ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಪರಿಚಯಿಸಲು ಮುಂದಾದ ಸೋನಿ!

By: Prathap T

ಹಲವು ನವನವೀನ ಮಾದರಿಯ ಎಲೆಕ್ಟ್ರಾನಿಕ್ ಉತ್ಪನ್ನದೊಂದಿಗೆ ಇಡೀ ಜಗತ್ತಿನ ಗಮನ ಸೆಳೆದಿರುವ ಸೋನಿ ಕಂಪನಿ ಇದೀಗ ಸೋನಿ ಎಕ್ಸ್ ಪೀರಿಯಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಪರಿಚಯಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂಬ ವಿಷಯ ಲೀಕ್ ಆಗಿದೆ. ಇದರಿಂದ ಗ್ರಾಹಕರು ಹೆಚ್ಚು ಉತ್ತೇಜಿತರಾಗಿದ್ದು, ಮಾರುಕಟ್ಟೆ ಬರುವಿಕೆಯನ್ನು ಕಾತುರತೆಯಿಂದ ಕಾದು ನಿಂತಿದ್ದಾರೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಪರಿಚಯಿಸಲು ಮುಂದಾದ ಸೋನಿ!

ಆದರೆ ಈ ಬಗ್ಗೆ ಸೋನಿ ಅಧಿಕಾರಿಗಳಿಂದ ಅಧಿಕೃತವಾಗಿ ಮಾಹಿತಿ ಹೊರಬಂದಿಲ್ಲ. ಅನುಟುಟು ಬೆಂಚ್ ಮಾರ್ಕ್ ಈ ವಿಷಯವನ್ನು ಸೋರಿಕೆ ಮಾಡಿದೆ. ಇವರ ಮಾಹಿತಿ ಪ್ರಕಾರ ಜಿ8441 ಸಂಖ್ಯೆ ಮಾದರಿಯಲ್ಲಿ ತನ್ನ ಹೊಸ ಸ್ಮಾರ್ಟ್ ಫೋನ್ ಅನ್ನು ವಿಶ್ವಕ್ಕೆ ಪರಿಚಯಿಸಲು ಸೋನಿ ಮುಂದಾಗಿದೆ ಎನ್ನಲಾಗಿದೆ.

ಈ ಸ್ಮಾರ್ಟ್ ಫೋನ್ ಅನ್ನು ಸ್ನ್ಯಾಪ್ ಡ್ರಾಗನ್ 835 ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, 4GB RAM ಹಾಗೂ 32GB ಆಂತರಿಕ ಸಾಮರ್ಥ್ಯವನ್ನ ಹೊಂದಿರುವುದು ವಿಶೇಷವಾಗಿದೆ. 720p display ಒಳಗೊಂಡಿದೆ. ಈ ಸ್ಮಾರ್ಟ್ ಫೋನಿನ ಬಗ್ಗೆ ಇನ್ನೂ ಅನೇಕ ವೈಶಿಷ್ಠ್ಯತೆಗಳು ಹೊಂದಿರುವ ಬಗ್ಗೆ ವಿಷಯ ಹರಿದಾಡುತ್ತಿದ್ದು, ಸೋನಿ ಕಂಪನಿ ಮುಂದಿನ ದಿನಗಳಲ್ಲಿ ಘೋಷಿಸಲಿದೆಯೇ ಕಾದು ನೋಡಬೇಕಿದೆ.

ಸಣ್ಣ ಡಿಸ್ಪ್ಲೇ ಸಾಮರ್ಥ್ಯ ಮೂಲಕ ಕ್ರಾಂತಿ ಮಾಡಿದ್ದ ಸೋನಿ ಎಕ್ಸ್ಪೀರಿಯಾ ಹೊಸದಾಗಿ ಪರಿಚಯಿಸುತ್ತಿರುವ ಸ್ಮಾರ್ಟ್ ಫೋನಿನ ಡಿಸ್ಪ್ಲೇ ಗಾತ್ರ ಹೆಚ್ಚಿರುತ್ತದೆಯೇ ಅಥವಾ ಕಡಿಮೆ ಇರುತ್ತದೆಯೇ ಎಂಬುದು ಇದೀಗ ತೀವ್ರ ಕುತೂಹಲ ಮೂಡಿಸಿದೆ.

ಸ್ನ್ಯಾಪ್ ಡ್ರಾಗನ್ 650 ತಂತ್ರಾಂಶದಿಂದ ಸಾದರ ಪಡಿಸಿದ ಸೋನಿ ಎಕ್ಸ್ ಪಿರಿಯಾ ಕಾಂಪ್ಯಾಕ್ಟ್ ಅನ್ನು ಕಳೆದ ವರ್ಷ ಪರಿಚಯಿಸುವ ಮೂಲಕ ಗಮನ ಸೆಳೆದಿತ್ತು. 1080 display ಸಾಮರ್ಥ್ಯದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವೆಬ್ ಪೇಜ್ ಗಳನ್ನು ವೀಕ್ಷಿಸಲು ಅತ್ಯಾಕರ್ಷಕ ವಿಶಿಷ್ಟ್ಯತೆಯೊಂದಿಗೆ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.

ಇದನ್ನು ಮೀರಿಸುವ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ಫೋನ್ ಪರಿಚಯಿಸುವ ತವಕದಲ್ಲಿರುವ ಸೋನಿ ಕಂಪನಿಯು, ಇದೀಗ ಅನುಟುಟು ಬೆಂಚ್ ಮಾರ್ಕ್ ಸೋರಿಕೆ ಮಾಡಿರುವ ಮಾಹಿತಿಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ವಿಷಯ ಏನೇ ಇರಲಿ, ಸೋನಿ ಆಂಡ್ರ್ಯಾಯ್ಡ್ 8.0 ಶ್ರೇಣಿಯ ಸ್ಮಾರ್ಟ್ ಫೋನ್ ಯಾವ ಯಾವ ಹೊಸ ಆಕರ್ಷಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಸೋನಿ ಮೈಲಿಗಲ್ಲು ಸಾಧಿಸಿ ಮುಂಚೂಣಿ ಕಾಯ್ದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.Read more about:
English summary
Sony Xperia rumored to be working on a device that will have Android O out of the box.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot