ಸೋನಿಯ A9G ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ!

|

ಸೋನಿ ಕಂಪನಿಯ LED ಶ್ರೇಣಿಯ ಸ್ಮಾರ್ಟ್‌ ಟಿವಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ. ಅದರ ಬೆನ್ನಲ್ಲೇ ಕಂಪನಿ ಪರಿಚಯಿಸಿದ OLED ಶ್ರೇಣಿಯ ಸ್ಮಾರ್ಟ್‌ ಟಿವಿಗಳು ಸಹ ಮಾರುಕಟ್ಟೆಗೆ ಬಾರಿ ಜನಪ್ರಿಯತೆ ಪಡೆದಿವೆ. ಇದೀಗ ಕಂಪನಿಯು ಬ್ರಾವಿಯಾ ಸರಣಿಯ OLED ಆಂಡ್ರಾಯ್ಡ್ ಟಿವಿಗಳನ್ನು ಮತ್ತೆರಡು ಹೊಸ ಸ್ಮಾರ್ಟ್‌ಟಿವಿಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸೋನಿಯ A9G  ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ!

ಹೌದು, ಜನಪ್ರಿಯ ಸೋನಿ ಕಂಪನಿಯು A9G ಬ್ರಾವಿಯಾ ಸರಣಿಯಲ್ಲಿ ಹೊಸದಾಗಿ 55 ಇಂಚಿನ (KD-55A9G) ಮತ್ತು 65 ಇಂಚಿನ (KD-65A9G) ಎರಡು OLED ಆಂಡ್ರಾಯ್ಡ್‌ ಟಿವಿಗಳನ್ನು ಲಾಂಚ್‌ ಮಾಡಿದೆ. ಈ ಆಂಡ್ರಾಯ್ಡ್ ಟಿವಿಗಳು ಸೋನಿಯ X1 ಅಲ್ಟಿಮೇಟ್‌ ಪಿಚ್ಚರ್ ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಡಿಸ್‌ಪ್ಲೇಯು 4K ಗುಣಮಟ್ಟವನ್ನು ಪಡೆದಿದೆ. ಬಿಲ್ಟ್‌ಇನ್ ಕ್ರೋಮ್‌ಕಾಸ್ಟ್‌ ಸೌಲಭ್ಯವನ್ನು ಸಹ ಒಳಗೊಂಡಿದೆ.

ಸೋನಿಯ A9G  ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ!

ಈ ಟಿವಿಗಳು 2.2 ಚಾನಲ್ ಸ್ಪೀಕರ್ಸ್‌ಗಳೊಂದಿಗೆ, ಎರಡು ಸಬ್‌ವೂಫರ್ ನೀಡಲಾಗಿದ್ದು, ‌ಡಾಲ್ಬಿ ಅಟೊಮ್ ಮತ್ತು DTS ಡಿಜಿಟಲ್ ಸೌಂಡ್‌ ಸೌಲಭ್ಯಗಳನ್ನು ಒಳಗೊಂಡಿದೆ. ಆಂತರಿಕ ಸ್ಟೋರೇಜ್‌ಗಾಗಿ 16GB ಸ್ಥಳಾವಕಾಶ ನೀಡಲಾಗಿದ್ದು, ಗೂಗಲ್ ಆಂಡ್ರಾಯ್ಡ್‌ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಹಾಗಾದರೇ ಸೋನಿಯ A9G ಬ್ರಾವಿಯಾ ಸರಣಿಯ ಆಂಡ್ರಾಯ್ಡ್‌ ಟಿವಿಗಳು ಇತರೆ ಯಾವೆಲ್ಲಾ ಫೀಚರ್ಸ್‌ ಹೊಂದಿವೆ ಮುಂದೆ ನೋಡೋಣ ಬನ್ನಿರಿ.

ಓದಿರಿ : ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!ಓದಿರಿ : ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!

ಡಿಸ್‌ಪ್ಲೇ ಮತ್ತು ಪಿಕ್ಸಲ್

ಡಿಸ್‌ಪ್ಲೇ ಮತ್ತು ಪಿಕ್ಸಲ್

ಸೋನಿಯ A9G ಬ್ರಾವಿಯಾ ಸರಣಿಯು 55 ಇಂಚಿನ ಮತ್ತು 65 ಇಂಚಿನ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಈ ಎರಡು ವೇರಿಯಂಟ್‌ಗಳು 3840x2160 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 4K (ಅಲ್ಟ್ರಾ ಹೆಚ್‌ಡಿ)OLED ಸ್ಕ್ರೀನ್‌ ಹೊಂದಿವೆ. ಇವುಗಳಲ್ಲಿ 55 ಇಂಚಿನ ವೇರಿಯಂಟ್‌ ಟಿವಿಯು 1226mm x 710mm x 40mmನಷ್ಟು ಸುತ್ತಳತೆಯನ್ನು ಪಡೆದುಕೊಂಡಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಗೂಗಲ್ ಆಂಡ್ರಾಯ್ಡ್‌ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುವ ಈ ಎರಡು ಟಿವಿಗಳು ಸೋನಿಯ X1 ಅಲ್ಟಿಮೇಟ್‌ ಪಿಚ್ಚರ್ ಪ್ರೊಸೆಸರ್‌ ಶಕ್ತಿಯನ್ನು ಪಡೆದಿವೆ. 16GB ಆಂತರಿಕ ಸ್ಟೋರೇಜ್ ಸ್ಥಳಾವಕಾಶ ಒದಗಿಸಲಾಗಿದ್ದು, ಬಿಲ್ಟ್‌ಇನ್ ಕ್ರೋಮ್‌ಕಾಸ್ಟ್‌ ಸೌಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್‌ ಮೂಲಕ ಆಪ್ಸ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಿದ್ದು, ಗೂಗಲ್ ಅಸಿಸ್ಟಂಟ್ ಬೆಂಬಲ ಇದೆ.

ಓದಿರಿ : ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?ಓದಿರಿ : ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?

ಇತರೆ ಫೀಚರ್ಸ್‌ಗಳು

ಇತರೆ ಫೀಚರ್ಸ್‌ಗಳು

ಸೋನಿಯ ಈ ಎರಡು ಹೊಸ ಟಿವಿಗಳು 2.2 ಚಾನಲ್ ಸ್ಪೀಕರ್ಸ್‌ಗಳನ್ನು ಹೊಂದಿದೆ. ಸಬ್‌ವೂಫರ್‌ನೊಂದಿಗೆ ಡಾಲ್ಬಿ ಅಟೊಮ್ ಮತ್ತು DTS ಡಿಜಿಟಲ್ ಸೌಂಡ್‌ ಸೌಲಭ್ಯಗಳನ್ನು ಪಡೆದುಕೊಂಡಿದೆ. ಗೂಗಲ್ ಅಸಿಸ್ಟಂಟ್ ಸೌಲಭ್ಯವಿದ್ದು ಹ್ಯಾಂಡ್ಸ್‌ ಪ್ರಿ ಆಕ್ಸಸ್‌ ಮಾಡಬಹುದಾಗಿದೆ. loT ಅಪ್ಲಿಕೇಶನ್‌ಗಳಿಗೆ ಆಪಲ್ ಏರ್‌ಪ್ಲೇ ಮತ್ತು ಆಪಲ್ ಹೋಮ್ ಕಿಟ್‌ ಬೆಂಬಲ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ A9G ಬ್ರಾವಿಯಾ ಸರಣಿಯ 55 ಇಂಚಿನ (KD-55A9G) ವೇರಿಯಂಟ್ ಬೆಲೆಯು 2,69,900ರೂ.ಗಳಾಗಿದ್ದು, 65 ಇಂಚಿನ (KD-65A9G) ವೇರಿಯಂಟ್ ಬೆಲೆಯು 3,69,900ರೂ.ಗಳಾಗಿದೆ. ಈ ಆಂಡ್ರಾಯ್ಡ್‌ ಟಿವಿಗಳು ಸೋನಿ ಸೆಂಟರ್‌ಗಳಲ್ಲಿ, ಅಧಿಕೃತ ಡೀಲರ್‌ ಶಾಪ್‌ಗಳಲ್ಲಿ ಮತ್ತು ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.

ಓದಿರಿ : ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?ಓದಿರಿ : ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?

Best Mobiles in India

English summary
The new Sony A9G 4K OLED TV is available in two sizes - 55-inch and 65-inch. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X