ, ಉತ್ಪಾದನಾ ವಲಯದಲ್ಲಿ ಭಾರತದ ಸಾಧನೆ ಅಷ್ಟಕಷ್ಟೆ.! ಆದರೆ, ಮಹೇಶ್‌ ಲಿಂಗಾರೆಡ್ಡಿ ಹೇಳುವಂತೆ ಸ್ಮಾರ್ಟ್‌ನ್ ಅಪಾರ ಪ್ರಮಾಣದ ಬಂಡವಾಳ ಆಕರ್ಷಿಸಿ ಜಾಗತಿಕ ಬ್ರ್ಯಾಂಡ್‌ನ ಸ್ಮಾರ್ಟ್‌ ಡಿಜಿಟಲ್ ಸಾಧನಗಳ ತಯಾರಿಕೆ ನಡೆಸಲಿದ್ದು, ವಿಶ್ವ ಶ್ರೇಷ್ಟ ಕಂಪೆನಿ ಹುಟ್ಟಿಹಾಕುವುದಾಗಿ ಹೇಳಿದ್ದಾರೆ.!!

ಆಪಲ್‌, ಸ್ಯಾಮ್ಸಂಗ್‌ಗೆ ಸ್ಮಾರ್ಟ್‌ನ್ ಸೆಡ್ಡು?

ಆಪಲ್‌, ಸ್ಯಾಮ್ಸಂಗ್‌ಗೆ ಸ್ಮಾರ್ಟ್‌ನ್ ಸೆಡ್ಡು?

ಮೊದಲೇ ಹೇಳಿದಂತೆ ಆಪಲ್‌, ಸ್ಯಾಮ್ಸಂಗ್ ಕಂಪೆನಿಗಳು ಬೃಹದಾಕಾರವಾಗಿ ಬೆಳೆದುನಿಂತಿವೆ. ಅವುಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ಸ್ಮಾರ್ಟ್‌ನ್ ಬೆಳೆಯಬೇಕಿದ್ದು, ಸಾವಿರಾರು ಕೋಟಿಗಳ ಹೂಡಿಕೆ ಬಯಸುವ ಸ್ಮಾರ್ಟ್‌ ಸಾಧನಗಳ ತಯಾರಿಕೆ ಉದ್ದಿಮೆ ಆರಂಭಿಸಿಸುವುದು ಅಷ್ಟು ಸುಲಭವಲ್ಲ.! ಆದರೆ, ವಿದೇಶಿ ಕಂಪೆನಿಗಳಿಗೆ ಸೆಡ್ಡು ಹೊಡೆದು, ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುವ ಕಾರ್ಪೊರೇಟ್‌ ಸಂಸ್ಕೃತಿಗೆ ಸೆಡ್ಡು ಹೊಡೆದು ಉತ್ತಮ ಸ್ಮಾರ್ಟ್‌ಪೋನ್ ತಯಾರಿಸಿದರೆ ಸ್ಮಾರ್ಟ್‌ರ್ನ್ ಆಪಲ್‌, ಸ್ಯಾಮ್ಸಂಗ್ ಕಂಪೆನಿಗಳಿಗೆ ಸೆಡ್ಡುಹೊಡೆಯಲಿದೆ.!!

ಸ್ಮಾರ್ಟಾರ್ನ್ ಕಂಪೆನಿ ಬೆಳೆಯಲು ಕಾರಣಗಳಿವೆ.!!

ಸ್ಮಾರ್ಟಾರ್ನ್ ಕಂಪೆನಿ ಬೆಳೆಯಲು ಕಾರಣಗಳಿವೆ.!!

ವಿಶ್ವದ ಜನಪ್ರಿಯ ದುಬಾರಿ ಫೋನ್‌ಗಳ ಸೌಲಭ್ಯಗಳನ್ನೆಲ್ಲ ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳನ್ನು ಸ್ಮಾರ್ಟಾರ್ನ್ ಬ್ರ್ಯಾಂಡ್ ಹೆಸರಿನಡಿ ಪರಿಚಯಿಸಲಾಗುತ್ತಿದ್ದು, ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್ ಸ್ಮಾರ್ಟಾರ್ನ್ ಟಿ ಬಿಡುಗಡೆಯಾಗಿದೆ. ಫೋನ್‌ನಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡಿರುವ ಸ್ಮಾರ್ಟ್‌ರ್ನ್ ದುಬಾರಿ ಫೋನ್‌ಗಳಲ್ಲಿ ಸಿಗುವ ಸೌಲಭ್ಯಗಳನ್ನೇ ಅವುಗಳ ಅರ್ಧದಷ್ಟು ಬೆಲೆಗೆ ಒದಗಿಸುತ್ತಿದೆ.!!

ಚೀನಾ ಕಂಪೆನಿಗಳಿಗೂ ಕೊನೆಗಾಲ!!

ಚೀನಾ ಕಂಪೆನಿಗಳಿಗೂ ಕೊನೆಗಾಲ!!

ಕಡಿಮೆ ದರದಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡಿ ಅಬ್ಬರದ ಪ್ರಚಾರಕ್ಕೆ ಮಾಡುವ ದುಂದು ವೆಚ್ಚ ಮಾಡುವ ಚೀನಾ ಮೊಬೈಲ್ ಕಂಪೆನಿಗಳಿಗೆ ಸ್ಮಾರ್ಟಾರ್ನ್ ಸೆಡ್ಡುಹೊಡೆಯಲಿದೆಯಂತೆ. ಆ ಕಂಪೆನಿಗಳು ಜಾಹಿರಾರುಗಾಗಿ ಖರ್ಚು ಮಾಡುವ ಹಣಕ್ಕೆ ಬದಲಾಗಿ ಸ್ಮಾರ್ಟಾರ್ನ್ ಗುಣಮಟ್ಟ ತಂದು ವಿಶ್ವದರ್ಜಿಯ ಮೊಬೈಲ್ ಕಂಪೆನಿಯಾಗಿ ಬೆಳೆಯಲಿದೆ ಎಂದು ಮಹೇಶ್‌ ಹೇಳುತ್ತಾರೆ.

ಭವಿಷ್ಯದ ಪ್ಲಾನ್‌ನಲ್ಲಿದ್ದಾರೆ ಮಹೇಶ್‌!!

ಭವಿಷ್ಯದ ಪ್ಲಾನ್‌ನಲ್ಲಿದ್ದಾರೆ ಮಹೇಶ್‌!!

ಖಾಸಗಿ ಬಂಡವಾಳ ಹೂಡಿಕೆದಾರರನ್ನೇ ನೆಚ್ಚಿಕೊಂಡಿರುವ ಮಹೇಶ್‌ ಅವರು ಅಮೆರಿಕ, ಅಬುಧಾಬಿ, ರಷ್ಯಾದ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಿದ್ದಾರೆ. ಮೂರು ವರ್ಷಗಳಲ್ಲಿ 1,500 ಕೋಟಿಗಳಷ್ಟು ಬಂಡವಾಳ ಸಂಗ್ರಹಿಸಿ ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟರೆ, ಯಶಸ್ಸಿನ ಖಾತರಿ ನೀಡಿದರೆ ಹೂಡಿಕೆದಾರರು ಖಂಡಿತವಾಗಿಯೂ ಮುಂದೆ ಬರುತ್ತಾರೆ' ಎಂದು ಹೇಳುತ್ತಾರೆ.!!

ಆಲ್‌ ದಿ ಬೆಸ್ಟ್ ಸ್ಮಾರ್ಟಾರ್ನ್!!

ಆಲ್‌ ದಿ ಬೆಸ್ಟ್ ಸ್ಮಾರ್ಟಾರ್ನ್!!

ಸ್ಮಾರ್ಟಾರ್ನ್ ಕಂಪೆನಿ ಯಶಸ್ಸಿನ ಬಗ್ಗೆ ದೃಢವಾಗಿ ನಂಬಿರುವ ಮಹೇಶ್‌ ಅವರು ಭಾರತೀಯರು ವಿದೇಶಿ ಕಂಪೆನಿಗಳ ಡಿವೈಸ್‌ಗಳಿಗಿಂತ ಹೆಚ್ಚುಗುಣಮಟ್ಟದ ಸ್ವದೇಶಿ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುವಂತಹ ಸಮಯ ಬರಬೇಕಿದೆ. ಇನ್ನೊಂದು ಐ.ಟಿ ಸೇವಾ ಸಂಸ್ಥೆಯಾಗಿ ಬೆಳೆಯದೆ ಗ್ರಾಹಕರಿಗೆ ವಿಸ್ಮಯಕಾರಿ ಅನುಭವ ನೀಡುವಂತಹ ಸಾಧನ ತಯಾರಿಸುವುದೇ ನಮ್ಮ ಮಹದಾಸೆ ಎಂದಿದ್ದಾರೆ.! ಹಾಗಾಗಿ, ಸ್ಮಾರ್ಟಾರ್ನ್‌ಗೆ ನಮ್ಮದೊಂದು ಆಲ್‌ ದಿ ಬೆಸ್ಟ್!!

ಓದಿರಿ:ಅಬ್ಬಾ..ಸೋನಿಯ ಈ ಪ್ರೊಜೆಕ್ಟರ್ ಬೆಲೆ 1,10,000ರೂ!!.. ಅಂತಹದ್ದೇನಿದೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Smartron India is a young company, and debuted its first products in the country last year.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot