ವಿ ಟೆಲಿಕಾಂ ಬಳಕೆದಾರರೇ, ಈ ಪ್ಲ್ಯಾನ್ ರೀಚಾರ್ಜ್‌ ಮಾಡಿದ್ರೆ ಡೈಲಿ ಅಧಿಕ ಡೇಟಾ!

|

ಭಾರತೀಯ ಟೆಲಿಕಾಂ ವಲಯದಲ್ಲಿ ವೊಡಾಫೋನ್ ಐಡಿಯಾ (ವಿ ಟೆಲಿಕಾಂ) ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳಿಗೆ ಟಾಂಗ್ ನೀಡುವಂತಹ ಹೆಜ್ಜೆಗಳನ್ನು ಹಾಕುತ್ತಾ ಸಾಗಿದೆ. ವಿ ಟೆಲಿಕಾಂ ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯ ಬಹುತೇಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಮುಖ್ಯವಾಗಿ ಪ್ರತಿದಿನ ಡೇಟಾ, ಅನಿಯಮಿತ ವಾಯಿಸ್‌ ಕರೆ, ದೀರ್ಘಾವಧಿಯ ವ್ಯಾಲಿಡಿಟಿ ಆಯ್ಕೆಗಳು ಹೆಚ್ಚು ಗಮನ ಸೆಳೆದಿವೆ. ಆ ಪೈಕಿ ವಿ ಟೆಲಿಕಾಂನ ಮೂರು ಪ್ರೀಪೇಯ್ಡ್‌ ಯೋಜನೆಗಳು ಡಬಲ್ ಡೇಟಾಪ್ರಯೋಜನ ಪಡೆದಿದ್ದು, ಗ್ರಾಹಕರನ್ನು ಸೆಳೆದಿದೆ.

ಯೋಜನೆಗಳು

ಹೌದು, ಜನಪ್ರಿಯ ವಿ ಟೆಲಿಕಾಂ ಕೆಲವು ಜನಪ್ರಿಯ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಆ ಪೈಕಿ 299ರೂ, 499ರೂ ಮತ್ತು 699ರೂ. ಯೋಜನೆಗಳು ಒಂದಾಗಿವೆ. ಈ ಯೋಜನೆಗಳು ಪ್ರತಿದಿನ ಡೇಟಾ ಸೌಲಭ್ಯ, ಬಿಗ್ ವ್ಯಾಲಿಡಿಟಿ ಪ್ರಯೋಜನ, ಎಸ್‌ಎಮ್‌ಎಸ್‌ ಸೇವೆ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನಗಳ ಪ್ಯಾಕೇಜ್‌ ಹೊಂದಿದೆ. ಹಾಗೆಯೇ ಸದ್ಯ ಈ ಯೋಜನೆಗಳಿಗೆ ಡಬಲ್‌ ಡೇಟಾ ಕೊಡುಗೆಯ ಪ್ರಯೋಜನ ಇರುವುದು ಪ್ಲಸ್‌ ಪಾಯಿಂಟ್‌ ಅನಿಸಿದೆ. ಹೀಗಾಗಿ ಈ ಯೋಜನೆಗಳನ್ನು ರೀಚಾರ್ಜ್ ಮಾಡಿಸಿದರೇ ಗ್ರಾಹಕರಿಗೆ ಪ್ರತಿದಿನ 4GB ಡೇಟಾ ಸಿಗಲಿದೆ. ಹಾಗಾದರೇ ವಿ ಟೆಲಿಕಾಂನ ಡಬಲ್‌ ಡೇಟಾ ಕೊಡುಗೆಯ ರೀಚಾರ್ಜ್‌ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವೊಡಾಫೋನ್ ಐಡಿಯಾ 699ರೂ. ಪ್ಲ್ಯಾನ್

ವೊಡಾಫೋನ್ ಐಡಿಯಾ 699ರೂ. ಪ್ಲ್ಯಾನ್

ವಿ ಟೆಲಿಕಾಂನ 699ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ವಿ ಟೆಲಿಕಾಂನ ಇತರೆ ಡಬಲ್‌ ಡೇಟಾ ಯೋಜನೆಗಳ ಬಗ್ಗೆ ಮುಂದೆ ಓದಿರಿ.

ವೊಡಾಫೋನ್ ಐಡಿಯಾ 499ರೂ. ಪ್ಲ್ಯಾನ್

ವೊಡಾಫೋನ್ ಐಡಿಯಾ 499ರೂ. ಪ್ಲ್ಯಾನ್

ವಿ ಟೆಲಿಕಾಂನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಸಿಗಲಿದೆ. ಆದರೆ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವೊಡಾಫೋನ್ ಐಡಿಯಾ 299ರೂ. ಪ್ಲ್ಯಾನ್

ವೊಡಾಫೋನ್ ಐಡಿಯಾ 299ರೂ. ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಆದರೆ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Most Read Articles
Best Mobiles in India

English summary
These Three Vi Telecom Prepaid Plans Offers 4GB Data And Attractive Validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X