ಕಾಲ್ಪನಿಕ ವಿಜ್ಞಾನದಿಂದ ಸಂಶೋಧನೆಗೊಂಡ ಪ್ರಖ್ಯಾತ ಟೆಕ್ನಾಲಜಿಗಳು

By Suneel
|

ಜಗತ್ತಿನಾದ್ಯಂತ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವಂತಹ ಅಭಿವೃದ್ದಿಗೆ ಮೂಲ ಆಧಾರ ಯಾವುದು? ಅಂತ ಪ್ರಶ್ನೆ ಕೇಳಿದ್ರೆ ಎಷ್ಟು ಜನ ಹೇಗೆ ಉತ್ತರ ಕೊಡುತ್ತಾರೋ ಗೊತ್ತಿಲ್ಲಾ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆದಂತಹ ಮಹತ್ತರ ಸಂಶೋಧನೆಗಳಿಗೆ ಪ್ರಖ್ಯಾತ "Science Fiction" ಬರಹಗಾರರ ವಿಷಯಗಳೇ ಮೂಲ ಆಧಾರ. ಅಂದಹಾಗೆ ಕಾಲ್ಪನಿಕ ವಿಜ್ಞಾನ (Science Fiction) ಬರವಣಿಗೆಯ ಪ್ರಖ್ಯಾತ ಲೇಖಕರು ತಮ್ಮ ಕಲ್ಪನೆಯಲ್ಲಿ ಹೇಳಿದ ಹಲವು ಕಾಲ್ಪನಿಕ ವಿಜ್ಞಾನಗಳು ಇಂದು ಆಧುನಿಕ ಜಗತ್ತಿನ ಪ್ರಖ್ಯಾತ ಟೆಕ್ನಾಲಜಿಗಳಾಗಿವೆ. ಅವು ಯಾವುವು ಗೊತ್ತಾ?

ಅಂದಹಾಗೆ ಅರ್ಥರ್‌ ಸಿ ಕ್ಲಾಕ್‌, ರಾಬರ್ಟ್‌ ಹೇನ್‌ಲೈನ್‌, ರೆ ಬ್ರಾದುರಿ, ಸ್ಟಾನ್ಲಿ ಕುಬ್ರಿಕ್, ಗೆನೆ ರಾಡ್ಡೆನ್‌ಬೆರ್ರಿಸ್ ರವರು ಕಾಲ್ಪನಿಕ ವಿಜ್ಞಾನ ಬರಹಗಾರರಾಗಿದ್ದು ಹೆಚ್ಚು ಪ್ರಖ್ಯಾತ ಪಡೆದಿದ್ದಾರೆ. ಇಂತಹ ಮಹಾನ್‌ ದಿಗ್ಗಜ ಕಾಲ್ಪನಿಕ ವಿಜ್ಞಾನ ಬರಹಗಾರರು ತಮ್ಮ ಕಲ್ಪನೆಯಲ್ಲಿ ಕಾಲಜ್ಞಾನಕ್ಕೆ ತಕ್ಕಂತೆ ಬರೆದ ಬರಹಗಳು ವಾಸ್ತವವಾಗಿ ಆಧುನಿಕ ಜಗತ್ತಿನಲ್ಲಿ ಅತ್ಯುತ್ತಮ ಪ್ರಖ್ಯಾತ ಟೆಕ್ನಾಲಜಿಗಳಾಗಿವೆ. ಅವು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

1

1

ಬ್ರಿಟಿಷ್‌ ಕಾಲ್ಪನಿಕ ವಿಜ್ಞಾನ ಲೇಖಕರಾದ 'ಅರ್ಥರ್‌ ಸಿ ಕ್ಲಾರ್ಕ್‌' ರವರು ಮೊದಲ ಬಾರಿಗೆ ಭೂಸ್ಥಾಯೀ ಕಕ್ಷೆಯನ್ನು ಪ್ರಸ್ತಾಪಿಸಿದ್ದರು. ಆ ಕಕ್ಷೆಯನ್ನು 'ಕ್ಲಾರ್ಕ್‌ ಆರ್ಬಿಟ್' ಎಂದು ಹೆಸರಿಸಲಾಗಿದೆ. ಕ್ಲಾರ್ಕ್‌ ನೀಡಿದ ಕಾಲ್ಪನಿಕ ವಿಜ್ಞಾನದಿಂದ ಅಮೇರಿಕ 'Symcom 1' ಅನ್ನು ಬಿಡುಗಡೆ ಮಾಡಿತ್ತು. ಇದು ಸುಮಾರು 36,000 ಕಿಲೋಮೀಟರ್‌ ಎತ್ತರಕ್ಕೆತಲುಪಿತ್ತು.
ಚಿತ್ರ ಕೃಪೆ :ನಾಸಾ

2

2

ಇಂದು ಬಹುಸಂಖ್ಯಾತ ಜನರು ಬಳಸುತ್ತಿರುವ ಟ್ಯಾಬ್ಲೆಟ್‌ ಕಂಪ್ಯೂಟರ್‌ ಸಹ 'ಅರ್ಥರ್‌ ಸಿ ಕ್ಲಾರ್ಕ್‌'ರವರ ಇನ್ನೊಂದು ಸೃಷ್ಟಿ. ಗಗನಯಾತ್ರಿಗಳಾದ ಫ್ರ್ಯಾಂಕ್‌ ಪೂಲೆ ಮತ್ತು ಡೇವ್ ಬೌಮ್ಯಾನ್‌ರವರು ತಮ್ಮ ರಾತ್ರಿ ಆಹಾರ ಸೇವಿಸುತ್ತಾ ಭೂಮಿಯ ಸುದ್ದಿಗಳನ್ನು ಅವರ ಟ್ಯಾಬ್ಲೆಟ್‌ನಲ್ಲಿ ವೀಕ್ಷಿಸುತ್ತಿದ್ದರು.

3

3

ಪ್ರಖ್ಯಾತ ಅಮೇರಿಕ ಬರಹಗಾರರಾದ 'ಮಾರ್ಕ್ ಟ್ವೈನ್' ಎಂಬುವವರು 1898'ರ ಹಿಂದೆಯೇ ಭವಿಷ್ಯ ನುಡಿದಿದ್ದರು. ಈ ಬಗ್ಗೆ ನಂತರ ದಿ "ಲಂಡನ್‌ ಟೈಮ್ಸ್‌" ಆಫ್‌ 1904 ಎಂಬ ಕಾಲ್ಪನಿಕ ವಿಜ್ಞಾನ ಬರಹ ಬರೆಯಲಾಗಿತ್ತು. ಇದರಲ್ಲಿ "Telectroscope", ಇದು ಮಿಲಿಟರಿ ಅಪ್ಲಿಕೇಶನ್‌ಗಳನ್ನು ಬಳಸಲು ಅನುಕೂವಾಗುತ್ತದೆ. ಅಲ್ಲದೇ ದಿನನಿತ್ಯದ ಪ್ರಪಂಚದ ಚಟುವಟಿಕೆಗಳನ್ನು ನೋಡಲು ಸಹಾಯಕವಾಗುತ್ತದೆ ಎಂದು ವಿವರಿಸಿದ್ದರು. ಇವರು ವಿವರಿಸಿದ ಈ ಮಿಲಿಟರಿ ಯೋಜನೆ ಇಂದು ಜಗತ್ತಿನ ಪ್ರಖ್ಯಾತ ನೆಟ್‌ವರ್ಕ್‌ ಆಗಿದೆ. ಇಂದು ಮಾಹಿತಿ ಸಂಪರ್ಕದಲ್ಲಿ ಮಹತ್ತರ ಹೆಜ್ಜೆ ಮೂಡಿದೆ.

4

4

ಪ್ರಖ್ಯಾತ ಆಂಗ್ಲ ಬರಹಗಾರರಾದ 'ಜಾರ್ಜ್‌ ಆರ್ವೆಲ್‌'ರವರು ಡೆಸ್ಟೋಪಿಯನ್‌ ಭವಿಷ್ಯದ ಬಗ್ಗೆ 1984ರಲ್ಲಿ ಕಲ್ಪಿಸಿಕೊಟ್ಟರು. ಪೋಲಿಸರು ತನಿಖೆಗಾಗಿ ಇಂದು ಬಳಸುವ ಯಾವಾಗಲು ಒಂದು ಪ್ರದೇಶದ ಬಗ್ಗೆ ಕಾಣ್ಗಾವಲಿರಿಸಿದ ಕ್ಯಾಮೆರಾ ಬಗ್ಗೆ ಆರ್ವೆಲ್‌ ರವರು ಅಂದು ಪರಿಚಯಿಸಿದ ಕಲ್ಪನೆ ಅದು.
ಚಿತ್ರ ಕೃಪೆ:Reuters

5

5

ಎಚ್‌ ಜಿ ವೆಲ್ಸ್‌, ಎಂಬ ಪ್ರಖ್ಯಾತ ಕಾಲ್ಪನಿಕ ವಿಜ್ಞಾನ ಬರಹಗಾರರು ಪ್ರಪಂಚದಲ್ಲಿ ಯುದ್ಧಕ್ಕಾಗಿ ಬಳಸುವ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಈ ಬಗ್ಗೆ ಅವರು 1914ರಲ್ಲಿ ತಮ್ಮ "The World Set Free" ಕಾದಂಬರಿಯಲ್ಲಿ ಬರೆದಿದ್ದರು. ಅಂತೆಯೇ ಅಮೇರಿಕ 1945ರಲ್ಲಿ ಹಿರೋಶಿಮಾದಲ್ಲಿ ಪರಮಾಣು ಬಾಂಬ್‌ ಸ್ಫೋಟಿಸಿತ್ತು.

6

6

ಜೂಲ್ಸ್ ವರ್ನೆ'ರವರು "The Earth To The Moon" ಎಂಬ ಕಾಲ್ಪನಿಕ ವಿಜ್ಞಾನ ಕಾದಂಬರಿಯಲ್ಲಿ ಚಂದ್ರನ ಮೇಲೆ ಹೋಗುವ ಬಗ್ಗೆ ಬರೆದಿದ್ದರು. ಅಲ್ಲದೇ ಖಚಿತವಾದ ಮಾರ್ಗವನ್ನು ಸಹ ನೀಡಿದ್ದರು. ಅವರು ತಮ್ಮ ಕಾಲ್ಪನಿಕ ಬರಹದಲ್ಲಿ ಮಾನವರು ಒಂದು ಅಲ್ಯೂಮಿನಿಯಮ್‌ ಕ್ರ್ಯಾಫ್ಟ್‌ ಮೂಲಕ ಫ್ಲೊರಿಡಾ ಭೂ ಮೇಲ್ಮೈನಿಂದ ಚಂದ್ರನ ಮೇಲಕ್ಕೆ ಪ್ರಯಾಣ ಬೆಳೆಸುತ್ತಾರೆ ಎಂಬ ಅಂಶವನ್ನು 1865 ರಲ್ಲೇ ಹೇಳಿದ್ದರು. ಅಂತೆಯೇ ಕೆನಡಿ ಸ್ಪೇಸ್‌ ಸೆಂಟರ್‌ ಫ್ಲೋರಿಡಾದಿಂದ 'ಅಪೊಲೋ 11" ಕ್ರ್ಯಾಫ್ಟ್‌ನಲ್ಲಿ ನೀಲ್‌ ಆರ್ಮ್ಸ್ಟ್ರಾಂಗ್‌ ಮತ್ತು ಎಡ್ವಿನ್‌ ಅಲ್ಡ್ರಿನ್‌'ರವರು ಚಂದ್ರನ ಮೇಲೆ ಇಳಿದ್ದಿದ್ದರು.
ಚಿತ್ರ ಕೃಪೆ:Reuters

7

7

'Back To The Future trilogy' ಎಂಬುದು ಅಮೇರಿಕದ ಕಾಲ್ಪನಿಕ ವಿಜ್ಞಾನದ ಸಾಹಸಮಯ ಸಿನಿಮಾವಾಗಿದೆ. ಇದನ್ನು ರಾಬರ್ಟ್‌ ಜೆಮೆಕ್ಕಿಸ್‌ ಎಂಬುವವರು ಬರೆದು ಅವರೇ ನಿರ್ದೇಶಿಸಿದ್ದರು. ಇಂದು ಹಾವರ್‌ಬೋರ್ಡ್‌ಗಳು ವಾಸ್ತವ ರೂಪವನ್ನು ಪಡೆದುಕೊಂಡು ಬಳಸಲು ಸಾಧ್ಯವಾಗಿದೆ.
ಚಿತ್ರ ಕೃಪೆ:Arx Pax

8

8

'ರೆ ಬ್ರಾಡ್‌ಬುರಿ' ಅವರು ತಮ್ಮ "Fahrenheit 451' 1953'ರ ಡೆಸ್ಟೋಪಿಯನ್‌ ನಾವೆಲ್‌ನಲ್ಲಿ ಜನರು ಭವಿಷ್ಯದಲ್ಲಿ ಸಂಗೀತ ಕೇಳಲು "Seashells' ಮತ್ತು 'thimble radios' ಬಳಸುತ್ತಾರೆ ಎಂದು ಹೇಳಿದ್ದರು. ಅಂತೆಯೇ ಇಂದು ಜನರು ಹೆಡ್‌ಫೋನ್‌ ಮತ್ತು ಬ್ಲೂಟೂತ್‌ ಹೆಡ್‌ಸೆಟ್‌ಗಳನ್ನು ಬಳಸುತ್ತಿದ್ದಾರೆ.
ಚಿತ್ರ ಕೃಪೆ:Reuters

9

9

ಎಲ್ಲರ ನೆಚ್ಚಿನ ಸ್ಪೇಸ್‌ ಕಾಲ್ಪನಿಕ ವಿಜ್ಞಾನ ಪ್ರ್ಯಾಂಚೀಸ್‌"ಸ್ಟಾರ್‌ ಟ್ರೆಕ್‌" ಹಿಂದೆಯೇ 3D ಪ್ರಿಂಟರ್‌ ಬಗ್ಗೆ ತಿಳಿಸಿತ್ತು. ಅವರು ಕೇವಲ ಫುಡ್‌ ಸಿಂಥೆಸೈಜರ್‌ ಅನ್ನು ಮಾತ್ರ ಪರಿಚಯಿಸಿದ್ದರು. ಆದರೆ ಇಂದು ಎಲ್ಲಾ ವಸ್ತುಗಳನ್ನು ಸಹ 3D ಪ್ರಿಂಟರ್‌ನಿಂದ ಮುದ್ರಿದಬಹುದಾಗಿದೆ.
ಚಿತ್ರ ಕೃಪೆ:PBC Linear

10

10

ಜೂಲ್ಸ್‌ ವರ್ನೆ ಮತ್ತು ಅವರ ಮಗ ಮೈಕೆಲ್‌ ವರ್ನೆ'ರವರ ಕಾಲ್ಪನಿಕ ವಿಜ್ಞಾನ ಕಥೆ "In The Year 2889" ಇಂದಿನ ವೀಡಿಯೋ ಕಾಲಿಂಗ್‌ ಬಗ್ಗೆ ಭವಿಷ್ಯ ಹೇಳಿತ್ತು. ಅವರ ಫೋನೋಟೆಲಿಫೋಟೆ'ಯಿಂದ ಮಿಸ್ಟರ್‌ ಫ್ರಿಜ್‌ ನೆಪೋಲಿಯನ್‌ ಸ್ಮಿತ್ ಅವರು ಪ್ಯಾರಿಸ್‌ನಲ್ಲಿದ್ದ ತಮ್ಮ ಹೆಂಡತಿಗೆ ವೀಡಿಯೋ ಕರೆ ಮಾಡಿದ್ದರು.

11

11

ಇಂದು ಭಾರತದಲ್ಲೂ ಸಹ ಚಾಲನೆಗೆ ಬಂದಿರುವ Autonomous Cars ಸಹ ಕಾಲ್ಪನಿಕ ವಿಜ್ಞಾನದ ಸಹಾಯದಿಂದ ಅಭಿವೃದ್ದಿ ಪಡಿಸಿದ ತಂತ್ರಜ್ಞಾನವಾಗಿದೆ.
ಚಿತ್ರ ಕೃಪೆ;BBC

ಗಿಜ್‌ಬಾಟ್‌

ಗಿಜ್‌ಬಾಟ್‌

ಗೂಗಲ್‌ನಿಂದ ಗೂಗಲ್‌ನಿಂದ "ಏರಿಯಾ 6" ನಿಗೂಢತೆ ಬಯಲು: ಡ್ರೋನ್‌ಗಳ ಪರೀಕ್ಷೆ

ವಿಜ್ಞಾನಿಗಳಿಂದ ಸಂಪೂರ್ಣ ಆಮ್ಲಜನಕವಿರುವ ನಕ್ಷತ್ರ ಪತ್ತೆ: ಭೇಟಿ ಯಾವಾಗ?ವಿಜ್ಞಾನಿಗಳಿಂದ ಸಂಪೂರ್ಣ ಆಮ್ಲಜನಕವಿರುವ ನಕ್ಷತ್ರ ಪತ್ತೆ: ಭೇಟಿ ಯಾವಾಗ?

ಕ್ರಿಕೆಟ್‌ನಲ್ಲಿ ಬಳಸುವ ಅತ್ಯಾಧುನಿಕ ಟೆಕ್ನಾಲಜಿಗಳು ಯಾವುವು ಗೊತ್ತೇ?ಕ್ರಿಕೆಟ್‌ನಲ್ಲಿ ಬಳಸುವ ಅತ್ಯಾಧುನಿಕ ಟೆಕ್ನಾಲಜಿಗಳು ಯಾವುವು ಗೊತ್ತೇ?

ಒಬಾಮ ಮತ್ತು ಕಿಮ್‌ ಜಾಂಗ್‌ ಉನ್‌ ಸೆಲ್ಫಿ ಆಸ್ಕರ್‌ ಸಮಾರಂಭದಲ್ಲಿ ಹೇಗಿತ್ತು ನೋಡಿಒಬಾಮ ಮತ್ತು ಕಿಮ್‌ ಜಾಂಗ್‌ ಉನ್‌ ಸೆಲ್ಫಿ ಆಸ್ಕರ್‌ ಸಮಾರಂಭದಲ್ಲಿ ಹೇಗಿತ್ತು ನೋಡಿ

Most Read Articles
Best Mobiles in India

English summary
11 Things You Won't Believe Made The Jump From Science Fiction To Science Fact. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X