ಫ್ಲಿಪ್‌ಕಾರ್ಟ್‌ನ ಮೊದಲ ಡೆಲಿವರಿ ಬಾಯ್ಸ್ ಕೋಟ್ಯಾಧಿಪತಿಯಾದ ಕಥೆ: ನಿಜಕ್ಕೂ ರೋಚಕ..!

|

ದೇಶದ ಆನ್‌ಲೈನ್ ಮಾರುಕಟ್ಟೆಯಲ್ಲಿ ತನ್ನದೇ ಅಧ್ಯಾಯವನ್ನು ಹೊಂದಿರುವ ಫ್ಲಿಪ್‌ಕಾರ್ಟ್‌ ಸದ್ಯ ವಾಲ್‌ಮಾರ್ಟ್ ಎನ್ನುವ ದೈತ್ಯ ಕಂಪನಿಯ ಪಾಲಾಗಿದೆ. ಫ್ಲಿಪ್‌ಕಾರ್ಟ್‌ ಭಾರೀ ಮೊತ್ತಕ್ಕೆ ಸೇಲ್ ಆಗಿರುವುದು ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಲು ಕಾರಣವಾಗಿದೆ. ದೇಶಿಯ ಸ್ಟಾರ್ಟ್ ಆಪ್‌ಗಳ ಅಧ್ಯಾಯದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ ಫ್ಲಿಪ್‌ಕಾರ್ಟ್‌ ಹಲವು ಮಂದಿಗೆ ಅಧ್ಯಾಯದ ವಿಷಯ ವಸ್ತುವಾಗಿದೆ.

ಫ್ಲಿಪ್‌ಕಾರ್ಟ್‌ನ ಮೊದಲ ಡೆಲಿವರಿ ಬಾಯ್ಸ್ ಕೋಟ್ಯಾಧಿಪತಿಯಾದ ಕಥೆ: ನಿಜಕ್ಕೂ ರೋಚಕ..

ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ ಹಲವು ಮಂದಿಗೆ ಬದುಕು ಕಟ್ಟಿಕೊಟ್ಟಿದೆ, ಹಲವರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ. ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ಗೆ ಡೆಲಿವರಿ ಬಾಯ್ಸ್ ಆಗಿ ಸೇರಿಕೊಂಡ ಮೊದಲ ನೌಕರ ಇಂದು ಫ್ಲಿಪ್‌ಕಾರ್ಟ್‌ ಶೇರುಗಳನ್ನು ಹೊಂದುವ ಮೂಲಕ ಕೋಟ್ಯಾಧಿಪತಿಯಾಗಿದ್ದಾನೆ. ಆತನ ಯಶಸ್ಸಿನ ಕುರಿತ ಮಾಹಿತಿಯೂ ತಿಳಿಸುವ ಪ್ರಯತ್ನ ಇದಾಗಿದೆ.

ಅಬೂರ್ ನಿವಾಸಿ:

ಅಬೂರ್ ನಿವಾಸಿ:

ತಮಿಳುನಾಡಿದ ವೆಲೂರು ಜಿಲ್ಲೆಯಲ್ಲಿರುವ ಅಬೂರ್ ನಿವಾಸಿಯಾದ ಅಯ್ಯಪ್ಪನ್, ಬೆಂಗಳೂರಿಗೆ ಬಂದು ಹಲವು ಕಡೆಗಳಲ್ಲಿ ಕೆಲಸ ಮಾಡಿ, ಕೊನೆಗೆ ಕೊರಿಯರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ, ಕೊರಿಯರ್ ಸೇವೆಯ ಒಳ-ಹೊರಗೆ ತಿಳಿದುಕೊಂಡರು ಎನ್ನಲಾಗಿದೆ. ಇದೇ ಮುಂದೇ ಫ್ಲಿಪ್‌ಕಾರ್ಟಿನಲ್ಲಿ ಅವರಿಗೆ ಕೆಲಸ ಸಿಗುವಂತೆ ಮಾಡಿದೆ.

12 ವರ್ಷಗಳ ಹಿಂದೆ:

12 ವರ್ಷಗಳ ಹಿಂದೆ:

12 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜನ್ಮ ತಾಳಿದ ಫ್ಲಿಪ್‌ಕಾರ್ಟ್‌ನ ಮೊದಲ ಎಂಪ್ಲಾಯಿಯಾಗಿ ಸೇರಿಸಿಕೊಂಡವರು ಅಂಬೂರ್ ಅಯ್ಯಪ್ಪನ್. ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಫ್ಲಿಪ್‌ಕಾರ್ಟ್‌ ಹೆಚ್ಚಿನ ಬೇಡಿಕೆಯನ್ನು ಹೊಂದಿರಲಿಲ್ಲ. ಇದಕ್ಕಾಗಿ ಕೇವಲ ಒಬ್ಬನೇ ಡೆಲಿವರಿ ಬಾಯ್ಸ್ ಅನ್ನು ನೇಮಕ ಮಾಡಿಕೊಂಡಿದ್ದರು ಎನ್ನಲಾಗಿದೆ.

ಕಂಪ್ಯೂಟರ್ ತಲೆ:

ಕಂಪ್ಯೂಟರ್ ತಲೆ:

ಫ್ಲಿಪ್‌ಕಾರ್ಟ್‌ ದಿನಕ್ಕೆ 1000 ಆರ್ಡರ್ಗಳನ್ನು ಪಡೆದುಕೊಂಡರು ಸಹ ಅಂಬೂರ್ ಅಯ್ಯಪ್ಪನ್ ಒಬ್ಬರೇ ಅಷ್ಟು ವಸ್ತುಗಳನ್ನು ತಲುಪಿಸುವ ಮತ್ತು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದರು ಎನ್ನಲಾಗಿದೆ. ಇವರ ಕೆಲಸಕ್ಕೆ ಫ್ಲಿಪ್‌ಕಾರ್ಟ್ ಸಂಸ್ಥಾಪಕರೇ ತಲೆ ದೂಗುತ್ತಿದ್ದರು ಎನ್ನಲಾಗಿದೆ.

8000 ಸಂಬಳ:

8000 ಸಂಬಳ:

ಅಯ್ಯಪ್ಪನ್ ಮೊದಲು ಫ್ಲಿಪ್‌ಕಾರ್ಟಿಗೆ ಸೇರಿಕೊಂಡ ಸಂದರ್ಭದಲ್ಲಿ ರೂ.8000 ರ ಪಡೆಯುತ್ತಿದ್ದರು ಎನ್ನಲಾಗಿದೆ. ಇದಾದ ನಂತರದಲ್ಲಿ ಫ್ಲಿಪ್‌ಕಾರ್ಟ್‌ ಹೆಚ್ಚಿನ ಪ್ರಮಾಣದ ಲಾಭವನ್ನು ಸಂಪಾದಿಸಿದ ಸಂದರ್ಭದಲ್ಲಿ ತನ್ನ ನೌಕರರಿಗೆ ಶೇರುಗಳನ್ನು ಹಂಚಿದ ಸಂಧರ್ಭದಲ್ಲಿ ಅಯ್ಯಪ್ಪನ್ ಸಹ ಕೋಟಿ ಮೌಲ್ಯದ ಶೇರುಗಳನ್ನು ತಮ್ಮದಾಗಿಸಿಕೊಂಡರು ಎನ್ನಲಾಗಿದೆ.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
ಇಂದು ಅಸೋಸಿಯೇಟ್ ಡೈರೆಕ್ಟರ್:

ಇಂದು ಅಸೋಸಿಯೇಟ್ ಡೈರೆಕ್ಟರ್:

ಅಯ್ಯಪ್ಪನ್, ಡೆಲಿವರಿ ಬಾಯ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನಂತರದಲ್ಲಿ ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಫ್ ಕಸ್ಟಮರ್ ಎಕ್ಸ್‌ಪೀರಿಯನ್ಸ್ ಮ್ಯಾನೇಜ್ ಮೆಂಟ್ ಹುದ್ದೆಯನ್ನು ಅಲಂಕರಿಸಿದ್ದಾರೆ ಎನ್ನಲಾಗಿದೆ.

Best Mobiles in India

English summary
The story of Flipkart's first employee. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X