ಶೀಘ್ರದಲ್ಲೇ ಭಾರತ-ಸಿಂಗಾಪುರ ನಡುವೆ UPI ಹಣ ವರ್ಗಾವಣೆ ಸೇವೆ ಪ್ರಾರಂಭ!

|

ಭಾರತ ಮತ್ತು ಸಿಂಗಾಪುರ್ ರಾಷ್ಟ್ರಗಳು ತಮ್ಮ ತ್ವರಿತ ಪಾವತಿ ವ್ಯವಸ್ಥೆಗಳಾದ PayNow (ಸಿಂಗಾಪುರ್) ಮತ್ತು UPI (ಭಾರತ) ಅನ್ನು ಸಂಪರ್ಕಿಸಲು ಅಗತ್ಯವಾದ ತಾಂತ್ರಿಕ ಹಂತಗಳನ್ನು ಪೂರ್ಣಗೊಳಿಸಿವೆ. ಈ ಯೋಜನೆಯು ಎರಡು ದೇಶಗಳ ನಡುವಿನ ಹಣ ವರ್ಗಾವಣೆಯನ್ನು ತ್ವರಿತವಾಗಿ ಮಾಡಲು ಅನುಮತಿಸುತ್ತದೆ.

ಭಾರತೀಯರು ಸದ್ಯದಲ್ಲೇ

ಹೌದು, ಭಾರತೀಯರು ಸದ್ಯದಲ್ಲೇ ಸಿಂಗಾಪುರದಲ್ಲಿಯೂ UPI (ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್) ಮೂಲಕ ಹಣದ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಫೋನ್ ನಂಬರ್ ಬಳಸಿ, ಸಿಂಗಾಪುರ್‌ದಲ್ಲಿರುವ ಭಾರತೀಯರು ಭಾರತದಲ್ಲಿನ ತಮ್ಮ ಕುಟುಂಬ ಸದಸ್ಯರಿಗೆ ಹಣ ವರ್ಗಾವಣೆ ಸುಲಭವಾಗಿ ಮಾಡಬಹುದಾಗಿದೆ.

ಕಮಿಷನರ್ ಪಿ ಕುಮಾರನ್

ಸಿಂಗಾಪುರ್ ತನ್ನ PayNow ಅನ್ನು UPI ನೊಂದಿಗೆ ಸಂಪರ್ಕಿಸಲು ಬಯಸುತ್ತದೆ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಆ ಯೋಜನೆಯು ಮುಕ್ತಾಯಗೊಳ್ಳುತ್ತದೆ, ಸಿಂಗಾಪುರದಲ್ಲಿ ಕುಳಿತಿರುವ ಯಾರಾದರೂ ಭಾರತದಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ' ಎಂದು ಸಿಂಗಾಪುರದಲ್ಲಿರುವ ಭಾರತದ ಹೈ ಕಮಿಷನರ್ ಪಿ ಕುಮಾರನ್ ಹೇಳಿದ್ದಾರೆ.

ಭಾರತದಿಂದ ಸಿಂಗಾಪುರ

ಇನ್ನು ಮುಂದೆ ಮೊಬೈಲ್ ನಂಬರ್ ಬಳಸಿ ಭಾರತದಿಂದ ಸಿಂಗಾಪುರಕ್ಕೆ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು. ಈ ಮಧ್ಯ ಲಿಂಕೇಜ್ ಪ್ರೊಪೋಸ್ಡ್ (VPI) ಅಡಿಯಲ್ಲಿ ಯುಪಿಐನ ವರ್ಚುವಲ್ ಪಾವತಿ ವಿಳಾಸವನ್ನು ಬಳಸಿಕೊಂಡು ಸಿಂಗಾಪುರದಿಂದ ಭಾರತಕ್ಕೆ ಹಣವನ್ನು ವರ್ಗಾಯಿಸಬಹುದು.

ಭಾರತೀಯರಿಗೆ

ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಯುರೋಪಿಯನ್ ಪಾವತಿ ಸೇವಾ ಪೂರೈಕೆದಾರ ವರ್ಲ್ಡ್‌ಲೈನ್‌ನೊಂದಿಗೆ NPCI ಪಾಲುದಾರಿಕೆ ಆರಂಭಿಸಿದೆ. ಇದರಿಂದ ಯುರೋಪ್‌ಗೆ ಪ್ರಯಾಣಿಸುವ ಭಾರತೀಯರಿಗೆ ಅನುಕೂಲವಾಗಲಿದೆ. ಏಕೆಂದರೆ ಯುರೋಪ್‌ನಲ್ಲಿ ಶೀಘ್ರದಲ್ಲೇ UPI ಬಳಸಿಕೊಂಡು ಹಣದ ವಹಿವಾಟು ನಡೆಸಬಹುದು. ಕೇವಲ UPI ಮಾತ್ರವಲ್ಲದೆ ಭಾರತೀಯರು ನಂತರ ಯುರೋಪ್‌ನಲ್ಲಿ ರುಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ.

UPI ಮೂಲಕ ಹಣ ವರ್ಗಾವಣೆ ಮಾಡುವಾಗ ಈ ಸಂಗತಿ ನಿಮಗೆ ತಿಳಿದಿರಲಿ!

UPI ಮೂಲಕ ಹಣ ವರ್ಗಾವಣೆ ಮಾಡುವಾಗ ಈ ಸಂಗತಿ ನಿಮಗೆ ತಿಳಿದಿರಲಿ!

ನಿಮ್ಮ ಯುಪಿಐ ಪಿನ್‌ ಯಾರೊಂದಿಗೂ ಹಂಚಿಕೊಳ್ಳಬೇಡಿ
ನಿಮ್ಮ 6 ಅಥವಾ 4 ಅಂಕಿಯ UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇದು ಅಗತ್ಯ ಮತ್ತು ಪ್ರಮುಖ ಅಂಶವಾಗಿದೆ. ಯುಪಿಐ ಸಕ್ರಿಯಗೊಳಿಸಿದ ಆಪ್‌ನ ಪ್ರತಿ ಹಣ ವರ್ಗಾವಣೆಯ ಮೊದಲು ಪಿನ್‌ ಅನ್ನು ಕೇಳುತ್ತದೆ. ಆದ್ದರಿಂದ, ನಿಮ್ಮ ಯುಪಿಐ ಐಡಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಲಿಂಕ್ ಮಾಡಿದಾಗ, ಒಂದು ಪಾಸ್‌ವರ್ಡ್‌/ ಪಿನ್‌ ಅನ್ನು ಸೆಟ್‌ ಮಾಡಬೇಕಿರುತ್ತದೆ. ಎಟಿಎಂ ಪಿನ್‌ನಂತೆಯೇ ಸುರಕ್ಷಿತ ಪಾವತಿಗಳನ್ನು ಆರಂಭಿಸಲು ಈ ಪಿನ್ ಅನ್ನು ಬಳಸಲಾಗುತ್ತದೆ. ಹೀಗಾಗಿ, ನಿಮ್ಮ ಯುಪಿಐ ಪಿನ್ ಅನ್ನು ಯಾರಿಗೂ ನೀಡಬೇಡಿ.

ಫೋನಿಗೆ ಸ್ಕ್ರೀನ್‌ ಲಾಕ್‌ ಹಾಕುವುದು ಉತ್ತಮ

ಫೋನಿಗೆ ಸ್ಕ್ರೀನ್‌ ಲಾಕ್‌ ಹಾಕುವುದು ಉತ್ತಮ

ಬಳಕೆದಾರರೇ, ನಿಮ್ಮ ಮೊಬೈಲ್‌ನಲ್ಲಿ ಹಲವಾರು ಪ್ರಮುಖ ಅಪ್ಲಿಕೇಶನ್‌ಗಳು, ಇ-ಮೇಲ್‌ಗಳು ಮತ್ತು ಫೋಟೊಗಳು ಇರುತ್ತವೆ. ಈ ನಿಟ್ಟಿನಲ್ಲಿ ಯಾವಾಗಲೂ ನಿಮ್ಮ ಫೋನ್‌ನಲ್ಲಿ ಸ್ಕ್ರೀನ್‌ ಲಾಕ್ ಅನ್ನು ಇಟ್ಟುಕೊಳ್ಳವುದು ಉತ್ತಮ. ನಿಮ್ಮ ಫೋನಿಗೆ ಲಾಕ್‌ ಇಟ್ಟರೆ, ಯುಪಿಐ ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳು ಸುರಕ್ಷಿತ ವಹಿವಾಟಿಗಾಗಿ ಅಪ್ಲಿಕೇಶನ್ ತೆರೆಯುವ ಮೊದಲು ನಿಮ್ಮ ಫೋನ್ ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ಸಹ ಕೇಳುತ್ತವೆ.

ಹಣ ವರ್ಗಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ

ಹಣ ವರ್ಗಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ

ಯುಪಿಐ ಸಕ್ರಿಯಗೊಳಿಸಿದ ಅಪ್ ಸ್ವೀಕರಿಸುವವರ ನಿರ್ದಿಷ್ಟ ಯುಪಿಐ ಐಡಿಗೆ ಹಣವನ್ನು ವರ್ಗಾಯಿಸಲು ನೆರವು ಮಾಡುತ್ತದೆ. ಹಾಗೆಯೇ ವಿಶೇಷ ಯುಪಿಐ ಐಡಿಯನ್ನು ಬಳಸಿಕೊಂಡು ನೀವು ಇತರರಿಂದ ಪಾವತಿಗಳನ್ನು ಸ್ವೀಕರಿಸಬಹುದು. ಹೀಗಾಗಿ ಇತರರಿಂದ ಹಣವನ್ನು ಸ್ವೀಕರಿಸುತ್ತಿರುವಾಗ ಯಾವಾಗಲೂ ಸರಿಯಾದ ಯುಪಿಐ ಐಡಿಯನ್ನು ನೀಡಿ. ಹಾಗೆಯೇ ನಿಮ್ಮ ಯುಪಿಐ ಐಡಿಯನ್ನು ಎರಡು ಬಾರಿ ಪರಿಶೀಲಿಸಿ ನೀಡಿ. ಅಂತೆಯೇ, ವ್ಯವಹಾರ/ ಟ್ರಾನ್ಸಾಕ್ಶನ್ ಪ್ರಾರಂಭಿಸುವ ಮೊದಲು ಯಾವಾಗಲೂ ಸ್ವೀಕರಿಸುವವರ ಯುಪಿಐ ಐಡಿಯನ್ನು ಎರಡು ಬಾರಿ ಚೆಕ್‌ ಮಾಡಿ. ತಪ್ಪಾದ ಟ್ರಾನ್ಸಾಕ್ಶನ್ ಆಗದಂತೆ ಹಾಗೂ ಬೇರೆಯವರಿಗೆ ಸುರಕ್ಷಿತವಾಗಿ ಹಣವನ್ನು ಕಳುಹಿಸಲು ಇದು ಉಪಯುಕ್ತ.

Best Mobiles in India

English summary
Soon money transfers between India-Singapore using UPI.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X