ಆಗಸ್ಟ್ ತಿಂಗಳಲ್ಲಿ ಭಾರತೀಯರು ಗೂಗಲ್‌ನಲ್ಲಿ ಏನೆಲ್ಲಾ ಸರ್ಚ್‌ ಮಾಡಿದ್ದಾರೆ ಗೊತ್ತಾ?

|

ಇತ್ತೀಚಿನ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೇ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಗೂಗಲ್‌ನಲ್ಲಿ ಸರ್ಚ್‌ ಮಾಡಿದರೆ ಸಾಕು ಯಾವುದೇ ಮಾಹಿಯತಿಯದರೂ ಸಿಗಲಿದೆ ಎಂಬ ವಿಶ್ವಾಸ ಬಳಕೆದಾರರಲ್ಲಿದೆ. ಇನ್ನು ಪ್ರತಿನಿತ್ಯ ಗೂಗಲ್‌ನಲ್ಲಿ ಬಳಕೆದಾರರು ಸಾಕಷ್ಟು ಮಾಹಿತಿಯನ್ನು ಸರ್ಚ್‌ ಮಾಡುತ್ತಲೇ ಇರುತ್ತಾರೆ. ಹಾಗೇಯೇ ಗೂಗಲ್‌ನಲ್ಲಿ ಯಾವ ವಿಷಯ ಹೆಚ್ಚು ಸರ್ಚ್‌ ಆಗಿದೆ ಅನ್ನೊ ಕುತೂಹಲ ಸಾಮಾನ್ಯವಾಗಿರುತ್ತದೆ. ಇದೀಗ ಅಗಸ್ಟ್‌ ತಿಂಗಳಲ್ಲಿ ಭಾರತೀಯರು ಗೂಗಲ್‌ನಲ್ಲಿ ಯಾವ ವಿಚಾರವನ್ನ ಹೆಚ್ಚು ಸರ್ಚ್‌ ಮಾಡಿದ್ದಾರೆ ಅನ್ನೊದನ್ನ ಗೂಗಲ್‌ ರಿವೀಲ್‌ ಮಾಡಿದೆ.

ಗೂಗಲ್‌

ಹೌದು, ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆಯಲ್ಲಿ ಭಾರತೀಯರು ಕೂಡ ಮುಂದೆ ಇದ್ದಾರೆ. ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್‌ ನಲ್ಲಿ ಸರ್ಚ್‌ ಮಾಡುವುದರಲ್ಲಿ ಭಾರತೀಯರೇನು ಕಡಿಮೆ ಇಲ್ಲ. ಶತಕೋಟಿಗೂ ಅಧಿಕ ಜನಸಂಖ್ಯೆಯ ಭಾರತದಲ್ಲಿ ಜನರ ಅಭಿರುಚಿ ಎಲ್ಲರದ್ದೂ ಒಂದೇ ಇರುವುದಿಲ್ಲ. ತಮ್ಮ ಅಭಿರುಚಿಗೆ ತಕ್ಕಂತೆ ಗೂಗಲ್‌ನಲ್ಲಿ ತಮಗಿಷ್ಟವಾದ ಮಾಹಿತಿಯನ್ನ ಸರ್ಚ್‌ ಮಾಡುತ್ತಾರೆ. ಹೀಗೆ ಸರ್ಚ್‌ ಮಾಡುವ ಬಳಕೆದಾರರು ಅತಿ ಹೆಚ್ಚು ಭಾರಿ ಯಾವ ವಿಚಾರವನ್ನ ಸರ್ಚ್‌ ಮಾಡಿದ್ದಾರೆ ಅನ್ನೊ ಕುತೂಹಲ ಸಹಜ. ಇದಕ್ಕೆ ತಕ್ಕಂತೆ ಆಗಸ್ಟ್‌ ತಿಂಗಳಲ್ಲಿ ಭಾರತೀಯರು ಅತಿ ಹೆಚ್ಚು ಯಾವ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ ಅನ್ನೊ ಮಾಹಿತಿ ಇಲ್ಲಿದೆ ಓದಿರಿ.

ಗೂಗಲ್

ಆಗಸ್ಟ್ ತಿಂಗಳಲ್ಲಿ ಭಾರತೀಯರುನ ಗೂಗಲ್‌ನಲ್ಲಿ ಏನು ಹುಡುಕಿದ್ದಾರೆ ಎಂಬುದರ ಕುರಿತು ಗೂಗಲ್ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದೆ. ಸದ್ಯ ಗೂಗಲ್‌ ರಿವೀಲ್‌ ಮಾಡಿರುವ ಪಟ್ಟಿಯಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ, ಪ್ರಣಬ್ ಮುಖರ್ಜಿ ಮತ್ತು ಕೋವಿಡ್ -19 ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಅತಿ ಹೆಚ್ಚಯ ಬಾರಿ ಸರ್ಚ್‌ ಮಾಡಲಾಗಿದೆ. ಇನ್ನು ಗೂಗಲ್ ಹಂಚಿಕೊಂಡ ವಿವರಗಳ ಪ್ರಕಾರ, ಆಗಸ್ಟ್ ತಿಂಗಳಲ್ಲಿ "ಪಾಕಿಸ್ತಾನ vs ಇಂಗ್ಲೆಂಡ್" ನಡುವಿನ ಕ್ರಿಕೆಟ್‌ ಸರಣಿಯ ಬಗ್ಗೆ ಭಾರತದಲ್ಲಿ ಅತಿ ಹೆಚ್ಚು ಬಾರಿ ಸರ್ಚ್‌ ಮಾಡಲಾಗಿದೆ. ಕೋವಿಡ್‌-19 ನಂತರ ನಡೆದ ಕ್ರಿಕೆಟ್‌ ಸರಣಿಯಾಗಿದ್ದರಿಂದ ಸಾಕಷ್ಟು ಭಾರಿ ಸರ್ಚ್‌ ಮಾಡಲಾಗಿದೆ.

ಗೂಗಲ್‌

ಸದ್ಯ ಪಾಕಿಸ್ತಾನ vs ಇಂಗ್ಲೆಂಡ್ ನಡುವಿನ ಕ್ರಿಕೆಟ್‌ ಸರಣಿಯ ಬಗ್ಗೆ ಭಾರತದಲ್ಲಿ ಅತಿ ಹೆಚ್ಚು ಬಾರಿ ಗೂಗಲ್‌ನಲ್ಲಿ ಸರ್ಚ್‌ ಮಾಡಲಾಗಿದ್ದು, ಆಗಸ್ಟ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಬಾರಿ ಸರ್ಚ್‌ ಮಾಡಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 5,000% ಕ್ಕಿಂತ ಹೆಚ್ಚಾಗಿದೆ. ಇದಾದ ನಂತರ ಪ್ರಣಬ್ ಮುಖರ್ಜಿ ಅವರಿಗೆ ಸಂಬಂದಿಸಿದ ವಿಚಾರಕ್ಕೆ ಸಂಬಂಧಿಸಿ ಗೂಗಲ್‌ನಲ್ಲಿ ಸರ್ಚ್‌ ಮಾಡಲಾಗಿದ್ದು, ಎರಡನೇ ಸ್ಥಾನದಲ್ಲಿದೆ. ಭಾರತದ ಗೂಗಲ್‌ ಸರ್ಚ್‌ನಲ್ಲಿ ಇದು 4,000% ಕ್ಕಿಂತ ಹೆಚ್ಚಾಗಿದೆ. ಇನ್ನು 3,400% ಕ್ಕಿಂತ ಹೆಚ್ಚು ಬಾರಿ ಭಾರತೀಯ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಸರ್ಚ್‌ ಮಾಡಲಾಗಿದೆ.

ಗೂಗಲ್‌

ಇನ್ನು ಸ್ವಾತಂತ್ರ್ಯ ದಿನಾಚರಣೆಯ ಆಸಕ್ತಿಯನ್ನು ಗಮನಿಸಿದರೆ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಸರ್ಚ್‌ ಮಾಡಿರುವುದು ಹೊಸ ದಾಖಲೆಯನ್ನ ಬರೆದಿದೆ. ಗೂಗಲ್‌ ಪ್ರಕಾರ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಾಹಿತಿ ಪಡೆಯಲು ಸರ್ಚ್‌ ಮಾಡಿರುವ ಆಸಕ್ತಿಯು 3,750% ಕ್ಕಿಂತ ಹೆಚ್ಚಾಗಿದೆ. ಇದು ತಿಂಗಳ ಅತ್ಯಧಿಕ ಸ್ಪೈಕಿಂಗ್ ವಿಷಯವಾಗಿದೆ. ಇದಲ್ಲದೆ, "ಲೆಬನಾನ್" ಗಾಗಿ 2,100% ಕ್ಕಿಂತ ಹೆಚ್ಚಾಗಿದೆ ಮತ್ತು "COVID-19 ತಡೆಗಟ್ಟುವಿಕೆ" ಬಗ್ಗೆ 1,600% ಕ್ಕಿಂತ ಹೆಚ್ಚು ಬಾರಿ ಗೂಗಲ್‌ ಸರ್ಚ್‌ ಮಾಡಲಾಗಿದೆ.

Best Mobiles in India

Read more about:
English summary
As far as the interest for Independence Day is concerned, Google said that the but this year search interest for Independence Day soared to a new record high. The overall search interest soared to over 3,750%.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X