ವಿಡಿಯೋ ನೋಡೋಕೆ, ಗೇಮ್‌ ಆಡೋಕೆ ಇವೇ ಬೆಸ್ಟ್‌ ಮೊಬೈಲ್‌ಗಳು!

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಬಹಳ ಅಗತ್ಯ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊಬೈಲ್‌ ಕೇವಲ ಆನ್‌ಲೈನ್‌ ಕೆಲಸಗಳು, ಮಾತನಾಡಲು, ಚಾಟಿಂಗ್‌ ಅಷ್ಟೇ ಅಲ್ಲದೇ ವಿಡಿಯೋ ನೋಡೋಕೆ, ಗೇಮ್‌ ಆಡೋಕೆ ಸಹ ಸ್ಮಾರ್ಟ್‌ಫೋನ್‌ ಅನ್ನು ಅನೇಕ ಬಳಕೆದಾರರು ಬಳಕೆ ಮಾಡುತ್ತಾರೆ. ಆದ್ರೆ, ಫೋನಿನಲ್ಲಿ ವಿಡಿಯೋ ವೀಕ್ಷಿಸಲು ಅಥವಾ ಮೊಬೈಲ್‌ನಲ್ಲಿ ಗೇಮ್‌ ಆಡಲು ಎಲ್ಲ ಫೋನ್‌ಗಳು ಸೂಕ್ತ ಎನಿಸುವುದಿಲ್ಲ.

ಅತ್ಯುತ್ತಮ

ಮೊಬೈಲ್‌ನಲ್ಲಿ ವಿಡಿಯೋ ನೋಡಲು ಅಥವಾ ಗೇಮ್ ಆಡಲು ದೊಡ್ಡ ಸ್ಕ್ರೀನ್‌ ಇರುವ ಫೋನ್‌ಗಳು ಉತ್ತಮ ಹಾಗೂ ಸೂಕ್ತ. ಇನ್ನು ಬಿಗ್ ಡಿಸ್‌ಪ್ಲೇ ಜೊತೆಗೆ ಹೈ ಎಂಡ್‌ ರೆಸಲ್ಯೂಶನ್ ಇದ್ರೆ, ಅತ್ಯುತ್ತಮ ಎನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫೋನ್‌ಗಳು ಕನಿಷ್ಠ 6 ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತವೆ. 6 ಇಂಚಿಗಿಂತ ಹೆಚ್ಚಿನ ಸ್ಕ್ರೀನ್ ಹೊಂದಿರುವ ಫೋನ್‌ಗಳೂ ಇವೆ. ಈ ಸ್ಮಾರ್ಟ್‌ಫೋನ್‌ಗಳು ವಿಡಿಯೋ ನೋಡೋಕೆ, ಗೇಮ್‌ ಆಡೋಕೆ ಬಳಕೆದಾರರಿಗೆ ಅತ್ಯುತ್ತಮ ಎನಿಸಲಿವೆ. ಹಾಗಾದರೇ ದೊಡ್ಡ ಡಿಸ್‌ಪ್ಲೇ ಹೊಂದಿರುವ 10 ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 3

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 3

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 3 ಫೋನ್ ಡ್ಯುಯಲ್ ಡಿಸ್‌ಪ್ಲೇ ಸೌಲಭ್ಯ ಪಡೆದಿದೆ. ಈ ಫೋನ್ 7.6 ಇಂಚುಗಳ ಸ್ಕ್ರೀನ್‌ ಗಾತ್ರವನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಫೋನ್ ಅತ್ಯುತ್ತಮ ಕ್ಯಾಮೆರಾ ಗುಣಮಟ್ಟವನ್ನು ಹೊಂದಿದ್ದು, 12 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಮೂರು ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ರಚನೆ ಹೊಂದಿದ್ದು, ಜೊತೆಗೆ 4400 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಹಾಗೆಯೇ 12 GB Ram ಆಯ್ಕೆಯ ವೇರಿಯಂಟ್‌ನಲ್ಲಿಯೂ ಈ ಫೋನ್ ಸಿಗಲಿದೆ.

ಐಕ್ಯೂ 9 ಪ್ರೊ ಸ್ಮಾರ್ಟ್‌ಫೋನ್

ಐಕ್ಯೂ 9 ಪ್ರೊ ಸ್ಮಾರ್ಟ್‌ಫೋನ್

ಐಕ್ಯೂ 9 ಪ್ರೊ ಸ್ಮಾರ್ಟ್‌ಫೋನ್ 3,200 x 1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಕ್ವಾಡ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ 360Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಹಾಗೆಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಐಕ್ಯೂ 9ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ 3200 x 1440 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 6.9 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ರೀಫ್ರೇಶ್‌ ರೇಟ್‌ 120Hz ಸಾಮರ್ಥ್ಯದಲ್ಲಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್‌ 7 ಪಡೆದಿದೆ. ಈ ಫೋನ್ Exynos 990 SoC ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಹಾಗೆಯೇ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿ ಕ್ಯಾಮೆರಾವು 10ಎಂಪಿ ಸೆನ್ಸಾರ್‌ ಪಡೆದಿದೆ. ಇದು 4500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20

ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 6.7 ಇಂಚಿನ ಸೂಪರ್‌ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ರೀಫ್ರೇಶ್‌ ರೇಟ್‌ 60Hz ಸಾಮರ್ಥ್ಯದಲ್ಲಿದೆ. ಇದು Exynos 990 SoC ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್ ಇದೆ. ಹಾಗೆಯೇ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಹಾಗೆಯೇ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ.

ವಿವೋ X70 ಪ್ರೊ ಪ್ಲಸ್

ವಿವೋ X70 ಪ್ರೊ ಪ್ಲಸ್

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ 6.78 ಇಂಚಿನ ಪೂರ್ಣ ಹೆಚ್‌ಡಿ + AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನಿನ ಡಿಸ್‌ಪ್ಲೇಯು 1440 x 3200 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 888+ SoC ಪ್ರೊಸೆಸರ್‌ ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಇನ್ನು ಈ ಫೋನ್ 12 GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಇನ್ನು ಈ ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 55W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕ್ವಾಡ್‌ ಕ್ಯಾಮೆರಾ ರಚನೆ ಸಹ ಪಡೆದಿದೆ.

ಐಫೋನ್ 13 ಪ್ರೊ ಮ್ಯಾಕ್ಸ್‌

ಐಫೋನ್ 13 ಪ್ರೊ ಮ್ಯಾಕ್ಸ್‌

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ ಫೀಚರ್ಸ್‌ ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್‌ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್‌ ಬೆಂಬಲಿಸಲಿದೆ.

ಶಿಯೋಮಿ 10T ಪ್ರೊ

ಶಿಯೋಮಿ 10T ಪ್ರೊ

ಶಿಯೋಮಿ 10T ಪ್ರೊ ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 6.47 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದ್ದು, 144Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್‌ ಅನ್ನು ಹೊಂದಿದ್ದು, 8GB RAM ಮತ್ತು 128GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಹಾಗೆಯೇ ಇದು 5,000mAh ಬ್ಯಾಟರಿ ಸಾಮರ್ಥ್ಯದವನ್ನು ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಆಸುಸ್ ROG ಫೋನ್ 5

ಆಸುಸ್ ROG ಫೋನ್ 5

ಆಸುಸ್ ROG ಫೋನ್ 5 ಸ್ಮಾರ್ಟ್‌ಫೋನ್‌ 1,080 x 2,448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಅನ್ನು ಹೊಂದಿದ್ದು, 8 GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಇದು 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಪೊಕೊ F4 5G

ಪೊಕೊ F4 5G

ಪೊಕೊ F4 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ HD+ E4 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ 6GB RAM + 128GB ಮತ್ತು 8GB + 128GB ಹಾಗೂ 12GB + 256GB ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆ ಇದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಅದಕ್ಕೆ ಪೂರಕವಾಗಿ ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಫೋನ್‌ 1,640 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.82 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಯೂನಿಸೋಕ್‌ T610 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ. ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ಪ್ರಮಾಣಿತ ಚಾರ್ಜಿಂಗ್ ಬೆಂಬಲಿಸಲಿದೆ.

Best Mobiles in India

English summary
These 10 Mobiles Best for Video Streaming and Gaming in india: Here's Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X