ಜಿಯೋ ಬರುವುದಕ್ಕಿಂತ ಮುಂಚೆ ಭಾರತೀಯರ ರಕ್ತ ಹೀರುತ್ತಿದ್ದ ಟೆಲಿಕಾಂ ಹೇಗಿತ್ತು ಗೊತ್ತಾ?

|

ಪ್ರತಿದಿನ ಎರಡಕ್ಕಿಂತ ಹೆಚ್ಚು ಜಿಬಿ ಡೇಟಾ ಬಳಸುತ್ತಿರುವ ನಮಗೆ ಕಳೆದ ಎರಡು ವರ್ಷಗಳ ಹಿಂದೆ ದೇಶದ ಟೆಲಿಕಾಂ ಹೇಗಿತ್ತು ಎಂಬುದೇ ಈಗ ಮರೆತುಹೋಗಿದೆ. ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ದೇಶದ ಟೆಲಿಕಾಂಗೆ ಕಾಲಿಡುವ ಮುನ್ನ ದೇಶದಲ್ಲಿ ಇದ್ದ ಟೆಲಿಕಾಂ ವ್ಯವಸ್ಥೆಗೂ ಹಾಗೂ ಜಿಯೋ ಬಂದ ನಂತರ ಬದಲಾದ ಈಗಿನ ಟೆಲಿಕಾಂ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಕೇವಲ ಈ ಎರಡು ವರ್ಷಗಳಲ್ಲಿ ಆದಂತಹ ಈ ದೊಡ್ಡ ಬದಲಾವಣೆ ನಿಜವಾಗಿಯೂ ಎಲ್ಲರಿಗೂ ಕೋಪ ತರಿಸುವಂತಿದೆ.

ಜಿಯೋ ಬರುವುದಕ್ಕಿಂತ ಮುಂಚೆ ಭಾರತೀಯರ ರಕ್ತ ಹೀರುತ್ತಿದ್ದ ಟೆಲಿಕಾಂ ಹೇಗಿತ್ತು?

ಹೌದು, ಮೊಬೈಲ್ ಸೇವೆಯ ಹೆಸರಿನಲ್ಲಿ ದೇಶದ ಜನರನ್ನು ಬಹುತೇಕ ಸುಲಿಗೆ ಮಾಡುತ್ತಿದ್ದ ಟೆಲಿಕಾಂ ಕಂಪೆನಿಗಳು ಈಗ ಭಾರತೀಯರ ಕಾಲ್ಕೆಳಗೆ ಬಿದ್ದಿವೆ. ಒಂದು ಜಿಬಿಗೆ 300 ರೂ. ಪೀಕುತ್ತಿದ್ದ ಕೆಲವು ಟೆಲಿಕಾಂ ಕಂಪೆನಿಗಳು ಈಗ 300 ರೂ.ಗೆ ಒಂದು ತಿಂಗಳೆಲ್ಲಾ ಡೇಟಾವನ್ನು ನೀಡುತ್ತಿವೆ. ನಿಜಕ್ಕೂ ಇಂತಹದೊಂದು ಬೆಳವಣಿಗೆ ಭಾರತದಲ್ಲಿ ನಡೆದದ್ದು ಸಾಮಾನ್ಯ ಮಾತೇನಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಗ್ರಾಹಕರ ರಕ್ತ ಹೀರುತ್ತಿದ್ದ ಟೆಲಿಕಾಂ ಪ್ರಪಂಚದ ಬಗ್ಗೆ ಒಮ್ಮೆ ಮತ್ತೊಮ್ಮೆ ತಿಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ಒಂದು ಜಿಬಿ ಡೇಟಾ ಬೆಲೆ 300 ರೂ.!

ಒಂದು ಜಿಬಿ ಡೇಟಾ ಬೆಲೆ 300 ರೂ.!

ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ ಒಂದು ಜಿಬಿ ಹೈಸ್ಪೀಡ್ ಡೇಟಾ ಪಡೆಯಲು ಪಾವತಿಸಬೇಕಿದ್ದ ಸರಾಸರಿ ಬೆಲೆ 300 ರೂ.ಗಳು ಎಂದರೆ ಈಗ ಆಶ್ಚರ್ಯವಾಗಬಹುದು. ಈಗ ಒಂದು ಜಿಬಿ ಹೈಸ್ಪೀಡ್ ಡೇಟಾ ಕೇವಲ ಮೂರರಿಂದ ನಾಲ್ಕು ರೂಪಾಯಿಗಳಲ್ಲಿ ಜನರಿಗೆ ಸಿಗುತ್ತಿದೆ. ಕೇವಲ ಡೇಟಾ ಮಾತ್ರವಲ್ಲದೆ, ಉಚಿತ ಕರೆ ಹಾಗೂ ಎಸ್‌ಎಮ್‌ಎಸ್‌ಗಳು ಕೂಡ ಇದೇ ಡೇಟಾದ ಜೊತೆಗೆ ಉಚಿತವಾಗಿದೆ. ಹಾಗಾಗಿಯೇ, ಒಂದು ಬಾಟಲಿ ತಂಪು ಪಾನೀಯಕ್ಕಿಂತ 1ಜಿಬಿ ಡೇಟಾ ಅಗ್ಗವೆಂದು 'ಮೋದಿ' ಹೇಳಿದ್ದು ನಿಜವೆನ್ನಲೇಬೇಕು.

ಆಗ ಟೆಲಿಕಾಂ ಆದಾಯ ಎಷ್ಟು ಗೊತ್ತಾ?

ಆಗ ಟೆಲಿಕಾಂ ಆದಾಯ ಎಷ್ಟು ಗೊತ್ತಾ?

ಕಳೆದ ಎರಡು ವರ್ಷಗಳ ಹಿಂದೆ ಒಂದು ವರ್ಷಕ್ಕೆ ಭಾರತದ ಒಟ್ಟು ಟೆಲಿಕಾಂಗಳ ಆದಾಯ ಎಷ್ಟು ಎಂಬುದನ್ನು ನೀವು ಊಹೆ ಮಾಡಲು ಸಾಧ್ಯವಿಲ್ಲಾ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ವರದಿಯ ಪ್ರಕಾರ, ಎರಡು ವರ್ಷಗಳ ಹಿಂದೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳ ಒಂದು ವರ್ಷದ ಆದಾಯ ಮೂರು ಲಕ್ಷಕೋಟಿಗೂ (3,00,000cR) ಹೆಚ್ಚು. ಭಾರತೀಯ ಟೆಲಿಕಾಂ ಪ್ರಪಂಚವನ್ನು ಏಕಸ್ವಾಮ್ಯ ಮಾಡಿಕೊಂಡಿದ್ದರ ಪರಿಣಾಮ ಇದು ಎಂದು ಆ ವರದಿ ಹೇಳಿದೆ.

ದಿಕ್ಕುತಪ್ಪಿಸುತ್ತಿದ್ದವು ಟೆಲಿಕಾಂ ಕಂಪೆನಿಗಳು

ದಿಕ್ಕುತಪ್ಪಿಸುತ್ತಿದ್ದವು ಟೆಲಿಕಾಂ ಕಂಪೆನಿಗಳು

ಇಂದು ಟ್ರಾಯ್ ಕೇವಲ ಒಂದು ಟೆಲಿಕಾಂ ಕಂಪೆನಿಗೆ ಸಹಾಯ ಮಾಡುತ್ತಿದೆ ಎಂಬ ಆರೋಪವಿದೆ. ಆದರೆ, ಎರಡು ವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಟ್ರಾಯ್ ಅನ್ನು ಸಹ ಮೀರಿ ಬೆಳೆದಿದ್ದವು. ಟೆಲಿಕಾಂ ಕಂಪೆನಿಗಳ ಮೇಲೆ ಟ್ರಾಯ್ ನಿಯಂತ್ರಣವಿದ್ದರೂ ಸಹ ಎಲ್ಲಾ ಟೆಲಿಕಾಂಗಳು ಟ್ರಾಯ್ ಅನ್ನು ದಿಕ್ಕುತಪ್ಪಿಸುತ್ತಿದ್ದವು. ತನ್ನ ಗ್ರಾಹಕರಿಗೆ ಇತರ ಉತ್ತಮ ಸೇವೆಗಳನ್ನು ನೀಡುವುದಾಗಿ ಹೇಳಿ ಅವರಿಂದ ಟೆಲಿಕಾಂ ಕಂಪೆನಿಗಳು ಹೆಚ್ಚು ಹಣ ಪೀಕುತ್ತಿದ್ದವು ಎಂದು ಸ್ವತಃ ಟ್ರಾಯ್ ಹೇಳಿಕೊಂಡಿದ್ದು ನಿಮಗೆ ತಿಳಿದಿರಬಹುದು.

ಗ್ರಾಹಕರ ಜೇಬಿಗೆ ಕನ್ನ

ಗ್ರಾಹಕರ ಜೇಬಿಗೆ ಕನ್ನ

ಮೊಬೈಲ್‌ ಬಳಕೆದಾರರ ರೀಚಾರ್ಜ್ ಮಾಡಿಸುವಾಗ ತೆರಬೇಕಿದ್ದ ಹಣ ಒಂದೆಡೆಯಾದರೆ, ಮೊಬೈಲ್‌ನಲ್ಲಿ ಮಾತನಾಡುವಾಗ ಕರೆಕಡಿತದಂತಹ ಲೋಪಗಳಿಂದಲೂ ಟೆಲಿಕಾಂ ಕಂಪೆನಿಗಳು ದುಡ್ಡು ಮಾಡಿಕೊಳ್ಳುತ್ತಿದ್ದವು. ಆಗಿದ್ದ ರೇಡಿಯೋ ಲಿಂಕ್ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡ ಟೆಲಿಕಾಂ ಕಂಪೆನಿಗಳು ಕರೆ ಕಡಿತವಾಗಿದ್ದರೂ ಅದು ಚಾಲನೆಯಲ್ಲೇ ಇರುವಂತೆ ತೋರಿಸಿ ಗ್ರಾಹಕರ ಜೇಬಿಗೆ ಕನ್ನ ಹಾಕುತದತಿದ್ದವು. ಒಂದು ಮಾಹಿತಿಯಂತೆ ಇದರಿಂದ ಅವುಗಳಿಗೆ ಸಿಗುತ್ತಿದ್ದ ಆದಾಯವೇ ಪ್ರತಿದಿನ 50 ಕೋಟಿಗೂ ಹೆಚ್ಚಿತ್ತಂತೆ.

ದಿನವೊಂದರ ಗಳಿಕೆ 250 ಕೋಟಿ ರೂ.

ದಿನವೊಂದರ ಗಳಿಕೆ 250 ಕೋಟಿ ರೂ.

ಇಂದು ನಿವ್ವಳ ಲಾಭದಲ್ಲಿ ಸಾವಿರಾರು ಕೋಟಿ ಇಳಿಕೆ ಕಂಡಿರುವ ಟೆಲಿಕಾಂ ಕಂಪೆನಿಗಳು ಅಂದು ಒಂದು ದಿನಕ್ಕೆ ಗಳಿಸುತ್ತಿದ್ದ ಆದಾಯ ಎಷ್ಟು ಎಂಬುದನ್ನು ಕೇಳಿದರೆ ನೀವು ದಂಗಾಗಬಹುದು. ಏಕೆಂದರೆ, ಕರೆ ಕಡಿತದ ಕ್ರಮಕ್ಕೆ ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ದಂಡ ವಿಧಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮುಕುಲ್ ರೋಹಟಗಿ ಅವರು ನೀಡಿದ ಮಾಹಿತಿಯಂತೆ, ಟೆಲಿಕಾಂ ಕಂಪೆನಿಗಳ ದಿನವೊಂದರ ಸರಾಸರಿ ಗಳಿಕೆ 250 ಕೋಟಿ ರೂಪಾಯಿಗಳಿಗೂ ಹೆಚ್ಚು.!

ಟೆಲಿಕಾಂ ಏಕಸ್ವಾಮ್ಯವಾಗಿತ್ತು.!

ಟೆಲಿಕಾಂ ಏಕಸ್ವಾಮ್ಯವಾಗಿತ್ತು.!

ಇಂದು ಜಿಯೋ ಭಾರತದ ಟೆಲಿಕಾಂ ಅನ್ನು ಏಕಸ್ವಾಮ್ಯ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಎರಡು ವರ್ಷಗಳ ಹಿಂದೆ ಒಂದೇ ಒಂದು ಟೆಲಿಕಾಂ ಕಂಪೆನಿ ತನ್ನ ತೆಕ್ಕೆಯಲ್ಲಿ ಭಾರತದ ಟೆಲಿಕಾಂ ಅನ್ನು ಹಿಡಿದಿಟ್ಟುಕೊಂಡಿತ್ತು. ಈ ಒಂದು ಕಂಪೆನಿಯನ್ನೇ ಹಹಿಂಬಾಲಿಸುತ್ತಿದ್ದ ಇತರೆ ಟೆಲಿಕಾಂ ಕಂಪೆನಿಗಳು ಸಹ ಸೇವೆಯ ಹೆಸರಿನಲ್ಲಿ ಒಂದೇ ಬಗೆಯಲ್ಲಿ ಕಾರ್ಯನಿರ್ವಹಣೆ ನೀಡುತ್ತಿದ್ದವು. ಇದರಿಂದ ಗ್ರಾಹಕನಿಗೆ ಆಯ್ಕೆಗಳೇ ಇಲ್ಲದ ಸ್ಥಿತಿ ಎದುರಾಗಿತ್ತು ಎಂದರೆ ತಪ್ಪಾಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿರಲಿಲ್ಲ!

ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿರಲಿಲ್ಲ!

ಎರಡು ವರ್ಷಗಳ ಹಿಂದೆಯೇ ಭಾರತದಲ್ಲಿದ್ದ ಮೊಬೈಲ್ ಸಂಪರ್ಕಗಳ ಸಂಖ್ಯೆ 96.2 ಕೋಟಿಯಾಗಿತ್ತು. ಆದರೆ, ಇಷ್ಟು ದೊಡ್ಡದ ಟೆಲಿಕಾಂ ಇದ್ದರೂ ಕೂಡ ಯಾವುದೇ ಟೆಲಿಕಾಂ ಕಂಪೆನಿ ಕೂಡಾ ಕರೆಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಹೂಡಿಕೆಗೆ ಸಿದ್ಧವಿಲ್ಲ ಎಂದು ವರದಿಯೊಂದು ಹೇಳಿತ್ತು. 300ರಿಂದ 900 ಮೆಗಾಹರ್ಟ್ಸ್ ಕಂಪನಾಂಕದ ತರಂಗಗಳಲ್ಲಿ ಕರೆಯಗುಣಮಟ್ಟ ಚೆನ್ನಾಗಿರುತ್ತದೆ ಎಂದು ತಿಳಿದಿದ್ದರೂ ಆ ತರಂಗಗಳ ಖರೀದಿಗೆ ಯಾವ ಟೆಲಿಕಾಂ ಕಂಪೆನಿಯೂ ಮುಂದೆ ಬರಲಿಲ್ಲ. ಏಕೆಂದರೆ, ಗ್ರಾಹಕರಿಂದ ಹಣ ಪೀಕಲು ಹೆಚ್ಚು ವೆಚ್ಚ ಮಾಡಲು ಯಾವ ಟೆಲಿಕಾಂ ಕಂಪೆನಿಗಳಿಗೂ ಇಷ್ಟವಿರಲಿಲ್ಲ.

ಶೇ. 80% ರಷ್ಟು ಬೆಲೆ ಇಳಿಕೆ

ಶೇ. 80% ರಷ್ಟು ಬೆಲೆ ಇಳಿಕೆ

ಎರಡು ವರ್ಷಗಳ ಹಿಂದೆ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟಿತು. ಟೆಲಿಕಾಂಗೆ ಜಿಯೋ ಪ್ರವೇಶ ಮಾಡಿದ ನಂತರ ಜನರ ದುಡ್ಡನ್ನು ನುಂಗಿ ನೀರುಕುಡಿಯುತ್ತಿದ್ದ ಉಳಿದ ಟೆಲಿಕಾಂ ಕಂಪೆನಿಗಳ ಸೇವೆಗಳ ಬೆಲೆಗಳು ಶೇ 80% ರಷ್ಟು ಇಳಿಕೆಯಾಯಿತು. ಒಂದು GB ಡೇಟಾಗೆ 300 ರಿಂದ 400ರೂಪಾಯಿಗಳನ್ನು ಪೀಕುತ್ತಿದ್ದ ಕಂಪೆನಿಗಳು ಇದೀಗ 2 ರಿಂದ 3 ರೂಪಾಯಿಗೆ ಒಂದು GB ಡೇಟಾ ನೀಡುತ್ತಿವೆ.ಈಗ ಏನಿದ್ದರೂ ಅನ್‌ಲಿಮಿಟೆಡ್ ಸೇವೆಗಳದ್ದೇ ಜಮಾನವಾಗಿದ್ದು, ಗ್ರಾಹಕರು ಅತ್ಯುತ್ತಮ ದರದಲ್ಲಿ ಹೆಚ್ಚು ಸೇವೆಯನ್ನು ಪಡೆಯುತ್ತಿರುವುದನ್ನು ನೀವು ನೋಡಬಹುದು.

Best Mobiles in India

English summary
The Telecommunications Revolution in india. Then and Now. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X