ಗೂಗಲ್‌ ಮ್ಯಾಪ್‌ನ ಈ ಫೀಚರ್ಸ್‌ನಿಂದ ನೀವು ವೇಗವಾಗಿ ಪ್ರಯಾಣಿಸಲು ಸಾದ್ಯವಾಗಲಿದೆ!

|

ಗೂಗಲ್‌ ಮ್ಯಾಪ್‌ ಅಪರಿಚಿತ ನಗರ ಪ್ರದೇಶದಲ್ಲೂ ನಿಮ್ಮ ಪ್ರಯಾಣಕ್ಕೆ ದಾರಿ ತೊರುವ ಮಾರ್ಗದರ್ಶಕ. ನಿಮಗೆ ಪರಿಚಯವೇ ಇಲ್ಲದ ಏರಿಯಾದಲ್ಲಿ ನೀವು ತಲುಪಬೇಕಾದ ಸ್ಥಳಕ್ಕೆ ದಾರಿ ತೋರುವ ನಾವಿಕ. ಸದ್ಯ ಗೂಗಲ್‌ ಮ್ಯಾಪ್‌ ನಿಮದ ಇಂದು ಪ್ರಯಾಣದ ಹಾದಿ ಸಾಕಷ್ಟು ಸುಲಭವಾಗಿದೆ. ಅಷ್ಟೇ ಅಲ್ಲ ಸಾಉವ ದಾರಿಯಲ್ಲಿ ಲಬ್ಯವಿರುವ ಸರ್ಕಲ್‌, ಟ್ರಾಫಿಕ್‌ ಸಿಗ್ನಲ್‌ ಸೇರಿದಂತೆ ಹಲವಾರು ಉಪಯುಕ್ತ ಸಲಹೆ ನಿಡುವ ಗೂಗಲ್‌ ಮ್ಯಾಪ್‌ ಹಲವು ಹೊಸ ಫೀಚರ್ಸ್‌ಗಳನ್ನ ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಸದ್ಯ ಇದೀಗ ಬಳಕೆದಾರರ ವೇಗದ ಪ್ರಯಾಣದ ಅನುಕೂಲಕ್ಕಾಗಿ ಮತ್ತೊಂದು ಹೊಸ ಫೀಚರ್ಸ್‌ ಒಂದನ್ನ ಪರಿಚಯಿಸಲು ಮುಂದಾಗಿದೆ.

ಗೂಗಲ್‌ ಮ್ಯಾಪ್‌

ಹೌದು, ಗೂಗಲ್‌ ಮ್ಯಾಪ್‌ ನಿಮ್ಮ ಪ್ರಯಾನದ ಹಾದಿಯಲ್ಲಿ ನಿಮಗೆ ದಾರಿ ತೊರುವ ಮಾರ್ಗದರ್ಶಕ. ಸದ್ಯ ಗೂಗಲ್‌ ಮ್ಯಾಪ್‌ ಅನ್ನು ನ್ಯಾವಿಗೇಷನ್‌ಗಾಗಿ ಬಳಸುತ್ತಾರೆ, ಅಷ್ಟೇ ಅಲ್ಲ ಉಬರ್ ಅಥವಾ ಓಲಾ ಟ್ಯಾಕ್ಸಿ ಸೇವೆಗಳನ್ನ ಪಡೆದುಕೊಳ್ಳುವಾದ ನಿಮಗೆ ಗೂಗಲ್‌ ಮ್ಯಾಪ್‌ ಬೇಕೆ ಬೇಕು. ಅಷ್ಟೇ ಯಾಕೆ ನೀವು ಫುಡ್‌ ಆರ್ಡರ್‌ ಮಾಡಬೇಕಿದ್ದರೂ ಗೂಗಲ್‌ ಮ್ಯಾಪ್‌ ಅವಶ್ಯಕ. ಸದ್ಯ ಗೂಗಲ್‌ ಮ್ಯಾಪ್‌ನಿಂದ ಟ್ರಾಫಿಕ್‌ನಲ್ಲಿ ಸಿಲಿಕಿಕೊಲ್ಳುವ ಮಾತೇ ಇಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಆಪ್ಡೆಟ್‌ ನಿಡುವ ಗೂಗಲ್‌ ಮ್ಯಾಪ್‌ ನಿಮ್ಮ ಪ್ರಯಾಣದ ವೇಗವನ್ನ ಇನ್ನಷ್ಟು ಹೆಚ್ಚಿಸಲು ಹೊಸ ಫೀಚರ್ಸ್‌ ಪರಿಚಯಿಸಲು ಸಿದ್ದತೆ ನಡೆಸಿದೆ. ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಗೂಗಲ್ ಮ್ಯಾಪ್‌ ಇದೀಗ ಹೊಸ ಫೀಚರ್ಸ್‌ ಒಂದನ್ನ ಪರಿಚಯಿಸಲು ಸಿದ್ದತೆ ನಡೆಸಿದೆ.ವೈಶಿಷ್ಟ್ಯವನ್ನು ಪರೀಕ್ಷಿಸಲು ಪ್ರಾರಂಭಿಸಿವೆ, ಇದರಲ್ಲಿ ಬಳಕೆದಾರರು ಇಂಟರ್ಫೇಸ್‌ನಲ್ಲಿ ಟ್ರಾಫಿಕ್‌ ಲೈಟ್‌ಗಳನ್ನು ನೋಡಲು ಸಾಧ್ಯವಾಗುತ್ತದೆ. ನೀವು ನ್ಯಾವಿಗೇಟ್ ಮಾಡುವಾಗ ಮತ್ತು ಮ್ಯಾಪ್‌ನಲ್ಲಿನ ಪ್ರದೇಶಗಳ ಮೂಲಕ ಸರ್ಚ್‌ ಮಾಡುವಾಗ ಎಲ್ಲಿ ಟ್ರಾಫಿಕ್‌ ಇದೆ. ಯಾವ ಪ್ರಮಾಣದಲ್ಲಿದೆ ಎಂದು ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ. ಈ ಫೀಚರ್ಸ್‌ ನಿಡುವ ಮಾಹಿತಿಗೆ ಅನುಗುಣವಾಗಿ ಬಳಕೆದಾರರು ತಮ್ಮ ಪ್ರಯಾಣದ ಮಾರ್ಗಗಳನ್ನು ಪ್ಲ್ಯಾನ್‌ ಮಾಡಬಹುದಾಗಿದೆ.

ಫೀಚರ್ಸ್‌

ಸದ್ಯ ಈ ಫೀಚರ್ಸ್‌ ಇನ್ನೂ ಪರೀಕ್ಷಾ ಹಂತದಲ್ಲಿದೆ, ಆದ್ದರಿಂದ Google ಇದನ್ನು ಸಾರ್ವಜನಿಕರಿಗೆ ಯಾವಾಗ ಬೇಕಾದರೂ ಪ್ರಾರಂಭಿಸಲಿದೆಯೇ ಎಂದು ಹೇಳುವುದು ಕಷ್ಟ. ಟ್ರಾಫಿಕ್ ಸಿಗ್ನಲ್‌ಗಳನ್ನು ನೀಡುವುದರಿಂದ ನೀವು ತುರ್ತಾಗಿ ಸಾಗಬೇಕಾದ ಮಾರ್ಗದ ಅವಶ್ಯಕತೆ ಇಲ್ಲಿ ಲಭ್ಯವಾಗಲಿದೆ. ಆದರೆ ಈ ಮಾದರಿಯ ಫೀಚರ್ಸ್‌ ಟ್ರಾಫಿಕ್‌ ಆಫಿಸರ್ಸ್‌ಗಳಿಗೆ ಸಮಸ್ಯೆ ತಂದರೂ ಅಚ್ಚರಿಯಿಲ್ಲ. ಹಾಗೇ ನೊಡುವುದಾರೆ ಕೆಲವು ತಿಂಗಳ ಹಿಂದೆ ಭಾರತದಲ್ಲಿ ಬಳಕೆದಾರರಿಗಾಗಿ ಮ್ಯಾಪ್‌ನಲ್ಲಿ ಎಲ್ಲೆಲ್ಲಿ ಕ್ಯಾಮೆರಾಗಳಿವೆ ಅನ್ನೊದನ್ನ ತೋರಿಸಲು ಗೂಗಲ್ ನಿರ್ಧರಿಸಿತ್ತು. ಆದರೆ ಇದರಿಂದ ತೊಂದರೆಯೆ ಹೆಚ್ಚೆಂದು ಈ ಫೀಚರ್ಸ್‌ ಅನ್ನು ತೆಗೆದುಹಾಕಲಾಗಿದೆ.

ಗೂಗಲ್‌

ಇನ್ನು ಗೂಗಲ್‌ ಮ್ಯಾಪ್‌ನಲ್ಲಿ ಆಪ್ಡೇಟ್‌ ಅನ್ನು ಸಹ ಮಾಡಲಾಗಿದ್ದು, ಪ್ಲಸ್ ಕೋಡ್‌ಗಳನ್ನು ಬಳಸಿಕೊಂಡು ಸ್ಥಳ / ವಿಳಾಸವನ್ನು ಪ್ರವೇಶಿಸಲು ಹೊಸ ಮತ್ತು ಸುಲಭವಾದ ಮಾರ್ಗದೊಂದಿಗೆ ತಲುಪಲು ಸಾದ್ಯವಾಗಲಿದೆ. ಇದಲ್ಲದೆ ಪ್ಲಸ್ ಕೋಡ್‌ಗಳು ಮೂಲತಃ ನಿಮ್ಮ ವಿಳಾಸ / ಸ್ಥಳದ ಆಲ್ಫಾನ್ಯೂಮರಿಕ್ ಆವೃತ್ತಿಯಾಗಿದೆ. ಆದರೆ ಇದು ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ. ಈ ಕೋಡ್‌ಗಳನ್ನು ಬಳಸಿಕೊಂಡು ಜನರು ಇನ್ನು ಮುಂದೆ ಸ್ಥಳದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕಾದ ಅವಶ್ಯಕತೆ ಇಲ್ಲ ಎಂದು ಗೂಗಲ್ ಹೇಳಿದೆ.

ಗೂಗಲ್‌

ಸದ್ಯ ಇದೀಗ ಗೂಗಲ್‌ ಮ್ಯಾಪ್‌ನಲ್ಲಿ ಲಭ್ಯವಿರುವ ಈ ಫೀಚರ್ಸ್‌ ಅನ್ನು ಬಳಸಲು, ಮೊದಲು ನಿಮ್ಮ ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ಅನ್ನು ಆಪ್ಡೇಟ್‌ ಮಾಡಿ. ನಂತರ ನಿಮ್ಮ ಪ್ರಸ್ತುತ ಸ್ಥಳವನ್ನು ತೋರಿಸುವ ನೀಲಿ ಚುಕ್ಕೆ ಟ್ಯಾಪ್ ಮಾಡಿ. ಸ್ಥಳದ ಹೆಸರಿನ ಪಕ್ಕದಲ್ಲಿರುವ ಆಲ್ಫಾನ್ಯೂಮರಿಕ್ ಕೋಡ್ ಅನ್ನು ಕ್ಲಿಕ್ ಮಾಡಿ. ಅದನ್ನು ವಾಟ್ಸಾಪ್ ಅಥವಾ ಎಸ್‌ಎಂಎಸ್‌ನಲ್ಲಿ ಬಳಕೆದಾರರೊಂದಿಗೆ ನಕಲಿಸಿ ಮತ್ತು ಹಂಚಿಕೊಳ್ಳಿ. ಕೋಡ್ ಅನ್ನು ನಕ್ಷೆಗಳಿಗೆ ಅಂಟಿಸಿ ಇದೀಗ ನಿಮ್ಮ ಸ್ಥಳವು ಸ್ಕ್ರೀನ್‌ ಮೇಲೆ ಡಿಸ್‌ಪ್ಲೇ ಆಗಲಿದೆ.

Best Mobiles in India

English summary
The new feature allows users to identify the best route for their travel avoiding traffic lights.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X