ಶೀಘ್ರದಲ್ಲೇ ಆಂಡ್ರಾಯ್ಡ್‌10ಗೆ ಆಪ್ಡೇಟ್‌ ಆಗಲಿವೆ ಈ ಸ್ಮಾರ್ಟ್‌ಫೋನ್‌ಗಳು

|

ಸ್ಮಾರ್ಟ್‌ಪೋನ್‌ ಜಗತ್ತಿನಲ್ಲಿ ಹೊಸ ಆಪ್ಡೇಟ್‌ಗಳಿಗೇನೂ ಭರವಿಲ್ಲ. ದಿನಕ್ಕೊಂದು ಫೀಚರ್ಸ್‌, ಸ್ಮಾರ್ಟ್‌ಪೋನ್‌ಗಳಲ್ಲಿ ಅಪ್‌ಡೇಟ್‌ ಆಗುತ್ತಲೇ ಇರುತ್ತವೆ. ಪೈಪೋಟಿಯುತ ಮಾರುಕಟ್ಟೆಯಲ್ಲಿ ಗ್ರಾಹಕರನ್ನ ಸೆಳೆಯಬೇಕಾದ್ರೆ ಇದೆಲ್ಲಾ ಅತ್ಯವಶ್ಯಕ ಅನ್ನೊದು ಎಲ್ಲರಿಗೂ ಗೊತ್ತಿರುವಂತಹದ್ದೆ. ಸಧ್ಯ ಬಹುತೇಕ ಫೋನ್‌ಗಳು ಆಂಡ್ರಾಯ್ಡ್‌9ನಲ್ಲಿದ್ದು, ಅವುಗಳಲ್ಲಿ ಕೆಲವು ಈಗ ಆಂಡ್ರಾಯ್ಡ್‌ 10ಗೆ ಆಪ್ಡೇಟ್‌ ಆಗೋಕೆ ತುದಿಗಾಲಲ್ಲಿ ನಿಂತಿವೆ.

ಆಂಡ್ರಾಯ್ಡ್‌10

ಹೌದು ಮುಂಬರುವ ದಿನಗಳಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌10ಕ್ಕೆ ಆಪ್ಡೇಟ್‌ ಆಗಲಿವೆ, ಜೊತೆಗೆ ಆಂಡ್ರಾಯ್ಡ್‌ 10ಒಎಸ್‌ ಸಿಸ್ಟಮ್‌ ಹೊಂದುವ ಮೂಲಕ ವೈಡ್‌ ಡಾರ್ಕ್‌ ಥೀಮ್‌, ಲೈವ್‌ ಶಿರ್ಷಿಕೆ, ಸುಧಾರಿತ ಸ್ಮಾರ್ಟ್‌ ಫಿಚರ್ಸ್‌,ಗಳನ್ನು ಇದು ಹೊಂದಿರಲಿದೆ. ಸದ್ಯ ಆಂಡ್ರಾಯ್ಡ್‌ 10 ಗೂಗಲ್‌ ಸುರಕ್ಷತೆ ಮತ್ತು ಗೌಪ್ಯತೆಯನ್ನ ಸುಧಾರಿಸುವ ನಿರೀಕ್ಷೆ ಇಡಲಾಗಿದೆ, ಹಾಗಾದ್ರೆ ಸದ್ಯದಲ್ಲೇ ಆಂಡ್ರಾಯ್ಡ್‌10ಕ್ಕೆ ಆಪ್ಡೇಟ್‌ ಆಗಲಿರೋ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದ್ರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

ಶಿಯೋಮಿ ರೆಡ್‌ಮಿ ನೋಟ್ 8 ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 10 ಅಪ್‌ಡೇಟ್ ಪಡೆಯುವ ನಿರೀಕ್ಷೆಯಿದೆ. ರೆಡ್ಮಿ ನೋಟ್‌8 ಸ್ಮಾರ್ಟ್‌ ಫೋನ್‌ 6.3ಇಂಚಿನ ಫೂಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಹಿಂಬಾಗದಲ್ಲಿ ನಾಲ್ಕು ಕ್ಯಾಮೆರಾಗಳಿದ್ದು ಜೊತೆಗೆ 13 ಮೆಗಾಫಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಅಲ್ಲದೆ ಕ್ವಾಲಕಮ್‌ಸ್ಯ್ನಾಪ್‌ಡ್ರಾಗನ್‌ 665 SoC ಪ್ರೊಸೆಸರ್‌ ಹೊಂದಿದೆ.

ರೆಡ್ಮಿ ನೋಟ್ 8 ಪ್ರೊ

ರೆಡ್ಮಿ ನೋಟ್ 8 ಪ್ರೊ

ರೆಡ್ಮಿ ನೋಟ್‌ 8ಪ್ರೊ ಸ್ಮಾರ್ಟ್‌ಫೋನ್‌ ಕೂಡ ಆಂಡ್ರಾಯ್ಡ್‌ 10ಗೆ ಆಪ್‌ಡೇಟ್‌ ಆಗುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್‌ 6.53ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಸಹ ಕ್ವಾಡ್‌ ಕ್ಯಾಮೆರಾ ಹೊಂದಿದ್ದು ಮುಖ್ಯ ಕ್ಯಾಮೆರಾ 64MP ನಿಂದ ಕೂಡಿದೆ. ಇನ್ನು ಪ್ರಂಟ್‌ ಕ್ಯಾಮೆರಾ 20MP ಹೊಂದಿದೆ. ಅಲ್ಲದೆ Mediatek G90T SoC ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌9os ನ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ರೆಡ್ಮಿ ನೋಟ್ 7, ರೆಡ್ಮಿ ನೋಟ್ 7 ಪ್ರೊ

ರೆಡ್ಮಿ ನೋಟ್ 7, ರೆಡ್ಮಿ ನೋಟ್ 7 ಪ್ರೊ

ಇನ್ನು ರೆಡ್ಮಿ ನೋಟ್ 7, ರೆಡ್ಮಿ ನೋಟ್ 7 ಪ್ರೊ ಫೋನ್‌ಗಳು ಸಹ ಆಂಡ್ರಾಯ್ಡ್‌ 10ಗೆ ಆಪ್‌ಡೇಟ್‌ ಆಗುವ ಸೂಚನೆ ನೀಡಿವೆ. ರೆಡ್ಮಿ ನೋಟ್‌ 7ಪ್ರೊ 6.3ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು ವಿಡಿಯೋ ವಿಕ್ಷಣೆಯಲ್ಲಿ ಉತ್ತಮ ಅನುಭವ ನೀಡುತ್ತೆ. ಇದು ಡ್ಯುಯೆಲ್‌ ಕ್ಯಾಮೆರಾ ಒಳಗೊಂಡಿದ್ದು ಪ್ರಾಥಮಿಕ ಕ್ಯಾಮೆರಾ 48ಮೆಗಾಫಿಕ್ಸೆಲ್‌ ಮತ್ತು ದ್ವಿತೀಯ ಕ್ಯಾಮೆರಾ 5 ಮೆಗಾಫಿಕ್ಸೆಲ್‌ ನಿಂದ ಕೂಡಿದೆ.

ರಿಯಲ್‌ ಮಿ ಎಕ್ಸ್ 2 ಪ್ರೊ

ರಿಯಲ್‌ ಮಿ ಎಕ್ಸ್ 2 ಪ್ರೊ

ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್ ಪಡೆಯುವ ಲಿಸ್ಟ್‌ನಲ್ಲಿ 'ರಿಯಲ್‌ ಮಿ ಎಕ್ಸ್‌ ೨ ಪ್ರೊ' ಫೋನ್‌ ಸಹ ಇದೆ. ಈ ಫೋನ್ 6.5ಇಂಚಿನ ಸೂಪರ್ ಅಮೋಲೆಡ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕ್ವಾಲಕಮ್‌ ಸ್ನಾಪ್‌ಡ್ರಾಗನ್ 855+ ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌ 9OS ನ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು ಅನುಕ್ರಮವಾಗಿ 64MP + 13MP + 8MP + 2MP ಒಳಗೊಂಡಿದೆ.ಅಲ್ಲದೆ 16ಮೆಗಾಫಿಕ್ಸೆಲ್‌ ಪ್ರಂಟ್‌ ಕ್ಯಾಮೆರಾವನ್ನು ಸಹ ಹೊಂದಿದೆ.

ರಿಯಲ್‌ ಮಿ 5 ಪ್ರೊ

ರಿಯಲ್‌ ಮಿ 5 ಪ್ರೊ

ರಿಯಲ್‌ ಮಿ 5 ಪ್ರೊ ಸ್ಮಾರ್ಟ್‌ಫೋನ್‌ ಸಹ ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್ ಹೊಂದಲಿದೆ. ಈ ಫೋನ್ 6.3-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು. ಅಲ್ಲದೆ ಈ ಸ್ಮಾರ್ಟ್ ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಆಗಿದ್ದು ಅನುಕ್ರಮವಾಗಿ 48MP + 8MP + 2MP + 2MPನಿಂದ ಕೂಡಿದೆ. ಅಲ್ಲದೆ 16 ಮೆಗಾಫಿಕ್ಸೆಲ್‌ ಪ್ರೆಂಟ್‌ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಜೊತೆಗೆ ಕ್ವಾಲಕಮ್‌ ಸ್ನ್ಯಾಪ್‌ಡ್ರಾಗನ್‌ 712 SoC ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್ 9os ನ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 9

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 9

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 9 ಸ್ಮಾರ್ಟ್‌ಫೋನ್‌ ಸಹ ಆಂಡ್ರಾಯ್ಡ್ 10ಒಎಸ್‌ಗೆ ಆಪ್ಡೇಟ್‌ ಆಗಲಿದ್ದು. ಈ ಸ್ಮಾರ್ಟ್‌ಫೋನ್‌ 6.3 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಈ ಪೋನ್‌ ಡ್ಯುಯೆಲ್‌ ಕ್ಯಾಮೆರಾ ಹೊಂದಿದ್ದು ಮುಖ್ಯ ಕ್ಯಾಮೆರಾ 2MP ಮತ್ತು ಎರಡನೇ ಕ್ಯಾಮೆರಾ 12MP ಆಗಿದೆ. ಜೊತೆಗೆ 12ಮೆಗಾಫಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನ ಹೊಂದಿದೆ.

ಅಲ್ಲದೆ Samsung Exynos 9810 SoC ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌ 8.1Oreo ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ಸ್ಮಾರ್ಟ್‌ಫೋನ್‌ ಸಹ ಆಂಡ್ರಾಯ್ಡ್‌ 10ಗೆ ಆಫ್ಡೇಟ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ 6.1 ಇಂಚಿನ QHD+-Dynamic AMOLED ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಈ ಫೋನ್‌ನಲ್ಲಿ ತ್ರಿವಳಿ ಕ್ಯಾಮೆರಾಗಳಿದ್ದು ಮುಖ್ಯ ಕ್ಯಾಮೆರಾ 12ಮೆಗಾಫಿಕ್ಸೆಲ್‌, ಎರಡನೇ ಕ್ಯಾಮೆರಾ 12ಮೆಗಾಫಿಕ್ಸೆಲ್‌,ಮತ್ತು ಮೂರನೇ ಕ್ಯಾಮೆರಾ 16ಮೆಗಾಫಿಕ್ಸೆಲ್‌ ಹೊಂದಿದೆ.ಇನ್ನು ಸೆಲ್ಫಿ ಕ್ಯಾಮೆರಾ ೧೦ ಮೆಗಾಫಿಕ್ಸೆಲ್‌ ಆಗಿದೆ. ಅಲ್ಲದೆ Exynos 9820 ಪ್ರೊಸೆಸರ್‌ ಅನ್ನು ಹೊಂದಿದೆ.

ನೋಕಿಯಾ 8.1

ನೋಕಿಯಾ 8.1

ಆಂಡ್ರಾಯ್ಡ್‌ 10ಗೆ ಆಪ್ಡೇಟ್‌ ಆಗಲಿರುವ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ನೋಕಿಯಾ 8.1 ಸ್ಮಾರ್ಟ್‌ಫೋನ್‌ ಕೂಡ ಸೇರಿದೆ. ನೋಕಿಯಾ 8.1 ಸ್ಮಾರ್ಟ್‌ಫೋನ್‌ 6.18ಇಂಚಿನ ಫುಲ್‌ ಹೆಚ್‌ ಡಿ ಡಿಸ್‌ಪ್ಲೇ ಹೊಂದಿದ್ದು. ಈ ಸ್ಮಾರ್ಟಫೋನ್‌ ಡ್ಯುಯೆಲ್‌ ಕ್ಯಾಮೆರಾ ಹೊಂದಿದ್ದು ಮುಖ್ಯ ಕ್ಯಾಮೆರಾ 12MP ಮತ್ತು ಎರಡನೇ ಕ್ಯಾಮೆರಾ 13MP ಆಗಿದೆ. ಇನ್ನು 20MP ಸೆಲ್ಫಿ ಕ್ಯಾಮೆರಾ ವ್ಯವಸ್ಥೆ ಕೂಡ ಇದೆ. ಇದು ಕ್ವಾಲಕಮ್‌ ಸ್ನಾಪ್‌ಡ್ರಾಗನ್ 710 ಎಸ್‌ಒಸಿ ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌ 9os ನ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ನೋಕಿಯಾ 9 ಪ್ಯೂರ್‌ ವ್ಯೂ

ನೋಕಿಯಾ 9 ಪ್ಯೂರ್‌ ವ್ಯೂ

ನೋಕಿಯಾ 9 ಪ್ಯೂರ್‌ ವ್ಯೂ ಸ್ಮಾರ್ಟ್‌ಫೋನ್‌ ಕೂಡ ಆಂಡ್ರಾಯ್ಡ್ 10 ಗೆ ಅಪ್‌ಡೇಟ್‌ ಆಗುವ ಲಿಸ್ಟ್‌ನಲ್ಲಿ ಸೇರಿದೆ. ನೋಕಿಯಾ 9 ಪ್ಯೂರ್‌ವ್ಯೂ 5.99ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು. ಈ ಸ್ಮಾರ್ಟ್‌ಫೋನ್‌ ಒಟ್ಟು ಐದು ಕ್ಯಾಮೆರಾಗಳನ್ನು ಹೊಂದಿದ್ದು ಮುಖ್ಯ ಕ್ಯಾಮೆರಾ 12 ಮೆಗಾಫಿಕ್ಸೆಲ್‌ ನಿಂದ ಕೂಡಿದೆ. ಅಲ್ಲದೆ ಕ್ವಾಲಕಮ್‌ ಸ್ನಾಪ್‌ಡ್ರಾಗನ್ 845 ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌ 9os ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

Most Read Articles
Best Mobiles in India

English summary
Google rolled out its latest Android 10 update for Pixel smartphones in the month of September 2019. A few smartphone brands have already shared the list of mobile phones that will get Android Q aka Android 10 update in the near future.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more