ಕೆಎಫ್ ಸಿಯಲ್ಲಿ ಚಿಕನ್, ಕುಡಿಯುವ ನೀರು ಹೊತ್ತು ತರುವ ರೊಬೋಟ್

|

ಫಾಸ್ಟ್ ಫುಡ್ ಕಂಪೆನಿ ಕೆಎಫ್ ಸಿ ಮುಂಬೈ ಮೂಲಕ ಟೆಕ್ ಸಂಸ್ಥೆ ಟೆಕ್ನೋಬೊಟಿಕ್ಸ್ ಜೊತೆಗೆ ಕೈಜೋಡಿಸಿದ್ದು ರೊಬೊಟ್ ಜೊತೆಗೆ ಇದೀಗ ಕಂಪೆನಿ ಹೊರಬರಲಿದೆ. ಈ ರೊಬೋಟ್ ಒಂದು ಫುಲ್ ಸೈಜಿನ ಚಿಕನ್ ಬಕೆಟ್ ನ್ನು ಮತ್ತು ಒಂದು ಗ್ಲಾಸ್ ನೀರನ್ನು ಮತ್ತು ಚಿಕನ್ ಪಾಪ್ ಕಾರ್ನ್ ನ್ನು ನಿಮಗಾಗಿ ಸರ್ವ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಚಿಕನ್ ತರುವ ರೋಬೋಟ್:

ಚಿಕನ್ ತರುವ ರೋಬೋಟ್:

ಅದಷ್ಟೇ ಅಲ್ಲ ಕೆಎಫ್ ಸಿ ಬಕೆಟ್ ಬೇ ಇನ್ ಬಿಲ್ಟ್ ಸೆನ್ಸರ್ ನಿಮ್ಮ ಸುತ್ತ ಚಿಕನ್ ಒಂದು ಸಂಪೂರ್ಣ ಆಹಾರವನ್ನು ನಿಮಗಾಗಿ ತರಲಿದೆ. ಅದಕ್ಕಾಗಿ ಅದರಲ್ಲಿ ಅಳವಡಿಸಲಾಗಿರುವ ಹಿಡನ್ ಮೊಟರ್ ಎಂಡ್ ವೀಲ್ ಲೆಗ್ ಸಹಕಾರಿಯಾಗಿರುತ್ತದೆ.

ವ್ಯಾಲೆಂಟೈನ್ ಡೇಗಾಗಿ ಕ್ಯಾಂಪೇನ್:

ವ್ಯಾಲೆಂಟೈನ್ ಡೇಗಾಗಿ ಕ್ಯಾಂಪೇನ್:

ಆದರೆ ದುಃಖದ ವಿಚಾರವೇನೆಂದರೆ ನೀವು ಈ ರೊಬೋಟ್ ನ್ನು ಖರೀದಿಸಲು ಸಾಧ್ಯವಿಲ್ಲ. ಭಾರತದಲ್ಲಿ ವ್ಯಾಲೆಂಟೈನ್ ಡೇ ಪ್ರಯುಕ್ತ ಕಂಪೆನಿ ನಡೆಸುತ್ತಿರುವ ಕ್ಯಾಪೇನ್ ನ ಒಂದು ಭಾಗವಾಗಿ ಈ ರೊಬೋಟ್ ನ್ನು ಪರಿಚಯಿಸಲಾಗುತ್ತಿದೆ. ದೇಶದ ಕೆಲವು ಆಯ್ದ ಕೆಎಫ್ ಸಿ ಸೆಂಟರ್ ಗಳಲ್ಲಿ ಈ ರೊಬೋಟ್ ಕಾರ್ಯ ನಿರ್ವಹಿಸುತ್ತದೆ.

ಲಕ್ಕಿ ವಿನ್ನರ್ ನೀವಾಗಿರಬೇಕು:

ಲಕ್ಕಿ ವಿನ್ನರ್ ನೀವಾಗಿರಬೇಕು:

ಆದರೆ ಒಂದು ವೇಳೆ ನೀವು ಈ ಕೆಎಫ್ ಸಿ ರೋಬೋಟ್ ನ್ನು ಮನೆಗೆ ತೆಗೆದುಕೊಂಡು ಬರುವ ಆಸೆ ಹೊಂದಿದ್ದರೆ 5 ಲಕ್ಕಿವಿನ್ನರ್ ಗಳಲ್ಲಿ ನೀವು ಒಬ್ಬರಾಗಿರಬೇಕಾಗುತ್ತದೆ ಮತ್ತು ಅದನ್ನು ಮಾಡಲು ನೀವು ನಿಮ್ಮ ಪ್ರೀತಿಯನ್ನು ಕಂಪೆನಿಯ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಪ್ರೊಫೈಲ್ ಗಳಲ್ಲಿ ಹಂಚಿಕೊಳ್ಳಬೇಕಾಗುತ್ತದೆ. ಟಿಂಡರ್ ನಲ್ಲೂ ಕೂಡ ಲಕ್ಕಿ ಆಗಿದ್ದರೆ ಸಾಕಾಗುತ್ತದೆ. ಗೆಲ್ಲುವ ನಿಯಮಾವಳಿಗಳ ಬಗ್ಗೆ ಹೇಳುವುದಾದರೆ, ಒಂದು ವೇಳೆ ನೀವು ಬೇಯನ್ನು ಖುಷಿಪಡಿಸಿದರೆ ಅದು ನಿಮ್ಮದಾಗುತ್ತದೆ ಎಂದು ಹೇಳುತ್ತದೆ ಕೆಎಫ್ ಸಿ .

ಕೇವಲ ಇಂಗ್ಲೀಷ್ ಭಾಷೆಗೆ ಸೀಮಿತ:

ಕೇವಲ ಇಂಗ್ಲೀಷ್ ಭಾಷೆಗೆ ಸೀಮಿತ:

ಕುತೂಹಲಕಾರಿ ವಿಚಾರವೇನೆಂದರೆ ಕೆಎಫ್ ಸಿ ರೊಬೋಟ್ ಬ್ಲೂಟೂತ್ ಸ್ಪೀಕರ್ ನ್ನು ಹೊಂದಿರುತ್ತದೆ ಮತ್ತು ನಿಮಗಾಗಿ ನೀವು ಹಾಡುಗಳನ್ನು ಕೂಡ ಪ್ಲೇ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ ಮತ್ತು ಇದರ ಲಿಂಗವು ನ್ಯೂಟ್ರಲ್ ಆಗಿದೆ ಮತ್ತು ನೀವು ಮಹಿಳೆ, ಪುರುಷ ವಾಯ್ಸ್ ನಲ್ಲಿ ಮಾತನಾಡಲು ಅವಕಾಶವಿರುತ್ತದೆ. ಆದರೆ ಕೇವಲ ಇಂಗ್ಲೀಷ್ ಭಾಷೆಯನ್ನು ಮಾತ್ರವೇ ಇದು ಅರ್ಥ ಮಾಡಿಕೊಳ್ಳುತ್ತದೆ.

ಕೆಎಫ್ ಸಿ ರೊಬೋಟ್ ಕೆಎಫ್ ಸಿ ಚಿಕನ್ ಗಾಗಿ ಮಾತ್ರವೇ ಮಾತನಾಡಬಹುದು. ನಿಮ್ಮ ಫೋನ್ ನಲ್ಲಿ ನಿಮ್ಮದೇ ಸ್ವಂತ ವಾಯ್ಸ್ ನ್ನು ರೆಕಾರ್ಡ್ ಮಾಡಬಹುದು. ಬ್ಲೂಟೂತ್ ಸ್ಪೀಕರ್ ಮೂಲಕ ಪ್ಲೇ ಮಾಡಬಹುದು.

ಕಳೆದ ವರ್ಷ ಡ್ರೋಣ್ ಬಿಡುಗಡೆ:

ಕಳೆದ ವರ್ಷ ಡ್ರೋಣ್ ಬಿಡುಗಡೆ:

ಕಳೆದ ವರ್ಷ ಕೆಎಫ್ ಸಿ ಡ್ರೋಣ್ ಸ್ಟಾರ್ಟ್ ಅಪ್ ಡ್ರೋಣಾ ಎವಿಯೇಷನ್ ಜೊತೆಗೆ ಕೈಜೋಡಿಸಿ ಕೆಎಫ್ ಸಿ ಡ್ರೋಣ್ ಬಿಡುಗಡೆಗೊಳಿಸಿತ್ತು. ‘KFO ಅಥವಾ Kentucky Flying Object' ವಿಭಿನ್ನ ಪ್ಯಾಕೇಜಿಂಗ್ ವ್ಯವಸ್ಥೆ ಹೊಂದಿತ್ತು. ಸ್ಮೋಕಿ ವಿಂಗ್ಸ್ ಮತ್ತು ತೆಗೆದು ಅಳವಡಿಸಬಹುದಾಗಿದ್ದ ಭಾಗಗಳನ್ನು ಇದು ಹೊಂದಿತ್ತು. ಡ್ರೋಣ್ ಆಗಿ ಮರುಜೋಡಣೆ ಮಾಡಬಹುದಾದ ವಿಭಿನ್ನ ವಸ್ತುವನ್ನು ಬಿಡುಗಡೆಗೊಳಿಸಲಾಗಿತ್ತು. ಬಾಕ್ಸ್ ನ್ನು ಡ್ರೋಣ್ ಆಗಿ ಪರಿವರ್ತಿಸಿದ ನಂತರ ಪವರ್ ಆನ್ ಮಾಡಿದರೆ ನಿಮ್ಮ ಸ್ಮಾರ್ಟ್ ಫೋನ್ ಮತ್ತು ಬ್ಲೂಟೂತ್ ಕನೆಕ್ಷನ್ ಮೂಲಕ ಹಾರುವಂತೆ ಮಾಡಬಹುದಾಗಿದ್ದ ವಿಭಿನ್ನ ವಸ್ತುವನ್ನು ಬಿಡುಗಡೆಗೊಳಿಸಲಾಗಿತ್ತು.

Best Mobiles in India

Read more about:
English summary
This KFC robot will carry chicken bucket, drink and walk around with you

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X