ಅಧಿಕವಾಗುತ್ತಿರುವ ನಿಮ್ಮ ಟಿವಿ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ?

By Gizbot Bureau
|

ನಿಮ್ಮ ಮಾಸಿಕ ಟಿವಿ ಬಿಲ್ ಅಧಿಕಗೊಳ್ಳುತ್ತಿರುವುದರ ಬಗ್ಗೆ ಒಂದು ವೇಳೆ ನಿಮಗೆ ಬೇಸರವಿದ್ದಲ್ಲಿ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇರುವ ಒಂದೇ ಒಂದು ಆಯ್ಕೆಯೆಂದರೆ ದೇಶದಲ್ಲಿ ಲಭ್ಯವಾಗುತ್ತಿರುವ ಆಡ್-ಆನ್ ಗಳನ್ನು, ಡಿಟಿಹೆಚ್ ನಿಂದ ಲಭ್ಯವಾಗುವ ಮಿನಿ ಪ್ಯಾಕ್ ಗಳನ್ನು ಸೆಲೆಕ್ಟ್ ಮಾಡಿಕೊಳ್ಳುವುದು.

ಅಧಿಕವಾಗುತ್ತಿರುವ ನಿಮ್ಮ ಟಿವಿ ಬಿಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ?

ಇತರೆ ಆಪರೇಟರ್ ಗಳಿಗಿಂತ ಯಾವಾಗಲೂ ಕೂಡ ಉತ್ತಮ ಸೇವೆಯನ್ನು ನೀಡುವ ಟಾಟಾ ಸ್ಕೈ ಇದೀಗ ಕೆಲವು ಆಡ್-ಆನ್ ಗಳನ್ನು, ಮಿನಿ ಪ್ಯಾಕ್ ಗಳನ್ನು ನೀಡುತ್ತಿದೆ. ಈ ಮೂಲಕ ಟಾಟಾ ಸ್ಕೈ ತನ್ನ ಪ್ರಾದೇಶಿಕ ಕಂಟೆಂಟ್ ಗಳನ್ನು ಬೂಸ್ಟ್ ಮಾಡುತ್ತಿದೆ ಮತ್ತು ಕೇವಲ 5 ರುಪಾಯಿಯಿಂದ ಪ್ಯಾಕ್ ಆರಂಭವಾಗುತ್ತಿದೆ. ಮಳಯಾಳಂ, ಕನ್ನಡ, ತೆಲುಗು, ತಮಿಳು, ಮರಾಠಿ, ಮತ್ತು ಬೆಂಗಾಳಿ ಭಾಷೆಗಳಲ್ಲಿ ಈ ಪ್ಯಾಕ್ ಗಳು ಟಾಟಾ ಸ್ಕೈನಿಂದ ಪರಿಚಿತವಾಗಿವೆ. ಅದರಲ್ಲಿ ಸ್ಪೋರ್ಟ್ಸ್, ಮ್ಯೂಸಿಕ್ ಆಧಾರಿತ ಆಡ್ ಆನ್ ಪ್ಯಾಕ್ ಗಳು ಕೂಡ ಟಾಟಾ ಸ್ಕೈನಲ್ಲಿ ಲಭ್ಯವಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಟಾಟಾ ಸ್ಕೈ ಹೊಸ HD ಆಡ್-ಆನ್ ಪ್ಯಾಕ್ ಗಳು

ಪ್ರಾದೇಶಿಕ ಭಾಷೆಗಳಲ್ಲಿ ಟಾಟಾ ಸ್ಕೈ ಹೊಸ HD ಆಡ್-ಆನ್ ಪ್ಯಾಕ್ ಗಳು

ಇತರೆ ಆಡ್-ಆನ್ ಪ್ಯಾಕ್ ಗಳನ್ನು ಬಿಡುಗಡೆಗೊಳಿಸುವುದಕ್ಕಿಂತ ಟಾಟಾ ಸ್ಕೈ HD ಮತ್ತು SD ಮಿನಿ ಪ್ಯಾಕ್ ಗಳ ಮಿಶ್ರಣದ ಪ್ಯಾಕ್ ನ್ನು ಬಿಡುಗಡೆಗೊಳಿಸಿದೆ. 13 ಹೊಸ ಆಡ್-ಆನ್ HD ಪ್ಯಾಕ್ ಗಳನ್ನು ಟಾಟಾ ಸ್ಕೈ ಪರಿಚಯಿಸಿದೆ.

ಮತ್ತೊಂದು ಗಮನಿಸಬೇಕಾಗಿರುವ ಅಂಶವೇನೆಂದರೆ ಹೊಸದಾಗಿ ಪರಿಚಯಿಸಲಾಗಿರುವ ಲಿಸ್ಟ್ ನಲ್ಲಿರುವ ಯಾವುದೇ ಚಾನಲ್ ಗಳು ಕೂಡ ರೂಪಾಯಿ 60 ರಿಂದ ರೂಪಾಯಿ 200 ಬೆಲೆಯಲ್ಲಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಇರುವ ಚಾನಲ್ ಗಳಾಗಿವೆ.

ಹೊಸ ಆಡ್-ಆನ್ ಪ್ಯಾಕ್ ನಲ್ಲಿ ತಮಿಳು ಪ್ರಾದೇಶಿಕ HD ಪ್ಯಾಕ್ ರೂಪಾಯಿ164 ಕ್ಕೆ, ತಮಿಳು ಮಿನಿ HD ಪ್ಯಾಕ್ ರೂಪಾಯಿ 81ಕ್ಕೆ, ತೆಲುಗು ಪ್ರಾದೇಶಿಕ ಮತ್ತು ಮಿನಿ HD ಪ್ಯಾಕ್ ಕ್ರಮವಾಗಿ ರುಪಾಯಿ 216 ಮತ್ತು ರುಪಾಯಿ 90 ಕ್ಕೆ ಸಿಗುತ್ತದೆ.ಅದೇ ರೀತಿ ಈ ಪ್ಯಾಕ್ ಗಳು ಕನ್ನಡ, ಮಳಯಾಳಂ, ಮರಾಠಿ ಮತ್ತು ಬೆಂಗಾಳಿ ಭಾಷೆಯಲ್ಲಿ ಲಭ್ಯವಿದೆ. ಇವೆಲ್ಲವೂ ಕೂಡ ಪ್ರಾದೇಶಿಕ HD ಪ್ಯಾಕ್ ಅಥವಾ ಮಿನಿ HD ಪ್ಯಾಕ್ ನಲ್ಲಿ ಸಿಗುತ್ತದೆ.

ಆಡ್ ಆನ್ ಪ್ಲಾನ್

ಆಡ್ ಆನ್ ಪ್ಲಾನ್

ಪ್ರಾದೇಶಿಕ ಭಾಷೆಗಳ ಆಡ್ ಆನ್ ಪ್ಲಾನ್ ಗಳ ಜೊತೆಗೆ ಹೊಸ ಇಂಗ್ಲೀಷ್ ಮೂವೀಸ್ HD ಮಿನಿ ಪ್ಯಾಕ್ ರುಪಾಯಿ 162 ಕ್ಕೆ 12 ಚಾನಲ್ ಗಳು ಸಿಗುತ್ತದೆ.

ಈ ಹಿಂದೆ ಬಿಡುಗಡೆಗೊಂಡಿರುವ ಆಡ್-ಆನ್ ಪ್ಯಾಕ್ ಗಳಲ್ಲಿ ಟಾಟಾ ಸ್ಕೈ ಮಿನಿ ಪ್ಯಾಕ್ ಗಳನ್ನು ಪರಿಚಯಿಸಿತ್ತು.ಈ ಪ್ಯಾಕ್ ಗಳಲ್ಲಿ ಕ್ರಿಕೆಟ್ ಹಿಂದಿ HD (Rs 42), ಕ್ರಿಕೆಟ್ ಇಂಗ್ಲೀಷ್ HD (Rs 44), ಮ್ಯೂಸಿಕ್ HD (Rs 11), ನಾಲೆಡ್ಜ್ ಮತ್ತು ಲೈಫ್ ಸ್ಟೈಲ್ ಮಿನಿ HD (Rs 53), ನಾಲೆಡ್ಜ್ ಮತ್ತು ಲೈಫ್ ಸ್ಟೈಲ್ HD (Rs 83), ಇಂಗ್ಲೀಷ್ ಎಂಟರ್ಟೈನ್ ಮೆಂಟ್ HD (Rs 87), ಇಂಗ್ಲೀಷ್ ಮೂವೀಸ್ ಮಿನಿ HD (Rs 76),ಕಿಡ್ಸ್ ಮಿನಿ HD (Rs 45)ಮತ್ತು ಕಿಡ್ಸ್ HD (Rs 53) ಪ್ಯಾಕ್ ಗಳು ಲಭ್ಯವಿತ್ತು..

ಇತರೆ ಕೆಲವು ಮಿನಿ SD ಪ್ಯಾಕ್ ಗಳನ್ನು ಕೂಡ ಟಾಟಾ ಸ್ಕೈ ಪರಿಚಯಿಸಿದ್ದು ಅದರಲ್ಲಿ ಹಿಂದಿ ನ್ಯೂಸ್ (Rs 5),ಕ್ರಿಕೆಟ್ ಹಿಂದಿ (Rs 42),ಕ್ರಿಕೆಟ್ ಇಂಗ್ಲೀಷ್ (Rs 44), ಮ್ಯೂಸಿಕ್ (Rs 7),ನಾಲೆಡ್ಜ್ & ಲೈಫ್ ಸ್ಟೈಲ್ ಮಿನಿ (Rs 21), ನಾಲೆಡ್ಜ್ &ಲೈಫ್ ಸ್ಟೈಲ್ (Rs 34), ಇಂಗ್ಲೀಷ್ ನ್ಯೂಸ್ (Rs 23).

ಟ್ರಾಯ್ ಡೆಡ್ ಲೈನ್

ಟ್ರಾಯ್ ಡೆಡ್ ಲೈನ್

ಹೊಸ ತಾರಿಫ್ ಗಳನ್ನು ಜಾರಿಗೆ ತರುವುದಕ್ಕೆ ಟ್ರಾಯ್ ಡೆಡ್ ಲೈನ್ ನ್ನು ಮುಂದುವರಿಸಿದೆ.

ಇದಕ್ಕೆ ಸಂಬಂಧಿಸಿದ ಬೆಳವಣಿಗೆಯೊಂದರಲ್ಲಿ ಟ್ರಾಯ್ ಇದೀಗ ಹೊಸದಾಗಿ ಪರಿಚಯಿಸಲಾಗಿರುವ ತಾರಿಫ್ ಗಳನ್ನು ಜಾರಿಗೆ ತರುವುದಕ್ಕಾಗಿ ಡೆಡ್ ಲೈನ್ ನ್ನು ಮುಂದೂಡಿದ್ದು ಮಾರ್ಚ್ 31 ರ ವರೆಗೆ ಅವಕಾಶವಿರುತ್ತದೆ. ಈ ಹಿಂದೆ ಫೆಬ್ರವರಿ 1,2019 ಕ್ಕೆ ಡೆಡ್ ಲೈನ್ ಫಿಕ್ಸ್ ಮಾಡಲಾಗಿತ್ತು. ಈ ಬದಲಾವಣೆಯು ಚಂದಾದಾರರಿಗೆ ಚಾನಲ್ ಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಸಮಯಾವಕಾಶವನ್ನ ಒದಗಿಸಿಕೊಡುತ್ತದೆ. ಹೊಸ ಪ್ಲಾನ್ ಗಳಿಗೆ ಬದಲಾಗುವುದಕ್ಕೆ ಜನರಿಗೆ ತಿಳುವಳಿಕೆ ನೀಡಲು ಡಿಟಿಹೆಚ್ ಮತ್ತು ಕೇಬಲ್ ಆಪರೇಟರ್ ಗಳಿಗೆ ಸಮಯ ಒದಗಿಸಿದಂತಾಗಿದೆ.

ಆದರೆ ಟಿವಿ ಇಂಡಸ್ಟ್ರಿಯಲ್ಲಿ ಹೊಸ ಟ್ರಾಯ್ ತಾರಿಫ್ ಮತ್ತು ರಿಲಯನ್ಸ್ ಜಿಯೋ ಗಿಗಾ ಟಿವಿ ಹೊಸ ಸಂಚಲನವನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ.

Best Mobiles in India

Read more about:
English summary
Tata Sky Unveils 13 HD and SD Mini Packs Across Six Regional Languages

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X