ಈ ಟ್ರಿಕ್ಸ್ ನಿಮಗೆ ಗೊತ್ತಿದ್ದರೆ ನೀವು ಕೋಟ್ಯಾಧಿಪತಿಗಳು
ಇಂದಿನ ತಾಂತ್ರಿಕ ಯುಗದಲ್ಲಿ ಕೈತುಂಬಾ ಸಂಬಳ ಪಡೆಯಲು ಟೆಕ್ ಸ್ಕಿಲ್‌ಗಳು ಅತೀ ಅಗತ್ಯವಾಗಿದೆ. ಈ ಟೆಕ್ ಸ್ಕಿಲ್‌ಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಲು ನಿಮ್ಮಲ್ಲಿ ಸಾಮರ್ಥ್ಯ ಇರಬೇಕು ಅಂತೆಯೇ ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಕಲೆಗಾರಿಗೆ ಟೆಕ್ ವ್ಯಕ್ತಿಗೆ ಇರಬೇಕು.
ಓದಿರಿ: ನಿಮ್ಮ ಮನಮೆಚ್ಚಿದ ಟಾಪ್ ಕ್ಯಾಮೆರಾ ಫೋನ್ಸ್
ಕೈತುಂಬಾ ಸಂಬಳ ಪಡೆಯುವ ಕೆಲಸದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿರುವ ಈ ಕೌಶಲ್ಯಗಳು ಉದ್ಯೋಗಿಯನ್ನು ನಿಪುಣರನ್ನಾಗಿಸುತ್ತದೆ. ಮತ್ತು ಹೆಚ್ಚು ಸಂಬಳ ಪಡೆಯುವಲ್ಲಿ ನಿಷ್ಣಾತರನ್ನಾಗಿಸುತ್ತದೆ. ಇಂದಿನ ಲೇಖನದಲ್ಲಿ ಈ ಕೌಶಲ್ಯಗಳ ಬಗ್ಗೆ ನಾವು ಮಾಹಿತಿಯನ್ನು ನೀಡಲಿದ್ದು ಇದು ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

ಪಾಸ್
ಪಾಸ್ ಒಂದು ರೀತಿಯ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನವಾಗಿದೆ. ಅಪ್ಲಿಕೇಶನ್ ಬರೆಯುವ ಡೆವಲಪರ್‌ಗೆ ಈ ಕೌಶಲ್ಯ ಸಹಾಯ ಮಾಡುತ್ತದೆ.

ಕ್ಯಾಸಂಡ್ರಾ
ಕ್ಯಾಸಂಡ್ರಾ ಉಚಿತ ಮತ್ತು ಮುಕ್ತವಾಗಿರುವ ಸಂಪನ್ಮೂಲವಾಗಿದ್ದು ಒಂದು ಡೇಟಾಬೇಸ್ ಆಗಿದೆ.

ಮ್ಯಾಪ್ ರೆಡ್ಯೂಸ್
ಹಡೂಪ್‌ನ ಹೃದಯವೆಂದೇ ಪ್ರಸಿದ್ಧಿಯಾಗಿರುವ ಮ್ಯಾಪ್ ರೆಡ್ಯೂಸ್ ಕಡಿಮೆ ವೆಚ್ಚದ ಕಂಪ್ಯೂಟರ್ ಸರ್ವರ್‌ಗಳಲ್ಲಿ ಎಲ್ಲಾ ರೀತಿಯ ಡೇಟಾವನ್ನು ಸಂಗ್ರಹಿಸಲು ಹಡೂಪ್ ಅನ್ನು ಇದು ಅನುಮತಿಸುತ್ತದೆ.

ಕ್ಲೌಡೇರಾ
ಹಡೂಪ್‌ನ ಕಮರ್ಶಿಯಲ್ ಆವೃತ್ತಿಯನ್ನು ತಯಾರಿಸುವ ಕಂಪೆನಿಯಾಗಿದೆ ಕ್ಲೌಡೇರಾ. ಇದು ಹೆಚ್ಚು ಜನಪ್ರಿಯವಾಗಿರುವ ಕಂಪೆನಿ ಕೂಡ ಹೌದು.

ಇಮೇಜಸ್
ಎಚ್ ಬೇಸ್ ಹಡೂಪ್ ತಂತ್ರಜ್ಞಾನವನ್ನು ಆಧರಿಸಿರುವ ಇನ್ನೊಂದು ಜನಪ್ರಿಯ ಪ್ರಾಜೆಕ್ಟ್ ಆಗಿದೆ. ಎಚ್‌ಬೇಸ್ ಡೇಟಾವನ್ನು ಸಾರ್ಟ್ ಮಾಡುತ್ತದೆ ಮತ್ತು ಡೇಟಾವನ್ನು ಒಗ್ಗೂಡಿಸುತ್ತದೆ.

ಪಿಗ್
ಇದು ಕೂಡ ಪ್ರಚಲಿತದಲ್ಲಿರುವ ಇನ್ನೊಂದು ಕೌಶಲ್ಯವಾಗಿದ್ದು, ಬಿಗ್ ಡೇಟಾ ಮತ್ತು ಹಡೂಪ್‌ನಂತಹ ತಂತ್ರಜ್ಞಾನಗಳಿಗಾಗಿ ಹೆಚ್ಚು ಚಾಲ್ತಿಯಲ್ಲಿದೆ. ಇದೊಂದು ಪ್ರೊಗ್ರಾಮಿಂಗ್ ಲಾಂಗ್ವೇಜ್ ಆಗಿದೆ.

ABAP
ಅಡ್ವಾನ್ಸ್‌ಡ್ ಬ್ಯುಸಿನೆಸ್ ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಅಥವಾ ABAP ಸಾಫ್ಟ್‌ವೇರ್ ಭಾಷೆಯಾಗಿದ್ದು SAP ನಿಂದ ಅಭಿವೃದ್ಧಿಯನ್ನು ಕಂಡುಕೊಂಡಿದೆ.

ಚೆಫ್
ಚೆಫ್ ಸಾಫ್ಟ್‌ವೇರ್‌ನಿಂದ ಬಂದಿರುವ "ಐಟಿ ಆಟೊಮೇಶನ್" ಸಾಫ್ಟ್‌ವೇರ್ ಆಗಿದೆ.

ಫ್ಲುಮ್
ಇದೊಂದು ಜನಪ್ರಿಯ ಸ್ಕಿಲ್ ಆಗಿದ್ದು ಇದನ್ನು ಬಳಸಿ ಹೆಚ್ಚುವರಿ ಡೇಟಾವನ್ನು ಸರಿಸಬಹುದಾಗಿದೆ.

ಹಡೂಪ್
ಹೆಚ್ಚು ಜನಪ್ರಿಯವಾಗಿರುವ ಟೆಕ್ ಕೌಶಲ್ಯ ಇದಾಗಿದೆ. ಇದೊಂದು ಮುಕ್ತ ಸಾಫ್ಟ್‌ವೇರ್ ಆಗಿದ್ದು ಹೆಚ್ಚುವರಿ ಡೇಟಾವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ.


Click it and Unblock the Notifications








