ಟೆಕ್ನೋ ಕಂಪೆನಿಯ ಮೊದಲ ಲ್ಯಾಪ್‌ಟಾಪ್‌ ಅನಾವರಣ! ಫೀಚರ್ಸ್‌ ಹೇಗಿದೆ?

|

ಟೆಕ್‌ ವಲಯದ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಟೆಕ್ನೋ ಕಂಪೆನಿ ಕೂಡ ಒಂದಾಗಿದೆ. ಟೆಕ್ನೋ ಕಂಪೆನಿ ತನ್ನ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸಾಕಷ್ಟು ಸದ್ದು ಮಾಡಿದೆ. ಸದ್ಯ ಇದೀಗ ಜರ್ಮನಿ ಬರ್ಲಿನ್‌ನಲ್ಲಿ ನಡೆಯುತ್ತಿರುವ IFA 2022 ರಲ್ಲಿ ತನ್ನ ಮೊದಲ ಲ್ಯಾಪ್‌ಟಾಪ್ ಅನ್ನು ಅನಾವರಣಗೊಳಿಸಿದ. ಇನ್ನು ಈ ಲ್ಯಾಪ್‌ಟಾಪ್‌ ಅನ್ನು ಟೆಕ್ನೋ ಮೆಗಾಬುಕ್‌ T1 ಎಂದು ಹೆಸರಿಸಲಾಗಿದೆ. ಇದು ಆಪಲ್‌ ಮ್ಯಾಕ್‌ಬುಕ್‌ನಂತೆಯೇ ಪ್ರೀಮಿಯಂ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ.

ಲ್ಯಾಪ್‌ಟಾಪ್‌

ಹೌದು, ಟೆಕ್ನೋ ಕಂಪೆನಿ ತನ್ನ ಮೊದಲ ಲ್ಯಾಪ್‌ಟಾಪ್‌ ಟೆಕ್ನೋ ಮೆಗಾಬುಕ್‌ T1 ಅನ್ನು ಪರಿಚಯಿಸಿದೆ. ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಗ್ಯಾಲಿಯಂ ನೈಟ್ರೈಡ್ (GaN) ಚಾರ್ಜರ್‌ನೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್‌ ಸ್ಟಾರ್ಟ್ರೈಲ್ ಫ್ಯಾಂಟಮ್ ಫಿನಿಶ್ ಅನ್ನು ಹೊಂದಿದ್ದು, ಗ್ಲಾಸಿ ಫಿನಿಶ್‌ಗಳೊಂದಿಗೆ ಏಳು ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಇದು ದೊಡ್ಡ ಟಚ್‌ಪ್ಯಾಡ್ ಶೈಲಿ ಮತ್ತು ಬೆಜೆಲ್-ಲೆಸ್ ಡಿಸ್‌ಪ್ಲೇಯನ್ನು ಎರವಲು ಪಡೆದುಕೊಂಡಿದೆ. ಹಾಗಾದ್ರೆ ಈ ಹೊಸ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಗಾಬುಕ್

ಟೆಕ್ನೋ ಮೆಗಾಬುಕ್ T1 15.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 350 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, 100% sRGB ಹೈ ಕಲರ್ ಗ್ಯಾಮಟ್ ಅನ್ನು ನೀಡಲಿದೆ. ಇದು DC ಅಡಾಪ್ಟಿವ್ ಡಿಮ್ಮಿಂಗ್ ಮತ್ತು TUV ಲ್ಯಾಂಡೆ ಐ ಕಂಫರ್ಟ್ ಪ್ರಮಾಣೀಕರಣದೊಂದಿಗೆ ಬರಲಿದೆ. ಇನ್ನು ಈ ಲ್ಯಾಪ್‌ಟಾಪ್ 10 ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಅಥವಾ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 1TB SSD ಸ್ಟೋರೇಜ್‌ ಅನ್ನು ಹೊಂದಿದೆ.

ಲ್ಯಾಪ್‌ಟಾಪ್‌

ಮೆಗಾಬುಕ್‌ T1 ಲ್ಯಾಪ್‌ಟಾಪ್‌ ಎರಡು ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದ್ದು, DTS ಇಮ್ಮರ್ಸಿವ್ ಸೌಂಡ್‌ನಿಂದ ಟ್ಯೂನ್ ಹೊಂದಿದೆ. ಇದು ಉತ್ತಮ ಸೌಂಡ್‌ ಸಿಸ್ಟಂಗಾಗಿ ಟೆಕ್ನೋ ಆಡಿಯೊ ಲ್ಯಾಬ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದಲ್ಲದೆ ವೀಡಿಯೊ ಕರೆಗಳನ್ನು ಉತ್ತಮಗೊಳಿಸಲು AI ENC ಟೆಕ್ನಾಲಜಿಯನ್ನು ಒಳಗೊಂಡ ಎರಡು ಮೈಕ್ರೊಫೋನ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ನಲ್ಲಿ 2 ಮೆಗಾಪಿಕ್ಸೆಲ್ ವೆಬ್‌ಕ್ಯಾಮ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನ ಹಿಂಜ್ 180 ಡಿಗ್ರಿಗಳಷ್ಟು ಕಡಿಮೆ ಇರುತ್ತದೆ. ಇದು ವೇಗವಾದ ಇಂಟರ್ನೆಟ್ ಮತ್ತು ಕಡಿಮೆ ಸುಪ್ತತೆಗಾಗಿ Wi-Fi 6 ಅನ್ನು ಸಹ ಬೆಂಬಲಿಸುತ್ತದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ 70Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, GaN ಚಾರ್ಜರ್ ಮೂಲಕ 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು USB 3.0 ಪೋರ್ಟ್‌ಗಳು, USB 3.1 ಪೋರ್ಟ್, ಎರಡು USB-C ಪೋರ್ಟ್‌ಗಳು, TF ಕಾರ್ಡ್ ರೀಡರ್, HDMI ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ ಮೀಸಲಾದ ಸಂಖ್ಯೆಯ ಕೀಗಳೊಂದಿಗೆ ಬ್ಯಾಕ್‌ಲಿಟ್ ಕೀಬೋರ್ಡ್ ಹೊಂದಿದೆ, ಇವುಗಳ ಮೇಲೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಟೆಕ್ನೋ ಮೆಗಾಬುಕ್‌ T1 ಲ್ಯಾಪ್‌ಟಾಪ್‌ ನ ಬೆಲೆ ವಿವರಗಳನ್ನು ಇನ್ನು ಬಹಿರಂಗಪಡಿಸಲಾಗಿಲ್ಲ ಆದರೆ ಕಂಪನಿಯು ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸೇಲ್‌ ಮಾಡಲಿದೆ. ಸೇಲ್‌ ಸಮಯದಲ್ಲಿ ಇದರ ಬೆಲೆ ವಿವರಗಳು ಬಹಿರಂಗವಾಗಲಿದೆ.

ಟೆಕ್ನೋ

ಇದಲ್ಲದೆ ಟೆಕ್ನೋ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಟೆಕ್ನೋ ಕಂಪೆನಿ ತನ್ನ ಹೊಸ ಟೆಕ್ನೋ ಕ್ಯಾಮನ್‌ 19 ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಟೆಕ್ನೋ ಕ್ಯಾಮನ್ 19 ಪ್ರೊ 5G ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಇಂಡಸ್ಟ್ರಿ-ಫಸ್ಟ್, ಕಸ್ಟಮರ್-ಡಿಸೈನ್ಡ್ 64 ಮೆಗಾಪಿಕ್ಸೆಲ್ RGBW+ (G+P) ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 810 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮೆಮೊರಿ ಫ್ಯೂಷನ್ ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ.

Best Mobiles in India

Read more about:
English summary
Tecno Megabook T1 laptop launched at IFA 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X