ಸಿಂಗಾಪುರದ ಹೋಟೆಲ್‌ಗಳಲ್ಲಿ ಡ್ರೋನ್‌ಗಳೇ ವೇಟರ್ಸ್‌ಗಳು

By Suneel
|

ತಂತ್ರಜ್ಞಾನ ಅಭಿವೃದ್ದಿಯಿಂದ ಇಂದು ಎಷ್ಟೋ ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಅಂತ ಹೇಳೋದು ಮಾಮೂಲಿ ಯಾಗಿ ಬಿಟ್ಟಿದೆ. ಆದರೆ ಇಂದು ಎಷ್ಟೋ ಜನರ ಪಾಲಿಗೆ ತಮ್ಮ ವ್ಯವಹಾರಗಳನ್ನು ನಿಭಾಯಿಸಿ ಉತ್ತಮ ಉದ್ಯಮಗಳನ್ನು ನಿರ್ಮಿಸಲು ಟೆಕ್‌ಗಳೇ ಕಾರಣ ಎಂಬುದನ್ನು ಮರೆಯೋ ಹಾಗಿಲ್ಲ.

ಓದಿರಿ: ಏರ್‌ಟೆಲ್‌ ಗ್ರಾಹಕರಿಗೆ ಡಾಟಾ ಬೆನಿಫಿಟ್ಸ್‌ಗಳ ಸುರಿಮಳೆ

ಒಂದು ಟೆಕ್‌ ಅನ್ನು ಅಭಿವೃದ್ದಿ ಪಡಿಸುವುದು ಒಂದು ಸಮಸ್ಯೆಯನ್ನು ಬಗೆಹರಿಸಲು ಎಂಬುದನ್ನು ಮನಗಾಣಲೇ ಬೇಕು. ಇದಕ್ಕೆ ಉದಾಹರಣೆಯಾಗಿ ಸಿಂಗಾಪುರದ ಹೋಟೆಲ್‌ಗಳಲ್ಲಿ ವೇಟರ್ಸ್‌ಗಳ ಕೊರತೆಗಾಗಿ ಈಗ ಡ್ರೋನ್‌ಗಳನ್ನು ವೇಟರ್ಸ್‌ಗಳಾಗಿ ಬಳಸಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗಿಜ್‌ಬಾಟ್‌ ತನ್ನ ಲೇಖನದಲ್ಲಿ ನೀಡಿದೆ.

ರೆಸ್ಟೋರೆಂಟ್‌ಗಳಲ್ಲಿ ಡ್ರೋನ್‌ಗಳೇ ವೇಟರ್ಸ್‌

ರೆಸ್ಟೋರೆಂಟ್‌ಗಳಲ್ಲಿ ಡ್ರೋನ್‌ಗಳೇ ವೇಟರ್ಸ್‌

ಸಿಂಗಾಪುರದ ರೆಸ್ಟೋರೆಂಟ್‌ ಒಂದು ವೇಟರ್ಸ್‌ಗಳ ಸಮಸ್ಯೆಯನ್ನು ನಿಭಾಯಿಸಲು ಡ್ರೋನ್‌ಗಳನ್ನು ವೇಟರ್ಸ್‌ಗಳಾಗಿ ಅತೀ ಶೀಘ್ರದಲ್ಲಿ ಅಳವಡಿಸಲಿದೆ.

ಸಿಂಗಾಪುರ ಸರ್ಕಾರದ ನಿರ್ಬಂಧ.

ಸಿಂಗಾಪುರ ಸರ್ಕಾರದ ನಿರ್ಬಂಧ.

ಸಿಂಗಾಪುರ ಸರ್ಕಾರ ವಿದೇಶಿ ಉದ್ಯೋಗಿಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಿರುವುದರಿಂದ ಅಲ್ಲಿನ ಸ್ಥಳೀಯ ವ್ಯವಹಾರಗಳಿಗೆ ಮತ್ತು ಹೋಟೆಲ್‌ಗಳಿಗೆ ಉದ್ಯೋಗಿಗಳು ಸಿಗುತ್ತಿಲ್ಲ.

ರೆಸ್ಟೋರೆಂಟ್‌ಗಳು

ರೆಸ್ಟೋರೆಂಟ್‌ಗಳು

ಸಿಂಗಾಪುರದ ರೆಸ್ಟೋರೆಂಟ್‌ಗಳಿಗೆ ಈಗ ವೇಟರ್ಸ್‌ಗಳನ್ನು ಸೇರಿಸಿಕೊಳ್ಳಲು ಉದ್ಯೋಗಿಗಳೇ ಇಲ್ಲ. ಕಾರಣ ಸಿಂಗಾಪುರದ ಯುವಕರು ಸರ್ವೀಸ್‌ ಜಾಬ್‌ಗಳನ್ನು ಇಷ್ಟಪಡುವುದಿಲ್ಲ.

2015 ಅಂತ್ಯದೊಳಗೆ ಡ್ರೋನ್‌ಗಳ ಅಳವಡಿಕೆ

2015 ಅಂತ್ಯದೊಳಗೆ ಡ್ರೋನ್‌ಗಳ ಅಳವಡಿಕೆ

ರೆಸ್ಟೋರೆಂಟ್‌ ಒಂದು ಈ ವರ್ಷದ ಅಂತ್ಯದೊಳಗೆ ರೋಬೋಟಿಕ್ಸ್ ಡ್ರೋನ್‌ಗಳನ್ನು ವೇಟರ್‌ ಆಗಿ ಅಳವಡಿಸಲಿದೆ.

ಡ್ರೋನ್‌ ನಿರ್ವಹಣೆ ಹೇಗೆ?

ಡ್ರೋನ್‌ ನಿರ್ವಹಣೆ ಹೇಗೆ?

ಡ್ರೋನ್‌ಗಳು, ನಾವಿಗೇಟ್‌ ಆಗಲು ರೆಸ್ಟೋರೆಂಟ್‌ಗಳ ಸುತ್ತಾ ಇರಿಸಿರುವ ಅತಿಗೆಂಪು ಸಂವೇದಕಗಳನ್ನು (infrared sensors) ಬಳಸಿಕೊಂಡು ಕಂಪ್ಯೂಟರ್‌ ಪ್ರೋಗ್ರಾಮಾ ಆಯ್ಕೆಯಿಂದ ನಿರ್ವಹಣೆ ಆಗಲಿವೆ.

ಡ್ರೋನ್‌ ಕಾರ್ಯ ಪ್ರಾರಂಭ

ಡ್ರೋನ್‌ ಕಾರ್ಯ ಪ್ರಾರಂಭ

ಡ್ರೋನ್‌ ವೇಟರ್ಸ್‌ಗಳು ಯಾರಾದರೂ ಕರೆಯುವ ಮೊದಲೇ ತಮ್ಮ ಕೆಲಸ ಪ್ರಾರಂಭ ಮಾಡುತ್ತವಂತೆ.

ಡ್ರೋನ್‌ಗಳ ಸಾಮರ್ಥ್ಯ

ಡ್ರೋನ್‌ಗಳ ಸಾಮರ್ಥ್ಯ

ಡ್ರೋನ್‌ಗಳು 2KG ತೂಕದ ಆಹಾರ ಮತ್ತುಪಾನೀಯಗಳನ್ನು ಕ್ಯಾರಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಗ್ಯಾಹಕರೊಂದಿಗೆ ಯಾವುದೇ ಸಂಘರ್ಷವಿಲ್ಲ.

ಗ್ಯಾಹಕರೊಂದಿಗೆ ಯಾವುದೇ ಸಂಘರ್ಷವಿಲ್ಲ.

ಡ್ರೋನ್‌ಗಳು ಹೆಚ್ಚು ಸಂಘರ್ಷಕ್ಕೆ ಕಾರಣವಾಗುತ್ತವೆ ಎಂಬ ಹೇಳಿಕೆಗೆ ರೋಬೋಟಿಕ್ಸ್‌ ಸಿಇಓ ಜನ್‌ಯಾಂಗ್‌ ವೂನ್‌ ರವರು ''ಡ್ರೋನ್‌ಗಳು ಆನ್‌ಬೋರ್ಡ್‌ ಕ್ಯಾಮೆರಾ ಮತ್ತು ಸೆನ್ಸಾರ್‌ಗಳನ್ನು ಹೊಂದುವುದರಿಂದ ಯಾವುದೇ ಘರ್ಷಣೆಗೆ ಅವಕಾಶವಿಲ್ಲ'' ಎಂದಿದ್ದಾರೆ.

ಹೆಚ್ಚಿನ ಸಂವಹನಕ್ಕೆ ಸಿಬ್ಬಂದಿಗಳು ನೆರವು

ಹೆಚ್ಚಿನ ಸಂವಹನಕ್ಕೆ ಸಿಬ್ಬಂದಿಗಳು ನೆರವು

ಡ್ರೋನ್‌ಗಳು ಸರ್ವೀಸ್‌ ನೀಡುತ್ತವೆ, ಹೆಚ್ಚಿನ ಸಂವಹನ ಬೇಕಂದಲ್ಲಿ ಸಿಬ್ಬಂದಿಗಳು ಗ್ರಾಹಕರ ನೆರವಿಗೆ ಬರುತ್ತಾರೆ ಎನ್ನಲಾಗಿದೆ.

ಎಡ್ವರ್ಡ್ ಚಿಯಾ- ಟಿಂಬ್ರೆ ಗೂಪ್‌ ಎಂಡಿ

ಎಡ್ವರ್ಡ್ ಚಿಯಾ- ಟಿಂಬ್ರೆ ಗೂಪ್‌ ಎಂಡಿ

ಪ್ರಸ್ತುತದಲ್ಲಿ 40 ಡ್ರೋನ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಲಗಿದೆ ಎಂದು ಟಿಂಬ್ರೆ ಗ್ರೂಪ್‌ ಸ್ಪೋಕ್‌ಪರ್ಸನ್‌ ಎಂಡಿ ಎಡ್ವರ್ಡ್‌ ಪ್ರಕಾರ ಹೇಳಿದ್ದಾರೆ.

ಡ್ರೋನ್‌ಗಳ ಕೆಲಸ

ಡ್ರೋನ್‌ಗಳ ಕೆಲಸ

ಡ್ರೋನ್‌ಗಳು ಪ್ರಸ್ತುತದಲ್ಲಿ ಕಿಚೆನ್ ಇಂದ ಸರ್ವೀಸ್ ಸ್ಟೇಶನ್‌ವರೆಗೆ ಮಾತ್ರ ಆಹಾರವನ್ನು ಪ್ರಾರಂಭದಲ್ಲಿ ತರುತ್ತವೆ. ನಂತರದ ಹಲವು ದಿನಗಳಲ್ಲಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎನ್ನಲಾಗಿದೆ.

Best Mobiles in India

English summary
Singapore’s government has implemented some curbs on cheap and foreign labor in order to slow down the process of immigration and this has resulted in non-availability of manpower for local businesses.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X