ಸದ್ಯ ಈ 5 ಸ್ಮಾರ್ಟ್‌ಫೋನ್‌ಗಳು ಭಾರೀ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಎಲ್ಲರ ದೈನಂದಿನ ಜೀವನದಲ್ಲಿ ಪ್ರಮುಖ ಡಿವೈಸ್ ಎಂದರೇ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಮೊಬೈಲ್‌ ತಯಾರಿಕಾ ಕಂಪನಿಗಳು ಭಿನ್ನ ಭಿನ್ನ ಫೀಚರ್ಸ್‌ಗಳೊಂದಿಗೆ ನೂಥನ ಫೋನ್‌ಗಳನ್ನು ಅನಾವರಣ ಮಾಡುತ್ತಲೇ ಸಾಗಿವೆ. ಅದಾಗ್ಯೂ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆ ಆಗುವ ಎಲ್ಲ ಫೋನ್‌ಗಳು ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಯಶಸ್ವಿಯಾಗುವುದಿಲ್ಲ. ಆದರೆ ಕೆಲವೊಂದು ಫೋನ್‌ಗಳು ಭಾರೀ ಗಮನ ಸೆಳೆಯುತ್ತವೆ.

ನೂತನವಾಗಿ

ಹೌದು, ನೂತನವಾಗಿ ಲಾಂಚ್ ಫೋನ್‌ಗಳ ಪೈಕಿ ಕೆಲವು ಫೋನ್‌ಗಳು ವಿಶೇಷ ಫೀಚರ್ಸ್‌ಗಳಿಂದ, ಇಲ್ಲವೇ ಬೆಲೆಯಿಂದ ಗ್ರಾಹಕರನ್ನು ಬಹುಬೇಗ ಆಕರ್ಷಿಸುತ್ತವೆ. ಇನ್ನು ಕೆಲ ಫೋನ್‌ಗಳಲ್ಲಿ ಕೆಲವೊಂದು ಹೇಳ ಹೆಸರಿಲ್ಲದೇ ಮರೆಯಾಗುತ್ತವೆ.ಆದರೆ ಸದ್ಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್, ಶಿಯೋಮಿ, ಸೇರಿದಂತೆ ಬಜೆಟ್ ಬೆಲೆಯ ಫೋನ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ ರೆಡ್ಮಿ ನೋಟ್ 10 ಪ್ರೊ

ಶಿಯೋಮಿ ರೆಡ್ಮಿ ನೋಟ್ 10 ಪ್ರೊ

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 100% ಡಿಸಿಐ-ಪಿ 3 ವೈಡ್ ಕಲರ್ ಗ್ಯಾಮಟ್, HDR-10 ಬೆಂಬಲ ಮತ್ತು ಟಿವಿ ರೈನ್‌ಲ್ಯಾಂಡ್ ಕಡಿಮೆ ಹೊಂದಿದೆ. ‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದೆ. ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. 5,020mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 5G

ಒನ್‌ಪ್ಲಸ್‌ ನಾರ್ಡ್‌ CE 5G

ಒನ್‌ಪ್ಲಸ್‌ ನಾರ್ಡ್‌ CE 5G ಸ್ಮಾರ್ಟ್‌ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.43 ಇಂಚಿನ Fluid AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 750G ಪ್ರೊಸೆಸರ್‌ ಅನ್ನು ಹೊಂದಿದೆ. ಅದರೊಂದಿಗೆ ಆಂಡ್ರಾಯ್ಡ್‌ ಆಕ್ಸಿಜೆನ್ 11 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ.

ರೆಡ್ಮಿ ನೋಟ್ 10

ರೆಡ್ಮಿ ನೋಟ್ 10

ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 20:9 ರಚನೆಯ ಅನುಪಾತವನ್ನು ಹೊಂದಿದ್ದು, ಸೂಪರ್ ಅಮೋಲೆಡ್ ಡಿಸ್‌ಪ್ಲೇ ಇದಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 678 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12 ರೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನುಹೊಂದಿದೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 582 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.

ಪೊಕೊ X3 ಪ್ರೊ

ಪೊಕೊ X3 ಪ್ರೊ

ಪೊಕೊ X3 ಪ್ರೊ ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 -ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 20:9 ರಚನೆಯ ಅನುಪಾತವನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 860 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12 ರೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM, 8GB RAM ಮತ್ತು 128GB, 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 582 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ

ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್‌ 1,440x3,200 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 6.8 ಇಂಚಿನ ಫುಲ್‌ ಎಡ್ಜ್‌ QHD+ ಪ್ಲಸ್‌ ಜೊತೆಗೆ ಡೈನಾಮಿಕ್ AMOLED ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ Exynos 2100 SoC (ಸ್ನ್ಯಾಪ್‌ಡ್ರಾಗನ್ 888) ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ OIS ಸಪೋರ್ಟ್‌ ಜೊತೆಗೆ 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ.

Best Mobiles in India

English summary
These Are Top 10 Trending Smartphones Of Week 24.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X