ಭಾರತದಲ್ಲಿ ಹೊಸ ಸೌಂಡ್‌ಬಾರ್‌ ಸಿಸ್ಟಂ ಲಾಂಚ್‌ ಮಾಡಿದ ಸೋನಿ! ಬೆಲೆ ಎಷ್ಟು?

|

ಟೆಕ್‌ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿ ತನ್ನ ವೈವಿಧ್ಯಮಯ ಟೆಕ್‌ ಗ್ಯಾಜೆಟ್ಸ್‌ಗಳ ಮೂಲಕ ಗುರುತಿಸಿಕೊಂಡಿದೆ. ತನ್ನ ಗುಣಮಟ್ಟದ ಡಿವೈಸ್‌ಗಳಿಂದಾಗಿ ಟೆಕ್‌ ವಲಯದಲ್ಲಿ ಪ್ರತಿಷ್ಠಿತ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಸೋನಿ HT-S400 ಸೌಂಡ್‌ಬಾರ್ ಸ್ಪೀಕರ್ ಸಿಸ್ಟಮ್ ಅನ್ನು ಲಾಂಚ್‌ ಮಾಡಿದೆ. ಇದು ವಾಯರ್‌ಲೆಸ್‌ ಸಭ್‌ ವೂಫರ್‌ನೊಂದಿಗೆ ಬರಲಿದೆ. ಇದು ಎರಡು-ಚಾನೆಲ್ ಬಾರ್ ಸ್ಪೀಕರ್ ಮತ್ತು ಪ್ರತ್ಯೇಕ ವಾಯರ್‌ಲೆಸ್ ಸಬ್ ವೂಫರ್‌ನೊಂದಿಗೆ 2.1-ಚಾನಲ್ ಕಾನ್ಫಿಗರೇಶನ್ ಅನ್ನು ಹೊಂದಿದೆ.

ಸೋನಿ

ಹೌದು, ಸೋನಿ ಕಂಪೆನಿ ಭಾರತದಲ್ಲಿ ಸೋನಿ HT-S400 ಸೌಂಡ್‌ಬಾರ್ ಸ್ಪೀಕರ್ ಸಿಸ್ಟಮ್ ಪರಿಚಯಿಸಿದೆ. ಇದು 330W ರೇಟ್ ಮಾಡಲಾದ ಸೌಂಡ್‌ ಔಟ್‌ಪುಟ್ ಅನ್ನು ಹೊಂದಿದೆ. ಈ ಸ್ಪೀಕರ್‌ ಸಿಸ್ಟಂ ಸ್ಮಾರ್ಟ್‌ಟಿವಿಗಳು ತಮ್ಮ ಬಿಲ್ಟ್-ಇನ್ ಸ್ಪೀಕರ್‌ಗಳ ಮೂಲಕ ನೀಡುವುದಕ್ಕಿಂತ ಗಣನೀಯವಾಗಿ ಹೆಚ್ಚಿನ ಸೌಂಡ್‌ ನೀಡಲಿದೆ. ಹೀಗಾಗಿ ನಿಮ್ಮ ಹೋಮ್ ಥಿಯೇಟರ್ ಸೌಂಡ್‌ಗೆ ಅಪ್‌ಗ್ರೇಡ್ ಆಗಿರಲಿದೆ. ಹಾಗಾದ್ರೆ ಹೊಸ ಸೋನಿ HT-S400 ಸೌಂಡ್‌ಬಾರ್ ಸ್ಪೀಕರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೌಂಡ್‌ಬಾರ್

ಸೋನಿ ಕಂಪೆನಿ ಪರಿಚಯಿಸಿರುವ ಸೋನಿ HT-S400 ಸೌಂಡ್‌ಬಾರ್ ಗಾತ್ರದಲ್ಲಿ ದೊಡ್ಡದಾಗಿಲ್ಲ. ಇದು ಪ್ರತ್ಯೇಕ ವಾಯರ್‌ಲೆಸ್ ಸಬ್ ವೂಫರ್‌ನೊಂದಿಗೆ 2.1-ಚಾನೆಲ್ ಕಾನ್ಫಿಗರೇಶನ್ ಅನ್ನು ಹೊಂದಿದೆ. ಇನ್ನು ಈ ಸ್ಪೀಕರ್ ವ್ಯವಸ್ಥೆಯು ಬಾರ್ ಸ್ಪೀಕರ್‌ನಿಂದ ಮಾಡಲ್ಪಟ್ಟಿದೆ. ಇದರಲ್ಲಿ 130W ಸಬ್ ವೂಫರ್ ನೊಂದಿಗೆ ಒಟ್ಟು 200W ನಲ್ಲಿ ಎರಡು ಆಡಿಯೋ ಡ್ರೈವರ್‌ಗಳನ್ನು ರೇಟ್ ಮಾಡಲಾಗಿದೆ. ಇದು ಡಾಲ್ಬಿ ಆಡಿಯೋ ಫಾರ್ಮ್ಯಾಟ್‌ಗೆ ಮಾತ್ರ ಬೆಂಬಲವನ್ನು ಹೊಂದಿದೆ.

S400

ಇನ್ನು ಸೋನಿ HT-S400 ಸೌಂಡ್‌ಬಾರ್‌ ಸ್ಪೀಕರ್‌ ಯಾವುದೇ ಸುಧಾರಿತ ಆಡಿಯೊ ಸ್ವರೂಪಗಳನ್ನು ಬೆಂಬಲಿಸುವುದಿಲ್ಲ. ಇದು 2.4kg ಬಾರ್ ಸ್ಪೀಕರ್‌ನೊಂದಿಗೆ ವಾಯರ್‌ಲೆಸ್ ಕನೆಕ್ಟಿವಿಟಿಯನ್ನು ಮಾತ್ರ ಬೆಂಬಲಿಸುತ್ತದೆ. ಇನ್ನು ಎರಡನೆಯದು ಮಾಸ್ಟರ್ ಡಿವೈಸ್‌ ಆಗಿ ಕಾರ್ಯನಿರ್ವಹಿಸಲಿದ್ದು, ಬಾಹ್ಯ ಡಿವೈಸ್‌ಗಳೊಂದಿಗೆ ಕನೆಕ್ಟಿವಿಟಿಯನ್ನು ನಿರ್ವಹಿಸುತ್ತದೆ. ಆದರೆ ಇದರಲ್ಲಿ ನೀವು ಪ್ರತಿಯೊಂದು ಯೂನಿಟ್‌ ಅನ್ನು ಪ್ರತ್ಯೇಕ ಪವರ್‌ ಸಾಕೆಟ್‌ಗೆ ಕನೆಕ್ಟ್‌ ಮಾಡಬೇಕಾಗುತ್ತದೆ.

S400

ಸೋನಿ HT-S400 ಸೌಂಡ್‌ಬಾರ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI ARC, ಆಪ್ಟಿಕಲ್ (Toslink), ಮತ್ತು SBC ಬ್ಲೂಟೂತ್ ಕೊಡೆಕ್‌ ಮತ್ತು ಬ್ಲೂಟೂತ್ 5 ಅನ್ನು ಬೆಂಬಲಿಸಲಿದೆ. ಇದಲ್ಲದೆ ಸಿಸ್ಟಮ್ ಅಥವಾ ಸಬ್ ವೂಫರ್ ಅನ್ನು ಪ್ರತ್ಯೇಕವಾಗಿ ಸೆಟ್‌ ಮಾಡುವುದು ಸೇರಿದಂತೆ ಕಂಟ್ರೋಲ್‌ ಮಾಡಲು ಬಳಸಬಹುದಾದ ರಿಮೋಟ್ ಅನ್ನು ಹೊಂದಿದೆ. ಇದು HDMI CEC ಬೆಂಬಲಿತವಾಗಿದೆ. ಆದ್ದರಿಂದ ನೀವು ಸ್ಮಾರ್ಟ್‌ಟಿವಿ ಅಥವಾ ಹೋಮ್ ಥಿಯೇಟರ್ ರಿಸೀವರ್‌ ಕನೆಕ್ಟಿವಿಟಿ ಡಿವೈಸ್‌ ಮೂಲಕ HT-S400 ಅನ್ನು ಕಂಟ್ರೋಲ್‌ ಮಾಡಲು ಸಾದ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಸೋನಿ HT-S400 ಸೌಂಡ್‌ಬಾರ್ "ಬೆಸ್ಟ್ ಬೈ" ಆಪರೇಟಿಂಗ್ ಬೆಲೆ 21,990ರೂ, ಹೊಂದಿದೆ. ಇದನ್ನು ನೀವು ಸೋನಿ ಸೆಂಟರ್ ಸ್ಟೋರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ಸ್ ರಿಟೇಲ್‌ ಸ್ಟೋರ್ಸ್‌, ಇ-ಕಾಮರ್ಸ್ ಪೋರ್ಟಲ್‌ ಮತ್ತು ಸೋನಿಯ ಸ್ವಂತ ShopAtSC ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದಾಗಿದೆ. ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ.

ಸೋನಿ

ಇದಲ್ಲದೆ ಸೋನಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಪ್ರೀಮಿಯಂ ಶ್ರೇಣಿಯ ಸೋನಿ ಬ್ರಾವಿಯಾ XR-85X95K ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ 85 ಇಂಚಿನ ಮಿನಿ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಡೀಪ್‌ ಬ್ಲ್ಯಾಕ್‌ ಮತ್ತು ಉತ್ತಮ ಕಾಂಟ್ರಾಸ್ಟ್‌ಗಾಗಿ XR ಟ್ರೈಲುಮಿನೋಸ್ ಪ್ರೊ ಮತ್ತು XR ಕಾಂಟ್ರಾಸ್ಟ್ ಬೂಸ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ XR ಬ್ಯಾಕ್‌ಲೈಟ್ ಮಾಸ್ಟರ್ ಡ್ರೈವ್ ಟೆಕ್ನಾಲಜಿ ಒಳಗೊಂಡಿದೆ. ಇದರಿಂದ ಮಿನಿ ಎಲ್‌ಇಡಿ ಬ್ಯಾಕ್ಲೆಟ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದು ಕಾಗ್ನಿಟಿವ್ ಪ್ರೊಸೆಸರ್ XRನಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಒಳಗೊಂಡಿರುವ ಪ್ರೊಸೆಸರ್‌ ನೀವು ನೋಡುವ ಮತ್ತು ಕೇಳುವ ವಿಧಾನಕ್ಕೆ ಅನುಗುಣವಾಗಿ ಕಂಟೆಂಟ್‌ ಅನ್ನು ರಿ ಪ್ರೊಡ್ಯೂಸ್‌ ಮಾಡಲಿದೆ. ಅಂದರೆ ನಿಮ್ಮ ಕಣ್ಣು ಹೇಗೆ ಕೇಂದ್ರಿಕರಿಸುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿದೆ. ಇನ್ನು ಈ ಹೊಸ ಸೋನಿ ಬ್ರಾವಿಯ XR 85X95K ಟಿವಿಯು XR 4K ಅಪ್‌ಸ್ಕೇಲಿಂಗ್ ಮತ್ತು XR OLED ಮೋಷನ್ ಸ್ಪಷ್ಟತೆಯೊಂದಿಗೆ ಲೋ ಚಿತ್ರದ ಗುಣಮಟ್ಟದೊಂದಿಗೆ ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ.

Best Mobiles in India

Read more about:
English summary
Sony HT-S400 Soundbar With 330W Audio Output Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X