ಮಾರುಕಟ್ಟೆಯಲ್ಲಿ ಸದ್ದು ಮಾಡಲು ಹೋಗಿ ಮುಗ್ಗರಿಸಿದ 5 ಸ್ಮಾರ್ಟ್‌ಫೋನ್‌ಗಳು!

|

ಮೊಬೈಲ್‌ ಮಾರುಕಟ್ಟೆಯಲ್ಲಿ ನಥಿಂಗ್‌ ಫೋನ್‌ (1) ಬಿಡುಗಡೆಯಾದ ನಂತರ ಹೊಸ ಚರ್ಚೆಯೊಂದು ಶುರುವಾಗಿದೆ. ನಥಿಂಗ್‌ ಫೋನ್‌ (1) ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಯನ್ನು ಮಾಡಲಿದೆ ಎಂದು ಚರ್ಚೆಯಾಗ್ತಿದೆ. ಸ್ಮಾರ್ಟ್‌ಫೋನ್‌ ವಲಯದಲ್ಲಿ ನಥಿಂಗ್‌ ಫೋನ್‌ (1) ಹೊಸ ಪರಿಕಲ್ಪನೆ ಹುಟ್ಟುಹಾಕಲಿದೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಈ ಮೂಲಕ ಪ್ರಾರಂಭದಲ್ಲಿ ನಥಿಂಗ್‌ ಫೋನ್‌ (1) ಸಿಕ್ಕಾಪಟ್ಟೆ ಸೌಂಡ್‌ ಮಾಡಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಲ್ಲಿ ಇನ್ನಷ್ಟು ಬದಲಾವಣೆಯಾದರೆ ಅಚ್ಚರಿಯಿಲ್ಲ ಎನ್ನಲಾಗ್ತಿದೆ.

ನಥಿಂಗ್‌

ಹೌದು, ನಥಿಂಗ್‌ ಕಪೆನಿ ತನ್ನ ಹೊಸ ನಥಿಂಗ್‌ ಫೋನ್‌ (1) ಮೂಲಕ ಮೊಬೈಲ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಎಂಟ್ರಿಯಲ್ಲಿಯೇ ಸಾಕಷ್ಟು ನಿರೀಕ್ಷೆಗಳು ಹುಟ್ಟುಹಾಕಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗೆ ಸಾಕ್ಷಿಯಾಗುವ ನಿರೀಕ್ಷೆ ಸೃಷ್ಟಿಸಿದೆ. ಹಾಗಂತ ಆದರೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡುವ ಮೂಲಕ ಸಾಕಷ್ಟು ಹೈಪ್‌ ಕ್ರಿಯೆಟ್‌ ಮಾಡಿದ್ದ ಕಂಪೆನಿಗಳಲ್ಲಿ ನಥಿಂಗ್‌ ಕಂಪೆನಿ ಮೊದಲೇನಲ್ಲ. ಏಕೆಂದರೆ ನಥಿಂಗ್‌ ಕಂಪೆನಿಗೂ ಮೊದಲು ಹಲವು ಕಂಪೆನಿಗಳು ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಪ್ರಯತ್ನ ಮಾಡಿ ಮುಗ್ಗರಿಸಿ ಬಿದ್ದಿವೆ.

ಸ್ಮಾರ್ಟ್‌ಫೋನ್‌

ಪ್ರಸ್ತುತ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳು, ರಗಡ್‌ ಫೋನ್‌ಗಳು, ಅಂಡರ್‌ ಡಿಸ್‌ಪ್ಲೇ ಕ್ಯಾಮೆರಾ ಫೋನ್‌ಗಳು ಕಾಣಬಹುದು. ಆದರೆ ಇದೆಲ್ಲದಕ್ಕಿಂತ ಭಿನ್ನವಾಗಿ ಹೊಸತನದ ಪರಿಕಲ್ಪನೆಯನ್ನು ನೀಡುವ ಪ್ರಯತ್ನವನ್ನು ನಥಿಂಗ್‌ ಫೋನ್‌ (1) ಮಾಡಿದೆ. ಆದರೆ ಇದಕ್ಕೂ ಮೊದಲು ಕೆಲವು ಕಂಪೆನಿಗಳು ಇನ್ನು ವಿಶೇಷವಾದ ಸ್ಮಾರ್ಟ್‌ಫೋನ್‌ಗಳ ಮೂಲಕ ಹೊಸತನದ ಅನುಭವವನ್ನು ನೀಡಲು ಪ್ರಯತ್ನ ಪಟ್ಟಿವೆ. ಅಂತಹ ಕೆಲವು ಮೊಬೈಲ್‌ ಕಂಪೆನಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬ್ಲ್ಯಾಕ್‌ಬೆರಿ ಪಾಸ್‌ಪೋರ್ಟ್

ಬ್ಲ್ಯಾಕ್‌ಬೆರಿ ಪಾಸ್‌ಪೋರ್ಟ್

ಬ್ಲ್ಯಾಕ್‌ಬೆರಿ ಕಂಪೆನಿ ತನ್ನ ಬ್ಲ್ಯಾಕ್‌ಬೆರಿ ಪಾಸ್‌ಪೋರ್ಟ್ ಫೋನ್‌ ಮೂಲಕ ಹೊಸ ಸಂಚಲನ ಸೃಷ್ಟಿಸಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ ಪ್ರಾರಂಭೀಕ ದಿನಗಳಲ್ಲಿ ಪಡೆದುಕೊಂಡಿದ್ದ ಹೈಪ್‌ ಅನ್ನು ಕೊನೆತನಕ ಇರಿಸಿಕೊಳ್ಳುವಲ್ಲಿ ವಿಫಲವಾಯಿತು. ಆಪಲ್‌ ಕಂಪೆನಿಯ ಪ್ರಚಂಡ ಏಳಿಗೆಯ ಮುಂದೆ ಬ್ಲ್ಯಾಕ್‌ಬೆರಿ ಫೋನ್‌ಗಳ ಆರ್ಭಟ ನಡೆಯಲೇ ಇಲ್ಲ. ಅಲ್ಲದೆ ಸ್ಮಾರ್ಟ್‌ಫೋನ್‌ ವಿಮರ್ಶಕರಿಂದ ಈ ಸ್ಮಾರ್ಟ್‌ಫೋನ್‌ ಬಗ್ಗೆ ಬಂದ ಮಿಶ್ರ ವಿಮರ್ಶೆಗಳು ಕೂಡ ಈ ಫೋನಿನ ಸೋಲಿಗೆ ಕಾರಣವಾಯಿತು ಎನ್ನಬಹುದು.

ನೆಕ್ಸ್ಟ್‌ಬಿಟ್ ರಾಬಿನ್

ನೆಕ್ಸ್ಟ್‌ಬಿಟ್ ರಾಬಿನ್

ಹೆಚ್‌ಟಿಸಿಯ ಮಾಜಿ ಡಿಸೈನರ್ ಸ್ಕಾಟ್ ಕ್ರೊಯ್ಲ್ ವಿನ್ಯಾಸಗೊಳಿಸಿದ, ನೆಕ್ಸ್ಟ್‌ಬಿಟ್ ರಾಬಿನ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡಿತ್ತು. ಎಂಟ್ರಿಗೂ ಮುನ್ನವೇ ಸಾಕಷ್ಟು ಹೈಪ್‌ ಕ್ರಿಯೆಟ್‌ ಮಾಡಿದ್ದ ಈ ಫೋನ್‌ ಮಾರುಕಟ್ಟೆಗೆ ಬಂದ ನಂತರ ಹೆಚ್ಚು ದಿನ ನಿಲ್ಲುವಲ್ಲಿ ವಿಫಲವಾಯಿತು. ಇದು ಕ್ರೌಡ್-ಫಂಡ್ಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿದ್ದು, ಕ್ಲೌಡ್ ಅನ್ನು ಅನುಭವದ ಕೇಂದ್ರದಲ್ಲಿ ಇರಿಸಲು ಬಯಸಿತ್ತು. ಅಲ್ಲದೆ ಸ್ವಯಂಚಾಲಿತವಾಗಿ ಅಪ್ಲಿಕೇಶನ್‌ಗಳು ಮತ್ತು ಇತರ ಡೇಟಾವನ್ನು ಅಗತ್ಯವಿರುವಂತೆ ನೆಕ್ಸ್ಟ್‌ಬಿಟ್‌ನ ಸರ್ವರ್‌ಗಳಿಗೆ ಅಪ್‌ಲೋಡ್ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಈ ಫೋನ್‌ ಹೆಚ್ಚು ಗಮನ ಸೆಳೆಯದ ಇತಿಹಾಸ ಸೇರಿದೆ.

ಯೋಟಾಫೋನ್

ಯೋಟಾಫೋನ್

ಯೋಟಾಫೋನ್‌ ಮಾರುಕಟ್ಟೆಗೆ ಬರುವ ಮುನ್ನ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಅನುಭವ ನೀಡುವ ಸೂಚನೆ ನೀಡಿತ್ತು. ಅದರಂತೆ ಯೋಟಾಫೋನ್‌ ಹಿಂಭಾಗದಲ್ಲಿ ಇ-ಇಂಕ್ ಡಿಸ್‌ಪ್ಲೇಯನ್ನು ಹೊಂದಿತ್ತು. ಈ ಸೆಕೆಂಡರಿ ಇ-ಇಂಕ್ ಡಿಸ್‌ಪ್ಲೇ ಮೂಲಕ ಸ್ಮಾರ್ಟ್‌ಫೋನ್‌ ವಿನ್ಯಾಸ ಸಾಕಷ್ಟು ಬದಲಾಗಿತ್ತು. ಈ ರಿಯರ್‌ ಡಿಸ್‌ಪ್ಲೇ ಮೂಲಕ ಬಳಕೆದಾರರಿಗೆ ಸಂದೇಶಗಳನ್ನು ಓದಲು ಅಥವಾ ಬ್ಯಾಟರಿ ಖಾಲಿಯಾಗದಂತೆ ಸಮಯವನ್ನು ನೋಡಲು ಅವಕಾಶ ನೀಡಲಾಗಿತ್ತು. ಆದರೆ ಯಾಕೋ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಈ ಸ್ಮಾರ್ಟ್‌ಫೋನ್‌ ರುಚಿಸಲಿಲ್ಲ. ಇದೆಲ್ಲದರ ಪರಿಣಾಮ ಯೋಟಾ ಕಂಪೆನಿ 2019 ರಲ್ಲಿ ದಿವಾಳಿಯಾಯಿತು.

ಎಸ್ಸೆನ್ಸಿಯಲ್‌ (Essential) Ph-1

ಎಸ್ಸೆನ್ಸಿಯಲ್‌ (Essential) Ph-1

ಎಸ್ಸೆನ್ಸಿಯಲ್‌ Ph-1 ಅನ್ನು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಪ್ರಚಾರ ಮಾಡಲಾಗಿತ್ತು. ಈ ಸ್ಮಾರ್ಟ್‌ಫೋನ್‌ ಮುಂದಿನ ದಿನಗಳಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಮೊಬೈಲ್‌ ಮಾರುಕಟ್ಟೆಯ ವಿನ್ಯಾಸವನ್ನೇ ಬದಲಾಯಿಸಲಿದೆ ಎಂಬೆಲ್ಲಾ ಪ್ರಚಾರ ನೀಡಲಾಗಿತ್ತು. ಆದರೆ ಪ್ರಾರಂಬಿಕ ಹಂತದಲ್ಲಿಯೇ ಈ ಫೋನ್‌ ವಿಫಲವಾಯಿತು. ಈ ಸ್ಮಾರ್ಟ್‌ಫೋನ್‌ನಲ್ಲಿದ್ದ ಕೆಲವು ನೂನ್ಯತೆಗಳ ಜೊತೆಗೆ ಎಸ್ಸೆನ್ಸಿಯಲ್‌ ಕಂಪೆನಿ ಸಂಸ್ಥಾಪಕರ ಮೇಲೆ ಕೇಳಿಬಂದ ಕೆಲವು ಆರೋಪಗಳ ಕಾರಣದಿಂದಾಗಿಯು ಈ ಫೋನ್‌ ಗ್ರಾಹಕರನ್ನು ಸೆಳೆಯುವಲ್ಲಿ ಹಿಂದೆ ಉಳಿಯಿತು. ಇದೆಲ್ಲದರ ಪರಿಣಾಮ ಯುಎಸ್‌ ಮೂಲದ ಎಸ್ಸೆನ್ಸಿಯಲ್‌ ಕಂಪೆನಿ ಸಂಪೂರ್ಣ ಸ್ಥಗಿತವಾಯಿತು.

ಎಲ್‌ಜಿ ವಿಂಗ್

ಎಲ್‌ಜಿ ವಿಂಗ್

ಎಲ್‌ಜಿ ಕಂಪೆನಿ ಪರಿಚಯಿಸಿದ್ದ ಎಲ್‌ಜಿ ವಿಂಗ್‌ ಸ್ಮಾರ್ಟ್‌ಫೋನ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಪ್ರಯತ್ನ ಎಂದೇ ಹೇಳಲಾಗಿತ್ತು. LG ವಿಂಗ್ ಸ್ಮಾರ್ಟ್‌ಫೋನ್‌ ವಿಶಿಷ್ಟವಾದ ಸ್ವಿವೆಲಿಂಗ್ ವಿನ್ಯಾಸ ಮತ್ತು ಇಂಟರ್‌ಬಿಲ್ಟ್‌ ಗಿಂಬಲ್‌ ಅನ್ನು ಒಳಗೊಂಡಿತ್ತು. ಆದರೆ ಇದರ ವಿಶೇಷ ವಿನ್ಯಾಸ ಗ್ರಾಹಕರ ಗಮನ ಸೆಳೆಯುವಲ್ಲಿ ವಿಫಲವಾಯಿತು. ಮಲ್ಟಿ ಟಾಸ್ಕ್‌ ಬೆಂಬಲಿಸುವ ಡ್ಯಯಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಪ್ರಯತ್ನವಾಗಿತ್ತು. ತಿರುಗುವ ಮುಂಭಾಗದ ಪ್ರದರ್ಶನ ಮತ್ತು ಕೆಳಗಿರುವ ಸಣ್ಣ ಪ್ರದರ್ಶನದ ಮೂಲಕ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿತ್ತು. ಆದರೆ ಇದು ಮಾರುಕಟ್ಟೆಯಲ್ಲಿ ಸೌಂಡ್‌ ಮಾಡಲೇ ಇಲ್ಲ. ಆದರಿಂದ ಎಲ್‌ಜಿ ಮತ್ತೆ ಇಂತಹ ಸಾಹಸಕ್ಕೆ ಮುಂದಾಗಲಿಲ್ಲ.

ಮೊಬೈಲ್‌

ಹೀಗೆ ಮೊಬೈಲ್‌ ಮಾರುಕಟ್ಟೆಗೆ ಎಂಟ್ರಿ ನೀಡುವ ಮುನ್ನ ಸಿಕ್ಕಾಪಟ್ಟೆ ಸೌಂಡ್‌ ಮಾಡಿ ನಂತರ ಎಡವಿ ಬಿದ್ದ ಮೊಬೈಲ್‌ ಕಂಪೆನಿಗಳು ಅನೇಕ. ಅದೇ ರೀತಿ ಪ್ರಾರಂಭಿಕ ಹಂತದಿಂದಲೂ ಇಲ್ಲಿಯ ತನಕ ಏರುಗತಿಯ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸ್ಮಾರ್ಟ್‌ಫೋನ್‌ಗಳು ಕೂಡ ಮೊಬೈಲ್‌ ಮಾರುಕಟ್ಟೆಯಲ್ಲಿವೆ. ಇದೀಗ ನಥಿಂಗ್‌ ಫೋನ್‌ ಸರದಿ. ನಥಿಂಗ್‌ ಫೋನ್‌ (1) ತನ್ನ ವಿನ್ಯಾಸ ಹಾಗೂ ರಿಯರ್‌ ಪ್ಯಾನಲ್‌ನಲ್ಲಿರುವ ಎಲ್‌ಇಡಿ ಲೈಟ್‌ಗಳ ಮೂಲಕ ನೋಟಿಫಿಕೇಶನ್‌ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದೆ. ಸದ್ಯ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿರುವ ನಥಿಂಗ್‌ ಫೋನ್‌ ಮುಂದಿನ ದಿನಗಳಲ್ಲಿ ಇದೇ ಪ್ರಭಾವವನ್ನು ಉಳಿಸಿಕೊಳ್ಳಲಿದೆಯಾ? ಇಲ್ಲ ಹತ್ತರಲಿ ಇದು ಕೂಡ ಒಂದಾಗಲಿದೆಯಾ ಅನ್ನೊದಕ್ಕೆ ಕಾಲವೇ ಉತ್ತರಿಸಲಿದೆ.

Best Mobiles in India

English summary
These five offbeat smartphones that tried to bring freshness to the phone market Before Nothing phone 1

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X