30 ಸೆಕೆಂಡ್‌ನಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಫುಲ್‌ ಚಾರ್ಜ್‌

By Suneel
|

ತಂತ್ರಜ್ಞಾನ ಇಂದು ದಿನೇ ದಿನೇ ಜೀವನ ಶೈಲಿಯನ್ನು ಬದಲಿಸುವುದಲ್ಲದೇ, ಗ್ಯಾಜೆಟ್ಸ್‌ಗಳ ಅನುಭವದಲ್ಲೂ ಹೊಸತನವನ್ನು ನೀಡುತ್ತಿದೆ. ಪ್ರಸ್ತುತದಲ್ಲಿ ನೀವು ಸ್ಮಾರ್ಟ್‌ಫೋನ್‌ ಚಾರ್ಜ್‌ಮಾಡಲು ಕನಿಷ್ಟ ಎಂದರೂ 1 ಗಂಟೆ ಸಮಯ ಚಾರ್ಜಿಂಗ್ ಮಾಡುತ್ತೀರಿ. ಆದರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ಕೇವಲ 30 ಸೆಕೆಂಡ್‌ಗಳಲ್ಲಿ ಚಾರ್ಜ್‌ ಆಗುವ ಸ್ಮಾರ್ಟ್‌ಫೋನ್‌ ಬ್ಯಾಟರಿ ಬಗ್ಗೆ ಪರಿಚಯಿಸುತ್ತಿದೆ.

ಓದಿರಿ: ಸಿಂಗಾಪುರದ ಹೋಟೆಲ್‌ಗಳಲ್ಲಿ ಡ್ರೋನ್‌ಗಳೇ ವೇಟರ್ಸ್‌ಗಳು

ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಮಾಹಿತಿ ನೀಡುತ್ತಿರುವ ಬ್ಯಾಟರಿಯು ಅತೀ ಶೀರ್ಘದಲ್ಲಿ ಸ್ಮಾರ್ಟ್‌‌ಫೋನ್‌ ಬಳಕೆದಾರರ ಕೈಗೆ ಸಿಗಲಿದೆ.

ಸ್ಟೋರ್‌ಡಾಟ್‌ಕಂಪನಿ

ಸ್ಟೋರ್‌ಡಾಟ್‌ಕಂಪನಿ

ಸ್ಟೋರ್‌ಡಾಟ್‌ ಇಸ್ರೇಲ್‌ ಮೂಲದ ಟೆಕ್ನಾಲಜಿ ಅಭಿವೃದ್ದಿ ಕಂಪನಿಯಾಗಿದೆ. ಈ ಕಂಪನಿ ಹೊಸ ಬ್ಯಾಟರಿ ಅಭಿವೃದ್ದಿ ಪಡಿಸಿದ್ದು, ಕೇವಲ 30 ಸೆಕೆಂಡ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಬಲ್ಲದು.

ಕೃತಕ ಮಾಲಿಕ್ಯೂಲ್ಸ್

ಕೃತಕ ಮಾಲಿಕ್ಯೂಲ್ಸ್

ಸ್ಟೋರ್‌ಡಾಟ್‌ ಕೃತಕ ಮಾಲಿಕ್ಯೂಲ್ಸ್‌ಗಳನ್ನು ಉತ್ಪಾದಿಸಲು ನ್ಯಾನೋ ಟೆಕ್ನಾಲಜಿ ಬಳಸಿಕೊಂಡಿದೆ.

ಸೂಪರ್‌ ಡೆನ್ಸ್‌ಸ್ಪಂಜ್‌

ಸೂಪರ್‌ ಡೆನ್ಸ್‌ಸ್ಪಂಜ್‌

ಸ್ಟೋರ್‌ಡಾಟ್‌ ಸೂಪರ್‌ ಡೆನ್ಸ್‌ ಸ್ಪಂಜ್‌ಅನ್ನು ಪವರ್‌ ಬೇಗ ಚಾರ್ಜ್‌ ಆಗಲು ಬಳಸಿಕೊಂಡಿದೆ. ಇದು ಸರಳ ವಿಧಾನವಾಗಿದೆ.

2016 ಕ್ಕೆ ಬ್ಯಾಟರಿ ಲಾಂಚ್

2016 ಕ್ಕೆ ಬ್ಯಾಟರಿ ಲಾಂಚ್

ಕಂಪನಿಯು ಪ್ರೋಟೋಟೈಪ್‌ ಮಾದರಿಯ ಆಕಾರದಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಲು ಹೆಚ್ಚು ಸಹಾಯವಾಗಿದ್ದು, ಸ್ಮಾರ್ಟ್‌ಫೋನ್‌ಗಳಿಗೆ ಈ ಬ್ಯಾಟರಿಯನ್ನು 2016 ರಲ್ಲಿ ಲಾಂಚ್ ಮಾಡುವುದಾಗಿ ಕಂಪನಿ ಹೇಳಿದೆ.

ಸ್ಟೋರ್‌ಡಾಟ್‌ ಬ್ಯಾಟರಿ

ಸ್ಟೋರ್‌ಡಾಟ್‌ ಬ್ಯಾಟರಿ

ಸ್ಟೋರ್‌ಡಾಟ್‌ ಅಭಿವೃದ್ದಿ ಪಡಿಸಿರುವ ಈ ಬ್ಯಾಟರಿಯು ಕೇವಲ 30 ಸೆಕೆಂಡ್‌ಗಳಲ್ಲಿ ಚಾರ್ಜ್‌ ಮಾಡಿ ದಿನವಿಡಿ ಸ್ಮಾರ್ಟ್‌ಫೋನ್‌ ಉಪಯೋಗಿಸಬಹುದು ಎಂದು ಹೇಳಿದೆ.

Doron Myersdorf,

Doron Myersdorf,

Doron Myersdorf, ಸ್ಟೋರ್‌ಡಾಟ್‌ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ''ಬ್ಯಾಟರಿಗೆ ಹೊಸ ಮೆಟಿರೀಯಲ್ಸ್‌ಗಳನ್ನು ಉಪಯೋಗಿಸಿದ್ದು, ಈ ಹಿಂದೆ ಯಾರು ಸಹ ಅಭಿವೃದ್ದಿ ಪಡಿಸಿಲ್ಲ'' ಎಂದು ಹೇಳಿದ್ದಾರೆ. ಈ ಅಭಿವೃದ್ದಿಯಿಂದ ಇನ್ವೆಟರ್ಸ್‌ ಕಂಪನಿಗೆ ಮರಳಿಬಂದು ಸಹಭಾಗಿ ಆಗಿದ್ದಾರೆ ಎಂದು ಸಹ ಹೇಳಿದ್ದಾರೆ.

ಬ್ಯಾಟರಿಗೆ ಈ ಸಾಮರ್ಥ್ಯ ಹೇಗೆ ?

ಬ್ಯಾಟರಿಗೆ ಈ ಸಾಮರ್ಥ್ಯ ಹೇಗೆ ?

ಜೈವಿಕ ಸಾವಯವ ಪೆಪ್ಟೈಡ್ ಅಣುಗಳು ನ್ಯಾನೋಡಾಟ್ಸ್‌ಗಳ ರೀತಿಯಲ್ಲಿ ಟೆಕ್ನಾಲಿಜಿಗೆ ಹೆಚ್ಚು ಪ್ರಗತಿ ನೀಡುತ್ತವೆ. ಈ ಅಣುಗಳು (ಮಾಲಿಕ್ಯೂಲ್ಸ್) ಬ್ಯಾಟರಿಯು ಪವರ್‌ ಸಂಗ್ರಹಿಸಿ ಹೆಚ್ಚು ಪವರ್‌ ನೀಡುವಲ್ಲಿ ಕಾರ್ಯನಿರ್ವಹಿಸುತ್ತವೆ.

ಸ್ಮಾರ್ಟ್‌ಫೋನ್‌ ಬಳಕೆದಾರರು.

ಸ್ಮಾರ್ಟ್‌ಫೋನ್‌ ಬಳಕೆದಾರರು.

ಈ ಬ್ಯಾಟರಿಯು ಈ ವರ್ಷದಲ್ಲಿ 1.75 ಬಿಲಿಯನ್‌ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ತಲುಪಲಿದೆ. ಸ್ಟೋರ್‌ಡಾಟ್‌ ಏಷ್ಯಾ ಕಂಪನಿಯಾಗಿದೆ.

ಜಾಕ್‌ ವೀಸ್‌ಫೆಲ್ಡ್

ಜಾಕ್‌ ವೀಸ್‌ಫೆಲ್ಡ್

ಜಾಕ್‌ವೀಸ್‌ಫೆಲ್ಡ್ ಸ್ಟೋರ್‌ಡಾಟ್‌ ಬ್ಯಾಟಿರಿಯನ್ನು ಉಪಯೋಗಿಸಿದವರಾಗಿದ್ದು, ಮೊಬೈಲ್‌ ಫೋನ್‌ ಬ್ಯಾಟರಿ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಹೆಚ್ಚು ಅನುಕೂಲವಾಗಲಿದೆ ಎಂದಿದ್ದಾರೆ.

ಪವರ್‌ ಸೈಕಲ್

ಪವರ್‌ ಸೈಕಲ್

ಸ್ಟೋರ್‌ಡಾಟ್‌, ಜನರು ಎದುರಿಸುತ್ತಿರುವ ಬ್ಯಾಟರಿ ಸಮಸ್ಯೆಯನ್ನು ಹೋಗಲಾಡಿಸಲು ಸಾಮರ್ಥ್ಯ ಹೊಂದಿದೆ. ಮೊಬೈಲ್‌ನ ಹಲವು ಗಾತ್ರ ಬ್ಯಾಟರಿಗಳನ್ನು ಸಹ ಇದು ಅಭಿವೃದ್ದಿ ಪಡಿಸಲು ಮುಂದಾಗುತ್ತಿರುವ ಬಗ್ಗೆ ಹೇಳಿದೆ.

ಬ್ಯಾಟರಿ ಬೆಲೆ $100 ರಿಂದ $150

ಬ್ಯಾಟರಿ ಬೆಲೆ $100 ರಿಂದ $150

ಬ್ಯಾಟರಿ ಬೆಲೆ $100 ರಿಂದ $150 ಆಗುವ ಸಂಭವವಿದ್ದು, ಈ ಬ್ಯಾಟರಿ ಕನಿಷ್ಟ ಎಂದರೂ 3 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು Myersdorf ಹೇಳಿದೆ.

Best Mobiles in India

English summary
StoreDot is an Israeli company based in Israel and it claims to have come up with a new technology with which batteries can be charged within seconds for smartphones and within minutes for EVs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X